For Quick Alerts
  ALLOW NOTIFICATIONS  
  For Daily Alerts

  ರವಿ ಮುರೂರು ಅವರಿಗೆ ವೆಂಕಟ್ ಮೇಲೆ ಕೋಪ ಬಂದಿದ್ದಾದರೂ ಯಾಕೆ?

  By ಸುನೀತಾ ಗೌಡ
  |

  ಸತತ 7 ವರ್ಷಗಳಿಂದ ಹಿಂದುಸ್ತಾನ ಸಂಗೀತ, 5 ವರ್ಷ ಸುಗಮ ಸಂಗೀತ, ಖ್ಯಾತ ಸಂಗೀತಗಾರ ಸಿ ಅಶ್ವಥ್ ಅವರ ಜೊತೆ ಸುಮಾರು 6 ವರ್ಷ ಸಹ ಗಾಯಕರಾಗಿ ಕೆಲಸ ಮಾಡಿದ ಅನುಭವ.

  ಜೊತೆಗೆ 2015 ರಲ್ಲಿ ಅತ್ಯುತ್ತಮ ರಂಗಭೂಮಿ ಸಂಗೀತ ನಿರ್ದೇಶಕ ಪ್ರಶಸ್ತಿ ಮುಡಿಗೇರಿಸಿಕೊಂಡು ಸಂಗೀತ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುತ್ತಿರುವ ಖ್ಯಾತ ಸಂಗೀತಗಾರ ರವಿ ಮುರೂರು ಅವರು ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ 3' ರಲ್ಲಿ ಸ್ಪರ್ಧಾರ್ಥಿಯಾಗಿ ನಾಲ್ಕನೇ ವಾರದಲ್ಲಿ ಎಲಿಮಿನೇಟ್ ಆಗಿದ್ದಾರೆ.

  ಇದೀಗ ಬಿಗ್ ಬಾಸ್ ಮನೆಯಲ್ಲಿ ಸತತ ನಾಲ್ಕು ವಾರಗಳಲ್ಲಿ ಕಳೆದ ಕ್ಷಣಗಳನ್ನು ಮಲೆನಾಡಿನ ಸಂಗೀತಗಾರ ರವಿ ಮುರೂರು ಅವರು ನಿಮ್ಮ ಫಿಲ್ಮಿಬೀಟ್ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ.[ಕೆಣಕಿದ ರವಿಗೆ ಮೊದಲೇ ವಾರ್ನಿಂಗ್ ಕೊಟ್ಟಿದ್ದ ಹುಚ್ಚ ವೆಂಕಟ್.!]

  ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ ಹೆಸರು ಗಳಿಸಿರುವ ಹಾಡುಗಾರ ರವಿ ಮುರೂರು ಅವರ ಜೊತೆ ಫಿಲ್ಮಿಬೀಟ್ ಕನ್ನಡ ನಡೆಸಿರುವ ಚಿಟ್ ಚಾಟ್ ಇಲ್ಲಿದೆ ನೋಡಿ..

  * ಬಿಗ್ ಬಾಸ್ ಮನೆಯಲ್ಲಿ ನಿಮ್ಮ ಅನುಭವ ಹೇಗಿತ್ತು?

  - 4 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ನನಗೆ ತುಂಬಾನೇ ಅನುಭವಗಳಾಯಿತು. ಅಲ್ಲಿನ ಜೀವನ ಒಂಥರಾ ವಿಭಿನ್ನವಾಗಿತ್ತು, ಮೊದಲು ಮನೆ ಒಳಗೆ ಹೋದಾಗ ಸ್ವಲ್ಪ ಕಷ್ಟ ಆಯ್ತು. ಒಂದು ಫೋನ್ ಇಲ್ಲ, ಅಲ್ಲಿದ್ದ 15 ಜನ ಬಿಟ್ರೆ, ಬೇರೆ ಯಾರ ಮುಖ ನೋಡುವ ಹಾಗಿಲ್ಲ. ಸ್ವಲ್ಪ ಕಿರಿಕಿರಿ ಅಂತ ಅನ್ನಿಸಿತ್ತು. ಮತ್ತೆ ಸ್ವಲ್ಪ ದಿನ ಹೋದ ಮೇಲೆ ಎಲ್ಲಾ ಸರಿ ಆಗ್ತಾ ಬಂತು. ಮತ್ತೆ ನಾನು ಬಿಗ್ ಬಾಸ್ ಮನೆಯಲ್ಲಿ ತುಂಬಾ ವಿಷಯಗಳನ್ನು ಕಲಿತುಕೊಂಡೆ ಎಲ್ಲರ ಜೊತೆ ಹೇಗೆ ಬೆರೆಯಬಹುದು, ಅನ್ನೋದನ್ನ ತಿಳ್ಕೊಂಡೆ. ಒಟ್ಟಾರೆ ಹೇಳಬೇಕು ಅಂದ್ರೆ, ವಂಡರ್ ಫುಲ್ ಅನುಭವ.

  * ಬಿಗ್ ಬಾಸ್ ಮನೆಗೆ ಬರೋಕೆ ನಿಮಗೆ ಆಫರ್ ಸಿಕ್ಕಿದ್ದು ಹೇಗೆ?

  - ಕಲರ್ಸ್ ಕನ್ನಡ ಚಾನಲ್ ನ ಪರಮೇಶ್ವರ್ ಸರ್ ನನಗೆ ಫಸ್ಟ್ ಕಾಲ್ ಮಾಡಿ ನೀವು ಬಿಗ್ ಬಾಸ್ ಮನೆಗೆ ಬರ್ಬೇಕು ಅಂದಾಗ ನನಗೆ ಆಶ್ಚರ್ಯ ಆಯ್ತು. ನಾನು ಸೆಲೆಬ್ರಿಟಿ ಅಲ್ಲ ಒಬ್ಬ ಸಾಮಾನ್ಯ ಸಂಗೀತಗಾರ ಆದ್ರೆ ಬಿಗ್ ಬಾಸ್ ಮನೆಗೆ ಹೋಗೋದು ಅಂದ್ರೆ, ಏನಪ್ಪಾ ಅಂತ ಯೋಚನೆ ಮಾಡ್ತಾ ಇದ್ದೆ. ಆವಾಗ ಪರಮ್ ಸರ್ ತುಂಬಾ ಒತ್ತಾಯ ಮಾಡಿದ್ರು. ನಿಮಗೆ ಒಳ್ಳೆ ಅವಕಾಶ ಇದೆ. ಆಮೇಲೆ ನೀವು ಬಿಗ್ ಬಾಸ್ ಮನೆಗೆ ಬಂದ್ರೆ ನಿಮಗೆ ಒಳ್ಳೆ ರೀತಿಯ ಪಬ್ಲಿಸಿಟಿ ಸಿಗುತ್ತೆ, ಚಾನ್ಸ್ ಮಿಸ್ ಮಾಡ್ಕೋಬೇಡಿ ಅಂದ್ರು.['ಬಿಗ್ ಬಾಸ್' ಮನೆಯಿಂದ ರವಿ ಮುರೂರು ಔಟ್ ಆಗಿದ್ದು ಒಳ್ಳೇದಾಯ್ತು.!]

  ಆದಾದ ಮೇಲೆ ನನ್ನ ಫ್ರೆಂಡ್, ತುಂಬಾ ಹತ್ತಿರದವರು, ನನ್ನ ಕುಚಿಕು ಗೆಳೆಯ ಪ್ರದೀಪ್ ಅವರು ನೀನು ಬಿಗ್ ಬಾಸ್ ಮನೆಗೆ ಹೋಗ್ಲೇಬೇಕು ಅಂತ ಹಠ ಮಾಡಿದ್ರು, ಸೋ ಅವರ ಸಪೋರ್ಟ್ ನಿಂದ ನಾನು ಬಿಗ್ ಬಾಸ್ ಮನೆಗೆ ಹೋದೆ. ನನಗೆ ಈ ಥರ ಒಂದು ಅವಕಾಶ ಕೊಟ್ಟದ್ದಕ್ಕೆ, ನಾನು ಕಲರ್ಸ್ ಕನ್ನಡ ಚಾನಲ್ ನವರಿಗೆ ತುಂಬಾ ಧನ್ಯವಾದ ಸಲ್ಲಿಸುತ್ತೇನೆ.

  * ಹುಚ್ಚ ವೆಂಕಟ್‌ ಅವರು ಆ ತರ ಸ್ವಭಾವದ ವ್ಯಕ್ತಿ ಎಂದು ತಿಳಿದಿದ್ದರೂ ಕೂಡ ನೀವು ಯಾಕೆ ಅವರ ವಿರುದ್ಧ ಮಾತನಾಡಿದ್ದು?

  - ನಾನು ಮೊದಲೇ ಹೇಳಿದ್ದೀನಿ, ನಾನು ತುಂಬಾ ನೇರವಾದಿ ಅಂತ, ನಾನು ತಪ್ಪು ಮಾಡಿದ್ರು ಕ್ಷಮೆ ಕೇಳ್ತೀನಿ. ಬೇರೆಯವರು ತಪ್ಪು ಮಾಡಿದಾಗ್ಲೂ ನಾನು ನೇರವಾಗಿ ಹೇಳ್ತಾ ಇದ್ದೆ. ವೆಂಕಟ್ ಅವರು ಸರಿಯಾಗಿ ಟಾಸ್ಕ್ ಮಾಡ್ತಾ ಇರ್ಲಿಲ್ಲಾ. ಇದರಿಂದ ಅಲ್ಲಿರುವ 14 ಜನಕ್ಕೆ ತೊಂದರೆಯಾಗೋದು. ಬೇರೆ ಯಾರು ಅವರ ಬಗ್ಗೆ ಮಾತಾಡ್ತಾ ಇರ್ಲಿಲ್ಲಾ. ಆದ್ರೆ ನನಗೆ ಅದನ್ನು ನೋಡ್ಕೊಂಡು ಸುಮ್ಮನೆ ಇರಕ್ಕೆ ಆಗ್ತಾ ಇರ್ಲಿಲ್ಲ.['ಬಿಗ್ ಬಾಸ್' ಮನೆಯಿಂದ ಗಾಯಕ ರವಿ ಮುರೂರು ಔಟ್.!]

  ನಾನು ಎರಡು ಸಲ ವೆಂಕಟ್ ಅವರಿಗೆ ಹೇಳಿದ್ದೀನಿ. ಮೊದಲನೇ ಸಲ ಕೂಡ ಹೇಳಿದ್ದೀನಿ. ಆದ್ರೆ ನಾನು ಮೊದಲನೇ ಬಾರಿ ಹೇಳಿದ್ದು ಸ್ಪಲ್ಪ ರಫ್ ಆಗಿ ಇತ್ತೇನೋ. ಶಾಂತಿ ಕಾಂತಿ ಟಾಸ್ಕ್ ನಲ್ಲೂ ಹಾಗೆ ಆಯ್ತು. ಆಮೇಲೆ, ಆದಾದ್ಮೇಲೆ ಮಾಸ್ಟರ್ ಆನಂದ್ ಅವರು ವೆಂಕಟ್ ಅವರಿಂದಾಗಿ ಶಿಕ್ಷೆ ಅನುಭವಿಸುವಂತಾಯಿತು.

  ಮಾಸ್ಟರ್ ಅನಂದ್ ಅವರು ನನ್ನ ಗೆಳೆಯ ಆಗಿರೋದ್ರಿಂದ, ನೋಡಿ ನೀವು ಮಾಡ್ತಾ ಇರೋದು ತಪ್ಪು.ಹೀಗೆ ಮಾಡ್ಬೇಡಿ ಅಂತ ಅಂದಿದ್ದೆ. ಈಗ ಒಬ್ಬರಿಂದಾಗಿ 14 ಜನ ಶಿಕ್ಷೆ ಅನುಭವಿಸೋದು ತಪ್ಪಲ್ವಾ, ತಪ್ಪೇ ಅದು. ಅದಕ್ಕೆ ನಾನು ಅವರಿಗೆ ಹೇಳಿದೆ. ಅದರೆ ಅದೇನೋ ನನ್ನ ಕೆಟ್ಟ ಘಳಿಗೆನೋ ಏನೋ ನನ್ನ ಕೆನ್ನೆಗೊಂದು ಏಟು ಬಿತ್ತು. ಇಷ್ಟೆಲ್ಲಾ ನಡೆದು ಹೋಯಿತು.

  ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಸಂಗೀತಗಾರ ರವಿ ಮುರೂರು ಅವರೊಂದಿಗೆ ನಡೆಸಿದ ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ..

  English summary
  Singer Ravi Muroor shares his experience about Bigg Boss kannada 3. Singer Ravi Muroor fter exti 'Bigg Boss kannada 3' and Shared her experience with Filmibeat Kannada. Here is the Interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X