ಅಪ್ಪಾಜಿಯನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ-ರಾಘಣ್ಣ
ದೊಡ್ಮನೆ ಕುಟುಂಬದಲ್ಲಿ 'ಅಪ್ಪಾಜಿ'ಯನ್ನ ನೆನಪಿಸಿಕೊಳ್ಳದ ದಿನವೇ ಇಲ್ಲ. ಹೀಗಿರುವಾಗ ಅಣ್ಣಾವ್ರ ಮೊಮ್ಮಗ ಗಾಂಧಿನಗರಕ್ಕೆ ಕಾಲಿಡುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಅಪ್ಪಾಜಿ ನಮ್ಮೊಂದಿಗಿಲ್ಲ. ಅವರನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಾಯಿದ್ದೀನಿ ಅಂತ ರಾಘಣ್ಣನ ಕಣ್ಣಾಲಿಗಳು ತುಂಬಿ ಬಂದವು.
ಸಂದರ್ಶನ ಮೊದಲನೇ ಪುಟದಿಂದ ಮುಂದುವರಿದ ಭಾಗ

* 'ಸಿದ್ದಾರ್ಥ' ರಿಲೀಸ್ ಟೈಮ್ ನಲ್ಲಿ ಅಪ್ಪಾಜಿಯನ್ನ ಮಿಸ್ ಮಾಡಿಕೊಳ್ಳುತ್ತೀರಾ?
- ತುಂಬಾ...ತುಂಬಾ ಮಿಸ್ ಮಾಡಿಕೊಳ್ಳುತ್ತೀನಿ. ಯಾಕಂದ್ರೆ, ಮನುಷ್ಯನಿಗೆ ಮಕ್ಕಳು ಅಸಲು. ಮೊಮ್ಮಕ್ಕಳು ಬಡ್ಡಿ ಅಂತಾರೆ. ಹೀಗಾಗಿ, ಎಲ್ಲರಿಗೂ ಬಡ್ಡಿ ಮೇಲೆ ತುಂಬಾ ಪ್ರೀತಿ. ಹಾಗೆ, ವಿನಯ್ ಕಂಡ್ರೆ ಅಪ್ಪಾಜಿಗೆ ತುಂಬಾ ಪ್ರೀತಿ. ''ಅಯ್ಯೋ ನನ್ನ ಮೊಮ್ಮಗ ಆಕ್ಟ್ ಮಾಡ್ತಾನಾ'' ಅನ್ನೋರು. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀವಿ ಅವರನ್ನ. 'ಒಡಹುಟ್ಟಿದವರು' ಸಿನಿಮಾದಲ್ಲಿ ಅಪ್ಪಾಜಿ ಜೊತೆ ವಿನಯ್ ಆಕ್ಟ್ ಮಾಡಿದ್ದ. ಅವಾಗ ಅಪ್ಪಾಜಿ ನಾಚಿಕೊಂಡಿದ್ದರು- ''ಮನೆಯಲ್ಲಿ ತಾತ ಅಂತಾನೆ. ಸಿನಿಮಾದಲ್ಲಿ ಅಪ್ಪ ಅಂತಾನೆ'' ಅಂತ. ಶಿವಣ್ಣ ಜೊತೆಗೂ ನಟಿಸಿದ್ದಾನೆ. ಸಿನಿಮಾದಲ್ಲಿ ಶಿವಣ್ಣನಿಗೆ ಚಿಕ್ಕಪ್ಪ ಅಂತಿದ್ದ. ಆದ್ರೆ, ನಿಜವಾಗಲೂ ದೊಡ್ಡಪ್ಪ. ಅಂತಹ ಪಾತ್ರಗಳು ಸಿಕ್ಕಿತ್ತು ಅವನಿಗೆ. ಸಿನಿಮಾ ರಂಗಕ್ಕೆ ತರಬೇಕು ಅಂತ ತಂದಿದ್ದಲ್ಲ. ಅವನಿಗೆ ಚೆನ್ನಾಗಿ ವಿದ್ಯೆ ಕೂಡ ಕೊಟ್ಟಿದ್ವಿ. ಇದು ವಿನಯ್ ಆಯ್ಕೆ ಮಾಡಿಕೊಂಡ ವೃತ್ತಿ. ದಿನಾಗಲೂ ಮನೆಯಲ್ಲಿ ಶೂಟಿಂಗ್ ನೋಡಿ ನೋಡಿ, ನಮಗೂ ಹಾಗೇ ಬಂದಿದ್ದು. ಸೋ, ಅವನಿಗೂ ಹಾಗೇ ಆಯ್ತು. ಅಪ್ಪಾಜಿ, ಅವನನ್ನ ಹೀರೋ ಆಗಿ ತೆರೆಮೇಲೆ ನೋಡಿದ್ರೆ, ಖುಷಿ ಪಟ್ಟಿರೋರು. [ರಾಜ್ ಕುಟುಂಬದ ಮೂರನೇ ತಲೆಮಾರಿನ ಚಿತ್ರ 'ವಿನು']

* 'ಸಿದ್ದಾರ್ಥ' ಚಿತ್ರದ ಹಾಡೊಂದರಲ್ಲಿ ನೀವು, ನಿಮ್ಮ ಪತ್ನಿ ಮತ್ತು ಕಿರಿಮಗ ಕಾಣಿಸಿಕೊಂಡಿದ್ದೀರಾ..ಯಾರ ಐಡಿಯಾ ಅದು?
- 'ಸಿದ್ದಾರ್ಥ' ಚಿತ್ರದ ಇಡೀ ಶೂಟಿಂಗ್ ನಲ್ಲಿ ನಾನಿದ್ದೆ. ನನಗೆ ಆನಾರೋಗ್ಯ ಕಾಡಿತ್ತಲಾ...ಸೆಟ್ ಗೆ ಹೋದರೆ, ಮೈಂಡ್ ಫ್ರೆಶ್ ಆಗುತ್ತೆ ಅಂತ ಹೋಗ್ತಿದ್ದೆ. ಹಾಡಿನ ಶೂಟಿಂಗ್ ನಡೀತಿತ್ತು. ಸಡನ್ನಾಗಿ ಎಲ್ಲರೂ, ''ಸರ್, ನೀವೇ ಕೂತುಕೊಳ್ಳಿ ಹಿಂದುಗಡೆ ಅಂದರು. ವಾಂಟೆಡ್ ಆಗಿ ನಿಮ್ಮನ್ನ ತೋರಿಸುವುದು ಬೇಡ. ಎಲ್ಲೋ ಒಂದು ಕಡೆ ನೀವು ಇದ್ದರೆ, ಜನ ಗುರುತಿಸುತ್ತಾರೆ ಅಂದರು. ನನಗೂ ಇಷ್ಟ ಆಯ್ತು ಮಗನ ಪಿಕ್ಚರ್ ನಲ್ಲಿ ಕಾಣಿಸಿಕೊಳ್ಳೋಣ ಅಂತ. ಸೆಟ್ ನಲ್ಲಿ ನನ್ನ ಹೆಂಡತಿ, ಚಿಕ್ಕಮಗ ಕೂಡ ಇದ್ದರು. ಫ್ಯಾಮಿಲಿ ತರಹನೇ ಬಂದಿದ್ದೀರಾ. ಹಾಗೇ, ಕೂತುಕೊಳ್ಳಿ ಅಂದರು. ಆಯ್ತು ಅಂತ ಹಾಗೆ ಮಾಡಿದ್ದು. [ಮೊಟ್ಟಮೊದಲ ಬಾರಿ ಬೆಳ್ಳಿತೆರೆ ಮೇಲೆ 'ಅಣ್ಣಾವ್ರ' ಸೊಸೆ..!]

* ವಿನಯ್ ರಾಜ್ ಕುಮಾರ್ ಎಂಟ್ರಿಗೆ ಪರಭಾಷಾ ನಿರ್ದೇಶಕರ ಹೆಸರುಗಳೆಲ್ಲಾ ಕೇಳಿಬಂದಿತ್ತು. ಆದ್ರೆ, ಮಿಲನ 'ಪ್ರಕಾಶ್' ಫೈನಲ್ ಆಗಿದ್ದು ಹೇಗೆ?
- ಪ್ರಕಾಶ್ ನಮ್ಮ ಕುಟುಂಬದವರು. ನಮ್ಮ ತಾಯಿಯ ತಂಗಿ ಮಗ. ಚಿಕ್ಕವಯಸ್ಸಿನಿಂದಲೂ ವಿನಯ್ ನ ಪ್ರಕಾಶ್ ನೋಡಿದ್ದಾರೆ. ಶಿವಣ್ಣನ ಜೊತೆ 'ರಿಷಿ' ಮಾಡಿದ್ದರು. ನಮ್ಮ ಬ್ಯಾನರ್ ನಲ್ಲಿ 'ವಂಶಿ' ಚಿತ್ರ ಮಾಡಿದ್ದರು. 'ಮಿಲನ' ಮಾಡಿದ್ದರು. ಅದ್ಭುತವಾದ ಸಿನಿಮಾ. ನಾವೆಲ್ಲಾ ಜೊತೆಗೇ ಇರ್ತೀವಿ. ಆಗ ನಮಗೆ ಅನಿಸಿದ್ದು, ನಮ್ಮ ಜೊತೆಯವರೇ ಇದ್ದರೆ, ನಮ್ಮ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆ. ನಮ್ಮ ಕುಟುಂಬಕ್ಕೆ ಘನತೆ ಇದೆ. ಎಲ್ಲೂ ಡಬಲ್ ಮೀನಿಂಗ್ ಡೈಲಾಗ್ಸ್ ಬಳಸಲ್ಲ. ಭಾಷೆ ಬಗ್ಗೆ ತುಂಬಾ ಗೌರವ ಇರಬೇಕು. ಸಂಸ್ಕೃತಿಯನ್ನ ಎತ್ತಿಹಿಡಿಯಬೇಕು. ಇದೆಲ್ಲಾ ಪ್ರಕಾಶ್ ಗೆ ಗೊತ್ತಿತ್ತು. ಮತ್ತು ವಿನಯ್ ಪ್ಲಸ್ ಮತ್ತು ಮೈನಸ್ ಪ್ರಕಾಶ್ ಗೆ ಗೊತ್ತು. ವಿನಯ್ ತುಂಬಾ ಸೈಲೆಂಟ್. ನಮ್ಮ ತಂದೆ ಅವನನ್ನ 'ಹಸು' ಅಂತಿದ್ರು. ''ಅಳುವುದೇ ಇಲ್ಲ ಕಂದ ಇವನು. ಹಸು ಸ್ವಭಾವ'' ಅನ್ನೋರು ಅಪ್ಪಾಜಿ. ಅದನ್ನ ಪ್ರಕಾಶ್ ನೋಡಿದ್ದರು. ಅವರು ಟೆನ್ಷನ್ ತೆಗೆದುಕೊಳ್ಳಲಿಲ್ಲ. ಹಾಗೆ ನೋಡಿದ್ದರೆ, ''ಮುಂಗಾರು ಮಳೆ ಚಿತ್ರ ನನಗೆ ದೊಡ್ಡ ಇನ್ಸ್ ಪಿರೇಷನ್''. ಒಳ್ಳೆ ಕಥೆ ಇತ್ತು. ಸಿನಿಮಾ ಹಿಟ್ ಆಯ್ತು. ಅಂತಹ ಒಳ್ಳೆಯ ಕಥೆಯನ್ನ ನಾವು ಕೊಡೋಣ ಅಂತ ಮಾಡಿದ್ವಿ. ಪ್ರಕಾಶ್ ಕೂಡ ಫ್ರೀ ಇದ್ದರು. ಕಾಲ ಕೂಡಿ ಬಂತು. 'ವಂಶಿ' ಚಿತ್ರದಲ್ಲಿ ರೌಡಿಸಂ ಟ್ರೈ ಮಾಡಿ ಸಕ್ಸಸ್ ಆಗಿದ್ದರು. ಇವರು ಏನು ಬೇಕಾದರೂ ಮಾಡುತ್ತಾರೆ ಅಂತ ನನಗೆ ನಂಬಿಕೆ ಇತ್ತು. ಪ್ರಕಾಶ್ ಇದ್ದ ಕಡೆ ಹಾಡುಗಳೂ ಚೆನ್ನಾಗಿರುತ್ತೆ ಅಂತ ನಂಬಿಕೆ ಇತ್ತು.

* 'ಸಿದ್ದಾರ್ಥ' ಕೂಡ ಮ್ಯೂಸಿಕಲ್ ಸಿನಿಮಾ.....
- ಹೌದು, 'ಸಿದ್ದಾರ್ಥ' ಕಾಲೇಜಿನ ಆರ್ಕೇಸ್ಟ್ರಾ ಸಿಂಗರ್. ಸೋ, ಸಂಗೀತದ ಬಗ್ಗೆ ತುಂಬಾ ಗಮನ ಹರಿಸಿದ್ವಿ. ಮ್ಯೂಸಿಕ್ಕೇ ಸಿನಿಮಾದ ಹೀರೋ. ವಿನಯ್ ನ ಫಿಕ್ಸ್ ಮಾಡಿದ ದಿವಸ, ಹರಿಕೃಷ್ಣ ಕೂಡ ಫಿಕ್ಸ್ ಮಾಡಿಬಿಟ್ವಿ. ಅವರು ಕೂಡ ಒಂದು ವರ್ಷ ನಮ್ಮ ಜೊತೆ ಕೆಲಸ ಮಾಡಿದ್ದರು. [ಪಾರ್ವತಮ್ಮ ಅವರಿಗೆ ಮೊಮ್ಮಗನ ಪ್ರೀತಿಯ ಉಡುಗೊರೆ]
'ಸಿದ್ದಾರ್ಥ' ಚಿತ್ರದ ಹೊರತಾಗಿ ರಾಘಣ್ಣ ತಮ್ಮ ಆರೋಗ್ಯದ ಕುರಿತು ಮಾತನಾಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಾಘಣ್ಣ ಈಗ ಹೇಗಿದ್ದಾರೆ? ಮುಂದೆ ಓದಿ.....


Click it and Unblock the Notifications











