ಕ್ಯಾನ್ಸರ್‌ಗೆ ಔಷಧಿ ಹುಡುಕುತ್ತಿದ್ದ ಮೈಕ್ರೋಬಯಾಲಜಿಸ್ಟ್ 'ವಸುದೇವ ಕುಟುಂಬ' ಸೇರಿದ್ದೇಗೆ? ಇಷ್ಟಕ್ಕೆ ಕಾರಣ ತಂದೆ

ಸ್ಟಾರ್ ಸುವರ್ಣದಲ್ಲಿ ಹೊಚ್ಚ ಹೊಸ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಅದರಲ್ಲಿ 'ವಸುದೇವ ಕುಟುಂಬ' ಕೂಡ ಒಂದು. ಈ ಧಾರಾವಾಹಿಯ ಪ್ರಮುಖ ಆಕರ್ಷಣೆಯಾಗಿದ್ದವರು ಕನ್ನಡ ಚಿತ್ರರಂಗದ ಹಿರಿಯ ನಟ ಅವಿನಾಶ್. ಬಹಳ ವರ್ಷಗಳ ಬಳಿಕ ಈ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಹೀಗಾಗಿ ಕಿರುತೆರೆಯಲ್ಲಿ ಈ ಸೀರಿಯಲ್‌ ವೀಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ.

'ವಸುದೇವ ಕುಟುಂಬ'ದಲ್ಲಿ ಅಪ್ಪನಿಲ್ಲದ ಒಂದು ಕುಟುಂಬದ ಕಥೆಯನ್ನು ಕಿರುತೆರೆಯಲ್ಲಿ ಹೇಳಲಾಗುತ್ತಿದೆ. ಈ ಧಾರಾವಾಹಿಯಲ್ಲಿ ಅವಿನಾಶ್ ಮಗಳ ಪಾತ್ರದಲ್ಲಿ ಭಾವನಾ ಪಾಟೀಲ್ ನಟಿಸುತ್ತಿದ್ದಾರೆ. ಕಿರುತೆರೆಗೆ ಇವರು ಹೊಸಬರಾಗಿದ್ದರೂ ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮೂಲತ: ಮೈಕ್ರೋಬಯಾಲಜಿಸ್ಟ್ ಆಗಿರುವ ಭಾವನಾ ಕ್ಯಾನ್ಸರ್‌ಗೆ ಔಷಧಿ ಕಂಡು ಹಿಡಿಯುತ್ತಿರುವ ರಿಸರ್ಚ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ಕೆಲಸ ಬಿಟ್ಟು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದೇ ಒಂದು ಇಂಟ್ರೆಸ್ಟಿಂಗ್ ಸ್ಟೋರಿ. ವಸುದೇವ ಕುಟಂಬದ ಬಗ್ಗೆ, ಕಿರುತೆರೆ ಕಡೆಗೆ ತಮ್ಮ ಜರ್ನಿಯ ಬಗ್ಗೆ ಭಾವನಾ ಪಾಟೀಲ್ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಶೇರ್ ಮಾಡಿದ್ದಾರೆ.

Microbioligist Bhavana Patil Who Was Researching to cure cancer join the Vasudeva Kutumba Serial

ನಿಮ್ಮ ಚುಟುಕಾಗಿ ಒಂದು ಪರಿಚಯ ಮಾಡಿಕೊಡಿ

"ನನ್ನ ಹೆಸರು ಭಾವನಾ ಪಾಟೀಲ್. ನಾನು ಹುಟ್ಟಿದ್ದು ಬೆಳೆದಿದ್ದು ಬೆಂಗಳೂರು. ಅಪ್ಪ ಮೂಲತ: ಗದಗದವರು. ಹಾಗಾಗಿ ನನ್ನ ಹೆಸರಿನ ಮುಂದೆ ಪಾಟೀಲ್ ಅಂತ ಸರ್‌ನೇಮ್ ಇದೆ. ನಾನು ಮೈಕ್ರೋಬಯಾಲಜಿಯಲ್ಲಿ ಮಾಸ್ಟರ್ ಮಾಡಿದ್ದೀನಿ. ನಾನು ಈ ಇಂಡಸ್ಟ್ರಿಗೆ ಬರುವುದಕ್ಕೂ ಮುನ್ನ ಕ್ಲಿನಿಕಲ್ ರಿಸರ್ಚ್‌ನಲ್ಲಿದ್ದೆ. ಕ್ಯಾನ್ಸರ್ ರಿಸರ್ಚ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದೆ. ನಾನು ಈ ಇಂಡಸ್ಟ್ರಿಗೆ ಬರುವ ಐಡಿಯಾನೇ ಇರಲಿಲ್ಲ. ಒಂದೊಂದು ಸಾರಿ ಇದೆಲ್ಲ ನಡೆಯುತ್ತಿದೆಯಾ ಅಂತ ಅನಿಸುತ್ತೆ."

ಕಿರುತೆರೆಗೆ ಎಂಟ್ರಿ ಕೊಟ್ಟಿದ್ದೇಗೆ?

"ನಾನು ಈ ಇಂಡಸ್ಟ್ರಿಗೆ ಬರುವುದಕ್ಕೆ ಕಾರಣ ಅಪ್ಪ. ಅವರಿಗೆ ನಟನಾಗಬೇಕು ಅಂತ ಆಸೆಯಿತ್ತು. ಎಲ್ಲರ ಮನೆಯಲ್ಲಿ ಮಕ್ಕಳು ಆಕ್ಟಿಂಗ್‌ಗೆ ಹೋಗಬೇಕು ಅಂದರೆ, ಬೇಡ ಅನ್ನೋದನ್ನು ಕೇಳಿದ್ದೀನಿ. ನನ್ನ ಮನೆಯಲ್ಲಿ ಉಲ್ಟಾ. ಅಪ್ಪ ಹೋಗು ಅಂದರೆ, ನಾನು ಬೇಡ ಅಂತಿದ್ದೆ. ಟ್ರೈ ಮಾಡು ನಿನ್ನಲ್ಲಿ ನಟನೆಯ ಕಲೆಯಿದೆ ಅಂತ ಪುಶ್ ಮಾಡಿದ್ದು ಅವರೇನೆ. ಹಾಗಾಗಿ ನಾನು ಈ ಇಂಡಸ್ಟ್ರಿಯಲ್ಲಿ ಇರೋದು ಅಪ್ಪನಿಗೋಸ್ಕರನೇ. ನನಗೆ ನಟನೆ ಮಾಡುವುದಕ್ಕೆ ಇಷ್ಟ ಇತ್ತು. ಆದರೆ, ನಾನು ಕಷ್ಟ ಪಟ್ಟು ಓದಿದ್ದೆ. ಹಾಗೇ ಇಷ್ಟಪಟ್ಟ ಕೆಲಸವೇ ಸಿಕ್ಕಿತ್ತು. ಕೆಲಸ ಇದೆಯಲ್ಲ, ಅದನ್ನು ಬಿಟ್ಟು ಆಕ್ಟಿಂಗ್ ಕಡೆಗೆ ಹೋಗೋದು ಯಾಕೆ ಅನ್ನೋ ಪ್ರಶ್ನೆ ಇತ್ತು. ಮನೆಯಲ್ಲಿ ಧೈರ್ಯ ಹಾಗೂ ಸಪೋರ್ಟ್ ಇದ್ದಿದ್ದರಿಂದ ಕಿರುತೆರೆಗೆ ಬಂದಿದ್ದಾಯ್ತು."

Microbioligist Bhavana Patil Who Was Researching to cure cancer join the Vasudeva Kutumba Serial

'ವಸುದೇವ ಕುಟುಂಬ' ನಿಮಗೆ ಸಿಕ್ಕಿದ್ದೇಗೆ?

"ನಾನು ತೆಲುಗಿನಲ್ಲಿ ಒಂದು ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದೇನೆ. ಅದು ಇನ್ನೂ ರನ್ನಿಂಗ್‌ನಲ್ಲಿದೆ. ನಾನು ನಟನೆಗೆ ಬಂದು 9 ತಿಂಗಳಾಯ್ತು. ವಸುದೇವ ಕುಟುಂಬ ಕನ್ನಡದಲ್ಲಿ ನನ್ನ ಮೊದಲ ಪ್ರಾಜೆಕ್ಟ್. ನಾನು ಕನ್ನಡದಲ್ಲೇ ಮೊದಲ ನಟಿಸಬೇಕಿತ್ತು. ಸ್ಟಾರ್ ಸುವರ್ಣಗಾಗಿಯೇ ಒಂದು ಪ್ರಾಜೆಕ್ಟ್ ಮಾಡಬೇಕಿತ್ತು. 9 ತಿಂಗಳ ಹಿಂದೆ ಕನ್ನಡ ಹಾಗೂ ತೆಲುಗು ಎರಡರಲ್ಲೂ ಒಟ್ಟಿಗೆ ಆಫರ್ ಸಿಕ್ಕಿತ್ತು. ಕಾರಣಾಂತರಗಳಿಂದ ಕನ್ನಡ ಪ್ರಾಜೆಕ್ಟ್ ಡ್ರಾಪ್ ಆಗಿದ್ದರಿಂದ ಬರೀ ತೆಲುಗು ಮಾಡುತ್ತಿದ್ದೆ. ಸುವರ್ಣದಲ್ಲೇ ಪ್ರಾಜೆಕ್ಟ್ ಮಾಡಬೇಕಿದ್ದರಿಂದ ವಸುದೇವ ಕುಟುಂಬ ಶುರುವಾದಾಗ ನನಗೆ ಕಾಲ್ ಬಂತು."

'ವಸುದೇವ ಕುಟುಂಬ'ದ ಶೂಟಿಂಗ್ ಅನುಭವ ಹೇಗಿದೆ?

"ವಸುದೇವ ಕುಟುಂಬದಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಇದೆ. ಇಷ್ಟು ದೊಡ್ಡ ಸ್ಟಾರ್ ಕಾಸ್ಟ್ ಇರುವ ಧಾರಾವಾಹಿಯಲ್ಲಿ ನಾನು ನಟಿಸುತ್ತೇನೆ ಅಂತ ಅಂದುಕೊಂಡಿರಲೇ ಇಲ್ಲ. ಈ ಧಾರಾವಾಹಿಯ ತಂಡದಲ್ಲಿ ಇರೋರು ಕುಟುಂಬದ ಹಾಗೇ ಫೀಲ್ ಕೊಟ್ಟಿದ್ದಾರೆ. ಶೂಟಿಂಗ್ ಮಾಡುತ್ತಿದ್ದೇವೆ ಅಂತ ಅನಿಸುವುದೇ ಇಲ್ಲ. ಅವಿನಾಶ್ ಸರ್, ಅಂಜಲಿ ಅಮ್ಮನೇ ಆಗಿರಬಹುದು. ಇವರು ತುಂಬಾ ಸೀನಿಯರ್ಸ್ ಹೇಗಪ್ಪಾ ಕೆಲಸ ಮಾಡೋದು ಅಂತ ಅನಿಸಲೇ ಇಲ್ಲ. ಅದಕ್ಕೆ ನಾನಂತೂ ಯಾವಾಗ ಶೂಟಿಂಗ್ ಶುರುವಾಗುತ್ತೆ ಅಂತ ಕಾಯುತ್ತಿರುತ್ತೇನೆ."

Microbioligist Bhavana Patil Who Was Researching to cure cancer join the Vasudeva Kutumba Serial

ನಿಮ್ಮ ಪಾತ್ರದ ಬಗ್ಗೆ ಹೇಳಿ

"ವಸುದೇವ ಕುಟುಂಬದಲ್ಲಿ ಇರೋ ಪಾತ್ರ ನನ್ನ ರಿಯಲ್ ಲೈಫ್ ಕ್ಯಾರೆಕ್ಟರ್ ಇದ್ದಂತೆ ಇದೆ. ನಾನು ರಿಯಲ್ ಲೈಫ್‌ನಲ್ಲಿ ರೆಬೆಲ್ ಆಗಿಯೇ ಇರೋದು. ಇಲ್ಲಿ ನಟಿಸುತ್ತಿರೋದು ರೆಬೆಲ್ ಆಗಿಯೇ. ಹಾಗಾಗಿ ನನಗೆ ಕಷ್ಟ ಅಂತೇನು ಅನಿಸಿಲ್ಲ. ತೆಲುಗು ಸೀರಿಯಲ್‌ನಲ್ಲೂ ರೆಬೆಲ್ ಕ್ಯಾರೆಕ್ಟರ್ ಇದೆ. ಹೀಗಾಗಿ ಎರಡೂ ಸೀರಿಯಲ್‌ ಅಷ್ಟೇನು ಕಷ್ಟ ಅನಿಸುತ್ತಿಲ್ಲ. ಎರಡಕ್ಕೂ ಸೆಟ್ ಆಗಿದ್ದೇನೆ."

ತೆಲುಗು ಸೀರಿಯಲ್ ಬಗ್ಗೆ ಮಾಹಿತಿ ಕೊಡಬಹುದೇ?

"ಅಂದಾಲರಾಕ್ಷಸಿ ಅಂತ ತೆಲುಗು ಧಾರಾವಾಹಿ ಮಾಡುತ್ತಿದ್ದೇನೆ. ಇದು ಈ ಟಿವಿಯಲ್ಲಿ ಸಂಜೆ 6.30ಕ್ಕೆ ಅಲ್ಲಿ ಪ್ರಸಾರ ಆಗುತ್ತಿದೆ. ಸುಮಾರು ಏಳೆಂಟು ತಿಂಗಳಿನಿಂದ ಶೂಟ್ ಮಾಡುತ್ತಿದ್ದೇವೆ. ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಯುತ್ತೆ. ಅದು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಅಲ್ಲಿ ನನಗೆ ಜೋಡಿ ನಟಿಸುತ್ತಿರೋದು ಶಶಿ ಹೆಗಡೆಯವರು. ಅವರು ಕೂಡ ಕನ್ನಡದವರೇ. ಆ ಸೀರಿಯಲ್ ಕೂಡ ಚೆನ್ನಾಗಿ ಮೂಡಿಬರುತ್ತಿದೆ."

ಮೊದಲು ಕ್ಯಾಮರಾ ಫೇಸ್ ಮಾಡಿದ್ಯಾವಾಗ?

"ನಾನು ಮೂಲತ: ಡ್ಯಾನ್ಸರ್. ಕ್ಲಾಸಿಕಲ್ ಡ್ಯಾನ್ಸರ್ ಅಲ್ಲ. ವೆಸ್ಟರ್ನ್ ಡ್ಯಾನ್ಸರ್. ನಾನು 10 ವರ್ಷ ಇದ್ದಾಗ ಮೊದಲು ಕ್ಯಾಮರಾ ಫೇಸ್ ಮಾಡಿದ್ದೆ. 2010ರಲ್ಲಿ ನಾನು ಈಟಿವಿಯಲ್ಲಿ ಡ್ಯಾನ್ಸ್ ಶೋ ಮಾಡಿದ್ದೆ. ಅಲ್ಲಿಂದ ನನಗೆ ಬಾಲನಟಿಯಾಗಿ ನಟಿಸುವುದಕ್ಕೆ ಕರೆದಿದ್ದರು. ಆದರೆ, ಬೇಡ ಮೊದಲು ಓದೋಣ ಅಂತ ನಿರ್ಧರಿಸಿದ್ದೆ. ಮೊದಲು ಡಾಕ್ಟರ್ ಆಗಬೇಕು ಅಂತ ಆಸೆಯಿತ್ತು. ಆಮೇಲೆ ಬೇಡ ವಿಭಿನ್ನವಾಗಿ ಓದೋಣ ಅಂತ ಮೈಕ್ರೋಬಯಾಲಜಿ ತೆಗೆದುಕೊಂಡೆ."

Microbioligist Bhavana Patil Who Was Researching to cure cancer join the Vasudeva Kutumba Serial

ನಿಮಗೆ ಮೊದಲು ಅವಕಾಶ ಸಿಕ್ಕಿದ್ದೇಗೆ?

"NVN ಕಾಸ್ಟಿಂಗ್ ಏಜೆನ್ಸಿ ಅಂತ ಇದೆ. ಅವರು ನನಗೆ ಇನ್‌ಸ್ಟಾಗ್ರಾಂನಲ್ಲಿ ಅಪ್ರೋಚ್ ಮಾಡಿದ್ದರು. ನಿಮ್ಮ ಪ್ರೊಫೈಲ್ ಪ್ರಾಮಿಸಿಂಗ್ ಆಗಿದೆ. ಆಡಿಷನ್ ನಡೀತಾ ಇದೆ ಬರುತ್ತೀರಾ ಅಂತ ಕೇಳಿದ್ದರು. ನನಗೆ ಬೇಡ ಅಂತಾನೇ ಇತ್ತು. ಅದನ್ನು ಅಪ್ಪನ ಬಳಿ ಹೇಳಿದಾಗ, ಆಡಿಷನ್ ತಾನೇ ಕೊಟ್ಟು ಬಾ ಎಂದು ಹೇಳಿದರು. ಅವರಿಗಾಗಿ ಆಡಿಷನ್‌ಗೆ ಹೋಗೋಣ ಅಂತ ಹೋದೆ. ಸೆಲೆಕ್ಟ್ ಆಯ್ತು. ಒಂದೇ ವಾರದಲ್ಲಿಯೇ ಹೈದರಾಬಾದ್‌ಗೂ ಕರೆದರು. ಅದೆಲ್ಲ ಪಟಪಟ ಅಂತ ಶುರುನೂ ಆಗಿ ಹೋಯ್ತು."

ರಿಸರ್ಚ್ ಹಾಗೂ ನಟನೆ ಎರಡರಲ್ಲಿ ಹೆಚ್ಚು ದುಡಿಮೆ ಇಲ್ಲಿತ್ತು?

"ರಿಸರ್ಚ್ ಫೀಲ್ಡ್ ಅಂದ್ಮೇಲೆ ಅಲ್ಲಿ ಒಳ್ಳೆಯ ಸಂಭಾವನೆ ಇದ್ದೇ ಇರುತ್ತೆ. ಅಲ್ಲೂ ಫ್ರೆಷರ್ ಆಗಿಯೇ ಇದ್ದೆ. ಇಲ್ಲೂ ಕೂಡ ಫ್ರೆಷರ್ ಆಗಿಯೇ ಇದ್ದೀನಿ. ಆದರೆ, ಎರಡು ಪ್ರಾಜೆಕ್ಟ್‌ಗಳನ್ನು ಮಾಡುತ್ತಿರುವುದರಿಂದ ರಿಸರ್ಚ್‌ ಫೀಲ್ಡ್‌ನಲ್ಲಿ ದುಡಿಯುವಷ್ಟೇ ಇಲ್ಲಿಯೂ ದುಡಿಯುತ್ತಿದ್ದೇನೆ."

ಕೊನೆಯದಾಗಿ ಅವಿನಾಶ್‌ ಜೊತೆ ನಟಿಸುತ್ತಿರುವ ಅನುಭವ ಹೇಗಿದೆ?

"ಮೊದಲ ಸೀರಿಯಲ್‌ನಲ್ಲಿಯೇ ಅವಿನಾಶ್ ಸರ್ ಜೊತೆ ನಟಿಸುತ್ತಿರುವುದಕ್ಕೆ ನಾನು ಲಕ್ಕಿ ಅಂದುಕೊಳ್ಳುತ್ತೇನೆ. ಅವರಲ್ಲೂ ಅವರ ಮಗಳ ಪಾತ್ರ ಸಿಕ್ಕಿರೋದು ನನ್ನ ಭಾಗ್ಯ ಎನ್ನಬಹುದು. ಮೊದಲು ಅವರನ್ನು ನೋಡಿ ಹೆದರಿಕೊಂಡಿದ್ದೆ. ಸಿನಿಮಾದಲ್ಲಿ ಅವರನ್ನು ನೆಗೆಟಿವ್ ಪಾತ್ರದಲ್ಲಿ ನೋಡಿದ್ದರಿಂದ ಆ ಭಾವನೆ ಇತ್ತು. ಆದರೆ, ಸೆಟ್‌ನಲ್ಲಿ ಅವರೇ ಬಂದು ಏನು ಕಂದ ಅಂತ ಮಾತಾಡಿಸುತ್ತಾರೆ. ಇಂತಹದ್ದೊಂದು ಅವಕಾಶ ಸಿಕ್ಕಿದ್ದಕ್ಕೆ ತುಂಬಾನೇ ಖುಷಿಯಿದೆ." ಎಂದು ಭಾವನಾ ಪಾಟೀಲ್ ಫಿಲ್ಮಿಬೀಟ್ ಕನ್ನಡದ ಜೊತೆ ತಮ್ಮ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

More from Filmibeat

English summary
Microbioligist Bhavana Patil Who Was Researching to cure cancer join the Vasudeva Kutumba Serial.
Read more about: actress serial tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X