'ಜೇನುಗೂಡು'ನಲ್ಲಿ ಅಮೃತಾ ಮೂರ್ತಿ ಕಲರವ ಶುರು: ಒಂದು ಅವಕಾಶಕ್ಕೆ ಕೊಟ್ಟಿದ್ದು 15 ಆಡಿಷನ್

ಸ್ಟಾರ್ ಸುವರ್ಣದಲ್ಲಿ ಜನಪ್ರಿಯ ಧಾರಾವಾಹಿ 'ಜೇನುಗೂಡು' ಪ್ರಸಾರ ಆಗುತ್ತಿದೆ. ಉತ್ತರ ಕರ್ನಾಟಕದ ಶೈಲಿಯ ಈ ಧಾರಾವಾಹಿ ಜನರನ್ನು ಸೆಳೆಯುತ್ತಿದೆ. ಈ ಸೀರಿಯಲ್‌ನಲ್ಲಿ ದಿಯಾ ಪಾತ್ರದಲ್ಲಿ ನಟಿಸುತ್ತಿದ್ದ ಪಾತ್ರಧಾರಿ ಬದಲಾಗಿದ್ದಾರೆ. ಮೊದಲು ನಟಿಸುತ್ತಿದ್ದ ನಿತ್ಯಾ ಗೌಡ ಹೊರಬಿದ್ದಿದ್ದು, ಆ ಪಾತ್ರದಲ್ಲಿ ಹೊಸ ಎಂಟ್ರಿ ಆಗಿದೆ. ಅವರೇ ಅಮೃತಾ ಮೂರ್ತಿ.

ಈಗಾಗಲೇ 'ಜೇನುಗೂಡು' ಧಾರಾವಾಹಿಗೆ ಅಮೃತಾ ಗೌಡ ಎಂಟ್ರಿ ಕೊಟ್ಟಾಗಿದೆ. ಅಂದ್ಹಾಗೆ ಇವರ ಮೊದಲ ಧಾರಾವಾಹಿನೇ 'ಕನ್ನಡತಿ'. ಬಳಿಕ 'ಜೊತೆ ಜೊತೆಯಲಿ'. ಈಗ 'ಜೇನುಗೂಡು'. ಅಷ್ಟಕ್ಕೂ ಅಮೃತಾ ಮೂರ್ತಿ ಯಾರು? ಧಾರಾವಾಹಿ ಕ್ಷೇತ್ರಕ್ಕೆ ಬಂದಿದ್ದೇಗೆ? ಇವರ ಹಿನ್ನೆಲೆಯೇನು? ಅನ್ನೋದನ್ನು ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.

Kannadathi, Jothe jotheyali fame Suchi Aka Amrutha Murthy about Jenugoodu serial

ನಿಮ್ಮ ಎಂಟ್ರಿ ಹೇಗಿದೆ?

"ದಿಯಾ ಅನ್ನೋ ನನ್ನ ಪಾತ್ರವನ್ನು ರಿವೀಲ್ ಮಾಡಿದ್ದು ತುಂಬಾನೇ ಚೆನ್ನಾಗಿದೆ. ಡೈರೆಕ್ಟ್ ಆಗಿ ರಿವೀಲ್ ಮಾಡಿಲ್ಲ. ಹೀಗಾಗಿ ಚೆನ್ನಾಗಿದೆ ಅಂತ ಅನಿಸಿತು. ಈಗ ತಾನೇ ಆರಂಭ ಆಗಿದೆ. ಮುಂದೆ ನೋಡೋಣ"

ಈ ಪಾತ್ರ ಒಪ್ಪಿಕೊಳ್ಳುವುದಕ್ಕೆ ಏನು ಕಾರಣ ?

" ನಾನು ಮುಂದಿನ ಎರಡೂ ಸೀರಿಯಲ್‌ಗಳಲ್ಲೂ ಸಪೋರ್ಟಿಂಗ್ ರೋಲ್ ಮಾಡಿದ್ದೇನೆ. ಲೀಡ್ ರೋಲ್‌ನಲ್ಲಿ ನಟಿಸುತ್ತಿರೋದು ಇದೇ ಮೊದಲು. ನಾಯಕಿಯಾಗಿ ನನಗೆ ಮೊದಲನೇ ಬಾರಿ ಅವಕಾಶ ಸಿಕ್ಕಿರೋದು. ದಿಯ ಪಾತ್ರ ಬಂದು ನನಗೆ ಹೇಳಿ ಕೊಟ್ಟಿರೋ ಹಾಗಿದೆ. ತುಂಬಾನೇ ಬಬ್ಲಿ ಕ್ಯಾರೆಕ್ಟರ್ ಇದೆ. ನನಗೆ ಬಬ್ಲಿ, ಮಾಡರ್ನ್ ಕ್ಯಾರೆಕ್ಟರ್ ಮಾಡುವುದಕ್ಕೆ ತುಂಬಾನೇ ಇಷ್ಟ. ರಿಯಲ್ ಲೈಫ್‌ನಲ್ಲೂ ಹಾಗೇ ಇರೋದ್ರಿಂದ ತುಂಬಾನೇ ಇಷ್ಟವಾದ ಪಾತ್ರ ಅದು."

Kannadathi, Jothe jotheyali fame Suchi Aka Amrutha Murthy about Jenugoodu serial

ಈ ಸೀರಿಯಲ್ ಬಗ್ಗೆ ನಿಮ್ಮ ಕನೆಕ್ಷನ್ ಏನು?

"ಈ ಸೀರಿಯಲ್ ಮೊದಲು ಆರಂಭ ಆದಾಗ, ನಾನೇ ಅಂದುಕೊಂಡು ಎಷ್ಟೋ ಜನ ಟ್ಯಾಗ್ ಮಾಡಿದ್ದರು. ಈಗ ನೋಡಿ ಅದೇ ಸೀರಿಯಲ್‌ನಲ್ಲಿ ಅದೇ ಪಾತ್ರದಲ್ಲಿ ನಾನು ನಟಿಸುತ್ತಿದ್ದೇನೆ.

ಹಿಂದೆ ನೀವು ನಟಿಸಿದ ಸೀರಿಯಲ್‌ ಯಾವುವು?

"ಮೊದಲನೇ ಸೀರಿಯಲ್ ಬಂದು ಕನ್ನಡತಿ. ಹರ್ಷನ ತಂಗಿ ಸುಚಿತ್ರಾ ಪಾತ್ರ ಮಾಡುತ್ತಿದ್ದೆ. ಅದರಲ್ಲಿ ಬಬ್ಲಿ ಮನೆ ತುಂಬಾ ಓಡಾಡಿಕೊಂಡಿದ್ದ ಹುಡುಗಿ. ಅಣ್ಣ ಹಾಗೂ ಅತ್ತಿಗೆಯನ್ನು ಒಂದು ಮಾಡುವ ಪಾತ್ರ. ಎರಡನೆಯದು 'ಜೊತೆ ಜೊತೆಯಲಿ'. ಫಾರಿನ್ ರಿಟರ್ನ್ ಎಂಟ್ರಿ. ಅದೂ ಕೂಡ ತುಂಬಾ ಹೈ ಕ್ಲಾಸ್ ಹುಡುಗಿ. ಬ್ಯುಸಿನೆಸ್, ತುಂಬಾ ಎಜುಕೇಟೆಡ್ ಆಗಿರುತ್ತಾಳೆ ಅಂತಹ ಪಾತ್ರ. ಈಗ ದಿಯಾ ಪಾತ್ರವನ್ನು ತುಂಬಾನೇ ಇಷ್ಟ ಪಟ್ಟು ಮಾಡುತ್ತಿದ್ದೇನೆ."

ದಿಯಾ ಪಾತ್ರದ ಸವಾಲುಗಳೇನು?

" ಇದಕ್ಕೂ ಮುನ್ನ ಮಾಡುತ್ತಿದ್ರಲ್ಲಾ, ಅವರಂತೆ ನಾನೇ ಮಾಡೋಕೆ ಹೋದಾಗ, ಆ ಪಾತ್ರವನ್ನು ಜೀವಿಸುವುದಕ್ಕೆ ಆಗಿಲ್ಲ. ನಿರ್ದೇಶಕರು ಬಂದು ನೀವು ಹೇಗೆ ಮಾಡುತ್ತೀರೋ ಹಾಗೇ ಮಾಡಿ. ಬಬ್ಲಿಯಾಗಿರಲಿ ಅಂದ್ರು. ಈ ಪಾತ್ರ ಹೇಗಿದೆಯೋ ಹಾಗೇ ತೆಗೆದುಕೊಂಡು ಹೋಗೋಣ ಅಂದ್ರು ಹಾಗಾಗಿ ಕಷ್ಟ ಆಗಿಲ್ಲ."

ಸೀರಿಯಲ್‌ನಿಂದ ಹೊರ ಬಂದು ನೋಡಿದ್ರೆ ನೀವೇನು?

"ಮೊದಲು ನನ್ನದು ಫ್ಯಾಷನ್ ಫೀಲ್ಡ್. ಮುಂಚೆಯಿಂದಲೂ ಮಾಡಲಿಂಗ್ ಮಾಡುತ್ತಿದೆ. ಆದರೆ, ಫ್ಯಾಷನ್ ಫೀಲ್ಡ್ ಬಿಟ್ಟು ಬರೋಕೆ ಇಷ್ಟವಿಲ್ಲ. ನಟನೆಯನ್ನು ಪ್ರೊಫೆಷನ್ ಆಗಿ ನೋಡೋಕೆ ಆಗಲ್ಲ. ಎಲ್ಲಾ ದಿನ ಕೆಲಸ ಸಿಗುತ್ತೆ ಅನ್ನೋಕೆ ಆಗಲ್ಲ. ನೋಡೋಣ, ಎಲ್ಲಿವರೆಗೂ ಆಗುತ್ತೋ ಅಲ್ಲಿವರೆಗೂ ನೋಡೋಣ. ಸದ್ಯ ನಟನೆ ಅನ್ನೋದು ನನ್ನ ಪ್ಯಾಷನ್. ಅದನ್ನೇ ಗಂಭೀರವಾಗಿ ಇಟ್ಟುಕೊಂಡಿದ್ದೇನೆ."

ಸಿನಿಮಾಗೆ ಆಫರ್ ಬಂದಿಯೇ?

"ಅಪರಾಧಿ ನಾನಲ್ಲ ಅನ್ನೋ ಮೂವಿ ಕಂಪ್ಲೀಟ್ ಆಗಿದೆ. ಅರ್ಜುನ್ ಕಾಪಿಕಾಡ್ ಜೊತೆ ನಟಿಸಿದ್ದೇನೆ. ನಾಯಕಿಯಾಗಿ ನಟಿಸುತ್ತಿದ್ದೇನೆ. ಸಿನಿಮಾ ಮುಗಿದಿದೆ. ಆದರೆ, ಹೊಸ ಪ್ರೊಡಕ್ಷನ್ ಹೌಸ್ ಆಗಿರುವುದರಿಂದ ಸ್ವಲ್ಪ ತಡವಾಗುತ್ತಿದೆ."

ಸೀರಿಯಲ್‌ಗೆ ಬಂದಿದ್ದೇಗೆ?

" ಎಲ್ಲರೂ ಹೇಳುತ್ತಿದ್ದರೂ ಚೆನ್ನಾಗಿದ್ದೀಯಾ ಅಂತ. ಆದರೆ, ಮಾಡಲಿಂಗ್‌ನಲ್ಲಿ ಚೆನ್ನಾಗಿರೋದು ಪ್ರಶ್ನೆನೇ ಅಲ್ಲ. ಕಾಲೇಜ್‌ನಲ್ಲಿ ಇರುವಾಗ ಸೃಜನ್ ಸರ್ ಪ್ರೊಡಕ್ಷನ್‌ದು ಆಡಿಷನ್ ಇತ್ತು. ಅಲ್ಲಿಗೆ ಹೋದೆ ಫಸ್ಟ್ ರೌಂಡ್‌ನಲ್ಲೇ ರಿಜೆಕ್ಟ್ ಆದೆ. ಆದಾದ್ಮೇಲೆ 10 ರಿಂದ 15 ಆಡಿಷನ್ ಕೊಟ್ಟಿದ್ದೇನೆ. ಒಂದೊಂದು ಆಡಿಷನ್‌ನಲ್ಲೂ ನಟನೆ ಕಲಿತಿದ್ದೇನೆ. ಇನ್ನು ಕನ್ನಡತಿಯಿಂದ ಕನ್ನಡ ಕಲಿತಿದ್ದೇನೆ. ಕನ್ನಡತಿ ಮುಗಿದ ಮೇಲೆ ಮನೆಯಲ್ಲಿ ಕೂತಿದ್ದು ಒಂದೇ ತಿಂಗಳು.. ಜೊತೆಜೊತೆಯಲಿ ಮುಗಿದ ಮೇಲೆ ಮನೆಯಲ್ಲಿ ಕೂತಿದ್ದು ಒಂದೇ ತಿಂಗಳು.. ಈಗ 'ಜೇನುಗೂಡು' ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ."

More from Filmibeat

English summary
Kannadathi, Jothe jotheyali fame Suchi Aka Amrutha Murthy about Jenugoodu serial, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X