ಭರತನ್ಯಾಟ, ರಂಗಭೂಮಿ, ಡಬ್ಬಿಂಗ್, ಆಕ್ಟಿಂಗ್.. 'ವಸುದೇವ ಕುಟುಂಬ'ದ ಕುಮಾರಣ್ಣನ ಬಗ್ಗೆ ನಿಮಗೆಷ್ಟು ಗೊತ್ತು?

ಇವರು ಕನ್ನಡದ ಕಿರುತೆರೆಯಲ್ಲಿ ಬೆಳೆಯುತ್ತಿರುವ ಪ್ರತಿಭೆ. ಸ್ಟಾರ್‌ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ವಸುದೇವ ಕುಟುಂಬ' ಧಾರಾವಾಹಿಯಲ್ಲಿ ಕುಮಾರಣ್ಣ ಅನ್ನೋ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ಪಾತ್ರ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದೆ. ಈ ಹಿಂದೆ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರೂ, 'ವಸುದೇವ ಕುಟುಂಬ' ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಮೊದಲ ಧಾರಾವಾಹಿ. ಅಂದ್ಹಾಗೆ, ಇವರ ಹೆಸರು ಅನೂಪ್ ಎ ಬೆಳ್ಳಾವಿ.

ಸ್ಟಾರ್ ಸುವರ್ಣದ 'ವಸುದೇವ ಕುಟುಂಬ'ದಲ್ಲಿ ನಟಿಸುವುದಕ್ಕೂ ಮುನ್ನ 'ನಂದ ಗೋಕುಲ', 'ಯಡಿಯೂರು ಸಿದ್ಧಲಿಂಗೇಶ್ವರ', 'ಬ್ರಾಹ್ಮಿನ್ಸ್ ಕೆಫೆ', 'ಶಾಂತಂ ಪಾಪಂ' ಸಿರಿಯಲ್‌ಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಹಾಗಂತ ಇವರು ಕೇವಲ ನಟರಷ್ಟೇ ಅಲ್ಲ. ಇವರೊಬ್ಬ ಬಹುಮುಖ ಪ್ರತಿಭೆ. ಭರತನಾಟ್ಯಂ ಕಲಿತಿದ್ದಾರೆ. ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆರ್‌ಜೆಯಾಗಿ ಕೆಲಸ ಮಾಡಿದ್ದಾರೆ. ವಿಡಿಯೋ ಎಡಿಟರ್ ಆಗಿ ದುಡಿದಿದ್ದಾರೆ. ಡಬ್ಬಿಂಗ್ ಆರ್ಟಿಸ್ಟ್. ಈಗ ನಟನೆಯನ್ನು ಫುಲ್ ಟೈಮ್ ವೃತ್ತಿಯಾಗಿ ಸ್ವೀಕರಿಸಿದ್ದಾರೆ. ಇವರು ಫಿಲ್ಮಿಬೀಟ್ ಕನ್ನಡದ ಜೊತೆ ತಮ್ಮ ಹಿನ್ನೆಲೆ, ಧಾರಾವಾಹಿಯಲ್ಲಿ ತಮ್ಮ ನಟನೆಯ ಅನುಭವವನ್ನು ಹಂಚಿಕೊಂಡಿದ್ದಾರೆ.

Kannada serial Vasudeva Kutumba serial actor Anoop A Bellavi life and acting journey

ಹಾಯ್.. ಅನೂಪ್ ನಿಮ್ಮ ಬಗ್ಗೆ ಹೇಳಿ?

ಅನೂಪ್: ನಾನು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರು. ಅಪ್ಪ ತುಮಕೂರಿನವರು. ಅದು ಬಿಟ್ಟು ನನ್ನ ಎಜ್ಯುಕೇಶನ್ ಆಗಿದ್ದು, ನಾನು ಕೆಲಸಕ್ಕೆ ಹೋಗಿದ್ದು. ಈಗ ಇರೋದು ಎಲ್ಲಾ ಬೆಂಗಳೂರೇ. ನಾನು ಮಾಸ್ಟರ್ ಇನ್ ಪರ್ಫಾಮಿಂಗ್ ಆರ್ಟ್ಸ್ ಮಾಡಿದ್ದೇನೆ. ಅದಾದ್ಮೇಲೆ ಪಿಜಿ ಡಿಪ್ಲೋಮಾ ಇನ್ ಸಿನಿಮಾ ಅಂಡ್ ಟೆಲಿವಿಷನ್ ಪ್ರೊಡಕ್ಷನ್ ಮಾಡಿಕೊಂಡಿದ್ದೇನೆ.ಪಿಜಿ ಡಿಪ್ಲೋಮಾ ಇನ್ ಆಕ್ಟಿಂಗ್ ಅಂಡ್ ಥಿಯೇಟರ್‌ ಸ್ಟಡೀಸ್ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಪಾಸೌಟ್ ನಾನು. ಇದಕ್ಕೂ ಮುನ್ನ ಬಿಕಾಂ ಓದಿದ್ದೆ.

ನಿಮಗೆ ಭರತನಾಟ್ಯಂ, ರಂಗಭೂಮಿ ನಂಟು ಬೆಳೆದಿದ್ದೇಗೆ?

ಅನೂಪ್: ನಾನು ಒಂದನೇ ತರಗತಿಯಲ್ಲಿದ್ದೆ ಆಗ ಭರತನಾಟ್ಯಂ ಶುರುವಾಗಿತ್ತು. ಅಮ್ಮಂಗೆ ಡ್ಯಾನ್ಸರ್ ಆಗಬೇಕು ಅಂತ ಆಸೆಯಿತ್ತು. ಆಗ ಅವರಿಗೆ ಆಗಲಿಲ್ಲ. ಮಗ ಹುಟ್ಟಲಿ, ಮಗಳು ಹುಟ್ಟಲಿ ಡ್ಯಾನ್ಸರ್ ಮಾಡಿಸುತ್ತೇನೆ ಅಂತ ಅಂದುಕೊಂಡಿದ್ದರು. ಹಾಗೇ ನನಗೆ ಭರತನ್ಯಾಟಂ ನಂಟು ಶುರುವಾಯ್ತು. 18 ವರ್ಷಗಳ ಕಾಲ, ನಾನು ವಿದ್ವತ್ ಆಗುವವರೆಗೂ ಬಿಡಲಿಲ್ಲ. ಇದಕ್ಕೂ ಮುನ್ನ ನಾನು ಥಿಯೇಟರ್‌ನಲ್ಲಿ ಇದ್ದೆ. ನಾನು ಬಿಕಾಂ ಓದುತ್ತಿದ್ದ ವಿಜಯ ಕಾಲೇಜ್‌ನಲ್ಲಿ ರಂಗ ಸೌರಭ ಅನ್ನೋ ತಂಡವಿತ್ತು. ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ ಯಾವ ತಂಡದಿಂದ ಬಂದರೋ ಅದೇ ತಂಡದಿಂದ ನಾನು ಬಂದಿದ್ದು. ವಿಜಯ ಕಾಲೇಜ್‌ನಲ್ಲಿ ಅವರು ನನ್ನ ಸೂಪರ್‌ ಸೀನಿಯರ್ಸ್.

Also Read
ಮಂಡ್ಯ ರಮೇಶ್ ಅವರ 'ನಟನ'ದಿಂದ ಹೊರ ಬಂದ ನಟರು ಯಾರು ಗೊತ್ತೇ?
ಮಂಡ್ಯ ರಮೇಶ್ ಅವರ 'ನಟನ'ದಿಂದ ಹೊರ ಬಂದ ನಟರು ಯಾರು ಗೊತ್ತೇ?

ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದೇಕೆ?

ಅನೂಪ್: ನಾನು ಒರಾಕಲ್‌ನಲ್ಲಿ ಸೀನಿಯರ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದೆ. 2019ರಲ್ಲಿ ಆ ಕೆಲಸವನ್ನು ಬಿಟ್ಟು ನಾನು ಫುಲ್ ಟೈಮ್ ಆಕ್ಟರ್ ಆಗಬೇಕು ಅಂತ ಡಿಸೈಡ್ ಮಾಡಿದೆ. ಇದೇ ವೇಳೆ ಕೋವಿಡ್ ಬಂತು. ಆವೇಳೆ ಆಕಸ್ಮಿಕವಾಗಿ ನಾನು ಡಬ್ಬಿಂಗ್ ಆರ್ಟಿಸ್ಟ್ ಆದೆ. ಆಗ ಕೆಲಸ ಇರಲಿಲ್ಲ. ಒಳ್ಳೊಳ್ಳೆ ಸಿನಿಮಾಗೆ ವಾಯ್ಸ್ ಕೊಟ್ಟಿದ್ದೇನೆ. ಚಿಯಾನ್ ವಿಕ್ರಂ, ಕಮಲ್ ಹಾಸನ್ ಸಿನಿಮಾ, ತೆಲುಗು ಸಿನಿಮಾಗಳಿಗೆ ವಾಯ್ಸ್ ಕೊಡುತ್ತಿದ್ದೆ. ಹೀಗೆ ವಾಯ್ಸ್ ಮಾಡೋ ಶುರುವಾದ್ಮೇಲೆ ನಮ್ಮ ರೇಡಿಯೋದಲ್ಲಿ ಕೆಲಸ ಮಾಡುವುದಕ್ಕೆ ಶುರು ಮಾಡಿವೆ. ಇವೆಲ್ಲವುಗಳ ಮಧ್ಯೆ ಆಕ್ಟಿಂಗ್ ಮಾಡುತ್ತಿದ್ದೆ.

Kannada serial Vasudeva Kutumba serial actor Anoop A Bellavi life and acting journey

'ವಸುದೇವ ಕುಟುಂಬ' ಧಾರಾವಾಹಿ ಸಿಕ್ಕಿದ್ದೇಗೆ?

ಅನೂಪ್: ವಾಯ್ಸ್ ಓವರ್ ಮಧ್ಯೆ ಸೀರಿಯಲ್‌ನಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಹೋಗುತ್ತಿದ್ದೆ. ಈಗ ನಾನು ವಸುದೇವ ಕುಟುಂಬ ಸೀರಿಯಲ್ ಮಾಡುವುದಕ್ಕೂ ಮುನ್ನ ಒಂದು ಧಾರಾವಾಹಿಯಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದೇನೆ. ಡೇ ಆರ್ಟಿಸ್ಟ್ ಆಗಿ, ಮೂರು ನಾಲ್ಕು ದಿನ ಶೂಟಿಂಗ್ ಇರುವ ಪಾತ್ರ ಮಾಡುತ್ತಿದ್ದೆ. ಹೀಗೆ ಮಾಡ್ತಾ ಮಾಡ್ತಾ ವಸುದೇವ ಕುಟುಂಬ ಸಿಕ್ಕಿತು.

'ಕುಮಾರಣ್ಣ' ನಿಮ್ಮ ಪಾತ್ರಕ್ಕೆ ಹೇಗಿದೆ ರೆಸ್ಪಾನ್ಸ್?

ಅನೂಪ್: ಚಿಕ್ಕಮಗಳೂರಿನಲ್ಲಿ ಶೂಟಿಂಗ್‌ಗೆ ಹೋಗಿದ್ದಾಗ ನನಗೆ ಮೊದಲ ಬಾರಿ ಅನುಭವ ಆಯ್ತು. ಅಲ್ಲಿರುವ ಒಂದು ಟೆಂಪಲ್‌ಗೆ 200 ಜನರು ಬಂದಿದ್ದರು. 100 ಜನಕ್ಕೂ ಜಾಸ್ತಿ ಫೋಟೊ ಹೇಳಿದರು. ಅವರೇ ಕುಮಾರಣ್ಣ ಅಂತ ಮಾತಾಡಿಸುತ್ತಿದ್ದರು. ಆ ಫೀಲಿಂಗ್ ಹೇಗಿತ್ತು ಅಂದರೆ, ವಸುದೇವ ಕುಟುಂಬ ಪಾತ್ರ ರೀಚ್ ಆಗುತ್ತಿದೆ. ನಾನು ರೀಚ್ ಆಗುತ್ತಿದ್ದೇನೆ ಅಂತ ಅನಿಸಿತು. ಇದಕ್ಕಾಗಿ ನಾನು ಇಷ್ಟು ಕಷ್ಟಪಡುತ್ತಿದ್ದೆ ಅಲ್ವಾ ಅಂತ ಅನಿಸಿತ್ತು.

Kannada serial Vasudeva Kutumba serial actor Anoop A Bellavi life and acting journey

ನಿಮ್ಮ ಪಾತ್ರದಲ್ಲಿ ಚಾಲೆಂಜಿಂಗ್ ಅನಿಸಿದ್ದೇಕೆ?

ಅನೂಪ್: ನನಗೆ ಪಾತ್ರದ ಬಗ್ಗೆ ಹೇಳಿದಾಗ, ಫ್ಯಾಮಿಲಿ ಜವಾಬ್ದಾರಿ ಹೆಗಲ ಮೇಲೆ ಇರುತ್ತೆ. ಅತ್ತೆ ಮನೆಯವರ ಜವಾಬ್ದಾರಿ ಕೂಡ ನನ್ನ ಮೇಲೇನೆ ಇರುತ್ತೆ. ಕುಮಾರ ಅಂದ ತಕ್ಷಣ ಮನೆ ಮಗ ಅಂತಲೇ ಫೀಲ್ ಬರುತ್ತೆ. ನನಗೆ ಟೈಲರ್‌ ಆಗಿಯೇ ಕಾಣಿಸಿಕೊಳ್ಳಬೇಕು ಅನ್ನೋದು ಇರಲಿಲ್ಲ. ನಾನು ಹೆಚ್ಚೆಚ್ಚು ಟೈಲರ್ ಬಾಡಿ ಲಾಂಗ್ಜೇಜ್ ತೆಗೆದುಕೊಂಡು ಬಂದರೆ ಸಾಕಿತ್ತು. ಆದರೆ, ಜಾಲೆಂಜ್ ಅಂದರೆ, ಮನೆಯಲ್ಲಿ ಯಾರೇ ಬೈದರೂ, ಅವನಿಗೆ ಎಷ್ಟೇ ಬೇಜಾರಾದರೂ ಅದನ್ನು ತಾಳ್ಮೆಯಿಂದ ಮೆಟ್ಟಿ ನಿಲ್ಲುತ್ತೇನೆ. ಅದು ನನಗೆ ಚಾಲೆಂಜಿಂಗ್ ಆಗಿತ್ತು.

ಮುಂದೆ ನಿಮ್ಮ ಪ್ಲ್ಯಾನ್ ಏನು?

ಅನೂಪ್: ಈಗ ಒಂದು ಪ್ರಾಜೆಕ್ಟ್ ಇದೆ. ಇನ್ನೂ ಟೈಟಲ್ ಕಾರ್ಡ್‌ನಲ್ಲಿ ನನ್ನ ಹೆಸರು ಬಂದಿಲ್ಲ. ಅದೇ ಹೇಳ್ತಾರಲ್ಲ. ಗಾಂಧಿನಗರದಲ್ಲಿ ಸಿನಿಮಾ ಮಾಡಿದರೆ ಕಟೌಟ್ ಬೀಳಬೇಕು ಅಂತ. ಹಾಗೇ ಸೀರಿಯಲ್‌ನಲ್ಲಿ ಟೈಟಲ್ ಕಾರ್ಡ್ ಬರಬೇಕು ಅನ್ನೋದು ತಲೆಯಲ್ಲಿದೆ. ಆಮೇಲೆ ಬಿಗ್ ಬಾಸ್‌ಗೆ ಹೋಗಬೇಕು ಅನ್ನೋ ಆಸೆಯಿದೆ. ಬೇರೆ ಬೇರೆ ಪಾತ್ರಗಳನ್ನ ಸೀರಿಯಲ್‌ಗಳನ್ನು ಎಕ್ಸ್‌ಪೋಸ್ ಮಾಡಬೇಕು ಅನ್ನೋ ಆಸೆಯಿದೆ. ಯಾವುದಾದರೂ ಒಂದು ಸೀರಿಯಲ್‌ಲ್ಲಿ ಹೀರೋ ಆಗಬೇಕು ಅನ್ನೋ ಆಸೆಯಿದೆ. ನನ್ನ ಪ್ರಮುಖ ಉದ್ದೇಶ ಅಂದರೆ, ಸಿನಿಮಾ ಮಾಡಬೇಕು ಅಷ್ಟೇ"

English summary
Kannada serial Vasudeva Kutumba serial actor Anoop A Bellavi life and acting journey.
Read more about: serial actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X