'ಶಾರದೆ'ಯ ದ್ವೇಷಿಸುವ ಈ ಪಾರಿಜಾತ ಕಾಮಿಡಿಗೂ ಸೈ; ಕಿರುತೆರೆಯಲ್ಲಿ ಯೋಗಿ ಅಮ್ಮ ಅಂಬುಜಾ ಹವಾ ಶುರು!

ಸ್ಟಾರ್ ಸುವರ್ಣದಲ್ಲಿ ಹೊಚ್ಚ ಹೊಸ ಧಾರಾವಾಹಿ 'ಶಾರದೆ' ಪ್ರಸಾರ ಆಗುತ್ತಿದೆ. ಈ ಧಾರಾವಾಹಿಯಲ್ಲಿ ಜನಪ್ರಿಯ ಕಲಾವಿದರ ಸಮಾಗಮವೇ ಆಗಿದೆ. ಅದರಲ್ಲಿ ಲೂಸ್ ಮಾದ ಯೋಗಿಯ ಅಮ್ಮ ಅಂಬುಜಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈಗಾಗಲೇ ಹಲವು ಧಾರಾವಾಹಿಗಳಲ್ಲಿ ಅಂಬುಜಾ ಅವರ ನಟಿಸಿದ್ದಾರೆ. 2011ರಲ್ಲಿ ನಟನೆಯನ್ನು ವೃತ್ತಿಯಾಗಿ ತೆಗೆದುಕೊಂಡಿದ್ದ ಅಂಬುಜಾ ಇದೂವರೆಗೂ ಹಲವು ಧಾರಾವಾಹಿಗಳಲ್ಲಿ ನಟಿಸಿ ಮೆಚ್ಚುಗೆ ಗಳಸಿದ್ದಾರೆ. ಈಗ 'ಶಾರದೆ' ಧಾರಾವಾಹಿಯಲ್ಲಿ ಹಲವು ಶೇಡ್‌ಗಳಿರುವ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ಬಗ್ಗೆ ವೃತ್ತಿ ಬದುಕಿನ ಬಗ್ಗೆ ಫಿಲ್ಮಿಬೀಟ್ ಕನ್ನಡಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Loose Mada Yogi mother Ambuja interview about her new serial Sharade and life journey

ಹೊಸ ಧಾರಾವಾಹಿ ಶಾರದೆ ಬಗ್ಗೆ ಹೇಳಿ?

"ಹೊಸ ಧಾರಾವಾಹಿಯಲ್ಲಿ ನಟನೆ ಮಾಡುತ್ತಿರುವುದು ತುಂಬಾನೇ ಖುಷಿ ಕೊಟ್ಟಿದೆ. ನನ್ನ ಜೊತೆ ತುಂಬಾನೇ ಅನುಭವ ಇರುವ ಕಲಾವಿದರು ಇದ್ದಾರೆ. ಅವರು ತುಂಬಾ ವರ್ಷದಿಂದ ನಟನೆ ಮಾಡುತ್ತಿದ್ದಾರೆ. ನಾನು ಈಗೀಗ ಶುರು ಮಾಡಿದ್ದೇನೆ. ತುಂಬಾ ಒಳ್ಳೆಯ ಗುಂಪು ಇದೆ. ನನಗೆ ಈ ಧಾರಾವಾಹಿಯಲ್ಲಿ ಪಾರಿಜಾತ ಎನ್ನುವಂತಹ ಒಂದು ಪಾತ್ರವನ್ನು ಕೊಟ್ಟಿದ್ದಾರೆ. ಆಕ್ಟ್ ಮಾಡುತ್ತಾ ಇಷ್ಟೊಂದು ದೊಡ್ಡ ಪಾತ್ರ ಕೊಟ್ಟಿದ್ದಾರಲ್ಲ. ಹೇಗೆ ನಿಭಾಯಿಸುವುದು ಅಂತ ಒಂದು ಕಡೆಗೆ ಹೆದರಿಕೆ ಅಂತ ಅನಿಸುತ್ತಿದೆ."

ಪಾರಿಜಾತ ಬಗ್ಗೆ ಹೇಳಿ?

"ಇದರಲ್ಲಿ ಪಾರಿಜಾತಳದ್ದು ಎರಡು ಗುಣ ಇರುತ್ತೆ. ಒಂದು ನೆಗೆಟಿವ್ ಆಗಿ ಯೋಚನೆ ಮಾಡುತ್ತಿರುತ್ತಾಳೆ. ಯೋಚನೆ ಮಾಡುವುದಷ್ಟೇ ಅಲ್ಲ. ಅದನ್ನು ಕಾರ್ಯರೂಪಕ್ಕೂ ತರುತ್ತಿರುತ್ತಾಳೆ. ಇನ್ನು ಮೊಮ್ಮಗಳು ಅಂತ ಬಂದಾಗ ಖುಷಿ ಖುಷಿಯಾಗಿ ಮಾತಾಡಿಕೊಂಡು ಇರುತ್ತಾಳೆ. ಒಂದ್ಕಡೆ ಕಾಮಿಡಿನೂ ಅಂತ ಅನಿಸುತ್ತೆ. ಇನ್ನೊಂದು ನೆಗಟಿವ್ ಶೇಡ್ ಕೂಡ ಇದೆ. ಎರಡನ್ನೂ ಹೇಗೆ ನಿಭಾಯಿಸುವುದಪ್ಪಾ ಅಂತ ಹೆದರಿಕೆ."

Loose Mada Yogi mother Ambuja interview about her new serial Sharade and life journey

ನೆಗೆಟಿವ್ ಪಾತ್ರವೇ ಯಾಕೆ?

"ನನ್ನ ವೃತ್ತಿ ಜೀವನ ಶುರುವಾದಲ್ಲಿಂದನೂ ನನ್ನ ಪಾತ್ರ ಹೇಗಿರುತ್ತೆ? ಯಾವ ತರ ಸಾಗುತ್ತೆ ಅಂತ ಕೇಳಿದವಳೇ ಅಲ್ಲ. ನಮ್ಮ ಪ್ರೊಡಕ್ಷನ್‌ನಲ್ಲಿ ಇಂತಹದ್ದೊಂದು ಪಾತ್ರವಿದೆ ನಟಿಸುತ್ತೀರಾ ಅಂತ ಕೇಳುತ್ತಾರೆ. ನನಗೆ ಆ ಕ್ಷಣಕ್ಕೆ ಮಾಡಬಹುದು ಅಂತ ಅನಿಸಿದರೆ, ತಕ್ಷಣಕ್ಕೆ ಒಪ್ಪಿಕೊಳ್ಳುತ್ತೇನೆ. ನನಗೆ ಪಾಸಿಟಿವ್ ಕ್ಯಾರೆಕ್ಟರ್ ಬೇಕು. ಪಾಸಿಟಿವ್ ಕ್ಯಾರೆಕ್ಟರ್ ಬೇಕು ಅಂತ ನಾನು ಯಾವತ್ತೂ ಆಯ್ಕೆ ಮಾಡಿಕೊಂಡಿಲ್ಲ. ನನಗೆ ಸಿಕ್ಕಂತಹ ಪಾತ್ರವನ್ನು ಶ್ರದ್ಧೆ ಭಕ್ತಿಯಿಂದ ಮಾಡಿಕೊಂಡು ಹೋಗುತ್ತಿದ್ದೇನೆ."

ಪಾತ್ರಗಳ ಆಯ್ಕೆಯಲ್ಲಿ ನಿಮ್ಮ ಲೆಕ್ಕಾಚಾರವೇನು?

"ನನಗೆ ಅಂತಹ ಯಾವುದೇ ಲೆಕ್ಕಚಾರವಿಲ್ಲ. ಅಂತಹ ದೊಡ್ಡ ಹೀರೋಯಿನ್‌ಗಳಾದರೆ, ಇನ್ನೊಂದಿಷ್ಟು ವರ್ಷ ಕೆಲಸ ಮಾಡಬೇಕಾದರೆ, ಕುಲಂಕುಶವಾಗಿ ಯೋಚನೆ ಮಾಡಿ ತಡಕಾಡಿ ಪಾತ್ರ ಮಾಡಬೇಕಾಗಬಹುದು. ನನಗೆ ದೇವರು ಒಳ್ಳೆಯ ಪಾತ್ರಗಳನ್ನೇ ಕೊಡುತ್ತಿದ್ದಾನೆ. ಇನ್ನು ಮನೆಯ ವಿಚಾರ ಹೇಳಿದ್ರಿ. ನಮ್ಮ ಮನೆಯಲ್ಲಿ ನೆಗೆಟಿವ್ ಪಾತ್ರ ಯಾಕೆ ಮಾಡ್ತೀಯಾ? ಯಾಕೆ ಆ ಪಾತ್ರವನ್ನು ಆಯ್ಕೆ ಮಾಡಿಕೊಂಡೆ ಅನ್ನುವಂತಹ ಮಾತುಗಳನ್ನೇ ಅವರು ಆಡಿಲ್ಲ. ಪಾತ್ರವನ್ನು ಪಾತ್ರವನ್ನಾಗಿಯೇ ನೋಡುತ್ತಾರಷ್ಟೇ."

Loose Mada Yogi mother Ambuja interview about her new serial Sharade and life journey

ಪಾರಿಜಾತ ಪಾತ್ರದಲ್ಲಿ ಶೇಡ್‌ಗಳು ಇವೆಯಾ?

"ಪಾರಿಜಾತ ಪಾತ್ರದಲ್ಲಿ ಅರ್ಧಂಬರ್ಧ ಇಂಗ್ಲಿಷ್ ಮಾತಾಡುವುದನ್ನು ನೋಡುತ್ತಾರೆ. ಮೊಮ್ಮಗಳ ಎದುರು ಸ್ವಲ್ಪ ಕಾಮಿಡಿ ಕಾಮಿಡಿಯಾಗಿ ಆಡುವುದನ್ನು ನೋಡುತ್ತಾರೆ. ಗಂಡನ ಎದುರು ತುಂಬಾನೇ ಭಯ ಭಕ್ತಿಯಿಂದ ಇರುವುದನ್ನು ನೋಡುತ್ತಾರೆ. ಒಂದು ಹಂತದಲ್ಲಿ ಅವಳ ಆಕಾಂಕ್ಷೆ, ಮೊಮ್ಮಗಳ ಜೊತೆ ಹೇಗಿರಬೇಕು? ಮೊಮ್ಮಗಳಿಗಾಗಿ ನೆಗೆಟಿವ್ ಆಗಿ ನಡೆದುಕೊಳ್ಳುವುದಕ್ಕೆ ಶುರು ಮಾಡುತ್ತಾಳೆ. ಅದನ್ನೂ ನೋಡಬಹುದು."

ನೀವು ನಟನೆಗೆ ಬಂದಿದ್ದು ಆಕಸ್ಮಿಕವೇ?

"ಮೇಕಪ್ ಇಲ್ಲದೆ ಮನೆಯಲ್ಲಿ ನಟನೆ ಮಾಡುತ್ತಿರುತ್ತೇವೆ. ಸ್ವಲ್ಪ ಮೇಕಪ್ ಮಾಡಿಕೊಂಡು ಅದನ್ನೇ ಅಳವಡಿಸಿಕೊಂಡಿದ್ದೇನೆ. ನನಗೆ ಯಾವುದೇ ರೀತಿಯ ಆಕ್ಟಿಂಗ್ ಅನುಭವ ಇರಲಿಲ್ಲ. ಹಾಗೆ ನೋಡಬೇಕು ಅಂದರೆ, ನಮ್ಮ ತಂದೆಯವರು, ಅವರ ತಮ್ಮಂದಿರು, ನಮ್ಮ ತಂದೆಯ ಅಣ್ಣನ ಮಕ್ಕಳು ಎಲ್ಲರೂ ಸ್ಟೇಜ್ ಆರ್ಟಿಸ್ಟ್‌ಗಳು. ಒಬ್ಬರು ಚಿಕ್ಕಪ್ಪ ಇದ್ದಾರೆ. ಅವರು ಒಂದು ಪುಸ್ತಕದಲ್ಲಿ ಬರೆಸಿಕೊಂಡು ಶಾಲೆಗೆ ಹೋಗುವ ಮಗುವಿ ಕೈಯಲ್ಲಿ ಬರೆಸಿಕೊಂಡು ಓದಿಸುತ್ತಿದ್ದರು. ಅದನ್ನು ಬಾಯಿಪಾಠ ಮಾಡಿ ಹೇಳುತ್ತಿದ್ದರು. ನನ್ನ ತಂದೆ ಗ್ರಾಫೈಟ್ ಇಂಡಿಯಾ ಅನ್ನೋ ಫ್ಯಾಕ್ಟರಿಯಲ್ಲಿ ಕೆಲಸ ಮಾಡೋರು. ಮೇ ಡೆಗೆ ಪ್ರತಿ ವರ್ಷ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತಿತ್ತು. ಅಲ್ಲಿ ಅವರು ಪಾರ್ಟ್ ಮಾಡೋರು. ಬಹುಶ: ಅದು ನಮ್ಮ ರಕ್ತದಲ್ಲಿ ಬಂದಿದೆ ಅಂದುಕೊಳ್ಳಬಹುದು."

Take a Poll

ಸೀರಿಯಲ್‌ನಲ್ಲಿ ಅತ್ತೆ ಸೊಸೆ ಜಗದ ಬಗ್ಗೆ ಏನಂತೀರ?

"ಎಲ್ಲಾ ಅದೇ. ಸ್ವಲ್ಪ ತಿರುಗಾ ಮುರುಗ ಆಗಿದೆಯಷ್ಟೇ. ಆಗ ಅತ್ತೆ ಸೊಸೆ ಜಗಳ ಅಂದರೆ, ಹುಳಿ ಮೊಸರನ್ನ ತಿನಿಸೋದು, ಖಾರದ ಪುಡಿ ಜಾಸ್ತಿ ಹಾಕೋದು, ಉಪ್ಪು ಜಾಸ್ತಿ ಹಾಕೋದು, ತನ್ನ ಮಗನ ಜೊತೆ ಜಾಸ್ತಿ ಮಾತಾಡಿದರೆ ಜಗಳ ಆಡೋದು, ಚಾಡಿ ಹೇಳುವುದು ಇತ್ತು. ಈಗ ಅದೇ ಮುಂದುವರೆದುಕೊಂಡು ಹೋಗಿದೆ. ಏನೋ ಅಲ್ಲಿ ಇಲ್ಲಿ ಸ್ವಲ್ಪ ಬದಲಾಗಿದೆಯೇನೋ ಅಷ್ಟೇ."

ಸಿನಿಮಾದಲ್ಲಿ ಯಾಕೆ ನಟಿಸುತ್ತಿಲ್ಲ?

"ಸಿನಿಮಾದಲ್ಲಿ ನಟಿಸುತ್ತಿರೋ ಅದರಲ್ಲೇ ನಟಿಸಿಕೊಂಡು ಬಂದಿರುವುದರಿಂದ ಅವರಿಗೆ ಆಫರ್ ಬರುತ್ತಿದೆ. ನಾನು ಸೀರಿಯಲ್‌ನಲ್ಲಿ ಜಾಸ್ತಿ ನಟನೆ ಮಾಡುವುದಕ್ಕೆ ಶುರು ಮಾಡಿದೆ. ಹಾಗಾಗಿ ಅವರಿಗೆ ಇವರನ್ನು ಸಿನಿಮಾಗೆ ಕರೆದರೆ ಬರುವುದಿಲ್ಲವೇನೋ? ಸೀರಿಯಲ್‌ನಲ್ಲಿ ಬ್ಯುಸಿ ಇರುತ್ತಾರೆ ಅಂದುಕೊಂಡಿರಬಹುದು. ಇನ್ನು ಯಾವಾಗಲೋ ಸೀರಿಯಲ್‌ನಲ್ಲಿ ಬ್ಯುಸಿ ಇದ್ದೇನೆ ಅಂತ ಹೇಳಿದರೆ ಸಾಕು ಅದನ್ನೇ ಮುಂದುವರೆಸಿಕೊಂಡು ಹೋಗುತ್ತಾರೆ. ಇನ್ನೊಂದು ಕಡೆ ಪ್ರೊಡ್ಯೂಸರ್ ಹೆಂಡ್ತಿ. ಹೀರೋ ಅಮ್ಮ, ದುನಿಯಾ ವಿಜಯ್ ಅವರ ಅಕ್ಕ. ಇವರನ್ನು ಕರೆದರೆ ಏನೇನು ಫೆಸಿಲಿಟಿ ಕೊಡಬೇಕೋ? ಪೇಮೆಂಟ್ ಜಾಸ್ತಿ ಇರುತ್ತೋ ಏನೋ? ಅಂತಹದ್ದೆಲ್ಲ ಯೋಚನೆ ಮಾಡುತ್ತಿರಬಹುದು. ಇನ್ನು ಕೆಲವರು ಒಂದು ಪಾತ್ರ ಇತ್ತು. ನೀವು ಮಾಡುತ್ತಿರೋ ಇಲ್ಲವೋ ಅಂದ್ಕೊಂಡ್ವಿ ಅಂತಾರೆ. ಫೋನ್ ಮಾಡಿ ಕೇಳಿದರೆ ನಾನು ಹೇಳುತ್ತೇನೆ ಅಲ್ವಾ?"

ಯೋಗಿ ಜೊತೆ ತಾಯಿಯ ಪಾತ್ರದಲ್ಲಿ ನಟಿಸಬಹುದಲ್ವಾ?

"ಅಯ್ಯೋ.. ಮನೆಯಲ್ಲೂ ಅವರಿಗೆ ತಾಯಿಯಾಗಿ ಸಾಕಾಗಿದೆ. ಇನ್ನು ಸ್ಕ್ರೀನ್‌ನಲ್ಲೂ ಬೇಕಾ? ಮನೆಯವರೆಲ್ಲ ಸೇರಿ ಸಿನಿಮಾ ಮಾಡುವುದಕ್ಕೆ ಹೋದರೆ ಲೈವ್‌ನಲ್ಲಿ ಫೈಟಿಂಗ್ ಮಾಡಿಕೊಳ್ಳುತ್ತೇವೆ. ಒಬ್ಬರಿಗೊಬ್ಬರು ಕಿತ್ತಾಡಿಕೊಳ್ಳುತ್ತೇವೆ. ನಾವು ತಾಯಿ ಮಕ್ಕಳು ಅಂತ ಇಲ್ಲ. ಫ್ರೆಂಡ್ಸ್ ಹಾಗೆ ಇರುತ್ತೆ. ಹಾಗಾಗಿ ಕಿತ್ತಾಡಿಕೊಳ್ಳುತ್ತೇವೆ. ಹಾಗಾಗಿ ಒಟ್ಟಿಗೆ ಸಿನಿಮಾ ಮಾಡಬೇಕು ಅಂತ ಯಾವತ್ತೂ ಅಂದುಕೊಂಡಿಲ್ಲ."

ನೀವು ಸಿನಿಮಾ ನಿರ್ಮಾಣ ಮಾಡೋದ್ಯಾವಾಗ?

"ಯೋಗಿಯದ್ದು ಒಂದೆರಡು ಸಿನಿಮಾಗಳು ಇದೆ. ಅದನ್ನು ಅವನು ಮುಗಿಸಲಿ ಅಂತ. ಇನ್ನು ಸ್ವಲ್ಪ ದಿನ ಆದ್ಮೇಲೆ ಯಾವುದಾದರೂ ಸಿನಿಮಾ ಮಾಡಬೇಕು ಅಂತ ಯೋಚೆ ಮಾಡುತ್ತೇವೆ. ಯಾಕಂದ್ರೆ, ನಿಮಗೆ ಗೊತ್ತಲ್ಲ. ನಾವು ಯಕ್ಷ ಸಿನಿಮಾ ಮಾಡಿದ ಮೇಲೆ ಎಷ್ಟೊಂದು ತೊಂದರೆ ಆಯ್ತು. ಅದಾದ್ಮೇಲೆ ಸಿದ್ಲಿಂಗು ಮಾಡಿದ್ವಿ. ಅದೂ ಸ್ವಲ್ಪ ಓಕೆ ಓಕೆ ಆಯ್ತು. ಈಗ ಮೊದಲಿನ ಹಾಗೆ ಲಕ್ಷಗಳಲ್ಲಿ ಸಿನಿಮಾ ಆಗಲ್ಲ. ಕೋಟಿಗಳಲ್ಲಿ ಮಾಡಬೇಕು. ಹೀಗಾಗಿ ನೀಟಾಗಿ ಪ್ಲಾನ್ ಮಾಡಿಕೊಂಡು ಮಾಡಬೇಕು ಅನ್ನೋದು ನಮ್ಮ ಯಜಮಾನರ ಯೋಚನೆ. ಮತ್ತೆ ಎಲ್ಲವನ್ನೂ ಸಾಲ ತೆಗೆದುಕೊಂಡು ಮಾಡುವುದು ಕಷ್ಟಾನೇ ಅಲ್ವಾ?"

ನಿಮ್ಮೊಂದಿಗೆ ಸಿದ್ದರಾಜು ಅವರು ನಟಿಸಬಹುದಲ್ಲವೇ?

"ಇಲ್ಲ ಅವರು ಕ್ಯಾಮರಾ ಮುಂದೆ ತುಂಬಾನೇ ನರ್ವಸ್ ಆಗುತ್ತಾರೆ. ಅವರು ಕೂಡ ನಾಟಕಗಳಲ್ಲಿ ಮಾಡಿದ್ದಾರೆ. ಅವರ ಸ್ನೇಹಿತರೆಲ್ಲ ಸೇರಿಕೊಂಡು ಪ್ರತಿ ವರ್ಷ ಕೃಷ್ಣನ ಪಾತ್ರವನ್ನೇ ಮಾಡುತ್ತಿದ್ದರು. ಈಗ ಬಿಟ್ಟಿದ್ದಾರೆ. ಉದ್ದುದ್ದ ಡೈಲಾಗ್‌ಗಳನ್ನು ನೆನಪಿಟ್ಟುಕೊಂಡು ಮಾಡುವುದಕ್ಕೆ ಆಗುವುದಿಲ್ಲ. ಈಗ ಕ್ಯಾಮರಾ ಮುಂದೆ ಬಂದರೆ ತುಂಬಾನೇ ಭಯ ಬೀಳುತ್ತಾರೆ. ಮತ್ತೆ ಅವರು ನನ್ನ ನಾಟಕ ನೋಡ್ಕೊಂಡು ಸುಮ್ಮನೆ ಮನೆಯಲ್ಲಿ ಇರಲಿ ಬಿಡಿ."

ನಿಮ್ಮ ಫ್ಯೂಚರ್ ಪ್ಲ್ಯಾನ್ ಏನು?

"ನಮ್ಮ ಜೀವನದಲ್ಲಿ ಇದೂವರೆಗೂ ಏನೇನು ಆಗಿದೆಯೋ ಅದೆಲ್ಲವನ್ನೂ ನಾನು ಪ್ಲಾನ್ ಮಾಡಿದ್ದಲ್ಲ. ಎಲ್ಲಾ ದಿಢೀರ್ ಅಂತ ಆಗಿದ್ದು. ಮುಂದೇನೂ ದೇವರು ಯಾವ ರೀತಿ ನಡೆಸಿಕೊಂಡು ಹೋಗುತ್ತಾನೋ ಹಾಗೆ ಹೋಗುತ್ತೇವೆ. ಅದೇ ಸುಲಭ." ಎನ್ನುತ್ತಾರೆ ಲೂಸ್ ಮಾದ ಯೋಗಿಯ ಅಮ್ಮ ಅಂಬುಜಾ.

More from Filmibeat

English summary
Loose Mada Yogi mother Ambuja interview about her new serial Sharade and life journey
Read more about: loose mada actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X