ಕಿರುತೆರೆಯ ಚಿನಕುರುಳಿ, 'ಶಾರದೆ'ಯ ಚೂಟಿ ಮಗಳು ನಟನೆಯಷ್ಟೇ ಅಲ್ಲ ಡ್ಯಾನ್ಸ್, ಕರಾಟೆಯಲ್ಲೂ ಎಕ್ಸ್‌ಪರ್ಟ್!

ಕನ್ನಡ ಕಿರುತೆರೆಯಲ್ಲಿ ಪುಟಾಣಿಗಳ ದರ್ಬಾರ್ ಜೋರಾಗಿದೆ. ಕನ್ನಡದ ಯಾವುದೇ ಎಂಟರ್‌ಟೈನ್ಮೆಂಟ್ ಚಾನೆಲ್‌ ನೋಡಿದರೂ ಅದರಲ್ಲಿ ಒಬ್ಬರಲ್ಲ ಒಬ್ಬರು ಬಾಲ ನಟಿ ಕಾಣಿಸಿಕೊಳ್ಳುತ್ತಾರೆ. ಬಾಲ ನಟ-ನಟಿಯರಿಗಾಗಿಯೇ ಪಾತ್ರಗಳನ್ನು ಸೃಷ್ಟಿಸಲಾಗುತ್ತಿದೆ. ಅವರ ಪಾತ್ರಗಳಿಗೂ ಕಿರುತೆರೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ. ಹೀಗೆ ಕಿರುತೆರೆಯಲ್ಲಿ ಮಿಂಚುತ್ತಿರುವ ಬಾಲ ನಟಿಯೇ ಸ್ಪೂರ್ತಿ.

ಬೇಬಿ ಸ್ಪೂರ್ತಿ ಈಗಾಗಲೇ ಧಾರಾವಾಹಿ ಹಾಗೂ ರಿಯಾಲಿಟಿ ಶೋನಲ್ಲಿ ಮಿಂಚಿದ್ದಾರೆ. ಸಿರಿ ಕನ್ನಡದಲ್ಲಿ ಪ್ರಸಾರ ಆಗಿದ್ದ 'ಸಿರಿ ಸೂಪರ್‌ ಮಾಮ್ಸ್', ಕಲರ್ಸ್ ಕನ್ನಡದ ಧಾರಾವಾಹಿ 'ಚುಕ್ಕಿತಾರೆ' ಹಾಗೂ ಈಗ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ಶಾರದೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬೇಬಿ ಸ್ಪೂರ್ತಿ ಫಿಲ್ಮಿಬೀಟ್ ಕನ್ನಡ ಜೊತೆ 'ಶಾರದೆ' ಧಾರಾವಾಹಿ, ನಟನೆ, ಹವ್ಯಾಸ, ತನ್ನ ಶಾಲೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Kannada Serial Sharade Child Artist Baby Spoorthy Interview and Life Story

ನಿನಗೆ ಶಾರದೆ ಯಾಕೆ ಇಷ್ಟ ಆಯ್ತು?

"ನನಗೆ ಸೀರಿಯಲ್ ಅಂದರೆ ತುಂಬಾನೇ ಇಷ್ಟ. ಶೂಟಿಂಗ್ ನನಗೆ ತುಂಬಾನೇ ಇಷ್ಟ ಆಗುತ್ತೆ. ಅದರಲ್ಲೂ ಡೈಲಾಗ್ ಜಾಸ್ತಿ ಇರುತ್ತಲ್ಲ. ಅದಂತೂ ತುಂಬಾನೇ ಇಷ್ಟ. ಈ ಸೀರಿಯಲ್‌ನಲ್ಲಂತೂ ನಾನು ಬಜಾರಿ ತರ ಆಡುತ್ತೇನೆ. ನಾನು ಮುಂಚೆ ಒಂದು ಚುಕ್ಕಿತಾರೆ ಅಂತ ಸೀರಿಯಲ್ ಮಾಡಿದ್ದೆ. ಅದಕ್ಕೂ ಮುಂಚೆ ಸಿರಿ ಸೂಪರ್ ಮಾಮ್ ಮಾಡಿದ್ದೆ. ಚುಕ್ಕಿತಾರೆ ಸೀರಿಯಲ್‌ನಲ್ಲಿ ಜಾಸ್ತಿ ಡೈಲಾಗ್ ಇರಲಿಲ್ಲ. ಸುಮ್ಮನೆ ಅಳುತ್ತಾ ಕೂತಿರಬೇಕಿತ್ತು. ಆದರೆ, ಶಾರದೆಯಲ್ಲಿ ನನಗೆ ಸಿಕ್ಕಾಪಟ್ಟೆ ಡೈಲಾಗ್ ಇದೆ. ಅದಕ್ಕೆ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತೇನೆ."

ರಿಯಲ್ ಲೈಫ್‌ನಲ್ಲಿ ಹೇಗಿರುತ್ತೀಯಾ?

"ನಾನು ರಿಯಲ್ ಲೈಫ್‌ನಲ್ಲಿ ಫುಲ್ ಹ್ಯಾಪಿಯಾಗಿರುತ್ತೇನೆ. ರಿಯಲ್‌ ಲೈಫ್‌ನಲ್ಲೂ ಬಜಾರಿ ತರಾನೇ ಆಡುತ್ತೇನೆ. ಆದರೆ, ಅಮ್ಮ ಬೈಯ್ಯುತ್ತಾರೆ ಅಂತ ಎನರ್ಜಿನ ಸ್ವಲ್ಪ ಕಡಿಮೆ ಮಾಡಿಕೊಳ್ಳುತ್ತೇನೆ."

ಶಾರದೆಯ ಬೆಸ್ಟ್ ಮೂವ್ಮೆಂಟ್ ಯಾವುದು?

"ಹೈದರಾಬಾದ್‌ನಲ್ಲಿ ನೈಟ್ ಶೂಟ್ ಮಾಡುವಾಗ ಬಸ್‌ನಲ್ಲಿ ಎಲ್ಲಾ ಕಡೆ ಹೋಗಿ ಎಲ್ಲರೂ ಮಜಾ ಮಾಡಿದ್ವಿ. ಅಲ್ಲಿ ಎರಡು ದಿನ ಶೂಟ್ ಮಾಡಿದ್ವಿ. ಮೊದಲೇ ಅಮ್ಮ ಪಾತ್ರವನ್ನೆಲ್ಲ ಶೂಟ್ ಮಾಡಿದ್ರು. ಆಮೇಲೆ ರಾತ್ರಿ ವೇಳೆ ನನ್ನ ಪಾತ್ರವನ್ನು ಶೂಟ್ ಮಾಡಿದ್ರು."

Kannada Serial Sharade Child Artist Baby Spoorthy Interview and Life Story

ಉದ್ದುದ್ದ ಡೈಲಾಗ್ ಹೇಗೆ ನೆನಪಿನಲ್ಲಿರುತ್ತೆ?

"ಡೈರೆಕ್ಟರ್ ಸರ್ ಒಮ್ಮೆ ಹೇಳಿ ಕೊಡುತ್ತಾರೆ. ಒಂದ್ವೇಳೆ ಗೊತ್ತಾಗಿಲ್ಲ ಅಂದರೆ, ಮತ್ತೊಮ್ಮೆ ತುಂಬಾ ಚೆನ್ನಾಗಿ ಹೇಳಿಕೊಡುತ್ತಾರೆ. ಅದು ದೊಡ್ಡ ಡೈಲಾಗ್ ಇದ್ದರೂ ಪರ್ವಾಗಿಲ್ಲ. ಲೈಟಿಂಗ್ ಮಾಡುವಾಗ ಟೈಮ್ ಸಿಗುತ್ತೆ ಅಲ್ವಾ? ಅರ್ಧರ್ಧ ಹೇಳಿ ಕೊಡುತ್ತಾರೆ. ಉದ್ದುದ್ದ ಡೈಲಾಗ್ ಇರುತ್ತಲ್ಲ. ಅದನ್ನು ಮನಸ್ಸಿನಲ್ಲಿ ಐದು ಬಾರಿ ಹೇಳಿಕೊಳ್ಳುತ್ತೇನೆ. ಅವರೆಲ್ಲ ಲೈಟಿಂಗ್ ಮಾಡುವಾಗ ನಾನು ಪ್ರಾಕ್ಟೀಸ್ ಮಾಡುತ್ತಿರುತ್ತೇನೆ. ಅದನ್ನೇ ಟೇಕ್‌ನಲ್ಲಿ ಹೇಳುತ್ತೇನೆ. ಗೊತ್ತಿಲ್ಲ ಅಂದರೆ, ಮತ್ತೆ ರಿಕಾಲ್ ಮಾಡಿಕೊಳ್ಳುತ್ತೇನೆ."

ಶಾರದೆ ಸೀರಿಯಲ್‌ನಲ್ಲಿ ಯಾರು ನಿನ್ನ ಫೇವರಿಟ್?

"ಶಾರದೆ ಸೀರಿಯಲ್‌ನಲ್ಲಿ ಎಲ್ಲರೂ ನನ್ನ ಫೇವರಿಟ್. ಶಾರದಮ್ಮ, ಅಂಬುಜಮ್ಮ, ಸುಮಿತ್ರಾ ಅಮ್ಮ ಇವರು ನನಗೆ ತುಂಬಾನೇ ಇಷ್ಟ ಆಗುತ್ತಾರೆ. ಇವರ ಜೊತೆಗೆ ಹೆಚ್ಚು ಸಮಯ ಕಳೆಯುವುದಕ್ಕೆ ಇಷ್ಟ"

ನಿನಗೆ ಇಷ್ಟೊಂದು ಎನರ್ಜಿ ಹೇಗೆ ಬರುತ್ತೆ?

"ನಾನು ಊಟ ಮಾಡ್ತೀನಲ್ಲ. ಅದರಿಂದ ಬರುತ್ತೆ. ನಾನು ತುಂಬಾ ವ್ಯಾಯಾಮ ಮಾಡುತ್ತೇನೆ. ಡ್ಯಾನ್ಸ್ ಮಾಡುತ್ತೇನೆ. ಕರಾಟೆ ಮಾಡುತ್ತೇನೆ. ಅದರಿಂದ ನನಗೆ ತುಂಬಾನೇ ಎನರ್ಜಿ ಸಿಗುತ್ತೆ."

Kannada Serial Sharade Child Artist Baby Spoorthy Interview and Life Story

ಕರಾಟೆ, ಡ್ಯಾನ್ಸ್‌ನಲ್ಲಿ ಎಕ್ಸ್‌ಪರ್ಟ್ ಅಂತೆ ಹೌದಾ?

"ನನಗೆ ಮೂರು ವರ್ಷ ಇದ್ದಾಗಿಂದ ಅಮ್ಮನ ಡ್ಯಾನ್ಸ್ ಕ್ಲಾಸ್‌ನಲ್ಲಿ, ಅಪ್ಪನ ಕರಾಟೆ ಕ್ಲಾಸ್‌ನಲ್ಲಿ ಕಲಿತಾ ಇದ್ದೀನಿ. ಕರಾಟೆಯಲ್ಲಿ ಈಗಾಗಲೇ ಬ್ರೌನ್ ಬೆಲ್ಟ್ ಇದೆ. ನಾವು ಸೀನಿಯರ್ ಲೆವೆಲ್‌ಗೆ ಹೋಗುತ್ತೇವೆ. ಫಸ್ಟ್ ವೈಟ್ ಬೆಲ್ಟ್ ಇರುತ್ತೆ. ಎರಡನೆಯದು ಯಲ್ಲೋ ಬೆಲ್ಟ್ ಇರುತ್ತೆ. ವೈಟ್ ಬೆಲ್ಟ್‌ನಿಂದ ಸೀದಾ ಆರೇಂಜ್ ಬೆಲ್ಟ್‌ಗೆ ಹೋಗಬಹುದು. ನಾನು ಯಲ್ಲೋ ಬೆಲ್ಟ್‌ನಿಂದ ಆರೇಂಜ್‌ ಬೆಲ್ಟ್‌ಗೆ ಹೋಗಿಲ್ಲ. ಸೀದಾ ಗ್ರೀನ್ ಬೆಲ್ಟ್‌ಗೆ ಹೋದೆ. ನಾನು ತುಂಬಾ ಹಾರ್ಡ್ ವರ್ಕ್ ಮಾಡಿದ್ದೆ. ಟೂರ್ನಮೆಂಟ್ ಎಲ್ಲಾ ಅಟೆಂಡ್ ಮಾಡಿದ್ದೀನಿ. ಇನ್ನು ಡ್ಯಾನ್ಸ್‌ನಲ್ಲಿ ಅಮ್ಮ ಕುಚುಪುಡಿ ಹೇಳಿ ಕೊಡ್ತಾರೆ. ಹಾಗೇ ವೆಸ್ಟರ್ನ್ ಡ್ಯಾನ್ಸ್ ಕಲಿಸುತ್ತಾರೆ. ಒಂದೊಂದು ಸ್ಟೆಪ್ಸ್ ಅನ್ನು ನಿಧಾನಕ್ಕೆ ಹೇಳಿ ಕೊಡುತ್ತಾರೆ. ಫೇಸ್ ಎಕ್ಸ್‌ಪ್ರೆಷನ್ ಹೇಗೆ ಅಂತಾನೂ ಹೇಳುತ್ತಾರೆ."

ಕರಾಟೆ, ಡ್ಯಾನ್ಸ್, ನಟನೆ ಈ ಮೂರರಲ್ಲಿ ಯಾವುದಿಷ್ಟ?

"ಕರಾಟೆ, ಡ್ಯಾನ್ಸ್ ನಟನೆ ಅಂತ ಬಂದರೆ, ನನಗೆ ಆಕ್ಟಿಂಗ್ ಇಷ್ಟ. ಅಮ್ಮ ನನಗೆ ಸಾಕಷ್ಟು ಆಡಿಷನ್‌ಗೆ ಕಳುಹಿಸಿದ್ರು. ಸಿರಿ ಸೂಪರ್‌ ಮಾಮ್ ಬಂತಲ್ಲ. ಅದರಲ್ಲಿ ಅಮ್ಮ ನನಗೆ ತುಂಬಾ ಎನರ್ಜಿ ತುಂಬಿದ್ರು. ನಿನ್ನ ಕೈಯಲ್ಲಿ ಆಗುತ್ತೆ. ಆಕ್ಟಿಂಗ್ ಮಾಡು ಅಂತ ಹೇಳಿದ್ರಲ್ಲ. ಸಿರಿ ಸೂಪರ್ ಮಾಮ್‌ನಲ್ಲಿ ಡೈಲಾಗ್ಸ್ ಇರುತ್ತೆ. ಆದರೆ, ಅಲ್ಲಿ ಅವರು ಹೇಳಿಕೊಡಲ್ಲ. ಎಲ್ಲಾ ನಾವಾಗೇ ಮಾಡಬೇಕು. ನಾವೇ ಸ್ಕಿಟ್ ಮಾಡಬೇಕು. ಅದರಿಂದಾನೇ ನನಗೆ ಎನರ್ಜಿ ಬಂದಿದ್ದು. ಅದಾದ್ಮೇಲೆ ನಾನು ಚುಕ್ಕಿತಾರೆಗೆ ಹೋದೆ. ಅಲ್ಲಿ ನಾನು ಯಾವಾಗಲೂ ಅಳುತ್ತಾ ಇರಬೇಕು. ಆದರೆ, ಶಾರದೆಯಲ್ಲಿ ನಾನು ಫುಲ್ ಹ್ಯಾಪಿ.. ಹ್ಯಾಪಿ"

ಶೂಟಿಂಗ್‌ ಬಂದ್ರೆ ಶಾಲೆಯ ಕಥೆ ಏನು?

" ನಾನು 2ನೇ ತರಗತಿ ಓದುತ್ತಿದ್ದೇನೆ. ನನಗೆ ಫ್ರೀ ಸಿಕ್ಕಾಗಲೆಲ್ಲ ಅಮ್ಮ ಶೂಟಿಂಗ್‌ನಲ್ಲಿ ಹೇಳಿ ಕೊಡುತ್ತಾರೆ. ಮನೆಯಲ್ಲೂ ಹೇಳಿ ಕೊಡುತ್ತಾರೆ. ಪರೀಕ್ಷೆ ಎಲ್ಲ ಬರಿತೀನಿ. ಟೀಚರ್ಸ್ ನನಗೆ ಸಿಕ್ಕಾಪಟ್ಟೆ ಸಹಾಯ ಮಾಡುತ್ತಿದ್ದಾರೆ. ಆನಿವಲ್ ಡೇ ದಿನ ನನ್ನ ಪೋಸ್ಟ್ ಎಲ್ಲಾ ಹಾಕಿದ್ದರು. ಚುಕ್ಕಿತಾರೆ ಸೇರಿ ಎಲ್ಲಾ ಸೀರಿಯಲ್ ಪೋಸ್ಟರ್ ಹಾಕಿದ್ದರು."

ಎಷ್ಟು ದಿನ ಸ್ಕೂಲ್‌ಗೆ ಹೋಗುತ್ತೀಯಾ?

"ಅದು ಹೇಳುವುದು ಕಷ್ಟ. ಒಂದೊಂದು ಸಲ ಒಂದೊಂದು ರೀತಿ ಹೋಗುತ್ತೇನೆ. ನಾನು ವ್ಯಾನ್‌ ಹತ್ತುತ್ತಿದ್ದಂತೆ ನನ್ನ ಫ್ರೆಂಡ್ಸ್ ಕೇಳುತ್ತಾರೆ. ಇನ್ನೂ ಸ್ಕೂಲ್‌ಗೆ ಹೋದಾಗಂತೂ ತುಂಬಾ ಜನ ಕೇಳುತ್ತಾರೆ. ನೀನು ಚುಕ್ಕಿತಾರೆ ಮಾಡುತ್ತಿದ್ದೆ ಅಲ್ವಾ? ನೀನು ಶಾರದೆಯಲ್ಲಿ ಬರುತ್ತಿದ್ದೀಯ ತಾನೆ ಅಂತಾರೆ. ನಾನು ಹೂಂ ಬರುತ್ತಿದ್ದೇನೆ. ನೀವು ಮಿಸ್ ಮಾಡದೆ ನೋಡಿ ಅಂತಿದ್ದೇನೆ. ಅದೇ ತರ ನಮ್ಮ ಶಾಲೆಯ ಆನಿವಲ್ ಡೇ ಮುಗೀತು. ಅದರಲ್ಲಿ ಫುಲ್ ಡ್ಯಾನ್ಸ್ ಮಾಡಿದ್ದೀನಿ. ಒಂದು ಸೋಲೊ ಡ್ಯಾನ್ಸ್ ಮಾಡಿದೆ. ಸ್ಕೂಲ್‌ನವರು ಎಲ್ಲಾ ಸೇರಿ ಕರಾಟೆ ಮಾಡಿದ್ವಿ. ಹಾಗೇ ಗ್ರೂಪ್ ಡ್ಯಾನ್ಸ್ ಮಾಡಿದೆ."

ಡ್ರಾಯಿಂಗ್ ಅಂದರೆ ತುಂಬಾ ಇಷ್ಟ ಅಂತೆ?

"ನನಗೆ ಡ್ರಾಯಿಂಗ್ ಮಾಡುವುದು ಅಂದರೆ ತುಂಬಾನೇ ಇಷ್ಟ. ದೇವರು ಬಿಡಿಸುತ್ತೇನೆ. ಗಣೇಶನನ್ನು ಬಿಡಿಸುತ್ತೇನೆ. ಮತ್ತೆ ರಾಜ್‌ಕುಮಾರ ತರ ಅರ್ಧ ಮಾಡಿದ್ದೇನೆ. ಮತ್ತೆ ಅಮ್ಮ ಮತ್ತು ನನ್ನನ್ನು ಬಿಡಿಸಿದ್ದೇನೆ. ನನಗೆ ಮೊದಲಿನಿಂದಲೂ ಡ್ರಾಯಿಂಗ್ ಅಂದರೆ ಇಷ್ಟ. ನಾನು ಒಮ್ಮೆ ಒಂದು ಬುಕ್ ನೋಡಿದ್ದೆ. ಅದನ್ನು ನೋಡಿಕೊಂಡು ನನಗೆ ಪೇಂಟಿಂಗ್ ಅಂದರೆ ತುಂಬಾನೇ ಇಷ್ಟ ಆಗಿಬಿಟ್ಟಿದೆ."

ಶಾರದೆ ಬಗ್ಗೆ ಕೊನೆಯಲ್ಲಿ ಏನಂತೀಯಾ?

"ಶಾರದೆ ಅಂದರೆ ನನಗೆ ತುಂಬಾನೇ ಇಷ್ಟ. ನಾನು ತಿಳಿದುಕೊಂಡಿರುವ ಪ್ರಕಾರ ಎಲ್ಲರೂ ನಮ್ಮ ಸೀರಿಯಲ್ ಅನ್ನು ನೋಡುತ್ತಾರೆ. ಅದನ್ನು ನೋಡಿ ನಮ್ಮನ್ನು ಇಷ್ಟ ಪಡುತ್ತಾರೆ. ಹಾಗಾಗಿ ನಮ್ಮ ಸೀರಿಯಲ್ ಇನ್ನೂ ಮುಂದಕ್ಕೆ ಹೋಗುತ್ತೆ ಅನ್ನೋ ನಂಬಿಕೆ ಇದೆ."

More from Filmibeat

English summary
Kannada Serial Sharade Child Artist Baby Spoorthy Interview and Life Story;
Read more about: actress filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X