ಗಣೇಶ್ ಜೊತೆ 'ಕಾಮಿಡಿ ಟೈಮ್' ನಿರೂಪಣೆ ಮಾಡಿದ್ದ ಈ ನಟಿ ಇಂದು ಕಿರುತೆರೆಯ ಸ್ಟಾರ್; ಯಾರೀ ಬಹುಮುಖ ಪ್ರತಿಭೆ?
ಕನ್ನಡ ಕಿರುತೆರೆಯ ವೀಕ್ಷಕರಿಗೆ ಇವರು ಹೆಚ್ಚು ಚಿರಪರಿಚಿತ. ಧಾರಾವಾಹಿಗಳಲ್ಲಿ, ರಿಯಾಲಿಟಿ ಶೋಗಳಲ್ಲಿ, ನಿರೂಪಣೆಯಲ್ಲಿ ಇವರು ಎಕ್ಸ್‌ಪರ್ಟ್. ಸದ್ಯ ಸ್ಟಾರ್ ಸುವರ್ಣದ 'ಅವನು ಮತ್ತೆ ಶ್ರಾವಣಿ' ಧಾರಾವಾಹಿಯಲ್ಲಿ ಸಂಯುಕ್ತ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೇ ಕಲರ್ಸ್ ಕನ್ನಡ 'ಭಾರ್ಗವಿ ಎಲ್‌ಎಲ್‌ಬಿ' ಧಾರಾವಾಹಿಯಲ್ಲಿಯೂ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರೇ ಸುಜಾತಾ ಅಕ್ಷಯ್.
ಸುಜಾತಾ ಅಕ್ಷತ್ ನಿರೂಪಕಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಉದಯ ಟಿವಿಯ ಹಲವು ಕಾರ್ಯಕ್ರಮಗಳ ಮೂಲಕ ನಿರೂಪಕಿಯಾಗಿ ಮಿಂಚಿದ್ದರು. ಅದರಲ್ಲಿ ಗೋಲ್ಡನ್ ಸ್ಟಾರ್ ಜೊತೆ ನಿರೂಪಣೆ ಮಾಡಿದ್ದ ಕಾಮಿಡಿ ಟೈಮ್ ಗಣೇಶ್ ಕೂಡ ಒಂದು. ಬಳಿಕ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ನಾಕುತಂತಿ' ಇವರು ನಟಿಸಿದ ಮೊದಲ ಧಾರಾವಾಹಿ.

ಇಲ್ಲಿಂದ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. 'ಮನೆಯೊಂದು ಮೂರು ಬಾಗಿಲು', 'ಎಲ್ಲಾ ಮರೆತಿರುವಾಗ', 'ಬದುಕು', 'ಸ್ವಾಭಿಮಾನ', 'ರಾಧಾ', 'ಸೃಷ್ಟಿ', 'ಪ್ರೀತಿ ಎಂದರೇನು?', 'ಅರಮನೆ', 'ಮುಗಿಲು' ಅಂತ ಧಾರಾವಾಹಿಗಳಲ್ಲಿ ನಟಿಸಿದ ಬಳಿಕ ಸ್ವಲ್ಪ ಸಮಯ ನಟನೆಯಿಂದ ದೂರವಿದ್ದರು. 'ರಾಧಾ ರಮಣ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸುವ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದರು. ಅಷ್ಟೇ ರೇಡಿಯೋದಲ್ಲಿ ಬಿಗ್ ಎಫ್ಎಂ, ರೆಡ್ ಎಫ್ ಎಂ ಹಾಗೂ ರೇಡಿಯೋ ಸಿಟಿ ಅಂತಹ ಎಫ್‌ಎಂ ಚಾನೆಲ್‌ಗಳಲ್ಲಿ ಸುಮಾರು 12 ವರ್ಷ ಕೆಲಸ ಮಾಡಿದ್ದಾರೆ. ಸುಜಾತಾ ಅಕ್ಷಯ್ ತಮ್ಮ ಸುದೀರ್ಘ ಜರ್ನಿಯ ಬಗ್ಗೆ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನಿಮ್ಮ ಊರು ಮತ್ತು ಪರಿಚಯ
"ಹುಟ್ಟಿದ್ದು ಬೆಳೆದಿದ್ದೆಲ್ಲ ಬೆಂಗಳೂರು. ಓದಿದ್ದು ಬೆಂಗಳೂರಿನಲ್ಲೇ. ಅರಬಿಂದೋ ಮೆಮೋರಿಯಲ್ ಸ್ಕೂಲ್, ಹಾಗೂ ನ್ಯಾಷನಲ್ ಕಾಲೇಜ್ ಜಯನಗರದಲ್ಲಿ ಓದಿದ್ದೇನೆ. ಆಮೇಲೆ ಆಕ್ಸ್‌ಪರ್ಡ್ ಕಾಲೇಜಿಗೆ ಸೇರಿಕೊಂಡೆ. ಆನಂತರ ಉದಯ ಟಿವಿ ಎಂಟ್ರಿ ಕೊಟ್ಟೆ. ಈಗ 25 ವರ್ಷ ಆಯ್ತು. ಈ ಬ್ಯೂಟಿಫುಲ್ ಇಂಡಸ್ಟ್ರಿಯಲ್ಲಿ ಇದ್ದೀನಿ. ಸೀರಿಯಲ್ ಮಾಡಿದೆ. ಪ್ರೋಗ್ರಾಂಗಳನ್ನು ಮಾಡಿದೆ. ಲೈವ್ ಪ್ರೊಗ್ರಾಮ್‌ಗಳನ್ನು ಮಾಡಿದೆ. ರಿಯಾಲಿಟಿ ಶೋನಲ್ಲಿ ಇದ್ದೆ. ತುಂಬಾ ಪ್ರೋಗ್ರಾಂಗಳನ್ನು ಆಂಕರಿಂಗ್ ಮಾಡಿದ್ದೀನಿ. ಸೀರಿಯಲ್‌ಗಳನ್ನು ಪಾಸಿಟಿವ್ ಕ್ಯಾರೆಕ್ಟರ್ ಹಾಗೂ ನೆಗೆಟಿವ್ ಕ್ಯಾರೆಕ್ಟರ್ ಎಲ್ಲಾ ಮಾಡಿದ್ದೀನಿ."
ಕಿರುತೆರೆಗೆ ಎಂಟ್ರಿ ಕೊಟ್ಟಿದ್ದೇಗೆ?
"ನನ್ನ ಫ್ರೆಂಡ್ ಹರ್ಷ ಶಿವರಾಂ ಅಂತ. ಅವನ ಪೇಮೆಂಟ್ ಚೆಕ್ ಕಲೆಕ್ಟ್ ಮಾಡುವುದಕ್ಕೆ ಅಂತ ಹೋಗಿದ್ದೆ. ಅಲ್ಲಿ ನಾವು ಲಂಚ್ ಟೈಮ್‌ಗೆ ಹೋಗಿದ್ವಿ. ಅಲ್ಲಿ ಜೋರಾಗಿ ಮಾತಾಡಿಕೊಂಡು ಇದ್ವಿ. ಆಗ ಅಲ್ಲಿ ನೀವ್ಯಾಕೆ ಆಡಿಷನ್ ಕೊಡಬಾರದು ಅಂತ ಹೇಳಿದರು. ನಾನು ಅದಕ್ಕೋಸ್ಕರ ಅಲ್ಲ ಬಂದಿದ್ದು ಅಂದೆ. ಪರ್ವಾಗಿಲ್ಲ ಒಮ್ಮೆ ಟ್ರೈ ಮಾಡಿ ಅಂದರು. ಮೇಕಪ್ ಹಾಕಿ ಕ್ಯಾಮರಾ ಮುಂದೆ ನಿಲ್ಲಿಸಿದರು. ಐದು ನಿಮಿಷ ನಿಮ್ಮ ಬಗ್ಗೆ ಮಾತಾಡಿ ಅಂದರು. ಅದಾದ್ಮೇಲೆ ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ."

ನಿಮ್ಮ ಜರ್ನಿ ಮೆಲುಕು ಹಾಕುವುದಾದರೇ?
"ಒಂದು ಲೈವ್ ಪ್ರೋಗ್ರಾಂ ಮಾಡಿದೆ. ನಾನು ಗಣೇಶ ಇಬ್ಬರೂ ಕಾಮಿಡಿ ಟೈಮ್ ಮಾಡುತ್ತಾ ಇದ್ವಿ. ಆಮೇಲೆ ಒಂದಿಷ್ಟು ಸೀರಿಯಲ್ ಮಾಡಿದ್ವಿ. ನಾಲ್ಕು ತಂತಿ ಮಾಡಿದೆ. ಅದೊಂದು ಏಳು ವರ್ಷ ಬಂತು. ಹಾಗೆ ಒಂದರ ಹಿಂದೆ ಸುಮಾರು ಸೀರಿಯಲ್‌ಗಳನ್ನು ಮಾಡಿದೆ. ಆಮೇಲೆ ಸ್ಟಾರ್ ಸುವರ್ಣದಲ್ಲಿ ಅಡುಗೆ ಪ್ರೋಗ್ರಾಂ ಮಾಡು ಅಂತ ಕರೆದರು. ಇದನ್ನೂ ನಾನು ಸುಮಾರು 6 ವರ್ಷ ಮಾಡಿದೆ. ಸುವರ್ಣಗೆ ಒಂದಿಷ್ಟು ಸೀರಿಯಲ್ ಮಾಡಿದೆ. ಕಥೆಯೊಂದು ಶುರುವಾಗಿದೆ ಧಾರಾವಾಹಿಗೆ ಆಟೋ ಓಡಿಸುವುದನ್ನು ಕಲಿತೆ. ಸದ್ಯ ಕಲರ್ಸ್ ಕನ್ನಡಕ್ಕೆ ಭಾರ್ಗವಿ ಎಲ್‌ಎಲ್‌ಬಿ ಮಾಡುತ್ತಿದ್ದೇನೆ. ಸ್ಟಾರ್ ಸುವರ್ಣಗೆ ಅವನು ಮತ್ತು ಶ್ರಾವಣಿ ಮಾಡುತ್ತಿದ್ದೇನೆ."
ಗೋಲ್ಡನ್ ಸ್ಟಾರ್ ಗಣೇಶ್ ಬಗ್ಗೆ ಹೇಳ್ತೀರಾ?
"ಗಣೇಶ್ ತುಂಬಾನೇ ಹಾರ್ಡ್ ವರ್ಕ್ ಮಾಡುತ್ತಿದ್ದರು. ನನ್ನ ತಮ್ಮನ ಜೊತೆ ಪಣಿರಾಮಚಂದ್ರ ಅವರ ಪ್ರೇಮ ಪಿಶಾಚಿಗಳು ಸೀರಿಯಲ್‌ನಲ್ಲಿ ಆಕ್ಟ್ ಮಾಡಿದ್ದ. ಗಣೇಶ್ ನನಗೆ ಪರಿಚಯ ಆಗಿದ್ದೇ ನನ್ನ ತಮ್ಮನಿಂದ. ಉದಯ ಟಿವಿಯವರು ಕರೆದು ನೀವು ಕಾಮಿಡಿ ಟೈಮ್ ಮಾಡಬೇಕು ಅಂತ ಹೇಳಿದರು. ನನಗೆ ಇಂಡಸ್ಟ್ರಿಯಲ್ಲಿ ಒಳ್ಳೆಯ ಫ್ರೆಂಡ್ ಅಂದರೆ ಗಣೇಶನೇ. ಕಳೆದ ವರ್ಷ ನಾವು ಹೋಳಿ ಹಬ್ಬ ಆಚರಣೆ ಮಾಡಿದ್ವಿ. ಅದನ್ನು ರೀಲ್ಸ್ ಮಾಡಿದ್ದೆ. ಎಷ್ಟೋ ಮಿಲಿಯನ್ ಓಡಿದೆ. ಆಗ ಅವರ ಮಗಳು ಚಾರಿತ್ರ್ಯಗೆ ಹೇಳುತ್ತಿದ್ದೆ. ನೋಡಮ್ಮ ನಿಮ್ಮ ಅಪ್ಪ ತುಂಬಾ ಕಷ್ಟ ಪಟ್ಟಿದ್ದಾನೆ. ಈ ಲೆವೆಲ್‌ಗೆ ಬರುವುದಕ್ಕೆ ಅಂತ ಹೇಳಿದಾಗ. ಆ ಮಗು ಕಣ್ಣೀರು ಹಾಕಿಕೊಳ್ತು. ಶಿಲ್ಪ ಮತ್ತು ಗಣೇಶ್ ಒಳ್ಳೆಯ ಕಪಲ್. ಅವರು ನನಗೆ ತುಂಬಾ ಒಳ್ಳೆಯ ಸ್ನೇಹಿತರು."
ರಾಧಾ ರಮಣ ಪಾತ್ರಗಳು ಒಂದಾಗಿದ್ದೇಗೆ?
"ರಾಧಾ ರಮಣದಲ್ಲಿ ಅತ್ತೆ ಅಳಿಯ ಕಾಂಬಿನೇಷನ್ ಏನಿದೆಯೋ ಅದು ಮತ್ತೆ ವಾಪಸ್ ತರೋಣ ಅಂತ ಹೇಳಿ ಅವನು ಮತ್ತು ಶ್ರಾವಣಿಯಲ್ಲಿ ರಿಪ್ಲೇಸ್‌ಮೆಂಟ್ ಕ್ಯಾರೆಕ್ಟರ್‌ಗೆ ನನ್ನನ್ನೇ ಫಿಕ್ಸ್ ಮಾಡಿದ್ರು. ಇದರಲ್ಲಿ ಸಂಯುಕ್ತ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಕೆಲವು ಎಪಿಸೋಡ್ ಪ್ರಸಾರ ಆಗುತ್ತಿದ್ದಂತೆ ನಿಮ್ಮನ್ನು ನೋಡಿ ಖುಷಿ ಆಯ್ತು ಎಂದು ಹೇಳುವುದಕ್ಕೆ ಶುರು ಮಾಡಿದ್ದಾರೆ."
ನಿಮ್ಮ ರಿಯಾಲಿಟಿ ಶೋ ಜರ್ನಿ ಹೇಗಿದೆ?
"ನಾನು ನನ್ನ ಗಂಡ 'ರಾಜಾ ರಾಣಿ' ರಿಯಾಲಿಟಿ ಶೋ ಹೋಗಿದ್ವಿ. ಹಾಗೇ ಬಿಗ್ ಬಾಸ್ ಸೀಸನ್ 7ಗೂ ಹೋಗಿದ್ದೆ. ಆ ವೇಳೆ ನನ್ನ ಕಾಲಿಗೆ ಪೆಟ್ಟು ಬಿದ್ದಿದ್ದರಿಂದ ನಾನು ಕೇಳಿಕೊಂಡು ಆಚೆ ಬಂದೆ. ಅದಾದ್ಮೇಲೆ ನಾನು ಪ್ರತಿವಾರ ವಾಪಾಸ್ ಹೋಗುತ್ತಿದ್ದೆ. ಯಾಕಂದ್ರೆ, ವಾರದ ಕತೆಗಳಿಗಿಂತ ಮುಂಚೆ ಅನ್‌ಸೀನ್ ಕತೆಗಳು ಅಂತ ಬರೋದು. ಅದನ್ನು ನನ್ನ ದೃಷ್ಟಿಕೋನದಲ್ಲಿ ನಿರೂಪಣೆ ಮಾಡುತ್ತಿದ್ದೆ. ಒಳ್ಳೆಯ ಅನುಭವ. ರಾಧಾ ರಮಣ ಮುಗಿಯುತ್ತಿದ್ದಂತೆ ಬಿಗ್ ಬಾಸ್‌ಗೆ ಹೋದೆ."

ನಟನೆಗೆ ಬಾರದೆ ಇದ್ದರೆ ಏನಾಗುತ್ತಿದ್ರಿ?
"ನಾನು ಓದುವಾಗ ನನಗೆ ಟೀ ಟೇಸ್ಟರ್ ಆಗಬೇಕು ಅಂತ ತುಂಬಾನೇ ಆಸೆಯಿತ್ತು. ಯಾಕಂದ್ರೆ ಟೀ ಟೇಸ್ಟರ್ ಅನ್ನೋದು ಹೆಚ್ಚು ಸಂಬಳ ಕೊಡುವ ಕೆಲಸ. ಆದರೆ, ಅದಂತೂ ಆಗಲಿಲ್ಲ. ಆದರೆ, ಅಡುಗೆ ಪ್ರೋಗ್ರಾಂನ ನಿರೂಪಕಿಯಾಗಿ ಫುಡ್ ಅನ್ನು ಟೇಸ್ಟ್ ಮಾಡುವುದಕ್ಕೆ ಅವಕಾಶ ಸಿಕ್ಕಿತು. ಅದಾಗಿಲ್ಲ ಅಂದಿದ್ರೆ, ನಮ್ಮ ಅಪ್ಪ ನೀನು ಇರುವ ಗತ್ತಿಗೆ ಐಎಎಸ್ ಆಫೀಸರ್ ಆಗಬಹುದು ಅಂತ ಯಾವಾಗಲೂ ಹೇಳೋರು. ಎಲ್ಲೋ ಒಂದ್ಕಡೆ ವಿಲನ್ ಆಗ್ಬಿಟ್ಟೆ."
ನಿಮಗೆ ನಾಕು ತಂತಿ ಸಿಕ್ಕಿದ್ದೇಗೆ?
"ಕಾಮಿಡಿ ಟೈಮ್ ಮಾಡುವಾಗ ನಮಗೆ ಜಾಹೀರಾತಿ ಆಫರ್ ಬರೋದು. ಅದಕ್ಕಾಗಿ ನಾವು ಫೋಟೋ ತೆಗೆಸಬೇಕಿತ್ತು. ಹೇಗಿದ್ದಾರೆ? ಎಷ್ಟು ಉದ್ದವಿದ್ದಾರೆ? ಎಷ್ಟು ದಪ್ಪ ಇದ್ದಾರೆ? ಅಂತ ನೋಡಬೇಕಲ್ವ. ಹಾಗೆ ಮಾಡುವಾಗ ಫೋಟೋ ತೆಗಿಸಿಕೊಳ್ಳಬೇಕಾದರೆ, ನನಗೆ ನಾಕು ತಂತಿಗೆ ಆಫರ್ ಸಿಕ್ಕಿದ್ದು. ಅವರು ಯಾರನ್ನೋ ಫಿಕ್ಸ್ ಮಾಡಿದ್ದರು. ಮುಹೂರ್ತನೂ ಆಗಿ ಹೋಗಿತ್ತು. ಆಗ ನಮ್ಮ ಬಾಸ್‌ಗೆ ಕೇಳಿದೆ. ಉದಯ ಟಿವಿಯ ಧಾರಾವಾಹಿಗೆ ಒಂದು ಆಫರ್ ಬಂದಿದೆ ಏನು ಮಾಡಲಿ ಅಂತ ಕೇಳಿ. ನೀನು ಆರಾಮಾಗಿ ತಗೋ ಅಂದರು. ನಮ್ಮ ಡೈರೆಕ್ಟರ್ ಸುರೇಶ್ ಸರ್, ಸಕ್ರಬೈಲ್ ಶ್ರೀನಿವಾಸ್, ಪ್ರಶಾಂತ್ ಅವರು ಗೈಡ್ ಮಾಡಿದರು. ನಾನು ಅಲ್ಲಿ ನಟನೆ ಕಲಿತೆ. ನಾಕು ತಂತಿ ನನಗೆ ಶಿಬಿರದ ಹಾಗೆ."
ರಾಧಾ ರಮಣ ಎಂಟ್ರಿ ಹೇಗಾಯ್ತು?
"ರೇಡಿಯೋದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ನನಗೆ 'ರಾಧಾ ರಮಣ'ಗೆ ಕರೆ ಬಂತು. ನನ್ನ ಜೊತೆ ನಟಿಸುತ್ತಿದ್ದ ಕೋಸ್ಟಾರ್‌ಗಳಿರಲಿ, ಬೇರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸ್ನೇಹಿತರು ಸಖತ್ ಒಳ್ಳೆಯ ಕಮ್‌ಬ್ಯಾಕ್ ಮಾಡಿದೆ ಅಂತ ಹೇಳಿದರು. ಅದರಲ್ಲಿ ನಾನು ವಿಲನ್ ರೋಲ್ ಮಾಡುತ್ತಿದ್ದೆ. ಆಶ್ಚರ್ಯ ಅಂದರೆ, ವಿಲನ್ ರೋಲ್‌ಗೆ ಹೆಚ್ಚು ಸಪೋರ್ಟ್ ಮಾಡುತ್ತಿದ್ದರು. ಎಲ್ಲಿ ಜನರು ಹೊಡೆದುಬಿಡುತ್ತಾರೋ ಅಂತ ನನಗೆ ಭಯವಿತ್ತು. ಜನರು ಇವತ್ತಿಗೂ ನನಗೆ ಸಿತಾರ ಮೇಡಂ ಅಂತಲೇ ಕರೆಯುತ್ತಾರೆ."
ಅವನು ಮತ್ತೆ ಶ್ರಾವಣಿ ನಟನೆ ಹೇಗನಿಸುತ್ತಿದೆ?
"ಅವನು ಮತ್ತು ಶ್ರಾವಣಿ ನನಗೆ ಹೊಸ ಟೀಮ್. ಆದರೆ, ಹೊಸ ಟೀಮ್ ಅಂತ ಅನಿಸಲೇ ಇಲ್ಲ. ಅಷ್ಟು ಚೆನ್ನಾಗಿ ಸಪೋರ್ಟ್ ಮಾಡುತ್ತಾರೆ. ಮೊನ್ನೆ ತಾನೇ ಬರ್ತ್‌ಡೇ ಸೆಲೆಬ್ರೆಟ್ ಮಾಡಿದ್ದರು. ಈ ವರ್ಷ ಕೂಡ ಅಷ್ಟೇ ಸ್ಪೆಷಲ್ ಆಗಿತ್ತು, ನಾನು ತುಂಬಾನೇ ಗ್ರೇಟ್‌ಫುಲ್."
ಮುಂದಿನ ದಿನಗಳಲ್ಲಿ ನಿಮ್ಮ ಪಾತ್ರ ಹೇಗಿರುತ್ತೆ?
"ಅವನು ಮತ್ತು ಶ್ರಾವಣಿಯಲ್ಲಿ ತುಂಬಾನೇ ಟ್ವಿಸ್ಟ್ ಅಂಡ್ ಟರ್ನ್ಸ್ ಇದೆ. ಒಂದು ಎಪಿಸೋಡ್ ಅನ್ನೂ ಮಿಸ್ ಮಾಡಬಾರದು. ಈಗ ಹೇಗೆ ನಾನು ಶಾಂತವಾಗಿ ಬಂದಿದ್ದಾರೆ ಅಂದುಕೊಳ್ಳುತ್ತಾರೋ. ಹಾಗೆ ಇರೋದಿಲ್ಲ. ತುಂಬಾನೇ ವಿಭಿನ್ನವಾಗಿರುತ್ತೆ. ನಾನು ಕೂಡ ಆಡಿಯನ್ಸ್ ಅನ್ನು ರಂಜಿಸುವುದಕ್ಕೆ ಇನ್ನೂ ಕಾಯುತ್ತಿದ್ದೇನೆ. ಈಗ ಒಂದಿಷ್ಟು ಸೀನ್‌ಗಳು ಬಂದಿವೆ. ಮುಂದಿನ ದಿನಗಳಲ್ಲಿ ಇನ್ನೂ ಅದ್ಭುತ ಸೀನ್‌ಗಳಿವೆ. ಸಂಯುಕ್ತ ಪಾತ್ರ ಇನ್ನೂ ಟ್ವಿಸ್ಟ್ ಅಂಡ್ ಟರ್ನ್ ಇರುವ ಪಾತ್ರ. ವೀಕ್ಷಕರು ಸಖತ್ ಎಂಜಾಯ್ ಮಾಡುತ್ತಾರೆ."


Click it and Unblock the Notifications











