For Quick Alerts
  ALLOW NOTIFICATIONS  
  For Daily Alerts

  ರಾಜ್ಯ-ರಾಷ್ಟ್ರ ಪ್ರಶಸ್ತಿ ಗೆದ್ದ 'ಮದಿಪು' ನಿರ್ದೇಶಕ ಚೇತನ್ ಮುಂಡಾಡಿ ಸಂದರ್ಶನ

  By ಲೆನಾರ್ಡ್ ಫರ್ನಾಂಡಿಸ್
  |

  ಸಹನೆ ಹಾಗೂ ಕಲಾತ್ಮಕತೆ ಇದ್ದರೆ ಚಲನಚಿತ್ರರಂಗದಲ್ಲಿ ಹೊಸತನ ನೀಡಬಹುದು, ಮಾತ್ರವಲ್ಲದೆ ಹೆಸರು -ಗೆಲುವನ್ನು ತನ್ನದಾಗಿದಿಸಿ ಕೊಳ್ಳಬಹುದು ಎಂಬುದಕ್ಕೆ ಸಾಕ್ಷಿ ಚೇತನ್ ಮುಂಡಾಡಿ. ಸ್ಯಾಂಡಲ್ ವುಡ್ ನಲ್ಲಿ ಕಲಾ ನಿರ್ದೇಶಕ ರಾಗಿದ್ದ ಇವರು ಈಗ ರಾಷ್ಟ್ರೀಯ ಹಾಗೂ ರಾಜ್ಯ ಉತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದ "ಮದಿಪು" ತುಳು ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ.[ತುಳುನಾಡಿಗೆ ರಾಷ್ಟ್ರ ಪ್ರಶಸ್ತಿ ತಂದಿಟ್ಟ 'ಮದಿಪು']

  ತುಳುನಾಡು ಕೋಸ್ಟಲ್ ವುಡ್ ನಲ್ಲಿ ಈಗ ಚೇತನ್ ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. 'ಮದಿಪು' ಏಕಕಾಲದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಉತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದ ಕೋಸ್ಟಲ್ ವುಡ್ ನ ಮೊದಲ ಚಿತ್ರ. ನಿರ್ದೇಶಕ ಚೇತನ್ ಮುಂಡಾಡಿಯವರು ಫಿಲ್ಮಿಬೀಟ್ ಗೆ ಸಿಕ್ಕಿ ಮಾತನಾಡಿದ್ದಾರೆ. ಅವರ ಸಂದರ್ಶನ ಇಲ್ಲಿದೆ...

  'ಮದಿಪು' ರಾಷ್ಟ್ರೀಯ, ರಾಜ್ಯ ಉತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದಿದೆ. ಹೇಗನಿಸುತ್ತಿದೆ..

  'ಮದಿಪು' ರಾಷ್ಟ್ರೀಯ, ರಾಜ್ಯ ಉತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದಿದೆ. ಹೇಗನಿಸುತ್ತಿದೆ..

  ಬಹಳಷ್ಟು ಖುಸಿ ಆಗಿದೆ. ! ನಿಜವಾಗಿಯು ರಾಜ್ಯ ಪ್ರಶಸ್ತಿ ನಿರೀಕ್ಷಿಸಿದ್ದೆ. ಆದರೆ ರಾಷ್ಟ್ರೀಯ ಪ್ರಶಸ್ತಿ ಬರುತ್ತೆ ಎಂದುಕೊಂಡಿರಲಿಲ್ಲ. 'ಮದಿಪು" ನನ್ನ ಮೊದಲ ಹೆಜ್ಜೆ. ನನ್ನ ನಿರ್ದೇಶನದ ಮೊದಲ ಹೆಜ್ಜೆಯಲ್ಲಿಯೇ ಎರಡು ಪ್ರಶಸ್ತಿಗಳು ಲಭಿಸಿರುವುದು ಜವಾವ್ದರಿಯನ್ನ ಹೆಚ್ಚಿಸಿದೆ

  'ಮದಿಪು' ಚಿತ್ರತಂಡದ ಬಗ್ಗೆ ?

  'ಮದಿಪು' ಚಿತ್ರತಂಡದ ಬಗ್ಗೆ ?

  -ಮದಿಪು ಮಂಗಳೂರಿನ ಬೆಳ್ತಂಗಡಿಯಲ್ಲಿ 50 ವರ್ಷಗಳ ಹಿಂದೆ ನಡೆದ ನೈಜ ಘಟನೆ ಆಧಾರಿತ ಚಿತ್ರವಾಗಿದ್ದು. ಚಿತ್ರದ ನಿರ್ಮಾಪಕ ಸಂದೀಪ್ ಕುಮಾರ್ ನಂದಳಿಕೆ. ನಿನಾಸಂ ಸತ್ಯ, ಚೇತನ್ ರೈ ಮಾಣಿ, M.K ಮಠ, ಸೀತಾ ಕೋಟೆ ಹಾಗು ಇತರರು ತಾರಾಬಳಗದಲ್ಲಿದ್ದಾರೆ. ಛಾಯಾಗ್ರಹಣವನ್ನ ಗಣೇಶ್ ಹೆಗ್ಡೆ, ಉಗ್ರಂ ಖ್ಯಾತಿಯಾ ಶ್ರೀಕಾಂತ್ ಎಡಿಟಿಂಗ್ ಮಾಡಿದ್ದು. ಜೋಗಿಯವರು ಸಂಭಾಷಣೆ ಬರೆದಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ವಿ ಮನೋಹರ್ ಅವರು ಮದಿಪು ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಿದ್ದಾರೆ.

  ಎಷ್ಟು ವರ್ಷಗಳ ಅನುಭವ ದ ನಂತರ ನಿರ್ದೇಶನ ಮಾಡುವ ಸಾಹಸಕ್ಕೆ ಇಳಿದಿರಿ?

  ಎಷ್ಟು ವರ್ಷಗಳ ಅನುಭವ ದ ನಂತರ ನಿರ್ದೇಶನ ಮಾಡುವ ಸಾಹಸಕ್ಕೆ ಇಳಿದಿರಿ?

  ಒಬ್ಬ ಕಲಾ ನಿರ್ದೆಶಕನಾಗಿ ಕಳೆದ 14 ವರ್ಷಗಳಿಂದ ತನ್ನನ್ನು ತಾನು ತೊಡಗಿಸಿದ್ದೇನೆ. ಹಲಾವಾರು ಟಿವಿ ಚಾನೆಲ್ ಗಳಲ್ಲಿ ರಿಯಾಲಿಟಿ ಶೋ, ಧಾರಾವಾಹಿಗಳಿಗೆ, ಸಿನಿಮಾಗಳಿಗೆ ಕಲಾ ನಿರ್ದೇಶಕನಾಗಿದ್ದೇನೆ.

  ಕೇವಲ ಕಲಾತ್ಮಕ ಚಿತ್ರಗಳನ್ನು ಮಾಡುವ ನಿರ್ಧಾರ ಎನಾದರು ಮಾಡಿದ್ದೀರಾ?

  ಕೇವಲ ಕಲಾತ್ಮಕ ಚಿತ್ರಗಳನ್ನು ಮಾಡುವ ನಿರ್ಧಾರ ಎನಾದರು ಮಾಡಿದ್ದೀರಾ?

  ಒಬ್ಬ ಕಲಾ ನಿರ್ದೇಶಕನಾಗಿ ನಾನು ಕಲಾ ಚಿತ್ರಗಳನ್ನ ಇಷ್ಟ ಪಡುತ್ತೇನೆ. ಆದರೂ ಬರಿ ಆರ್ಟ್ ನಿನೆಮಾ ಮಾತ್ರ ಅಲ್ಲಾ ಮುಂದೆ ಕಮರ್ಷಿಯಲ್ ಚಿತ್ರ ಮಾಡುವ ಸಿದ್ಧತೆಯಲ್ಲಿದ್ದೇನೆ.

  ಸಿನಿಮಾ ಕ್ಷೇತ್ರಕ್ಕೆ ಬರಲು ಸ್ಫೂರ್ತಿ...

  ಸಿನಿಮಾ ಕ್ಷೇತ್ರಕ್ಕೆ ಬರಲು ಸ್ಫೂರ್ತಿ...

  ಕಿರುತೆರೆಯ ಹೆಸರಾಂತ ನಿರ್ದೇಶಕ ವಿನು ಬಳಂಜ ನನ್ನ ಗುರು. ಅವರ ಪ್ರೋತ್ಸಾಹ ಸಲಹೆಗಳು ನನ್ನನ್ನು ಇವತ್ತು ನಿರ್ದೇಶಕನ ಸ್ಥಾನದಲ್ಲಿ ನಿಲ್ಲಿಸಿದೆ. ಅವರ ಶಿಷ್ಯನಾಗಿರುವುದು ನನ್ನ ಭಾಗ್ಯ. ಅವರಿಗೆ ಸದಾ ಋಣಿ ನಾನು.

  ಪ್ರಾದೇಶಿಕ ಚಿತ್ರ ನಿರ್ದೇಶನ ರಿಸ್ಕ್ ಅನಿಸಲಿಲ್ಲವೇ?

  ಪ್ರಾದೇಶಿಕ ಚಿತ್ರ ನಿರ್ದೇಶನ ರಿಸ್ಕ್ ಅನಿಸಲಿಲ್ಲವೇ?

  ಇಲ್ಲ. ನಿರ್ಮಾಪಕ ಸಂದೀಪ್ ಕುಮಾರ್ ನಂದಳಿಕೆ ಅವರ ಸಂಪೂರ್ಣ ಸಹಕಾರವಿತ್ತು. ನಾನು ಮಂಗಳೂರಿನವನು ಆದ್ದರಿಂದ ಇಲ್ಲಿನ ಕಲೆ, ಸಂಸ್ಕೃತಿ ಬಗ್ಗೆ ಬಲ್ಲೆನು. 'ಮದಿಪು' ಚಿತ್ರಕಥೆ ಕೋಸ್ಟಲ್ ವುಡ್ ಗೆ ಮಾತ್ರವೇ ಹೇಳಿಮಾಡಿಸಿದ್ದು ಹಾಗೂ ಸೂಕ್ತ ಅನಿಸಿತು. ಮತ್ತೊಂದು ವಿಷಯವೇನೆಂದರೆ ಈ ಚಲನಚಿತ್ರ ವೀಕ್ಷಿಸಿದ ಕನ್ನಡ ಚಲನಚಿತ್ರ ನಿರ್ಮಾಪರು, ನಿರ್ದೇಶಕರು ತಂತ್ರಜ್ಞರು ಸಹ ಇಷ್ಟ ಪಟ್ಟಿದ್ದಾರೆ.

  ಮುಂದಿನ ಪ್ರಾಜೆಕ್ಟ್ ಬಗ್ಗೆ ಹೇಳಿ?

  ಮುಂದಿನ ಪ್ರಾಜೆಕ್ಟ್ ಬಗ್ಗೆ ಹೇಳಿ?

  ಮುಂದಿನದ್ದು ಪಕ್ಕ ಕಮರ್ಷಿಯಲ್ ಸಿನಿಮಾ. ಅದ್ಧೂರಿ ಬಜೆಟ್ ನ ಕನ್ನಡ-ತುಳು ಚಿತ್ರ 'ಚಾವಡಿ'. ಇದರಲ್ಲಿಯೂ ತುಳುನಾಡಿನ ಸಂಸ್ಕೃತಿ ಹುಲಿ ವೇಷ, ಭೂತ ಕೋಲಾ, ಕಂಬಲ ಒತ್ತು ನೀಡಿ ಹಾಸ್ಯ ಲವ್ ಸೆಂಟಿಮೆಂಟ್ ಗಳಿಂದ ಕಥೆ ಹೆಣೆದಿದ್ದು ಜಾತಿ ಸೌಹಾರ್ದತೆಯೊಂದಿಗೆ ಸಾಗುವ ಚಿತ್ರವಾಗಿದೆ ಇದು.

  ಕೊನೆಯದಾಗಿ ಚಿತ್ರ ಪ್ರೇಮಿಗಳಿಗೆ ಏನು ಹೇಳ ಬಯಸುತ್ತೀರಾ?

  ಕೊನೆಯದಾಗಿ ಚಿತ್ರ ಪ್ರೇಮಿಗಳಿಗೆ ಏನು ಹೇಳ ಬಯಸುತ್ತೀರಾ?

  ಚಲನ ಚಿತ್ರ ಕೇವಲ ಮನರಂಜನೆಗೆ ಸೀಮಿತ ಆಗಬಾರದು. ಸಿನಿಮಾದ ಆಶಯವನ್ನು ಗ್ರಹಿಸುವ ಸಾಮಾರ್ಥ್ಯ ಬೆಳೆಸಿಕೊಳ್ಳಬೇಕು. ನೋಡುವ ಚಿತ್ರಗಳು, ನೋಡಲೇಬೇಕಾದ ಚಿತ್ರಗಳಿರುತ್ತವೆ. ನೋಡಲೇಬೇಕಾದ ಚಿತ್ರಗಳನ್ನು ಜನರಿಗೆ ತಲುಪಿಸುವ ಕೆಲಸ...ನಮ್ಮ ನಿಮ್ಮೆಲ್ಲೆರ ಕೆಲಸ.. ಇದರಿಂದ ಉತ್ಸಾಹಿ ಮನಸ್ಸುಗಳಿಗೆ ಸಿನಿಮಾ ಮಾಡಲು ಪ್ರೇರಣೆ ಸಿಗುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಅಧ್ಯಯನ ದೃಷ್ಠಿಕೋನದಿಂದಲೂ ಸಿನಿಮಾ ವೀಕ್ಷಿಸಬೇಕು.

  English summary
  State and National Best Feature film awared 'Madipu' Director Chetan Mundadi Interview

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X