»   » ತುಳುನಾಡಿಗೆ ರಾಷ್ಟ್ರ ಪ್ರಶಸ್ತಿ ತಂದಿಟ್ಟ 'ಮದಿಪು'

ತುಳುನಾಡಿಗೆ ರಾಷ್ಟ್ರ ಪ್ರಶಸ್ತಿ ತಂದಿಟ್ಟ 'ಮದಿಪು'

Posted By:
Subscribe to Filmibeat Kannada

2016 ನೇ ಸಾಲಿನ ಪ್ರತಿಷ್ಟಿತ 64ನೇ ರಾಷ್ಟ್ರೀಯ ಪ್ರಶಸ್ತಿ ಪ್ರಕಟವಾಗಿದ್ದು, ಚೇತನ್ ಮುಂಡಾಡಿ ನಿರ್ದೇಶನದ 'ಮದಿಪು' ಅತ್ಯುತ್ತಮ ತುಳು ಚಿತ್ರ (ಪ್ರಾದೇಶಿಕ) ಪ್ರಶಸ್ತಿ ಪಡೆದುಕೊಂಡಿದೆ.

ಕರಾವಳಿ ಜನತೆಯ ಬದುಕು, ಅಲ್ಲಿನ ಆಚಾರ-ವಿಚಾರ, ಧರ್ಮ, ಭೂತಾರಾಧನೆಯ ಸುತ್ತ ಮದಿಪು ಚಿತ್ರದ ಕತೆ ಹೆಣೆಯಲಾಗಿದೆ. ತುಳುನಾಡಿನ ಕಲಾತ್ಮಕ ಚಿತ್ರಕ್ಕೆ ಚೇತನ್ ಮುಂಡಾಡಿ ಆಕ್ಷನ್ ಕಟ್ ಹೇಳಿದ್ದು ಇದು ಇವರ ಚೊಚ್ಚಲ ಸಿನಿಮಾ.

Tulu Movie Madipu Wins 64th National Award

ಎಂ.ಕೆ.ಮಠ, ಸರ್ದಾರ್ ಸತ್ಯ ಹಾಗೂ ಸುಜಾತಾ ಶೆಟ್ಟಿ ಪೇರಾಜೆ ಚಿತ್ರದಲ್ಲಿ ಕೋಲ ಕಟ್ಟುವ ಜನಾಂಗದ ಪಾತ್ರ ನಿರ್ವಹಿಸಿದ್ದಾರೆ. ಫಾತಿಮಾ ಪಾತ್ರದಲ್ಲಿ ಸೀತಾ ಕೋಟೆ, ವೈದ್ಯನ ಪಾತ್ರದಲ್ಲಿ ದಯಾನಂದ್ ಕತ್ತಲ್ ಸರ್‌ ಅವರು ಅಭಿನಯಿಸಿದ್ದಾರೆ. ಇವರೆಲ್ಲರ ಅಭಿನಯ ತುಳು ಚಿತ್ರರಂಗಕ್ಕೆ ಮತ್ತಷ್ಟು ಭರವಸೆ ಮೂಡಿಸಿದೆ.

ಚಿತ್ರಕ್ಕೆ ಜೋಗಿ ಸಂಭಾಷಣೆ ಬರೆದಿದ್ದು ಅದಕ್ಕೆ ಚಂದ್ರನಾಥ್ ಬಜಗೋಳಿ ತುಳು ಸಂಭಾಷಣೆಯನ್ನು ಬರೆದಿದ್ದಾರೆ. ವಿ.ಮನೋಹರ್ ಸಂಗೀತವನ್ನು ನೀಡಿದ್ದಾರೆ. ಸುಧೀರ್ ಶಾನ್ ಬೋಗ್‌ ಅವರ ಕ್ರಿಯಾತ್ಮಕ ನಿರ್ದೇಶನ ಚಿತ್ರದಲ್ಲಿ ಎದ್ದು ಕಾಣುತ್ತದೆ. ಸಂದೀಪ್ ಕುಮಾರ್ ನಂದಳಿಕೆ ನಿರ್ಮಾಣದಲ್ಲಿ ಶರತ್ ಕುಮಾರ್ ಮತ್ತು ವಿಶಾಲ್ ಕುಮಾರ್ ಸಹ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ.

ವಿಶೇಷ ಅಂದ್ರೆ, 'ಮದಿಪು' ಚಿತ್ರ ಇತ್ತಿಚೆಗಷ್ಟೇ 9ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೂಡ ಪ್ರದರ್ಶನವಾಗಿತ್ತು.

English summary
Tulu Movie Madipu Wins Best Regional Language Film Tulu in 64th National Award. the Movie Directed By Chethan mundadi
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada