ನನ್ನಿಂದ ನಮ್ಮಪ್ಪ-ಅಮ್ಮ ಜೂನಿಯರ್ ಆರ್ಟಿಸ್ಟ್ ಆದ್ರು-ವಿನಯ್

By Harshitha

'ಸಿದ್ದಾರ್ಥ' ಚಿತ್ರದಲ್ಲಿ ಯಾವುದೇ ಗಿಮಿಕ್ ಮಾಡಿಲ್ಲ. ನಮ್ಮ ಕುಟುಂಬದ ಬಗ್ಗೆ ಯಾವುದೇ ಡೈಲಾಗ್ಸ್ ಕೊಟ್ಟು ಬಿಲ್ಡಪ್ ಕೊಟ್ಟಿಲ್ಲ ಅಂತ ಹೇಳುವ ರಾಘಣ್ಣ, 'ಸಿದ್ದಾರ್ಥ' ಚಿತ್ರದ ಹಾಡೊಂದರಲ್ಲಿ ತಮ್ಮ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದಾರೆ.

ಇದೇ ಹಾಡಿನ ಮೂಲಕ ಮೊಟ್ಟಮೊದಲ ಬಾರಿಗೆ ಅಣ್ಣಾವ್ರ ಸೊಸೆ ಕೂಡ ತೆರೆಮೇಲೆ ಬಂದ್ಹಂಗಾಗಿದೆ. ವಿನಯ್ ಗಾಗಿ ಜೂನಿಯರ್ ಆರ್ಟಿಸ್ಟ್ ಪಾತ್ರಮಾಡಿರುವ ಅಪ್ಪ-ಅಮ್ಮನ ಬಗ್ಗೆ ವಿನಯ್ ಹೇಳಿದ್ದು ಹೀಗೆ....

Vinay Rajkumar Interview

ಸಂದರ್ಶನ ಎರಡನೇ ಪುಟದಿಂದ ಮುಂದುವರಿದ ಭಾಗ

* ''ಆಕಾಶವೇ...'' ಹಾಡಲ್ಲಿ ನಿಮ್ಮ ತಂದೆ, ತಾಯಿ ಮತ್ತು ತಮ್ಮ ಕೂಡ ಕಾಣಿಸಿಕೊಳ್ಳುತ್ತಾರೆ. ಯಾರ ಐಡಿಯಾ ಇದು?

- ಒಂದು ಶಾಟ್ ನಲ್ಲಿ ನಮ್ಮ ಬ್ಯಾಕ್ ಗ್ರೌಂಡ್ ನಲ್ಲಿ ಅವರು ಕಾಣುತ್ತಾರೆ. ಇದ್ರೆ ಚೆನ್ನಾಗಿರುತ್ತೆ ಅಂತ ನನಗೋಸ್ಕರ ಅವರು ಜ್ಯೂನಿಯರ್ ಆರ್ಟಿಸ್ಟ್ ತರಹ ಕೂರೋಕೆ ಒಪ್ಪಿಕೊಂಡರು. [ಮೊಟ್ಟಮೊದಲ ಬಾರಿ ಬೆಳ್ಳಿತೆರೆ ಮೇಲೆ 'ಅಣ್ಣಾವ್ರ' ಸೊಸೆ..!]

Vinay Rajkumar Interview

* ನೀವು ಅಂದುಕೊಂಡ ಹಾಗೆ, ನಿಮ್ಮ ಲಾಂಚ್ 'ಸಿದ್ದಾರ್ಥ' ಮೂಲಕ ಕರೆಕ್ಟ್ ಆಗಿದ್ಯಾ?

- ಹ್ಹಾಂ...ನಾನಂದುಕೊಂಡ ಹಾಗೆ, 'ಸಿದ್ದಾರ್ಥ' ಪಾತ್ರ ನನಗೆ ಕರೆಕ್ಟಾಗಿದೆ. ನನ್ನ ಲಾಂಚ್ ಗೆ ಒಂದೊಳ್ಳೆ ಸ್ಟೋರಿ.

Vinay Rajkumar Interview

* ನಿಮ್ಮ ಮನೆಯಲ್ಲಿ ನಾಲ್ವರು ಸ್ಟಾರ್ ಗಳಿದ್ದಾರೆ. ನಿಮಗೆ ರೋಲ್ ಮಾಡೆಲ್ ಯಾರು?

- ನಾಲ್ವರೂ ನನಗೆ ಸ್ಪೂರ್ತಿ. ಅಪ್ಪಾಜಿ ಬಗ್ಗೆ ಮಾತನಾಡುವ ಹಾಗೇ ಇಲ್ಲ. ನಮ್ಮನೆ ಒಂದು ಸ್ಕೂಲ್ ಇದ್ದ ಹಾಗೆ. ಎಲ್ಲರಿಂದಲೂ ಒಂದೊಂದು ಕ್ಯಾರೆಕ್ಟರ್ ತೆಗೆದುಕೊಂಡಿದ್ದೀನಿ. ದೊಡ್ಡಪ್ಪ...ಅವರಲ್ಲಿರುವ ಎನರ್ಜಿ. ಎಲ್ಲರಿಗೂ ಪಾಸಿಟೀವ್ ವೈಬ್ಸ್ ಕೊಡ್ತಾರೆ. ಚಿಕ್ಕಪ್ಪ....ಅವರ ಡೆಡಿಕೇಷನ್, ಪಂಕ್ಚುಯಾಲಿಟಿಯನ್ನ ನಾನು ಅಳವಡಿಸಿಕೊಂಡಿದ್ದೀನಿ. ಅಪ್ಪನ ಹಾಸ್ಯ ಮನೋಭಾವ. ಹೀಗೆ ಎಲ್ಲರಿಂದಲೂ ಒಂದೊಂದು ರೂಢಿಸಿಕೊಂಡಿದ್ದೀನಿ. ಚಿಕ್ಕಪ್ಪನ ಜೊತೆ ಎರಡು ಮೂರು ಸಿನಿಮಾ ಓಡಾಡಿದ್ದೆ. ಅವರನ್ನ ನೋಡಿ ಸುಮಾರು ಕಲಿತಿದ್ದೀನಿ. [ಪಾರ್ವತಮ್ಮ ಅವರಿಗೆ ಮೊಮ್ಮಗನ ಪ್ರೀತಿಯ ಉಡುಗೊರೆ]

* 'ಗಿವ್ ಮಿ ಎ ಬ್ರೇಕ್' ಅಂತ ಟ್ಯಾಗ್ ಲೈನ್ ಇದೆ. ಇದು ನಿಮ್ಮ ಜೀವನಕ್ಕೋ...ಇಲ್ಲಾ ಪಾತ್ರಕ್ಕೋ...?

- ಪಾತ್ರಕ್ಕೆ. ಇಡೀ ಸಿನಿಮಾ ನಿಂತಿರುವುದೇ 'ಗಿವ್ ಮಿ ಎ ಬ್ರೇಕ್' ಇಂದ. ಸಿನಿಮಾ ನೋಡಿದ್ರೆ, ನಿಮಗೆ ಅರ್ಥ ಗೊತ್ತಾಗುತ್ತೆ.

Vinay Rajkumar Interview

* 'ಸಿದ್ದಾರ್ಥ' ಚಿತ್ರದಲ್ಲಿ ನಿಮ್ಮ ಫೇವರಿಟ್ ಹಾಡು?

- ''ನಿನ್ನಿಂದ ದೂರಾಗಿ ಇರಲಾರೆ....'' ರಘು ದೀಕ್ಷಿತ್ ಹಾಡಿರುವ ಹಾಡು ನಂಗೆ ತುಂಬಾ ಇಷ್ಟ.

* 'ಸಿದ್ದಾರ್ಥ' ರಿಲೀಸ್ ಆಗ್ತಿದೆ. ತಾತನನ್ನ ಮಿಸ್ ಮಾಡಿಕೊಳ್ಳುತ್ತೀರಾ?

- ತಾತ ಯಾವಾಗಲೂ ನಮ್ಮ ಜೊತೆಗೆ ಇರುತ್ತಾರೆ ಅನ್ನುವ ಭಾವನೆ ನಮಗೆ. ನನಗೆ ಅವರು ಆಶೀರ್ವಾದ ಮಾಡುತ್ತಾರೆ ಅಂತ ಗೊತ್ತು. [ಅಪ್ಪಾಜಿಯನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ-ರಾಘಣ್ಣ]

ಸಂದರ್ಶನ - ಹರ್ಷಿತಾ ನಾಗರಾಜ್

More from Filmibeat

English summary
Raghavendra Rajkumar's son Vinay Rajkumar starrer 'Siddhartha' is all set to release tomorrow (Jan 23rd). In an Exclusive Interview with Vinay Rajkumar, he said ''My parents became Junior Artists for my sake'' on Raghanna and his wife's appearance in a song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X