ಸ್ಯಾಂಡಲ್‌ವುಡ್‌ಗೆ ಶೀತಲ್ ಶೆಟ್ಟಿ ಕಮ್‌ಬ್ಯಾಕ್: ಶಿವಣ್ಣನ ಪುತ್ರಿ ನಿವೇದಿತಾ ನಿರ್ಮಾಪಕಿ

ಕಿರುತೆರೆಯಲ್ಲಿ ನಿರೂಪಕಿಯಾಗಿ, ನಿರ್ದೇಶಕಿಯಾಗಿ ಶೀತಲ್ ಶೆಟ್ಟಿ ಫೇಮಸ್. ಇಂದಿಗೂ ಇವರ ನಿರೂಪಣೆ ಅವರದ್ದೇ ಆದ ಅಭಿಮಾನಿಗಳಿದ್ದಾರೆ. 'ಉಳಿದವರು ಕಂಡಂತೆ', 'ಪತಿಬೇಕು.ಕಾಮ್' ಅಂತ ಸಿನಿಮಾಗಳಲ್ಲಿ ನಟಿಸಿದ್ದ ಶೀತಲ್ ಶೆಟ್ಟಿ ಕೆಲವು ದಿನಗಳಿ ನಟೆಯಿಂದ ದೂರ ಉಳಿದ್ದರು. ಈ ಮಧ್ಯೆ ನಿರ್ದೇಶನಕ್ಕೂ ಕೈ ಹಾಕಿ ಮೆಚ್ಚುಗೆ ಗಳಿಸಿದ್ದರು.

ಆದರೆ, ಕೆಲವು ದಿನಗಳಿಂದ ನಟನೆಯಿಂದ ದೂರ ಉಳಿದಿದ್ದ ನಟಿ ತಮ್ಮದೇ ಪ್ರೊಡಕ್ಷನ್ ಹೌಸ್‌ನಲ್ಲಿ ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಆದ್ರೀಗ ಮತ್ತೆ ನಟನೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅದೂ ಶಿವಣ್ಣನ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾದಲ್ಲಿ ಶೀತಲ್ ಶೆಟ್ಟಿ ನಟಿಸಿದ್ದಾರೆ.

Sheetal Shetty making comeback with Shivarajkumar daughter produced movie Fire Play

ಅಂದ್ಹಾಗೆ ಆ ಸಿನಿಮಾದ ಹೆಸರು 'ಫೈರ್ ಫ್ಲೈ'. ನಟನೆ ಬಿಟ್ಟು ನಿರ್ದೇಶನಕ್ಕಿಳಿದಿದ್ದ ಶೀತಲ್ ಇದೀಗ ಮತ್ತೊಮ್ಮೆ ನಟನೆಯತ್ತ ಕಂಬ್ಯಾಕ್ ಮಾಡಿದ್ದಾರೆ. ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ನಿರ್ಮಾಣದ ಸಿನಿಮಾ ತಂಡ ಸೇರಿಕೊಂಡಿದ್ದರಿಂದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

'ಫೈರ್ ಫ್ಲೈ' ನಟಿಸಿದ ಅನುಭವ ಹೇಗೆ?

" 'ಫೈರ್ ಫ್ಲೈ' ಸಿನಿಮಾದ ನಿರ್ದೇಶಕ ವಂಶಿ ಸೆಟ್‌ಗೆ ಚೆನ್ನಾಗಿ ತಯಾರಾಗಿ ಬಂದರು. ಅವರು ತಮ್ಮ ನಟರಿಂದ ಏನು ಬೇಕು ಅನ್ನೋದು ಅವರಿಗೆ ಚೆನ್ನಾಗಿಯೇ ತಿಳಿದಿತ್ತು. ಅವರು ಚೊಚ್ಚಲ ನಿರ್ದೇಶಕರಂತೆ ಕಾಣುವುದಿಲ್ಲ. ಅವರ ಕಥೆ ಮತ್ತು ಪಾತ್ರದ ನಿರೂಪಣೆಯಿಂದ ಹಿಡಿದು ಎಲ್ಲಾ ಕಲಾವಿದರನ್ನು ಸರಾಗವಾಗಿ ನಿಭಾಯಿಸುವವರೆಗೆ ಅವರು ಗಮನಿಸಬೇಕಾದ ಉತ್ತಮ ಪ್ರತಿಭೆ." ಎಂದು ಶೀತಲ್ ಹೇಳಿದ್ದಾರೆ.

Sheetal Shetty making comeback with Shivarajkumar daughter produced movie Fire Play

ಸಿನಿಮಾ ಹೇಗೆ ಬಂದಿದೆ?

"ಫೈರ್ ಫ್ಲೈ ಸಿನಿಮಾ ಚಿತ್ರೀಕರಣದ ವೇಳೆ ಪೂರ್ವ-ಯೋಜನೆ ಮತ್ತು ಯುವ ತಾಂತ್ರಿಕ ತಂಡ ಇತ್ತು. ಆ ಪ್ರತಿಭಾವಂತರ ಗುಂಪು ನನ್ನನ್ನು ನಂಬುವಂತೆ ಮಾಡಿತ್ತು. ನಾನು ಇತ್ತೀಚೆಗೆ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದೇನೆ. ಈ ಸಂದರ್ಭದಲ್ಲಿ ಸಿನಿಮಾದ ಫ್ರೇಮ್‌ಗಳನ್ನು ನೋಡಿದಾಗ, ಅದು ಸುಂದರವಾಗಿ ಬಂದಿದೆ. ಇದು ಕನ್ನಡ ಚಲನ ಚಿತ್ರೋದ್ಯಮಕ್ಕೆ ಅದ್ವಿತೀಯ ಚಿತ್ರವಾಗಲಿದೆ." ಎಂದಿದ್ದಾರೆ.

ಮಹಿಳಾ ನಿರ್ಮಾಪಕರು ಚಿತ್ರರಂಗಕ್ಕೆ ಎಷ್ಟು ಮುಖ್ಯ?

"ನನಗೆ ಹೆಣ್ಣು ಅಥವಾ ಪುರುಷ ನಿರ್ಮಾಪಕರು ಎಂಬ ಭೇದವಿಲ್ಲ. ನಿವೇದಿತಾ ಮೇಡಂ ಅವರು ಚಿತ್ರರಂಗದ ಕುಟುಂಬದ ಹಿನ್ನೆಲೆಯಿಂದ ಬಂದವರು. ಹಾಗಾಗಿ ಅವರಿಗೆ ಸಿನಿಮಾದ ಬಗ್ಗೆ ಒಳ್ಳೆಯ ದೃಷ್ಟಿ ಇದೆ. ಅವರು ಫೈರ್ ಫ್ಲೈ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಅಂಶವನ್ನು ನಾನು ಇಷ್ಟಪಡುತ್ತೇನೆ. ಅವರು ಫೈರ್ ಫ್ಲೈ ತಂಡಕ್ಕೆ ಯಾವಾಗಲೂ ಬೆನ್ನೆಲುಬಾಗಿದ್ದಾರೆ." ಎಂದು ಶೀತಲ್ ಶೆಟ್ಟಿ ಹೇಳಿದ್ದಾರೆ.

ನಿಮ್ಮ ಪಾತ್ರ ಹೇಗಿದೆ?

"ಸಿನಿಮಾದುದ್ದಕ್ಕೂ ನಾನು ತುಂಬಾ ಪ್ರಬುದ್ಧ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ದಿವ್ಯಾ ಜೀವನದ ಹಗುರವಾದ ಭಾಗವನ್ನು ನೋಡುತ್ತಾಳೆ. ಹಾಗೇ ಅದೇ ಸಮಯದಲ್ಲಿ ಮಾನವ ಸಂಬಂಧಗಳ ಜಟಿಲತೆಗಳನ್ನು ಅರ್ಥಮಾಡಿಕೊಳ್ಳುತ್ತಾಳೆ. ಇದು ನನಗೆ ಸಂಬಂಧಿಸಿದ ಪಾತ್ರವಾಗಿದೆ. ಆದ್ದರಿಂದ ಅದನ್ನು ಸಲೀಸಾಗಿ ನಿರ್ವಹಿಸಬಹುದು." ಎಂದು ತಮ್ಮ ಪಾತ್ರವನ್ನು ತಮ್ಮ ಬದುಕಿಗೆ ರಿಲೇಟ್ ಮಾಡಿಕೊಂಡಿದ್ದಾರೆ.

ಶೀತಲ್ ಶೆಟ್ಟಿ ಬಗ್ಗೆ ನಿರ್ದೇಶಕರು ಕೂಡ ಅಷ್ಟೇ ಖುಷಿಯಾಗಿದ್ದಾರೆ. ನಿರ್ದೇಶಕ ವಂಶಿ ಕೃಷ್ಣ 'ಫೈರ್ ಪ್ಲೈ' ಸಿನಿಮಾದ ಲೀಡ್ ರೋಲ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಹೀಗಾಗಿ ದಿವ್ಯಾ ಎಂಬ ಪಾತ್ರ ಪ್ರಬುದ್ಧ ಹಾಗೂ ಲವಲವಿಕೆಯಿಂದ ಕೊಡಿರುವ ಪಾತ್ರ. ಈ ಪಾತ್ರದ ಮೂಲಕ ಸಿನಿಮಾದುದ್ದಕ್ಕೂ ತಮ್ಮ ಮುದ್ದಾದ ನಟನೆ ಮತ್ತು ತಿಳಿ ಹಾಸ್ಯದ ಮೂಲಕ ಕೊನೆಯವರೆಗೂ ಕಥೆಯ ಜೊತೆಯಲ್ಲಿ ಪಯಣಿಸುತ್ತಾರೆ ಎಂದು ಹೇಳಿದ್ದಾರೆ.

ಫೈರ್ ಫ್ಲೈ ಚಿತ್ರದಲ್ಲಿ ವಂಶಿ ಹೀರೋ ಆಗಿ ನಟಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಅವರದ್ದೇ ಎಂಬುದು ವಿಶೇಷ. ಇವರು ಪುನೀತ್ ರಾಜ್‌ಕುಮಾರ್ ಅವರ 'ಪಿಆರ್‌ಕೆ ಪ್ರೊಡಕ್ಷನ್ಸ್' ನಿರ್ಮಾಣದ 'ಮಾಯಾಬಜಾರ್' ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಈಗ ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

'ಫೈರ್ ಫ್ಲೈ' ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಸಂಭಾಷಣೆಯನ್ನು ಬರೆದಿದ್ದಾರೆ. ಕಂಪ್ಲೀಟ್ ಶೂಟಿಂಗ್ ಮುಗಿಸಿರೋ 'ಫೈರ್ ಫ್ಲೈ' ಸಿನಿಮಾ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ.

More from Filmibeat

English summary
Sheetal Shetty making comeback with Shivarajkumar daughter produced movie Fire Play.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X