ಕ್ರೇಜಿ ಹೀರೊಯಿನ್ ಅಪೂರ್ವಗೆ ಬಾಡಿ ಬಿಲ್ಡರ್ ಅಂದ್ರೆ ಭಯ: ಪುರುಷೋತ್ತಮನೊಂದಿಗೆ ನಟಿಸಿದ್ದೇಗೆ?
ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾ ಪ್ರಯೋಗಾತ್ಮಕ ಸಿನಿಮಾ ಮಾಡುವುದರಲ್ಲಿ ಸದಾ ಮುಂದು. ಪ್ರತಿ ಸಿನಿಮಾದಲ್ಲೂ ಏನಾದರೂ ಒಂದು ಎಕ್ಸ್‌ಪೆರಿಮೆಂಟ್ ಮಾಡುತ್ತಲೇ ಇರುತ್ತಾರೆ. ಇಂತಹ ಒಂದು ಸಿನಿಮಾ 'ಅಪೂರ್ವ'. ವಿಶೇಷ ಅಂದರೆ, ಈ ಸಿನಿಮಾದ ನಾಯಕಿ ಹೆಸರು ಕೂಡ ಅಪೂರ್ವ. ಕ್ರೇಜಿಸ್ಟಾರ್ ಅಂತಹ ದಿಗ್ಗಜನೊಂದಿಗೆ ನಟಿಸಿದ ಬಳಿಕ ಅಪೂರ್ವ ಸ್ವಲ್ಪ ದಿನ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಅಷ್ಟಕ್ಕೂ ಅಪೂರ್ವ ಕಣ್ಮರೆಯಾಗಲು ಏನು ಕಾರಣ?
ಒಂದಿಷ್ಟು ದಿನ ಗಾಯಬ್ ಆಗಿದ್ದ ಅಪೂರ್ವ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಈಗ ಇವರ ಹೊಸ ಸಿನಿಮಾ 'ಪುರುಷೋತ್ತಮ' ಬಿಡುಗಡೆಗೆ ಸಜ್ಜಾಗಿದೆ. ಆದರೆ, ಗ್ಲಾಮರ್ ರೋಲ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟಿ ಸಾಮಾನ್ಯ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬಾಡಿ ಬಿಲ್ಡರ್ ಅಂದರೆ ಭಯ ಪಡುವ ನಟಿ, ಜಿಮ್ ರವಿಯೊಂದಿಗೆ ನಟಿಸಿರೋದು ಅಚ್ಚರಿ. ಈ ಎಲ್ಲಾ ವಿಷಯದ ಬಗ್ಗೆ ಅಪೂರ್ವ ಫಿಲ್ಮಿ ಬೀಟ್ ಜೊತೆ ಮಾತನಾಡಿದ್ದಾರೆ.

'ಪುರುಷೋತ್ತಮ' ಸಿನಿಮಾದಲ್ಲಿ ನಟಿಸಿದ್ದೇಕೆ?
" ಈ ಸಿನಿಮಾದ ಕಥೆ ಹೇಳಿದಾಗ ನನಗೆ ಈ ಪಾತ್ರಕ್ಕೆ ನ್ಯಾಯ ಒದಗಿಸಲೇ ಬೇಕು ಅಂತ ಅನಿಸಿತ್ತು. ಪಾತ್ರ ತುಂಬಾನೇ ಸ್ಟ್ರಾಂಗ್ ಇದೆ. ಇಷ್ಟು ದೊಡ್ಡ ಪಾತ್ರವನ್ನು ನಾನು ಹಿಂದೆ ಮಾಡಿಲ್ಲ. ನಾನು ನಾಯಕಿ ಪ್ರದಾನ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಆರಂಭದಲ್ಲಿ ನನಗೆ ಇದು ಕಷ್ಟ ಅಂತ ಅನಿಸಿತ್ತು. ಆಗ ಎಲ್ಲಾ ಒಪ್ಪಿಸಿದರು. ನನಗೆ ನಾನೇ ಸವಾಲು ತೆಗೆದುಕೊಂಡಿದೆ. ನಾನು ಈ ಸಿನಿಮಾಗಾಗಿ ದಪ್ಪ ಆಗಬೇಕಿತ್ತು. ಕ್ಯಾರೆಕ್ಟರ್ ತುಂಬಾನೇ ರಗಡ್ ಆಗಿದೆ. ಈ ಪಾತ್ರ ಒಂದು ಹುಡುಗಿ ಮೇಲಾಗಿರೋ ಶೋಷಣೆ ವಿರುದ್ಧ ನಡೆದಿರೋ ಸಿನಿಮಾ. ಅವಳಿಗೆ ಆಗಿರುವ ಅನ್ಯಾಯವೇನು? ಅದರ ವಿರುದ್ಧ ಹೇಗೆ ತಿರುಗಿ ಬೀಳುತ್ತಾಳೆ ಎನ್ನುವುದೇ ಕಥೆ."

ಜಿಮ್ ರವಿ ಸಿನಿಮಾ ಒಪ್ಪಿದ್ದೇಕೆ?
"ನಾನು ಕೃಷ್ಣ ಟಾಕೀಸ್ ಮಾಡುವಾಗ ಜಿಮ್ ರವಿಯವರೊಂದಿಗೆ ಸಿನಿಮಾ ಅಂದಾಗ, ಆರಂಭದಲ್ಲಿ ನಾನು ಬೇಡಾ ಅಂತ ಹೇಳಿದ್ದೆ. ಆದರೆ ಕಥೆ ಹೇಳಿದಾಗ, ಇಲ್ಲಿ ಕಥೆನೇ ಸ್ಟ್ರಾಂಗ್ ಆಗಿರುವುದರಿಂದ ಅದನ್ನೆಲ್ಲಾ ನಾನು ಯೋಚನೆನೇ ಮಾಡಿಲ್ಲ. ಅವರು ಮೊದಲ ಬಾರಿಗೆ ಹೀರೊ ಆಗಿ ಲಾಂಚ್ ಆಗುತ್ತಿದ್ದಾರೆ. ಆ ಕ್ರೆಡಿಟ್ ಕೂಡ ನಮಗೆ ಸಿಗುತ್ತೆ. ಕಥೆ ನನಗೆ ತುಂಬಾನೇ ಇಷ್ಟ ಆಯ್ತು. ಅದಕ್ಕೆ ಜಿಮ್ ರವಿಯವರೊಂದಿಗೆ ಸಿನಿಮಾ ಮಾಡಲು ಒಪ್ಪಿದೆ."

ಬಾಡಿ ಬಿಲ್ಡರ್ ಅಂದ್ರೆ ಭಯ ಯಾಕೆ?
"ನಮ್ಮ ಅಮ್ಮ ಚಿಕ್ಕವರಿಂದಲೂ ನನಗೆ ಹೆದರಿಸುತ್ತಿದ್ದರು. ಅದ್ಯಾಕೋ ಗೊತ್ತಿಲ್ಲ. ಆ ಭಯ ಅಳುಕು ಯಾವಾಗಲೂ ಇರುತ್ತಿತ್ತು. ಅವರೂ ಬಾಡಿ ಬಿಲ್ಡರ್ ಬೇರೆ. ಅದಕ್ಕೆ ಭಯವಿತ್ತು. ಅವರು ನಿಜಕ್ಕೂ ನಮ್ಮ ಕರ್ನಾಟಕದ ಹೆಮ್ಮೆ. ಅವರು ಈ ಸಿನಿಮಾ ಮಾಡಿದ್ದು ನಿನಗೋಸ್ಕರ. ಈ ಕಥೆ ನಿನಗೆ ಸೂಟ್ ಆಗಿದೆ ಅಂತ ಹೇಳುತ್ತಿರುತ್ತಾರೆ. ಇಡೀ ಕಥೆ ನನ್ನ ಮೇಲೆನೇ ಸಾಗಿದ್ದರಿಂದ ನಟನೆಗೆ ಹೆಚ್ಚು ಸ್ಪೇಸ್ ಸಿಕ್ಕಿದೆ."

ನಿಮ್ಮ ಸಿನಿಮಾ ಗ್ರಾಫ್ ಹೇಗಿದೆ?
"ನನ್ನ ಮೊದಲ ಸಿನಿಮಾ ಲೆಜೆಂಡ್ ಜೊತೆನೇ. ಎರಡನೆ ಸಿನಿಮಾನೂ ಶರಣ್ ಸರ್ ಹಾಗೂ ಅಜಯ್ ಸರ್ ಜೊತೆನೇ ನಡೀತು. ಈಗ ಶಶಿಕುಮಾರ್ ಮಗನೊಂದಿಗೆ ಸಿನಿಮಾ ನಡೆಯುತ್ತಿದೆ. ನನ್ನ ಮೊದಲ ಸಿನಿಮಾದಲ್ಲಿ ನನಗೆ ಏನೂ ಗೊತ್ತಿರಲಿಲ್ಲ. ಚಿಕ್ಕ ಹುಡುಗಿಯಾಗಿ ಆಕ್ಟಿಂಗ್ ಗೊತ್ತಿಲ್ಲದೆ ನಾನು ನಟಿಸಿದ್ದೆ. ಎರಡನೇ ಸಿನಿಮಾ 'ವಿಕ್ಟರಿ 2' ಸ್ವಲ್ಪ ಗ್ಲಾಮರ್ ಆಗಿತ್ತು. ಅದಾದ ಬಳಿಕ ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದೆ. ಶಶಿಕುಮಾರ್ ಅವರ ಮಗನೊಂದಿಗೆ ನಟಿಸುತ್ತಿರುವ ಸಿನಿಮಾ ಕೂಡ ಪಕ್ಕಾ ಹಳ್ಳಿ ಹುಡುಗಿ ಪಾತ್ರ. 'ಪುರುಷೋತ್ತಮ' ಸಿನಿಮಾದಲ್ಲಿ ಗೃಹಿಣಿಯಾಗಿ ನಟಿಸಿದ್ದೀನಿ. ಎಲ್ಲಾ ಸಿನಿಮಾನೂ ಬೇರೆ ಬೇರೆ ರೀತಿ ಇದೆ."

ಮೊದಲ ಸಿನಿಮಾ ಬಳಿಕ ಕಾಣಿಯಾಗಿದ್ದೇಕೆ?
"ಅಪೂರ್ವ ಸಿನಿಮಾ ಮಾಡುವಾಗ ನನ್ನ ಓದು ಅರ್ಧಕ್ಕೆ ನಿಂತಿತ್ತು. ಆದರೆ ನಮ್ಮ ಅಮ್ಮ ಓದು ಮುಂದುವರೆಸಬೇಕು ಅಂತ ಹೇಳಿದ್ರು. ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಬರುವುದು ಸರಿಯಿರಲ್ಲ ಎಂದು ಹೇಳಿದ್ದರು. ಅದಕ್ಕೆ ಮತ್ತೆ ಮೈಸೂರಿಗೆ ಹೋಗಿ ಬಿಕಾಂ ಮುಗಿಸಿದೆ. ಮತ್ತೆ ಅಪೂರ್ವ ಸಿನಿಮಾ ಮುಗಿದಗಲೂ ನನಗೆ ಸಿನಿಮಾ ಕಾಂಟೆಕ್ಟ್ಸ್ ಯಾವುದೂ ಇರಲಿಲ್ಲ. ನಾನು ಆಗಿನ್ನೂ ಚಿಕ್ಕ ಹುಡುಗಿ. ನನಗೆ ಹೇಗೆ ಕಾಂಟೆಕ್ಟ್ ಮಾಡಬೇಕು ಅನ್ನೋದು ಗೊತ್ತಿರಲಿಲ್ಲ. ಹೀಗಾಗಿ ಓದು ಮುಂದುವರೆಸಿದ್ದೆ. ಆಗ ವಿಕ್ಟರಿ 2ಗೆ ಅವಕಾಶ ಸಿಕ್ಕಿತ್ತು."

ಕ್ರೇಜಿ ಕಣ್ಣಿಗೆ ನೀವು ಬಿದ್ದಿದ್ದೇಗೆ?
" ನನ್ನ ನಾಲ್ಕು ಸ್ನೇಹಿತೆಯರು ಅವರ ಫೋಟೊಗಳೊಂದಿಗೆ ನನ್ನ ಫೋಟೊವನ್ನೂ ರವಿ ಸರ್ ಮೇಲ್ ಐಡಿಗೆ ಕಳುಹಿಸಿದ್ದರು. ರವಿ ಸರ್ ಅವರ ಮ್ಯಾನೇಜರ್‌ಗೆ ಹೇಳಿ ನನ್ನ ಫೋಟೊವನ್ನು ಸೆಲೆಕ್ಟ್ ಮಾಡಿದ್ದರು. ಆಗ ಅವರ ಮ್ಯಾನೇಜರ್ ಫೋನ್ ಮಾಡಿ, ಆಡಿಷನ್ ಇದೆ ಎಂದಿದ್ದರು. ಮೊದಲನೇ ದಿನ ನನಗ ಆಡಿಷನ್ ಮಾಡಿದ್ರು. ಮೊದಲ ಶಾರ್ಟ್ ಡ್ರೆಸ್ ಎಲ್ಲಾ ಹಾಕಿ ಫೋಟೊಶೂಟ್ ಮಾಡಿಸಿದ್ರು. ಆಗ ನನಗೆ ಏನೂ ಗೊತ್ತಿರಲಿಲ್ಲ. ಆಕ್ಟಿಂಗ್ ಗೊತ್ತಿರಲಿಲ್ಲ. ಆಗ ರವಿ ಇನ್ನೂ ಚಿಕ್ಕವಳು ಇದ್ದಾಳೆ. ಇನ್ನೂ ಮೋಲ್ಡ್ ಆಗಬೇಕು ಅಂತ ಕಳುಹಿಸಿದ್ದರು. ಸಿನಿಮಾ ನಮಗೆ ಆಗೋದಿಲ್ಲ ಅಂತ ಸುಮ್ಮನಾಗಿದ್ದೆ. ಮತ್ತೆ 6 ತಿಂಗಳು ಆದ ಮೇಲೆ ಫೋನ್ ಬಂದಿತ್ತು. ಅವರ ಮನೆಯಲ್ಲಿಯೇ ಆಡಿಷನ್ ಮಾಡಿದ್ರು. ಅವತ್ತೆ ಸಿನಿಮಾಗೆ ಸೆಲೆಕ್ಟ್ ಆದೆ. ಅಡ್ವಾನ್ಸ್ ಕೊಟ್ಟು ನೀನೇ ನಮ್ಮ ಸಿನಿಮಾದ ಹೀರೋಯಿನ್ ಎಂದಿದ್ರು.
Recommended Video


ನಿರ್ದೇಶಕಿನೂ ಆಗಿದ್ದೀರಾ.. ಮುಂದೇನು?
"ಈ ನಿರ್ದೇಶನ ಕೂಡ ಮಾಡಿದ್ದೇನೆ. ಓ ನನ್ನ ಚೇತನ ಅನ್ನುವ ಸಿನಿಮಾ ಮಾಡಿದ್ದೇನೆ. ಇದು ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅವಾರ್ಡ್ ಕೂಡ ಗೆದ್ದಿದೆ. ಆ ಕಡೆ ಹೆಚ್ಚು ಗಮನ ಹರಿಸುತ್ತಿದ್ದೇನೆ. ನಾನು ಈಗ ಎರಡು ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಆ ಸಿನಿಮಾವನ್ನು ಇನ್ನೂ ಅನೌನ್ಸ್ ಮಾಡಿಲ್ಲ. ಪುರುಷೋತ್ತಮ ಹಾಗೂ ಪೆಂಟಗನ್ ಈ ಎರಡು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ."


Click it and Unblock the Notifications











