'ನಮ್ಮ ಲಚ್ಚಿ'ಯ ಸುಶ್ಮಿತಾ ಕ್ರಶ್ ವಿಜಯ್ ಸೂರ್ಯ: ಮಜಾಭಾರತ, ಗಿಚ್ಚಿಗಿಲಿಗಿಲಿ, ಲಚ್ಚಿಗೆ ಬಗ್ಗೆ ಏನಂತಾರೆ?
ಸ್ಟಾರ್ ಸುವರ್ಣದಲ್ಲಿ 'ನಮ್ಮ ಲಚ್ಚಿ' ಧಾರಾವಾಹಿಗೆ ವೀಕ್ಷಕರು ಮನಸೋತಿದ್ದಾರೆ. ವಿಜಯ್ ಸೂರ್ಯ ಹಾಗೂ ಲಚ್ಚಿ ಪಾತ್ರಗಳು ಪ್ರೇಕ್ಷಕರನ್ನು ಸೆಳೆದಿವೆ. ಇವರಿಬ್ಬರ ಜೊತೆ ಮತ್ತೊಬ್ಬರು ಕಿರುತೆರೆ ವೀಕ್ಷಕರಿಗೆ ಇಷ್ಟ ಆಗಿದ್ದಾರೆ ಅವರೇ ಶಾಂತವ್ವ ಉರ್ಫ್ ಸುಶ್ಮಿತಾ.
ಸುಶ್ಮಿತಾ ಪಕ್ಕಾ ಬೆಂಗಳೂರು ಹುಡುಗಿ. 'ಮಜಾಭಾರತ', 'ಕಾಮಿಡಿ ಟಾಕೀಸ್', 'ಗಿಚ್ಚಿ ಗಿಲಿಗಿಲಿ' ಅಂತಹ ರಿಯಾಲಿಟಿ ಶೋ ಮೂಲಕ ಕಿರುತೆರೆ ವೀಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದ್ದಾರೆ. ಈಗ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ಶಾಂತವ್ವ ಪಾತ್ರದಲ್ಲಿ ಒಮ್ಮೊಮ್ಮೆ ಖಳನಾಯಕಿಯಾಗಿ, ಮತ್ತೊಮ್ಮೆ ಕಾಮಿಡಿಯನ್ ಆಗಿಯೂ ಕಾಣುತ್ತಿದ್ದಾರೆ. ಇವರಿಗೆ ಇದೇ ಧಾರಾವಾಹಿಯಲ್ಲಿ ಹೀರೊ ವಿಜಯ್ ಸೂರ್ಯ ಮೊದಲ ಕ್ರಶ್. ಈ ಬಗ್ಗೆ, ಅವರ ಜರ್ನಿ ಬಗ್ಗೆ ಫಿಲ್ಮಿಬೀಟ್ ಜೊತೆ ಸವಿಸ್ತಾರವಾಗಿ ಹಂಚಿಕೊಂಡಿದ್ದಾರೆ.

"ನಮ್ಮ ಲಚ್ಚಿಯ ಪಾತ್ರ ಸಿಕ್ಕಿದ್ದಕ್ಕೆ ಲಕ್ಕಿ"
"ಇಂತಹದ್ದೊಂದು ಪಾತ್ರ ಸಿಗುವುದಕ್ಕೆ ಯಾರಾದರೂ ಲಕ್ಕಿ ಆಗಿರಬೇಕು. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡೇ ದೊಡ್ಡ ಪಾತ್ರ ಮಾಡುತ್ತಿದ್ದೇನೆ. ನಂಬೋಕೆ ಆಗುತ್ತಿಲ್ಲ. ಸೀರಿಯಲ್ ಸಮೇತ ಈ ಪಾತ್ರ ಇಷ್ಟೊಂದು ಸದ್ದು ಮಾಡುತ್ತಿದೆ ಅಂತ. ಈ ಎಲ್ಲಾ ಕ್ರೆಡಿಟ್ ನಮ್ಮ ನಿರ್ಮಾಪಕರು, ನಿರ್ದೇಶಕರು ಹಾಗೂ ಇಡೀ ತಂಡಕ್ಕೆ ಹೋಗುತ್ತೆ. ನನಗೆ ನಿರ್ದೇಶಕರು ನಿಮ್ಮ ಪಾತ್ರ ಕಾಮಿಡಿ ಕಮ್ ವಿಲನ್ ಅಂತ ಹೇಳಿದ್ದರು. ಕಾಮಿಡಿ ಕಮ್ ವಿಲನ್ ಅಂದಾಗ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ನಟಿಸಬೇಕಾಗುತ್ತೆ. ಇವಳು ಸೀರಿಯಸ್ ಆಗಿ ಡೈಲಾಗ್ ಹೇಳಿದ್ಲಾ? ಇಲ್ಲಾ ಕಾಮಿಡಿಯಾಗಿ ಹೇಳಿದ್ಲಾ? ಅನ್ನೋದು ಪ್ರಶ್ನೆ ಆಗಬೇಕು." ಎನ್ನುತ್ತಾರೆ ನಟಿ ಸುಶ್ಮಿತಾ.
'ನಮ್ಮ ಲಚ್ಚಿ'ಯಲ್ಲಿ ಪಕ್ಕಾ ಹಳ್ಳಿ ಹುಡುಗಿ ಪಾತ್ರ
"ನಾನು ಮಂಗಳ ಗೌರಿಯಲ್ಲಿ ಮಾಡಿದ್ದು ಇದೇ ತರ ಪಾತ್ರನೇ. ಮನೆ ಸದಸ್ಯರು ಎಲ್ಲರೂ ಇರಬೇಕಾದರೆ ಕಾಮಿಡಿ. ಮನೆಯವರು ಅವಳನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಆದರೆ, ವಿಲನ್ ಜೊತೆ ಇರುತ್ತಾರೆ ಅಂತಹ ಪಾತ್ರ. ಅಲ್ಲದೆ ಬೆಂಗಳೂರು ಕನ್ನಡದಲ್ಲಿಯೇ ಮಾತಾಡಿದ್ದೆ. ನಮ್ಮ ಲಚ್ಚಿಯಲ್ಲಿ ಹಾಗಲ್ಲ. ಇದು ಪಕ್ಕಾ ಹಳ್ಳಿ ಹುಡುಗಿ ಭಾಷೆಯನ್ನು ಬಳಸಬೇಕು. ನಾನು ಬೆಂಗಳೂರಿನವಳಾಗಿದ್ದರಿಂದ ಸ್ವಲ್ಪ ಕಷ್ಟ ಆಯ್ತು. ಆದರೆ, ನಿರ್ದೇಶಕ ಸಂಪ್ರಥ್ವಿ ಅವರ ಸಹಾಯದಿಂದ ಇದು ಸಾಧ್ಯ ಆಯ್ತು."

ಮೊದಲ ಸೀನ್‌ನಲ್ಲೇ 7-8 ಟೇಕ್ ತೆಗೊಂಡಿದ್ದೆ
"ಭಾಷೆ ತುಂಬಾ ಚಾಲೆಂಜಿಂಗ್ ಅಂತ ಅನಿಸಿತ್ತು. ಈ ಧಾರಾವಾಹಿಯಲ್ಲಿ ನಟಿಸುತ್ತಿರೋರು ಎಲ್ಲರೂ ತುಂಬಾ ಸಹಾಯ ಮಾಡಿದ್ದಾರೆ. ಹಾಗಾಗಿ ಭಯ ಅನಿಸಲಿಲ್ಲ. ನನಗೆ ಈಗಲೂ ನೆನಪಿದೆ. ವಿಜಯ್ ಸೂರ್ಯ ಸರ್ ಬಂದಾಗ ಮೊದಲನೇ ಸೀನ್‌ನಲ್ಲೇ 7 ರಿಂದ 8 ಟೇಕ್ ತೆಗೆದುಕೊಂಡಿದ್ದೀನಿ. ಎಲ್ಲರಿಗೂ ಗೊತ್ತಿತ್ತು. ಹಳ್ಳಿ ಟ್ರ್ಯಾಕ್ ಬಂದಾಗ ಸಖತ್ ಆಗಿಯೇ ಮಾಡುತ್ತಾಳೆ ಅಂತ. ಅವತ್ತು ಎಲ್ಲರೂ ನಗಗುತ್ತಾ ಬೆಂಬಲನೇ ನೀಡಿದ್ರು. ಇಂತಹದ್ದೆಲ್ಲ ಫೇಸ್ ಮಾಡಿದ್ದೀನಿ."
ಸೀರಿಯಸ್-ಕಾಮಿಡಿ ಎರಡಲ್ಲಿ ಕಾಮಿಡಿನೇ ಬೆಸ್ಟ್
"ಸೀರಿಯಸ್ ರೋಲ್ ಹಾಗೂ ಕಾಮಿಡಿ ಅಂತ ಬಂದಾಗ ನಾನು ಕಾಮಿಡಿಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಯಾಕಂದ್ರೆ, ಜನರೆಲ್ಲರೂ ಅವರ ಪರ್ಸನಲ್ ಲೈಫ್‌ನಲ್ಲಿ ಸೀರಿಯಸ್ ಆಗಿರುತ್ತಾರೆ. ತುಂಬಾ ಒತ್ತಡದಲ್ಲಿ ಇರುತ್ತಾರೆ. ಕಾಮಿಡಿ ಮೂಲಕ ಅವರನ್ನು ನಗಿಸಬೇಕು ಅನ್ನೋದು ಮುಖ್ಯ ಉದ್ದೇಶ. ಅಲ್ಲದೆ ಅವರನ್ನು ನಗಿಸೋ ಜವಾಬ್ದಾರಿಯನ್ನು ತಗೋಬೇಕು ಅನ್ನೋದು ಆಸೆ."

ವಿಜಯ್ ಸೂರ್ಯ ರಾಕ್‌ಸ್ಟಾರ್-ನನ್ನ ಮೊದಲ ಕ್ರಶ್
"ವಿಜಯ್ ಸೂರ್ಯ ಅವರು ಕಾಮಿಡಿ ಟಾಕೀಸ್ ಅಂತ ರಿಯಾಲಿಟಿ ಶೋ ಬಂತು. ಮಜಾ ಭಾರತ ಸೀಸನ್ 2 ಹಾಗೂ ಸೀಸನ್ 2 ಬಂತು. 'ಹಿಟ್ಲರ್ ಕಲ್ಯಾಣ' ಖ್ಯಾತಿಯ ದಿಲೀಪ್ ರಾಜ್ 'ಮಜಾಭಾರತ' ಅಂತ ಶುರುಮಾಡಿ, ಮೊದಲು ನಮ್ಮನ್ನೆಲ್ಲ ಟ್ರೈನ್ ಮಾಡಿದ್ದು ಇವರೇ. ಒಂದು ರೇಂಜ್‌ಗೆ ಅವರೇ ನಮ್ಮನ್ನು ರೆಡಿ ಮಾಡಿ ಬಿಟ್ಟಿದ್ದರು. ಅವರೇ ನಮ್ಮ ಗುರುಗಳು. ಸೀಸನ್ ಒಂದು ಮುಗೀತು. ಆಗ ಕಾಮಿಡಿ ಟಾಕೀಸ್ ಶುರುವಾದಾಗ ಇವರೇ ಆಂಕರ್. ಆಗ ತಾನೇ ಅಗ್ನಿಸಾಕ್ಷಿ ಮುಗಿದಿತ್ತು. ಸೂಪರ್ ಹಿಟ್ ಹೀರೊ ಅವರು. ಅದೇ ಚಾನೆಲ್‌ನಲ್ಲಿ ಇದ್ದರೂ ಭೇಟಿ ಮಾಡಿಲ್ವಲ್ಲ ಅನ್ನೋ ಬೇಸರವಿತ್ತು. ಅವರು ನಮಗೆ ಆಂಕರ್ ಆಗಿ ಬಂತು. ಈಗ ನಮ್ಮ ಲಚ್ಚಿಯಲ್ಲಿ ರಾಕ್ ಸ್ಟಾರ್ ಅಂತ ಅನಿಸುತ್ತಿದೆ. ಅಯ್ಯೋ ಲಚ್ಚಿ ಜಾಗದಲ್ಲಿ ನಾನೀರಬಾರದಿತ್ತಾ ಅಂತ ಅನ್ನುವಷ್ಟು ಕ್ರೇಜ್ ಬಂದುಬಿಡ್ತು. ಇದು ಪರ್ಸನಲ್ ಅಲ್ಲ.. ಅವರ ಪರ್ಫಾಮೆನ್ಸ್‌ಗೆ ನನಗೆ ಕ್ರಶ್ ಆಗಿದ್ದು."
"ರಿಯಾಲಿಟಿ ಶೋ ಬಿಡೋದಿಲ್ಲ"
"ರಿಯಾಲಿಟಿ ಶೋ ಅನ್ನು ಬಿಡುವುದಕ್ಕೆ ಸಾಧ್ಯವಿಲ್ಲ. ರಿಯಾಲಿಟಿ ಶೋ ನನಗೆ ಉಸಿರಿದ್ದ ಹಾಗೆ. ಪ್ರತಿವಾರ ಬೇರೆ ಬೇರೆ ಪಾತ್ರ ಮಾಡಿಕೊಂಡು ಬಂದಿದ್ದರಿಂದಲೇ ನಾವು ಇಲ್ಲಿವರೆಗೂ ಬಂದಿದ್ದು. ಪ್ರತಿವಾರ ಯಾರಾದರೂ ಸೆಲೆಬ್ರೆಟಿ ಬರುತ್ತಾರೆ. ಯಾರೋ ಒಬ್ಬರು ಅವಕಾಶ ಕೊಡುತ್ತಾರೆ. ಸಾಧು ಕೋಕಿಲಾ ಸರ್ ಅವರದ್ದೂ ಹಾಗೇ ಆಗಿದ್ದು. ಅವರು ಸುಮ್ಮನೆ ಗೆಸ್ಟ್ ಆಗಿ ಬಂದಿದ್ದರು. ಅವರ ಮುಂದೆ ಒಂದು ಪರ್ಫಾಮೆನ್ಸ್ ಮಾಡಿದೆ. ಅವರು ನನ್ನ ಜೊತೆ ಆಕ್ಟ್ ಮಾಡಬೇಕು ಅಂತ ಹೇಳಿದ್ರು. ಹಾಗೇ ಕೆಲಸ ಸಿಕ್ಕಿದ್ದು. ಸದ್ಯ ಒಂದು ರೆಗ್ಯೂಲರ್ ಸೀರಿಯಲ್ ನಮ್ಮ ಲಚ್ಚಿ ಇದೆ. ರಿಯಾಲಿಟಿ ಶೋ, ಸಿನಿಮಾ, ಧಾರಾವಾಹಿ ಯಾವುದನ್ನೂ ಬಿಡೋದಿಲ್ಲ."
"ಜಗ್ಗಪ್ಪನನ್ನು ಸಪೋರ್ಟ್ ಮಾಡೋದ್ಯಾಕೆ?"
"ಆರಂಭದಿಂದಲೂ ನನಗೆ ಸಪೋರ್ಟ್ ಮಾಡಿದವರು ಕಮ್ಮಿನೇ. ನನ್ನ ಟ್ರ್ಯಾಕ್ ಹೋಗುವಾಗ ಕಾಂಪಿಟೇಷನ್ ಬರ್ತಿದ್ದೇ ಹೊರೆತು, ಸಪೋರ್ಟ್ ಮಾಡುತ್ತಿರಲಿಲ್ಲ. ಆದರೆ ಸಪೋರ್ಟ್ ಮಾಡೋದು ಜಗ್ಗಪ್ಪನೇ.. ಹೀಗಾಗಿ ಅವನೇ ನನ್ನ ಬೆಸ್ಟ್ ಫ್ರೆಂಡ್. ಅವನಿಗೂ ಅಷ್ಟೇ ಭರ್ಜರಿ ಬ್ಯಾಚುಲರ್ಸ್ ಹೋಗ್ತಾನೆ. ಅವನು ಬ್ಯುಸಿ ಇದ್ದಾಗ ನಾನು ಸಹಾಯ ಮಾಡ್ತೀನಿ, ಬೂಸ್ಟ್ ಮಾಡುತ್ತೀನಿ. ಇದೊಂತರ ಗಿವ್ ಅಂಡ್ ಟೇಕ್ ಅಷ್ಟೇ. ಕಾಂಪಿಟೇಟರ್ಸ್ ಇರುತ್ತಾರೆ ಕಾಂಪ್ಲಿಮೆಂಟ್ ಕೊಡೋದು ಕಡಿಮೆ. ಅವನು ಕಾಂಪ್ಲಿಮೆಂಟ್ ಕೊಡೋಕೆ ಶುರು ಮಾಡಿದೆ. ಇತ್ತ ನಾನು ಕೊಡುತ್ತಿದ್ದೆ. ಆ ಬಾಂಡಿಂಗ್ ಹಾಗೇ ಬೆಳೀತಾ ಹೋಯ್ತು."
ನಾನು ಪಕ್ಕಾ ಬೆಂಗಳೂರು ಹುಡುಗಿ
"ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರು. ನನ್ನ ಶಿಕ್ಷಣ, ಥಿಯೇಟರ್ ಪ್ರತಿಯೊಂದು ಬೆಂಗಳೂರೇ. ರಾಮನಗರದ ಸುಗ್ಗನಹಳ್ಳಿ ನಮ್ಮ ಅಜ್ಜಿ ಊರು. ಅಲ್ಲಿಗೆ ಹೋಗಿತ್ತಿದ್ದೆ. ಹೀಗಾಗಿ ಹಳ್ಳಿ ಜೀವನನೂ ಗೊತ್ತು. ನಗರ ಜೀವನನೂ ಗೊತ್ತು. ನಮ್ಮ ಮನೆಯವರು ನನಗೆ ತುಂಬಾನೇ ಸಪೋರ್ಟ್ ಮಾಡಿದ್ರು. ನಾನು ಏನೇ ಮಾಡಿದರೂ ಹೂಂ ಅನ್ನುತ್ತಿದ್ದರು. ಅದೇ ನನ್ನನ್ನು ಈ ಮಟ್ಟಿಗೆ ಕರ್ಕೊಂಡು ಬಂದಿರೋದು." ಎಂದು ಮಾತು ಮುಗಿಸುತ್ತಾರೆ ನಟಿ ಸುಶ್ಮಿತಾ.


Click it and Unblock the Notifications











