'ಸಿದ್ದಾರ್ಥ' ಮುಗಿಸಿದ್ದೀನಿ, ಇದಕ್ಕಿಂತ ಆರೋಗ್ಯ ಬೇಕಾ-ರಾಘಣ್ಣ
ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ರಾಘಣ್ಣ, ಮಗ ವಿನಯ್ ಚಿತ್ರ 'ಸಿದ್ದಾರ್ಥ'ಗೆ ಕೊಂಚವೂ ತಡಮಾಡಲಿಲ್ಲ. ರಾಘಣ್ಣ ಆರೋಗ್ಯ ಈಗ ಹೇಗಿದೆ. ಅವರೇ ಹೇಳಿದ್ದಾರೆ, ಓದಿ....
ಸಂದರ್ಶನ ಎರಡನೆಯ ಪುಟದಿಂದ ಮುಂದುವರಿದ ಭಾಗ
* ಈಗ ನಿಮ್ಮ ಆರೋಗ್ಯ ಹೇಗಿದೆ.
- ಮಗನ ಸಿನಿಮಾ 'ಸಿದ್ದಾರ್ಥ' ಮಾಡಿ ಮುಗಿಸಿದ್ದೀನಿ. ನನಗೆ ಇದಕ್ಕಿಂತ ಆರೋಗ್ಯ ಬೇಕಾ?

* ಮೂರು ಜನರೇಷನ್ ನ ನೀವು ನೋಡಿದ್ದೀರಾ. ಜನರೇಷನ್ ಗ್ಯಾಪ್ ನ ನೀವು ಹೇಗೆ ನಿಭಾಯಿಸುತ್ತೀರಾ?
- ಅಪ್ಪಾಜಿ ಚಿತ್ರಗಳನ್ನ ನೋಡುತ್ತಿದೆ. ಶಿವಣ್ಣ, ಅಪ್ಪು ಚಿತ್ರಗಳ ಸ್ಕ್ರಿಪ್ಟ್ ಡಿಸ್ಕಷನ್ ನಲ್ಲಿ ಪಾಲ್ಗೊಳ್ಳುತ್ತಿದ್ದೆ. ಒಬ್ಬೊಬ್ಬರಿಗೂ ಹತ್ತು ವರ್ಷ ಗ್ಯಾಪ್ ಇದೆ. ಅಂತಹ ಜನರೇಷನ್ ಗ್ಯಾಪ್ ಏನೂ ಇಲ್ಲ. ನಮ್ಮ ತಂದೆ ಸಿನಿಮಾ ಮಾಡುವಾಗ ಹೊಕ್ಕಳ ಬಳಿ ಪ್ಯಾಂಟ್ ಇರುತ್ತಿತ್ತು. ನಮ್ಮ ಜನರೇಷನ್ ನಲ್ಲಿ ಸ್ವಲ್ಪ ಕೆಳಗೆ ಬಂತು. ಈಗಿನ ಹುಡುಗರದ್ದು ಲೋ ವೇಯ್ಸ್ಟ್. ಬಗ್ಗಿದರೆ ಅಂಡರ್ ವೇರ್ ಬ್ರ್ಯಾಂಡ್ ಕಾಣಬೇಕು. ಇದೇ ಜನರೇಷನ್ ಗ್ಯಾಪ್. ಮೊದಲು ಬಟ್ಟೆ ತೆಗೆದುಕೊಂಡು, ಅದು ಹರಿದುಹೋಗುವವರೆಗೂ ಹಾಕಿಕೊಳ್ಳುತ್ತಿದ್ವಿ. ಈಗ ಹರಿದ ಜೀನ್ಸ್ ತೆಗೆದುಕೊಳ್ಳುವುದಕ್ಕೆ ಹೆಚ್ಚು ಬೆಲೆ. ಎಷ್ಟು ಹರಿದುಹೋಗಿದೆ ಅನ್ನುವುದರ ಮೇಲೆ ದುಡ್ಡು ಕೊಡಬೇಕು. ಇದೇ ಗ್ಯಾಪ್ ಈಗ. ವಿನಯ್ ಕಾಲೇಜ್ ಗೆಲ್ಲಾ ನಾನು ಹೋಗ್ತಿದೆ. ಅವರ ಫ್ರೆಂಡ್ಸ್ ಗಳ ಜೊತೆಯೆಲ್ಲಾ ಮಾತನಾಡುತ್ತೀನಿ. ಅವರ ಮನಸ್ಥಿತಿಯನ್ನ ಆಧರಿಸಿ, ನಾನು ಮತ್ತು ಪ್ರಕಾಶ್ ಡಿಸ್ಕಸ್ ಮಾಡಿ ಸಿನಿಮಾ ಮಾಡಿರುವುದು. ಅವರಿಗೂ ಮೂರೂ ಜನರೇಷನ್ ಗೊತ್ತು. ಅಪ್ಪಾಜಿ ಸಿನಿಮಾ ನೋಡಿ, ಶಿವಣ್ಣ-ಅಪ್ಪುಗೆ ಡೈರೆಕ್ಟ್ ಮಾಡಿ, ವಿನಯ್ ಗೆ ಮಾಡ್ತಿದ್ದಾರೆ. ಸೋ, ಅವರಿಗೂ ಕಷ್ಟ ಆಗಲಿಲ್ಲ. ['ಸಿದ್ದಾರ್ಥ'ನಾಗಿ ವಿನಯ್ ರಾಜ್ ಗ್ರ್ಯಾಂಡ್ ಎಂಟ್ರಿ]

* ಸಿಂಗಾನಲ್ಲೂರಿನಲ್ಲಿ ಶೂಟಿಂಗ್ ಮಾಡಿದ್ದೀರಂತೆ.
- ಹೌದು. ಅದು ನಮ್ಮ ತಾತನ ಊರು. ಅಲ್ಲಿ ನಮ್ಮ ಅಪ್ಪಾಜಿ ಶೂಟಿಂಗ್ ಮಾಡೋಕೆ ಆಗ್ಲಿಲ್ಲ. ಆದ್ರೆ, ವಿನಯ್ ಕೈಲಿ ಮಾಡಿಸಿದ್ವಿ. ''ಊರಿನ ಮಗ ಬರ್ಲಿಲ್ಲ. ಮೊಮ್ಮಗ ಬಂದ, ಮೊಮ್ಮಗನೇ ಬರಬೇಕು ಅಂತಾರಲ್ಲ, ಹಾಗೆ ಮೊಮ್ಮಗ ಬಂದ'' ಅಂತ ಊರವರೆಲ್ಲಾ ಮಾತನಾಡಿಕೊಂಡರು. [ಬಿಡುಗಡೆಗೆ ಮುನ್ನವೇ ದಾಖಲೆ ಬರೆದ 'ಸಿದ್ದಾರ್ಥ']

* 23ನೇ ತಾರೀಖು 'ಸಿದ್ದಾರ್ಥ' ಬಿಡುಗಡೆಯಾಗುತ್ತಿದೆ. ಜನಕ್ಕೆ ಏನು ಹೇಳೋಕೆ ಇಷ್ಟಪಡುತ್ತೀರಾ?
- 'ಸಿದ್ದಾರ್ಥ' ನಿಮ್ಮ ಸಿನಿಮಾ. ನಿಮ್ಮ ಕ್ಯಾರೆಕ್ಟರ್. ಏನು ಎಕ್ಸ್ ಪೆಕ್ಟ್ ಮಾಡಿಕೊಂಡು ಬರಬೇಡಿ. ನಿಮ್ಮ ಮನೆಯ ಕಥೆ ಆಯ್ಕೆ ಮಾಡಿ ಸಿನಿಮಾ ಮಾಡಿದ್ದೀವಿ. 'ಸಿದ್ದಾರ್ಥ' ನೋಡಿ, ನಿಮ್ಮನ್ನ ನೀವು ಕಂಡುಕೊಳ್ಳಿ. ಸಿನಿಮಾ ಇಷ್ಟ ಆದರೆ, ನಾಲ್ಕು ಜನಕ್ಕೆ ಹೇಳಿ. [ಪೋಲಿ ಹುಡುಗನಾಗಿ ಎಂಟ್ರಿ ಕೊಟ್ಟ ವಿನಯ್ ರಾಜ್]

* ಮುಂದೆ 'ವಿನಯ್ ರಾಜ್ ಕುಮಾರ್' ನಿಮ್ಮ ಬ್ಯಾನರ್ ಗೆ ಮಾತ್ರ ಸೀಮಿತವಾಗುತ್ತಾರಾ? ಬೇರೆ ಬ್ಯಾನರ್ ಗಳಿಗೂ ವಿನಯ್ ಓಪನ್ ಇರುತ್ತಾರಾ ಹೇಗೆ..?
- ಉತ್ತಮ ಕಥೆಗಳಿಗೆ ನಾವು ಯಾವಾಗಲೂ ಓಪನ್. ಹೊರಗಡೆಯವರು ಒಳ್ಳೆ ಕಥೆ ತಂದರೆ ಹೆಜ್ಜೆ ಇಡುತ್ತೀವಿ. ''ಮೊದಲನೇ ಸಿನಿಮಾಗೆ ನಾವು ಬೆಲೆ ಕಟ್ಟಕ್ಕಾಗಲ್ಲ. ಒಳ್ಳೆಯದಾಗಲಿ, ಕೆಟ್ಟದ್ದಾಗಲಿ, ನಮಗೆ ಆಗಲಿ. ನಮ್ಮಿಂದ ಬೇರೆಯವರಿಗೆ ಅನ್ಯಾಯವಾಗುವುದು ಬೇಡ'' ಅಂತ ಅಪ್ಪಾಜಿ ಹೇಳೋರು. ಹೀಗಾಗಿ, ವಿನಯ್ ಒಂದು ಮಟ್ಟಕ್ಕೆ ಬರುವವರೆಗೂ ನಾವೇ ಪ್ರೊಡಕ್ಷನ್ ಮಾಡುತ್ತೀವಿ. ಅಷ್ಟರಲ್ಲಿ ಬೇರೆಯವರು ಒಳ್ಳೆ ಕಥೆ ತಂದರೆ, ಖಂಡಿತ ಮಾಡುತ್ತೀವಿ. ಶಿವಣ್ಣ, ಪುನೀತ್ ದು ಹಾಗೆ ಮಾಡಿದ್ದು. ಈಗ ಅವರು ಬೇರೆ ಸಿನಿಮಾಗಳೆಲ್ಲಾ ಮಾಡುತ್ತಿದ್ದಾರಲ್ಲ.
ಸಂದರ್ಶನ : ಹರ್ಷಿತಾ ನಾಗರಾಜ್


Click it and Unblock the Notifications











