ಹುಚ್ಚ ವೆಂಕಟ್ ಕೈಯಲ್ಲಿ ಪೆಟ್ಟು ತಿಂದ ರವಿ ಮುರೂರು ಏನಂದ್ರು?

By ಸುನೀತಾ ಗೌಡ

ನೇರ ನುಡಿಯ ವ್ಯಕ್ತಿತ್ವವನ್ನು ಹೊಂದಿರುವ ಸಿಂಗರ್ ರವಿ ಮುರೂರು ಅವರು ಮನೆಯ ಇತರ ಸದಸ್ಯರಿಗೆ ಅವಮಾನ ಆಗಬಾರದು, ಕಷ್ಟ ಆಗಬಾರದು ಎಂದು ವೆಂಕಟ್ ಅವರಿಗೆ ಎದುರು ಮಾತಾಡಿ ಹುಚ್ಚ ವೆಂಕಟ್ ಅವರಿಂದ ಎಲ್ಲ ವೀಕ್ಷಕರ ಎದುರಲ್ಲೇ ಸರಿಯಾಗಿ ಪೆಟ್ಟು ತಿಂದರು.

ಆದರೆ ನೇರ ವ್ಯಕ್ತಿತ್ವದ ಜೊತೆಗೆ ವಿಶಾಲ ಹೃದಯವಂತಿಕೆಯನ್ನು ಹೊಂದಿರುವ ಸಿಂಗರ್ ರವಿ ಮುರೂರು ಅವರು ವೆಂಕಟ್ ಹೊಡೆದ ಬಗ್ಗೆ ನಮ್ಮ ಬಳಿ ಹೇಳಿಕೊಂಡಿದ್ದಾರೆ. ರವಿ ಮುರೂರು ಅವರೊಂದಿಗೆ ಕನ್ನಡ ಫಿಲ್ಮಿಬೀಟ್ ನಡೆಸಿದ ಸಂದರ್ಶನದ ಮುಂದುವರಿದ ಭಾಗ ಇಲ್ಲಿದೆ ನೋಡಿ..['ಡ್ರಾಮಾ ಕ್ವೀನ್' ಕೃತಿಕಾಗೆ ರವಿ ಕೊಟ್ಟ ವಿಚಿತ್ರ ಶಿಕ್ಷೆ.!]

Ravi Muroor shares his experience Bigg Boss Kannada 3 with Filmibeat Kannada Part 2nd

* ಹುಚ್ಚ ವೆಂಕಟ್ ಅವರ ದಿಢೀರ್ ವರ್ತನೆಗೆ ನಿಮ್ಮ ಪ್ರತಿಕ್ರಿಯೆ ಏನು?

- ಏಟು ಬಿದ್ದಾಗಿದೆ ಇವಾಗ, ಅದು ಕ್ಯೂರ್ ಕೂಡ ಆಗಿದೆ. ಅಂತ ಗಟ್ಟಿ ಏಟೇನು ಹೊಡಿಲಿಲ್ಲ ಅವರು, ಆ ಟೈಮ್ ನಲ್ಲಿ ಹಾಗೆಲ್ಲ ಆಗಿ ಹೊಯಿತು, ಏನೋ ಕೆಟ್ಟ ಘಳಿಗೆ ಹೊಡೆದ್ರು, ಆದರೆ ಅವರಿಗೆ ಒಳ್ಳೆದಾಗ್ಲಿ ಅಂತ ಬಯಸ್ತೀನಿ, ತುಂಬಾ ಒಳ್ಳೆ ಮನುಷ್ಯ ಅವರು. ಬಾರತೀಯ ಸಂಸ್ಕ್ರತಿಯ ಬಗ್ಗೆ ತುಂಬಾ ಒಳ್ಳೆಯ ನಿಲುವಿದೆ ಅವರಿಗೆ.

ಆಮೇಲೆ ಅವರು ಯಾವಾಗ್ಲೂ ಹೇಳ್ತಾ ಇದ್ರು, 'ನಾವು ಬಿಸ್ಲೇರಿ ವಾಟರ್ ಕುಡಿತೀವಿ ಕಣೋ, ಆದರೆ ಅಲ್ಲಿ ನಮ್ಮ ದೇಶ ಕಾಯೋ ಸೈನಿಕರು ಗಾರ್ಬೆಜ್ ವಾಟರ್ ಕುಡಿಯೋದು, ನಾಲ್ಕೈದು ತಿಂಗಳು- ವರ್ಷಕ್ಕೊಂದು ಸಲ ಅಂತ ಅವರು ಮನೆಗೆ ಬರೋದಿಲ್ಲ. ನಾವು ಇಲ್ಲಿ ಬಂದು ಒಂದು ತಿಂಗಳಾಗದೆಯೇ ನಮಗೆ ಹೀಗಾಗುತ್ತಿದೆ. ಫಸ್ಟ್ ಅವರಿಗೆ ಸೆಲ್ಯೂಟ್ ಹೊಡಿಬೇಕು, ಎನ್ನುತ್ತಿದ್ದರು.[ಹುಚ್ಚ ವೆಂಕಟ್ ರಿಂದ ಹೊಡೆತ ತಿಂದ ರವಿ ಈ ಬಾರಿ ಔಟ್?]

ಜೊತೆಗೆ ಹೆಣ್ಣು ಮಕ್ಕಳಿಗೆ ಗೌರವ ಕೊಡ್ತಾ ಇದ್ರು. ಹೀಗೆ ಅವರಲ್ಲಿ ತುಂಬಾ ಒಳ್ಳೆಯ ಆಲೋಚನೆಗಳು ಕೂಡ ಇತ್ತು. ಏನೋ ಆಗಿ ಹೋಯ್ತು. ಅವರೂ ಕೂಡ ದ್ವೇಷದಿಂದ ಹೊಡೆದಿದ್ದಲ್ಲ, ಆ ಟೈಮ್ ಅದು ಈಗ ಅವರೂ ಮರೆತಿರಬಹುದು, ನಾನಂತೂ ಮರೆತಿದ್ದೇನೆ. ಅವರಿಗೆ ಒಳ್ಳೆದಾಗ್ಲಿ ಅಂತ ಹೇಳಬಲ್ಲೆ.

Ravi Muroor shares his experience Bigg Boss Kannada 3 with Filmibeat Kannada Part 2nd

* ನೀವು ಮೂರು ಬಾರಿ ನಾಮಿನೇಟ್ ಆದ್ರಿ, ಸೋ ನಿಮ್ಮನ್ನೇ ಎಲ್ಲರೂ ಟಾರ್ಗೆಟ್ ಮಾಡಿದ್ರು ಅಂತ ನಿಮಗೇನಾದ್ರೂ ಅನಿಸಿತಾ?

- ಇಲ್ಲ, ಮೊದಲು ನಾವು ಬಿಗ್ ಬಾಸ್ ಮನೆಗೆ ಎಂಟ್ರಿ ಅಗುವಾಗ್ಲೇ ನಾಮಿನೇಶನ್ ಶುರುವಾಗಿತ್ತು. ಸರಿಯಾದ ಕಾರಣಗಳೇ ಇರ್ಲಿಲ್ಲಾ, ಯಾರಿಗೆ ಯಾರನ್ನ ನಾಮಿನೇಟ್ ಮಾಡೋದು ಅಂತ. ಎಲ್ಲಾ ರೀತಿಯಲ್ಲಿ ನೋಡಬೇಕು ಅಂದ್ರೆ, ನಾನು ಸ್ವಲ್ಪ ಮೀಡಿಯಾದಿಂದ ದೂರಾನೇ ಇದ್ದೆ. ಉಳಿದವರೆಲ್ಲ ಮೀಡಿಯಾದಲ್ಲೇ ಇದ್ದವರಲ್ವಾ ಸೋ ಅದು ಒಂದು ಕಾರಣ ಆಗಿರಬಹುದು. ರವಿ ಮುರೂರು ಗೊತ್ತಿಲ್ಲ ಅಂತಾನೇ ಮೊದಲನೇ ವಾರ ನಾಮಿನೇಟ್ ಆದೆ. ಮೊದಲನೇ ವಾರನೇ ನಾನು ಮನೆಯಿಂದ ಆಚೆ ಬರೋದು ಅವಮಾನ ಅಂತ ಅನ್ಕೊಂಡೆ.

ಆದರೆ ದೇವರ ದಯೆಯಿಂದ ಹಾಗೆ ಆಗ್ಲಿಲ್ಲ. ಕರ್ನಾಟಕದ ಜನ ವೋಟ್ ಮಾಡಿ ನನ್ನನ್ನು ಉಳಿಸಿಕೊಂಡ್ರು. ಎರಡನೇ ವಾರ ನಾಮಿನೇಟ್ ಆಗಿಲ್ಲ, ಇನ್ನು ನನಗೆ ಈಚೆ ಬರಬೇಕು ಅಂತ ಅನ್ನಿಸ್ತಾ ಇತ್ತು. ಅವಾಗ ನಾನು ಸುಮ್ಮನೆ ತಮಾಷೆ ಮಾಡ್ತಾ ಇದ್ದೆ. ನಾನು ಹೋಗಬೇಕಪ್ಪ, ನನಗೆ ಸಾಕು, ನಾನು ಹೋಗಬೇಕು, ಹೋಗಬೇಕು ಅಂತ ಇದ್ದೆ ಅದು ಒಂದು ಕಾರಣ ಇರಬಹುದು ನಾನು ನಾಮಿನೇಟ್ ಆಗೋಕೆ.['ಡ್ರಾಮಾ ಕ್ವೀನ್' ಕೃತಿಕಾಗೆ ರವಿ ಕೊಟ್ಟ ವಿಚಿತ್ರ ಶಿಕ್ಷೆ.!]

Ravi Muroor shares his experience Bigg Boss Kannada 3 with Filmibeat Kannada Part 2nd

ಆಮೇಲೆ ನಾಲ್ಕನೇ ವಾರ ನಾನು ಹೋಗಲ್ಲಪ್ಪ ಇಲ್ಲೇ ಇರ್ತೀನಿ ಅಂತ ಇದ್ದೆ. ಅದನ್ನು ಜನ ತಮಾಷೆ ಅಂತ ತಿಳ್ಕೊಂಡ್ರೇನು, ಒಮ್ಮೆ ಇವನನ್ನ ಮನೆಯಿಂದ ಆಚೆ ಹಾಕ್ಬೇಕು ಅಂತ ಅಂದುಕೊಂಡಿರಬಹುದ. ಅದು ಕೂಡ ಕಾರಣ ಇರಬಹುದು. ಸೋ ಮೂರು ಸಾರಿ ನಾಮಿನೇಟ್ ಆಗಿ, ಆಗಿ, ಮೂರನೇ ಬಾರಿ ಈಚೆ ಬಂದೆ.

* ನಿಮಗೆ ಒಳಗೊಂದು ಹೊರಗೊಂದು ಅಂತ ಟ್ಯಾಗ್ ಸಿಗ್ತಲ್ವಾ, ಆದರೆ ನಿಜವಾಗಿ ಮನೆಯಲ್ಲಿ ಆ ತರ ಸ್ವಭಾವ ಇರೋ ವ್ಯಕ್ತಿ ಯಾರು ಅಂತ ನಿಮಗನ್ನಿಸುತ್ತೆ.

- ಆನಂದ್ ಮತ್ತು ನಾನು ಆ ವಿಷ್ಯಾನಾ ಆವತ್ತೇ ಮಾತಾಡ್ಕೊಂಡಿದ್ದೀವಿ, ನಾನು ಒಳಗೊಂದು ಹೊರಗೊಂದು ವಿಷ್ಯಕ್ಕೆ ಕ್ಲ್ಯಾರಿಫಿಕೇಶನ್ ಕೊಟ್ಟಿದ್ದು, ಏನಪ್ಪಾ ಅಂದ್ರೆ, ನನಗೆ ಸಿಕ್ಕಾಪಟ್ಟೆ ಕೋಪ ಬರುತ್ತೆ, ಅದು ಒಳಗೊಂದು, ಆದ್ರೆ ಕೋಪ ಬಂದ್ರು ಕೂಡ ಸುಮ್ಮನೆ ಜಗಳ ಮಾಡಿ, ಮುಖ ಉದಿಸಿಕೊಳ್ಳೋಕೆ ನನಗೆ ಇಷ್ಟ ಇಲ್ಲ. ಆದ್ರಿಂದ ತಮಾಷೆ ಮಾಡಿ ಎಲ್ಲವನ್ನು ಸರಿ ಮಾಡ್ತಾ ಇದ್ದೆ, ಅದು ಹೊರಗೊಂದು ಇರಬಹುದು.

ಸೋ ಇದು ಬೇರೆಯವರಿಗೆ ಒಳಗೊಂದು ಹೊರಗೊಂದು ಅಂತ ಆಗಬಹುದು. ಆದರೆ ನನಗನ್ನಿಸುತ್ತೆ, ತುಂಬಾ ಓವರ್ ಆಕ್ಟಿಂಗ್ ಮಾಡ್ಕೊಂಡು, ನಾವು ಏನು ಅದನ್ನು ಹೊರಗಡೆ ಜಗತ್ತಿಗೆ ತೋರಿಸದೆ ಬೇರೇನೋ ತೋರಿಸೋದು, ಈ ಸ್ವಭಾವಕ್ಕೆ ಕೃತಿಕಾ ತುಂಬಾ ಬೆಟರ್ ಅಂತ ಅನಿಸುತ್ತೆ ನಂ ಒನ್ ಸ್ಥಾನದಲ್ಲಿದ್ದಾರೆ ಅವರು.

* ನಿಮ್ಮ ಪ್ರಕಾರ ಈ ಬಾರಿ ಬಿಗ್ ಬಾಸ್ ನಲ್ಲಿ ಯಾರು ಗೆಲ್ಲಬಹುದು?

- ಮಾಸ್ಟರ್ ಆನಂದ್ ನನ್ನ ಜೀವದ ಗೆಳೆಯ ಅವನು ಎಲ್ಲಾ ಟಾಸ್ಕ್ ಗಳನ್ನು ತುಂಬಾ ಚೆನ್ನಾಗಿ ನಿಭಾಯಿಸ್ತಾನೆ ಸೋ ಅವನೇ ಗೆಲ್ಲಬೇಕು. ಅವನೇ ಗೆಲ್ತಾನೇ.

More from Filmibeat

English summary
Singer Ravi Muroor shares his experience about Bigg Boss kannada 3. Singer Ravi Muroor fter exti 'Bigg Boss kannada 3' and Shared her experience with Filmibeat Kannada. Here is the Interview.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X