ಅಣ್ಣಾವ್ರ ಮೊಮ್ಮಗ ಅನ್ನುವ 'ಅಹಂ' ನನಗಿಲ್ಲ-ವಿನಯ್
ಅಣ್ಣಾವ್ರ ಕುಟುಂಬದಿಂದ ಒಂದೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಾಗಲೂ, ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಉಂಟುಮಾಡಿದೆ. ಅಂತದ್ದೇ ಸಂಚಲನವನ್ನ ವಿನಯ್ ಕೂಡ ಉಂಟು ಮಾಡಬೇಕು. ಗಾಂಧಿನಗರದಲ್ಲಿ ವಿನಯ್ ಧೂಳೆಬ್ಬಿಸಬೇಕು ಅಂತ ಎಲ್ಲರೂ ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದರ ಬಗ್ಗೆ ಚಿತ್ರರಂಗದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ವಿನಯ್ ರಾಜ್ ಕುಮಾರ್ ಏನಂತಾರೆ...? ಮುಂದೆ ಓದಿ.....
ಸಂದರ್ಶನ ಮೊದಲನೇ ಪುಟದಿಂದ ಮುಂದುವರಿದ ಭಾಗ

* ಅಪ್ಪಾಜಿ, ಶಿವಣ್ಣ, ರಾಘಣ್ಣ, ಅಪ್ಪು ಹಾಗೆ ನೀವು ಆಗಬೇಕು ಅಂತ ನಿಮಗೆ ಪ್ರೆಷರ್ ಬಿಲ್ಡ್ ಆಗುತ್ತಿದ್ಯಾ?
- ಇಲ್ಲಾ. ಈ ಸಿನಿಮಾ ಸ್ಟಾರ್ಟ್ ಆಗಬೇಕು ಅನ್ನುವಾಗಲೇ, ಅಪ್ಪ-ಅಮ್ಮ ಹೇಳಿದ್ರು ರಾಜ್ ಕುಮಾರ್ ಮೊಮ್ಮಗ ಅಂತ ಸಿನಿಮಾ ಇಂಡಸ್ಟ್ರಿಗೆ ಕಾಲಿಡಬೇಡ. ಅದನ್ನ ತಲೆಗೆ ಇಟ್ಟುಕೊಳ್ಳಬೇಡ. ಸಾಮಾನ್ಯ ಹುಡುಗ ವಿನಯ್ ಆಗಿ ಚಿತ್ರರಂಗಕ್ಕೆ ಕಾಲಿಡು. ನಿನ್ನ ಐಡೆಂಟಿಟಿಯನ್ನ ನೀನೇ ಕ್ರಿಯೇಟ್ ಮಾಡಿಕೋ. ನಮ್ಮ ನೆರಳಲ್ಲಿ ನೀನು ಬೆಳೆಯಬಾರದು ಅಂತ ಹೇಳಿದ್ರು. ಸೋ, ಸಿನಿಮಾ ಮಾಡುವಾಗಲೂ ಮತ್ತು ಇವಾಗ ಕೂಡ ನಾರ್ಮಲ್ ಹುಡುಗ ಆಗಿದ್ದೀನಿ. ಅಣ್ಣಾವ್ರ ಮೊಮ್ಮಗ ಅನ್ನುವ 'ಅಹಂ' ನನ್ನ ತಲೆಯಲ್ಲಿ ಇಲ್ಲ. [ರಾಜ್ ಕುಮಾರ್ ಮೊಮ್ಮಗ ಅಂತ ಬಿಲ್ಡಪ್ ಕೊಟ್ಟಿಲ್ಲ-ರಾಘಣ್ಣ]

* ಆರು ತಿಂಗಳಿಗೂ ಹೆಚ್ಚು ಕಾಲ ಶೂಟಿಂಗ್ ಇತ್ತು. ನಿಮ್ಮ ಮೊದಲ ಚಿತ್ರದ ಅನುಭವ.?
- ಶೂಟಿಂಗ್ ತುಂಬಾ ಚೆನ್ನಾಗಿತ್ತು. ಪ್ರತಿ ದಿನ ಏನಾದರೊಂದು ಹೊಸ ವಿಷಯ ಕಲಿಯುತ್ತಿದ್ದೆ. ನಮ್ಮ ಟೀಂ ತುಂಬಾ ಚೆನ್ನಾಗಿತ್ತು. ನಿರ್ದೇಶಕ ಪ್ರಕಾಶ್ ನಮ್ಮ ಕುಟುಂಬದವರು. ಅವರ ಜೊತೆ ನಾನು ತುಂಬಾ ಕಮ್ಫರ್ಟಬಲ್ ಆಗಿದ್ದೆ. ನನ್ನ ಫ್ರೆಂಡ್ಸ್ ಪಾತ್ರಧಾರಿಗಳು. ಅವರೆಲ್ಲಾ, ನಿಜ ಬದುಕ್ಕಲ್ಲೂ ನನ್ನ ಸ್ನೇಹಿತರೇ. ಹೀಗಾಗಿ ಅವರ ಜೊತೆ ಆಕ್ಟ್ ಮಾಡೋಕೆ ಚೆನ್ನಾಗಿತ್ತು. ಟೆಕ್ನೀಷಿಯನ್ಸ್ ಮತ್ತು ನಮ್ಮ ಪ್ರೊಡಕ್ಷನ್ನವ್ರನ್ನ ಚಿಕ್ಕವಯಸ್ಸಿಂದಲೂ ನೋಡಿಕೊಂಡು ಬಂದಿದ್ದೀನಿ. ಅದೊಂಥರಾ ಮನೆಯಲ್ಲಿ ಇದ್ದಹಾಗೇ ಇತ್ತು. ತುಂಬಾ ಒಳ್ಳೆ ಎಕ್ಸ್ ಪೀರಿಯನ್ಸ್. [ಬಿಡುಗಡೆಗೆ ಮುನ್ನವೇ ದಾಖಲೆ ಬರೆದ 'ಸಿದ್ದಾರ್ಥ']

* ನಿಮ್ಮ ಹೀರೋಯಿನ್ 'ಅಪೂರ್ವ' ಜೊತೆ ಕಳೆದ ಕ್ಷಣಗಳು?
- ಒಬ್ಬ ಆಕ್ಟರ್ ಗೆ ಕೋ-ಸ್ಟಾರ್ ತುಂಬಾ ಇಂಪಾರ್ಟೆಂಟ್. ಇಬ್ಬರ ಕಾಂಬಿನೇಷನ್ ಚೆನ್ನಾಗಿದ್ದರೆ, ಅದು ತೆರೆಮೇಲೆ ಗೊತ್ತಾಗುತ್ತೆ. ಅಪೂರ್ವ ತುಂಬಾ ಒಳ್ಳೆಯ ನಟಿ. ನ್ಯಾಷಿನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಓದಿರುವ ಪ್ರತಿಭಾವಂತೆ. ಅವರೊಂದಿಗೆ ನಟಿಸಿದ್ದು ಚೆನ್ನಾಗಿತ್ತು.

* 'ಸಿದ್ದಾರ್ಥ'ನಾಗಿ ನೀವು ಗಾಯಕರು. ಒಳ್ಳೆ ಗಿಟಾರಿಸ್ಟ್. ನಿಮಗೆ ನಿಜವಾಗಿಯೂ ಗಿಟಾರ್ ನುಡಿಸುವುದಕ್ಕೆ ಬರುತ್ತಾ?
- ಹ್ಹಾಂ ಬರುತ್ತೆ. ದೊಡ್ಡ ಗಿಟಾರಿಸ್ಟ್ ಏನಲ್ಲ. ಬೇಸಿಕ್ ಗಿಟಾರ್ ನುಡಿಸುವುದು ಗೊತ್ತು. ನನ್ನ ಫ್ರೆಂಡ್ ಅಲೋಕ್ ಅಂತಿದ್ದಾನೆ. ಅವನು ಗಿಟಾರಿಸ್ಟ್. ಅವನಿಂದ ಕಲಿತ್ತಿದ್ದೆ.
* ನಿಮ್ಮ ವಾಯ್ಸ್ ಜನಕ್ಕೆ ಇಷ್ಟ ಆಗಿದೆ ಅಂದ್ರಿ. ನಿಮಗೆ ಗಾಯನದಲ್ಲಿ ಆಸಕ್ತಿ ಇದ್ಯಾ?
- ಹೌದು, ಈ ಸಿನಿಮಾದಲ್ಲಿ ಹಾಡಿಲ್ಲ. ಆದ್ರೆ, ಮುಂದೆ ಖಂಡಿತ ಹಾಡುತ್ತೀನಿ. ['ಸಿದ್ದಾರ್ಥ' ಮುಗಿಸಿದ್ದೀನಿ, ಇದಕ್ಕಿಂತ ಆರೋಗ್ಯ ಬೇಕಾ-ರಾಘಣ್ಣ]

* 'ಮೈಕೇಲ್ ಜಾಕ್ಸನ್' ತರಹ ಮೂನ್ ವಾಕ್ ಮಾಡಿದ್ದೀರಾ? ಶಿವಣ್ಣ ನಿಮಗೆ ಡ್ಯಾನ್ಸ್ ಹೇಳಿಕೊಟ್ರಂತೆ! ಹೌದಾ?
- ಒಂದು ಸಾಂಗ್ ಶೂಟಿಂಗ್ ಮಾಡುವಾಗ, ದೊಡ್ಡಪ್ಪ ಬಂದ್ರು ಸೆಟ್ ಗೆ. ಅವರು ನೋಡಿ, ನಾನೇ ಮಾಡಿ ತೋರಿಸ್ತೀನಿ ಅಂತ ನನಗೆ ಹೇಳಿಕೊಟ್ಟರು. ಬಾಕಿ ಹಾಡುಗಳೆಲ್ಲಾ, ಗಣೇಶ್ ಮಾಸ್ಟರ್, ಮುರುಳಿ ಮಾಸ್ಟರ್, ಕಲೈ ಮಾಸ್ಟರ್, ಇಮ್ರಾನ್ ಮಾಸ್ಟರ್ ಗೆ ಥ್ಯಾಂಕ್ಸ್ ಹೇಳಬೇಕು. ಎಲ್ಲಾ ಒಳ್ಳೊಳ್ಳೆ ಸ್ಟೆಪ್ಸ್ ಹೇಳಿಕೊಟ್ಟರು ನನಗೋಸ್ಕರ.

* ನಿಮಗೆ ಹೀರೋ ಆಗಬೇಕು ಅಂತ ಅನಿಸಿದ್ದು ಯಾವಾಗ?
- ಚಿಕ್ಕವಯಸ್ಸಿಂದ ಹೀರೋ ಆಗಲೇ ಬೇಕು ಅಂತ ಇರ್ಲಿಲ್ಲ. ಹುಟ್ಟಿಬೆಳೆದ್ದಿದ್ದೇ ಶೂಟಿಂಗ್ ನೋಡಿಕೊಂಡು. ದಿನ ಶೂಟಿಂಗ್ ನೋಡುತ್ತಿದ್ದೆ. ಕಾಲೇಜ್ ಮುಗಿಸುವ ಹೊತ್ತಿಗೆ ನನಗೆ ಇಂಟ್ರೆಸ್ಟ್ ಬಂತು. ಸೇಂಟ್ ಜೋಸೆಫ್ಸ್ ಕಾಲೇಜ್ ನಲ್ಲಿ ಬಿ.ಕಾಂ ಮಾಡಿದ್ದೀನಿ. ಓದು ಮುಗೀತ್ತಿದ್ದ ಹಾಗೆ, ನಟನೆ ಮಾಡಬೇಕು ಅನಿಸ್ತು. ನನ್ನ ಫ್ರೆಂಡ್ಸ್ ಕೂಡ ನಂಗೆ ಎನ್ಕರೇಜ್ ಮಾಡಿದ್ರು. ಸೋ, ಅದೆಲ್ಲಾ ಸೇರಿ, ಯಾಕೆ ಮಾಡಬಾರದು ಅಂತ ಮಾಡಿದ್ದು.
ಕುಟುಂಬ ಮತ್ತು ಸ್ನೇಹಿತರ ಸಪೋರ್ಟ್ ನೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟಿರುವ ವಿನಯ್ ರಾಜ್ ಕುಮಾರ್ ಗೆ ಅಪ್ಪ ರಾಘಣ್ಣ, ಅಮ್ಮ ಮಂಗಳ ಒಂದು ದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ. ಅದೇನಂಥದ್ದು ಅಂತ ತಿಳಿದುಕೊಳ್ಳುವುದಕ್ಕೆ ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ.....


Click it and Unblock the Notifications











