ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸೀರೆಯಲ್ಲಿ ಮಿಂಚಿದ 'ಎ' ಚಿತ್ರದ ನಾಯಕಿ ಚಾಂದಿನಿ; ಸೀರೆಯ ವಿಶೇಷತೆ ಏನು?
ವಿಶ್ವದ ಪ್ರತಿಷ್ಠಿತ ಚಲನ ಚಿತ್ರೋತ್ಸವ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಸೆಲೆಬ್ರೆಟಿಗಳು ಹೆಚ್ಚಾಗಿ ಗಮನ ಸೆಳೆಯುತ್ತಾರೆ. ಫ್ರಾನ್ಸ್‌ನಲ್ಲಿ ನಡೆಯುವ ಈ ಚಲನಚಿತ್ರೋತ್ಸವಕ್ಕೆ ಜಗತ್ತಿನ ಮೂಲೆ ಮೂಲೆಯಿಂದ ತಾರೆಯರು ಆಗಮಿಸುತ್ತಾರೆ. ಹಾಗೇ ಭಾರತೀಯ ಚಿತ್ರರಂಗದಿಂದಲೂ ಪ್ರತಿ ವರ್ಷ ಈ ಇವೆಂಟ್‌ನಲ್ಲಿ ಭಾಗವಹಿಸುತ್ತಾರೆ. ಈ ಬಾರಿ ಕನ್ನಡದ ನಟಿಯರು ಹೆಚ್ಚಾಗಿ ಕಾಣಿಸಿಕೊಂಡಿದ್ದರು.
ಈ ಚಿತ್ರೋತ್ಸವದಲ್ಲಿ ನಟ ನಟಿಯರು ಧರಿಸುವ ಕಾಸ್ಟ್ಯೂಮ್‌ಗಳು ಕೂಡ ಅಷ್ಟೇ ಗಮನ ಸೆಳೆಯುತ್ತವೆ. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವುದಕ್ಕೆ ಅಂತಲೇ ತಾರೆಯರು ವಿಶೇಷವಾಗಿ ವಸ್ತ್ರ ವಿನ್ಯಾಸಕರ ಬಳಿ ಕಾಸ್ಟ್ಯೂಮ್ ಅನ್ನು ವಿನ್ಯಾಸಗೊಳಿಸುತ್ತಾರೆ. ಹಾಗಾಗಿ ಕಾನ್ಸ್ ಫಿಲ್ಮ್‌ಫೆಸ್ಟಿವಲ್ ಕೇವಲ ಸಿನಿಮಾಗಾಗಿ ಅಷ್ಟೇ ಅಲ್ಲ. ಫ್ಯಾಷನ್ ಪ್ರಿಯರಿಗೂ ಇಷ್ಟವಾಗುವ ಈವೆಂಟ್.

ಈ ಬಾರಿ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕನ್ನಡದ ನಟಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅವರಲ್ಲಿ 'ಎ' ಸಿನಿಮಾದ ನಟಿ ಚಾಂದಿನಿ ಕೂಡ ಇದ್ದಾರೆ. ಫ್ರಾನ್ಸ್‌ನ ಕಾನ್ಸ್ ಸಿಟಿಯಲ್ಲಿ ನಡೆದ ಈ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಅದರಲ್ಲಿ ಉಪೇಂದ್ರ ನಾಯಕನಾಗಿ ನಟಿಸಿದ್ದ ಮೊದಲ ಸಿನಿಮಾದ ನಾಯಕಿ ಚಾಂದಿನಿ ಕೂಡ ಭಾಗವಹಿಸಿದ್ದರು. ವಿಶೇಷ ಅಂದರೆ, ಇವರು ಕೂಡ ಸೀರೆಯುಟ್ಟು ಭಾರತವನ್ನು ಪ್ರತಿನಿಧಿಸಿದ್ದರು.
ಕಾನ್ಸ್ ಫಿಲ್ಮ್ ಫೆಸ್ಟಿವಲ್ 2025ರಲ್ಲಿ ಭಾರತದ ನಟಿಯರು ಸೀರೆಯುಟ್ಟು ರೆಡ್ ಕಾರ್ಪೆಟ್‌ನಲ್ಲಿ ಹೆಚ್ಚು ಹಾಕಿದ್ದರು. 'ಆಪರೇಷನ್ ಸಿಂಧೂರ'ದ ಬಳಿಕ ಭಾರತದ ನಟಿಯರು ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವುದಕ್ಕೆ ಮುಂದಾಗಿದ್ದು ವಿಶೇಷ. ಭಾರತದ ಹಲವು ಭಾಗಗಳಿಂದ ಈ ಚಿತ್ರೋತ್ಸವದಲ್ಲಿ ಪ್ರತಿನಿಧಿಸಿದ್ದ ನಟಿಯರು ಬೇರೆ ರಾಜ್ಯದ ಸಂಸ್ಕೃತಿಯನ್ನು ಚಿತ್ರೋತ್ಸವದಲ್ಲಿ ಬಿಂಬಿಸಿದ್ದರು.
ಇವರ ಸಾಲಿಗೆ 'ಎ' ಕನ್ನಡ ಸಿನಿಮಾದ ನಟಿ ಚಾಂದಿನಿ ಕೂಡ ಸೇರಿಕೊಂಡಿದ್ದಾರೆ. ಚಾಂದಿನಿ ಇಲ್ಲಿಗೆ ನೀಲಿ ಬಣ್ಣದ ಡಿಸೈನರ್ ಸೀರೆಯುಟ್ಟು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದರು. ಸಿಂಪಲ್ ನೀಲಿ ಬಣ್ಣದ ಸೀರೆಯುಟ್ಟು ರೆಡ್ ಕಾರ್ಪೆಟ್ ಮೇಲೆ ಸೆರಗನ್ನು ಇಳಿಬಿಟ್ಟು ಕ್ಯಾಮರಾಗೆ ಪೋಸ್ಟ್ ಕೊಟ್ಟಿದ್ದಾರೆ. ಈ ಮೂಲಕ ಭಾರತದ ಸಂಪ್ರದಾಯ ಹಾಗೂ ಪರಂಪರೆಯ ಝಲಕ್ ಕೊಟ್ಟಿದ್ದರು. ಆ ಫೋಟೊಗಳನ್ನು ಈಗ ಹಂಚಿಕೊಂಡಿದ್ದಾರೆ.

ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಂತಹ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಸೀರೆ ಧರಿಸಿ ಹೆಚ್ಚು ಹಾಕುವ ಮೂಲಕ ರೆಡ್ ಕಾರ್ಪೆಟ್ ಗ್ಲಾಮರ್ ಅನ್ನು ಚಾಂದಿನಿ ಮರುವ್ಯಾಖ್ಯಾನಿಸಿದ್ದಾರೆ. ಶತಮಾನಗಳಷ್ಟು ಹಳೆಯದಾದ ಸೀರೆ ಉಡುವ ಸಂಪ್ರದಾಯವನ್ನು ಜಾಗತಿಕ ವೇದಿಕೆಗೆ ತಂದು ಅಂತರಾಷ್ಟ್ರೀಯ ವಿನ್ಯಾಸಕರಿಗೆ ಸೀರೆಯ ಪ್ರಾಮುಖ್ಯತೆ ಹಾಗೂ ಸಂಪ್ರದಾಯವನ್ನು ಅರಿಯುವುದಕ್ಕೆ ಪ್ರೇರೇಪಿಸಿದ್ದಾರೆ.
ಸೀರೆಯುಟ್ಟು ಮಿಂಚಿದ ನಟಿ ಇವರೊಬ್ಬರೇ ಅಲ್ಲ. ಬಾಲಿವುಡ್ ನಟಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಕೂಡ ಬನಾರಸ್ ಸೀರೆಯುಟ್ಟು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದರು. ಇನ್ನು ಕನ್ನಡದ ಮತ್ತಿಬ್ಬರು ನಟಿಯರಾದ ಪ್ರಣಿತಾ ಸುಭಾಷ್ ತಿಳಿ ಗುಲಾಬಿ ಬಣ್ಣದ ಡಿಸೈನರ್ ಸೀರೆಯಲ್ಲಿ ಮಿಂಚಿದ್ದರು. ಕಿರುತೆರೆ ನಟಿ ದಿಶಾ ಮದನ್ ಕೂಡ ಸೀರೆಯುಟ್ಟು ಮಿಂಚಿದ್ದರು.


Click it and Unblock the Notifications











