ಡಾ.ರಾಜ್ ಕುಮಾರ್ ನನಗೆ ಸ್ಪೂರ್ತಿ - ನಿಖಿಲ್ ಗೌಡ

By Harshitha

ಡಾ.ರಾಜ್ ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಕಂಡ್ರೆ ಎಚ್.ಡಿ.ಕೆ ಪುತ್ರ ನಿಖಿಲ್ ಗೌಡಗೆ ಅಪಾರ ಅಭಿಮಾನ. ಅವರನ್ನ ರೋಲ್ ಮಾಡೆಲ್ ಆಗಿಟ್ಟುಕೊಂಡು ನಿಖಿಲ್ ಗೌಡ, ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರಂತೆ. ನಿಖಿಲ್ ಗೌಡ ನೀಡಿರುವ ಸಂದರ್ಶನದ ಮುಂದುವರಿದ ಭಾಗ ಇಲ್ಲಿದೆ ನೋಡಿ.....

* ನಿಮಗೆ ಕಾರ್ ಕ್ರೇಜ್ ಇದೆ. ಅದಕ್ಕೂ 'ಜಾಗ್ವಾರ್' ಟೈಟಲ್ ಗೂ ಸಂಬಂಧ ಇದ್ಯಾ?

- ಇದೇ ತರಹ ನನ್ನ ಮಾವ ಕೂಡ ತಮಾಷೆ ಮಾಡಿದರು. ಆದ್ರೆ, 'ಜಾಗ್ವಾರ್'ಗೂ, ಕಾರ್ ಗೂ ಸಂಬಂಧ ಇಲ್ಲ. 'ಜಾಗ್ವಾರ್', ಒಂದು ಪ್ರಾಣಿ. ಆ ಪ್ರಾಣಿಯ ಕ್ಯಾರೆಕ್ಟರ್ ಹೇಗಿದೆಯೋ ಅದೇ ತರಹ ನನ್ನ ಪಾತ್ರ. [ಪುರಿ ಜಗನ್ನಾಥ್ ಅಲ್ಲ..! ನಿಖಿಲ್ ಚಿತ್ರಕ್ಕೆ ಹೊಸಬರು ಬಂದ್ರಲ್ಲ!]

Nikhil Gowda Special Interview ; Dr.Raj is my inspiration

* ತೆಲುಗು ಮತ್ತು ಕನ್ನಡದಲ್ಲಿ 'ಜಾಗ್ವಾರ್' ರೆಡಿಯಾಗುತ್ತಿದೆ. ತೆಲುಗು ಭಾಷೆ ಮೇಲೆ ನಿಮ್ಮ ಹಿಡಿತ?

- ನಟರಿಗೆ ಭಾಷೆಯ ಮಿತಿ ಇರಬಾರದು. ಯಾವುದೇ ಭಾಷೆಯಿದ್ದರೂ, ಭಾವನೆಗಳನ್ನ ಹೊರಹಾಕುವುದು ಮುಖ್ಯ. ಇನ್ನೂ ಒಂದು ಅಂದ್ರೆ, ನಮ್ಮ ತಾತ ಕೋಲಾರದಿಂದ ಬಂದಿರುವವರು. ಅವರೆಲ್ಲಾ ತೆಲುಗಿನಲ್ಲಿ ಮಾತಾಡ್ತಾರೆ. ಸೋ, ಡೈಲಾಗ್ ಕೊಟ್ಟರೆ ನಾನು ಮ್ಯಾನೇಜ್ ಮಾಡಬಲ್ಲೆ. ಇನ್ ಫ್ಯಾಕ್ಟ್ ನಾನೇ ತೆಲುಗಿನಲ್ಲಿ ಡಬ್ ಮಾಡ್ಬೇಕು ಅಂತಿದ್ದೀನಿ. ['ಬಾಹುಬಲಿ' ವಿತರಣಾ ಹಕ್ಕು ; ಎಚ್.ಡಿ.ಕೆ ಹೊಸ ಡೀಲ್.?]

* ನಿಮ್ಮ ಡೈರೆಕ್ಟರ್ ಮಹದೇವ್ ಬಗ್ಗೆ ಹೇಳುವುದಾದರೆ....

- ಅವರಿಗೆ ಸಿನಿಮಾ ಬಗ್ಗೆ ತುಂಬಾ ಪ್ಯಾಶನ್ ಇದೆ. ನನ್ನ ತಪ್ಪನ್ನ ತಿದ್ದಿ ಹೇಳುತ್ತಾರೆ. ನಾನು ಏನೇ ಪರ್ಫಾಮೆನ್ಸ್ ಮಾಡಿದರೂ, ಅದರ ಕ್ರೆಡಿಟ್ ಎಲ್ಲಾ ಅವರಿಗೇ ಸಲ್ಲಬೇಕು. [ಗಾಸಿಪ್ ಪಂಡಿತರ ಬಾಯಿಗೆ ಬೀಗ ಹಾಕಿದ ನಿಖಿಲ್ ಗೌಡ]

Nikhil Gowda Special Interview ; Dr.Raj is my inspiration

* ನಟರ ಪೈಕಿ ನಿಮಗೆ ರೋಲ್ ಮಾಡೆಲ್ ಯಾರು?

- ಡಾ.ರಾಜ್ ಕುಮಾರ್ ನನಗೆ ಸಿಕ್ಕಾಪಟ್ಟೆ ಇನ್ಸ್ಪಿರೇಷನ್. ಚರಿಶ್ಮ್ಯಾಟಿಕ್ ಹೀರೋ ಆಗಿ ನಂಗೆ ಡಾ.ವಿಷ್ಣುವರ್ಧನ್ ಇಷ್ಟ. 'ಸೂರ್ಯವಂಶ' ಸಿನಿಮಾ ಮಾಡುವಾಗ ಅವರನ್ನ ಮೀಟ್ ಮಾಡಿದ್ದೆ. ಅದು ನನ್ನ ಅದೃಷ್ಟ. ಈಗಿನ ಹೀರೋಗಳ ಪೈಕಿ ಅಲ್ಲು ಅರ್ಜುನ್ ತುಂಬಾ ಇಷ್ಟ. ಅವರ ಕಾಮಿಡಿ ಟೈಮಿಂಗ್ ತುಂಬಾ ಚೆನ್ನಾಗಿದೆ.

* ನಿಮ್ಮ ಹೋಮ್ ಪ್ರೊಡಕ್ಷನ್ ಮುಖಾಂತರ ನೀವು ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದೀರಾ. ಮುಂದೆ ಬೇರೆ ನಿರ್ಮಾಪಕರಿಗೆ ನೀವು ಓಪನ್ ಇರುತ್ತೀರಾ?

- ಗೊತ್ತಿಲ್ಲ. ಖಂಡಿತ ನಾನು ಡುಡ್ಡಿಗಾಗಿ ಹೀರೋ ಆಗ್ತಿಲ್ಲ. ಪ್ಯಾಶನ್ ಗಾಗಿ ಮಾಡುತ್ತಿರುವುದು. As of Now, ನಾನು ಖಂಡಿತ ಬೇರೆ ಯಾವ ಪ್ರೊಡಕ್ಷನ್ ಗೂ ವರ್ಕ್ ಮಾಡಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತೆ ಗೊತ್ತಿಲ್ಲ. ನನಗಾಗಿ ನನ್ನ ತಂದೆ ಕೂಡ ಈ ಕಡೆ ಬರುತ್ತಿದ್ದಾರೆ. ಸೋ, ನನ್ನ ಹಿಂದೆ ಅವರು ಇರಲೇಬೇಕು. [ಎಚ್.ಡಿ.ಕೆ ಪುತ್ರನಿಗೆ ಶಿವಣ್ಣನ ಪ್ರೀತಿಯ ಶುಭಾಶಯ]

Nikhil Gowda Special Interview ; Dr.Raj is my inspiration

* ನಟನೆ ಮತ್ತು ರಾಜಕೀಯ. ಈ ಎರಡರ ಪೈಕಿ ಮುಂದಿನ ದಿನಗಳಲ್ಲಿ ನಿಮ್ಮ ಆಯ್ಕೆ?

- ನಾನೇನು ಪ್ಲಾನ್ ಮಾಡಿಲ್ಲ. ಈಗ ನನ್ನ ಕಾನ್ಸನ್ಟ್ರೇಷನ್ ಮೂವಿ ಮಾತ್ರ. ಅದು ಚೆನ್ನಾಗಿ ಬರಬೇಕು. ನಾನು ಚೆನ್ನಾಗಿ ಪರ್ಫಾಮ್ ಮಾಡ್ಬೇಕು. ನಾನು ಉತ್ತಮ ನಟನಾಗಬೇಕು. ಇದರಲ್ಲಿ ನಾನು ಗುರುತಿಸಿಕೊಂಡು ರಾಜಕೀಯಕ್ಕೆ ಬರುವಂಥದ್ದು ಏನೂ ಇಲ್ಲ. ಅಂತಹ ಯಾವುದೇ ಒತ್ತಡ ಇಲ್ಲ. ನನಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೀಬೇಕು ಅನ್ನುವ ಆಸೆ ಇದೆ. ಒಂದೆರಡು ಸಿನಿಮಾಗಳನ್ನ ಮಾಡೋಕೆ ನಾನು ಇಲ್ಲಿಗೆ ಖಂಡಿತ ಬಂದಿಲ್ಲ. That is for sure.

ಸಂದರ್ಶನ - ಹರ್ಷಿತಾ ರಾಕೇಶ್

More from Filmibeat

English summary
Ex CM H.D.Kumaraswamy's son Nikhil Gowda is all set to make his Sandalwood debut with the movie 'Jaguar'. In a special interview, Nikhil Gowda said that Dr.Rajkumar is his inspiration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X