»   » 'ಫಿಲ್ಮಿಬೀಟ್ ಕನ್ನಡ' ವಿಶೇಷ; ಎಚ್.ಡಿ.ಕೆ ಪುತ್ರ ನಿಖಿಲ್ ಸಂದರ್ಶನ

'ಫಿಲ್ಮಿಬೀಟ್ ಕನ್ನಡ' ವಿಶೇಷ; ಎಚ್.ಡಿ.ಕೆ ಪುತ್ರ ನಿಖಿಲ್ ಸಂದರ್ಶನ

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿ ನೀಡುವುದಕ್ಕೆ ರೆಡಿಯಾಗುತ್ತಿದ್ದಾರೆ. ಮಗನ ಚೊಚ್ಚಲ ಚಿತ್ರಕ್ಕೆ ಖುದ್ದು ಎಚ್.ಡಿ.ಕೆ ಬಂಡವಾಳ ಹಾಕುತ್ತಿದ್ದಾರೆ.

ಇದುವರೆಗೂ ನಿಖಿಲ್ ಗೌಡ ಅಭಿನಯಿಸುವ ಚಿತ್ರ 'ಜಾಗ್ವಾರ್' ಬಗ್ಗೆ ಗಾಂಧಿನಗರದಲ್ಲಿ ಅಂತೆ ಕಂತೆಗಳ ಸುದ್ದಿ ಬಹಳಷ್ಟಿತ್ತು. ಆ ಎಲ್ಲಾ ಕಂತೆ ಪುರಾಣಗಳಿಗೆ ಶುಭಂ ಹಾಡುವುದಕ್ಕೆ ಇಂದು ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿ ಕರೆದಿದ್ದರು. [ರಾಜಮೌಳಿ ಆಕ್ಷನ್ ಕಟ್ ನಲ್ಲಿ ಎಚ್ಡಿಕೆ ಪುತ್ರ ನಿಖಿಲ್?]

Grand entry to Sandalwood ; Nikhil Gowda special Interview

ಇದೇ ವೇಳೆ, 'ಜಾಗ್ವಾರ್' ಚಿತ್ರದ ಬಗ್ಗೆ ಮತ್ತು ತಮ್ಮ ಆಸೆ ಕನಸುಗಳ ಬಗ್ಗೆ ಕನ್ನಡ ಚಿತ್ರರಂಗದ ನೂತನ ಹೀರೋ ನಿಖಿಲ್ ಗೌಡ 'ಫಿಲ್ಮಿಬೀಟ್ ಕನ್ನಡ' ಜೊತೆ ಕೆಲಕಾಲ ಹರಟಿದರು. ನಿಖಿಲ್ ಗೌಡ ಜೊತೆ ನಾವು ನಡೆಸಿದ ಚುಟುಕು ಸಂದರ್ಶನ ಇಲ್ಲಿದೆ.....

* ಹೀರೋ ಆಗಬೇಕು ಅನ್ನೋದು ನಿಮ್ಮ ಆಸೆನಾ? ಅಥವಾ ನಿಮ್ಮ ತಂದೆ ಆಸೆನಾ?

- ನನಗಿಂತ ಜಾಸ್ತಿ ನನ್ನ ತಂದೆಗೆ ಆಸೆ. ಹಂಡ್ರೆಡ್ ಪರ್ಸೆಂಟ್. ಅದರಲ್ಲೇನು ಡೌಟ್ ಇಲ್ಲ. ಸುಮಾರು ಹತ್ತು ವರ್ಷದಿಂದಲೂ ನನ್ನನ್ನ ಹೀರೋ ಆಗಿ ನೋಡಬೇಕು ಅಂತ ಬಹಳ ಆಸೆ ಪಟ್ಟಿದ್ರು. ಅವರಿಗೆ ಸಿನಿಮಾ ಬಗ್ಗೆ ತುಂಬಾ ಪ್ಯಾಶನ್ ಇದೆ. ಪ್ರೊಡಕ್ಷನ್, ಡಿಸ್ಟ್ರಿಬ್ಯೂಷನ್ ಮಾಡಿಕೊಂಡು ಬಂದಿದ್ದಾರೆ. ಸೋ, ಸಿನಿಮಾ ಅನ್ನೋದು ನನಗೆ ಬ್ಲಡ್ ನಲ್ಲೇ ಇದೆ. [ಪುರಿ ಜಗನ್ನಾಥ್ ಆಕ್ಷನ್ ಕಟ್ ನಲ್ಲಿ ಎಚ್ಡಿಕೆ ಪುತ್ರ ನಿಖಿಲ್]

Grand entry to Sandalwood ; Nikhil Gowda special Interview

* ನಿಮ್ಮ ಜೀವನದ ಗುರಿ ಏನಾಗಿತ್ತು?

- ನಾನು ಯಾವತ್ತು ಲೆಕ್ಕಾಚಾರ ಹಾಕಿ, ಹೀಗೇ ಬದುಕಬೇಕು ಅಂತ ಬದುಕಿಲ್ಲ. ನನಗೆ ಏನು ಅನ್ಸುತ್ತೆ ಅದನ್ನ ಮಾಡ್ತೀನಿ. ನನಗೆ ಮುಂಚೆ ಇಂದ್ಲೂ ಸಿನಿಮಾದಲ್ಲಿ ಆಸಕ್ತಿ ಇತ್ತು. ಸಿನಿಮಾ ಮೂಲಕ ಜನರಿಗೆ ಒಳ್ಳೆ ಸಂದೇಶ ತಲುಪಿಸಬಹುದು. ಇದರಿಂದ ಸಮಾಜ ಬದಲಾಗುವ ಸಾಧ್ಯತೆ ಇರುತ್ತೆ. ಅದು ಬಿಟ್ಟು ಲಾಂಗು, ಮಚ್ಚು, ಫೈಟು ಅಂತಿದ್ರೆ ಹೇಗೆ.? ಮೂವಿಯಲ್ಲಿ ಅದು ಪಾರ್ಟ್ ಆಗಿರಬೇಕು. ಅದನ್ನೇ ವಿಜೃಂಭಿಸಬಾರದು. ಮಾಸ್ ಜನರಿಗೆ ಅದು ಇಷ್ಟ. ಆದ್ರೆ, ಕ್ಲಾಸ್ ಪ್ರೇಕ್ಷಕರಿಗೆ ರುಚಿಸಲ್ಲ. ಇದನ್ನೆಲ್ಲಾ ತಲೆಯಟ್ಟಿಕ್ಕೊಂಡು ಒಳ್ಳೆ ಸಿನಿಮಾ ಮಾಡಿ, ಹೀರೋ ಆಗ್ಬೇಕು ಅನ್ನೋ ಕನಸಿತ್ತು. ಆದ್ರೆ, ಸಿನಿಮಾದಲ್ಲಿ ಕಥೆ ಸ್ಟ್ರಾಂಗ್ ಆಗಿದ್ದು, ಕಥೆ ಹೀರೋ ತರಹ ಇರಬೇಕು. ನನ್ನ ಮೊದಲ ಸಿನಿಮಾ ಅದೇ ತರಹ ಇದೆ. [ಕೆಸಿಎನ್ ಮೋಹನ್ ಮಗಳಿಗೂ, ಎಚ್ಡಿಕೆ ಮಗನಿಗೂ ಡುಂಡುಂಡುಂ]

Grand entry to Sandalwood ; Nikhil Gowda special Interview

* ಅಂದ್ರೆ, ನಿಮಗೆ ಮಾಸ್ ಹೀರೋ ಆಗೋಕೆ ಇಷ್ಟ ಇಲ್ಲ?

- ಖಂಡಿತ ಇಲ್ಲ. ಆದ್ರೆ, ನಾನು 'ಮಾಸ್ ಹೀರೋ ಅಲ್ಲ' ಅಂದ್ರೂ, ಇವತ್ತು ನಾನು ಮಾಸ್ ಹೀರೋ ತರಹನೇ. ಈಗಾಗಲೇ ತುಂಬಾ ಅಭಿಮಾನಿಗಳಿದ್ದಾರೆ. ನನ್ನ ಮಾಸ್ ಹೀರೋ ಆಗೇ ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ ಕ್ಲಾಸ್ ಮೂವಿ ಮಾಡುವುದು ಕಷ್ಟ. ಕ್ಲಾಸ್ ಸಬ್ಜೆಕ್ಟ್ ಇಟ್ಕೊಂಡು, ಮಾಸ್ ಪ್ರೇಕ್ಷಕರನ್ನ ಅಟ್ರ್ಯಾಕ್ಟ್ ಮಾಡಬೇಕು. 'ಜಾಗ್ವಾರ್' ಕೂಡ ಕಂಪ್ಲೀಟ್ ಫ್ಯಾಮಿಲಿ ಕೂತು ನೋಡುವಂತಹ ಚಿತ್ರ. ಎಲ್ಲರಿಗೂ ಇಷ್ಟವಾಗುತ್ತೆ. [ತ್ರಿಭಾಷಾ ಚಿತ್ರ 'ಜಾಗ್ವಾರ್'ನಲ್ಲಿ ಎಚ್ಡಿಕೆ ಪುತ್ರ ನಿಖಿಲ್!]

* ನಿಮ್ಮ ತಯಾರಿ ಬಗ್ಗೆ ಹೇಳುವುದಾದರೆ?

- ಶಾರ್ಟ್ ಮೂವೀಸ್ ಮಾಡ್ತಿದ್ದೀನಿ. ಪಾತ್ರದ ಬಗ್ಗೆ ತಯಾರಿ ನಡೆಯುತ್ತಿದೆ.

ಇಂದು ಹೀರೋ ಆಗುವುದಕ್ಕೆ ಸಕಲ ತಯಾರಿ ನಡೆಸುತ್ತಿರುವ ನಿಖಿಲ್ ಗೌಡಗೆ ಸ್ಯಾಂಡಲ್ ವುಡ್ ನಲ್ಲಿ ಯಾವ ಹೀರೋ ಕಂಡ್ರೆ ಇಷ್ಟ ಗೊತ್ತಾ? ನಿಖಿಲ್ ಗೌಡ ಇಷ್ಟ ಕಷ್ಟಗಳ ಬಗ್ಗೆ ನೀಡಿರುವ ಸಂದರ್ಶನದ ಮುಂದುವರಿದ ಭಾಗಕ್ಕಾಗಿ ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ......

English summary
Ex CM H.D.Kumaraswamy's son Nikhil Gowda is all set to make his Sandalwood debut with the movie 'Jaguar'. Here is a special interview with the New Actor Nikhil Gowda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada