ಬಾಲಿ ಹೋಗಿ ಸ್ಪಾದಲ್ಲಿ ಜಪಾನೀಸ್ ಮಸಾಜ್ ಮಾಡಿಸಿಕೊಂಡ ನಟಿ; ಬಿಲ್ ಎಷ್ಟಾಯ್ತು ಗೊತ್ತೇ?

ತಮ್ಮ ಕೆಲಸದಲ್ಲಿ ಬಿಡುವು ಸಿಕ್ತು ಅಂದರೆ ಸಾಕು, ನಟಿಯರು ವಿದೇಶಕ್ಕೆ ಹಾರುತ್ತಾರೆ. ಫುಲ್ ರಿಲ್ಯಾಕ್ಸ್ ಮೂಡಿಗೆ ಜಾರುತ್ತಾರೆ. ಬಿಡುವಿಲ್ಲದೆ ದುಡಿದಿದ್ದ ನಟಿಯರು ವಿದೇಶದಲ್ಲಿ ತಮ್ಮ ಮನಸ್ಸಿಗೆ ಬೇಕಾದ ಹಾಗೆ ಎಂಜಾಯ್ ಮಾಡುತ್ತಾರೆ. ಅದರಲ್ಲೂ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುವುದರಿಂದ ಪ್ರವಾಸಕ್ಕೆ ಹೋದರೂ ಅಲ್ಲೂ ಸ್ಪಾ ಕಡೆಗೆ ಹೋಗದೇ ಇರೋದಿಲ್ಲ.

ಇಲ್ಲೊಬ್ಬ ನಟಿ ವಿದೇಶಕ್ಕೆ ಹೋಗಿ ರಿಲ್ಯಾಕ್ಸ್ ಬಂದಿದ್ದಾರೆ. ಪ್ರವಾಸಿಗರ ನೆಚ್ಚಿನ ತಾಣ ಬಾಲಿಗೆ ಹಾರಿದ್ದ ನಟಿ ಒಂದು ಜಪಾನೀಸ್ ಸ್ಪಾಗೆ ಹೋಗಿದ್ದರು. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆ ಫೋಟೊಗಳನ್ನು ಹಂಚಿಕೊಂಡಿದ್ದು, ಅದರೊಂದಿಗೆ ಶೇರ್ ಮಾಡಿದ್ದ ಬಿಲ್ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ನಟಿ ಬೇರೆ ಯಾರೂ ಅಲ್ಲ. ಮಲಯಾಳಂ ಚಿತ್ರರಂಗದ ಕೊಟ್ಟಾಯಂ ಮೂಲದ ಅಂಉ ಕುರಿಯನ್.

Actress Anju Kurian massage and spa bill in Bali goes trending

ಅಂಜು ಕುರಿಯನ್ ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಮಲಯಾಳಂ ಚಿತ್ರರಂಗ ಪ್ರವೇಶ ಮಾಡಿದರು. ಈ ಪಾತ್ರಗಳೇ ಅವರನ್ನು ನಾಯಕಿಯಾಗಿ ಬಡ್ತಿ ಸಿಗುವುದಕ್ಕೂ ಕಾರಣವಾಯ್ತು. 2016ರಲ್ಲಿ ತೆರೆಕಂಡ 'ಕವಿ ಉದ್ದೇಶಿಚೆತ್ತು' ಸಿನಿಮಾಗೆ ನಾಯಕಿಯಾಗಿ ಯಶಸ್ಸು ಕಂಡರು. ಇಲ್ಲಿಂದ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇದೇ ಅಂಜು ಕುರಿಯನ್ ಬಾಲಿ ಪ್ರವಾಸಕ್ಕೆ ಹೋಗಿ ಅಲ್ಲಿ ಮಸಾಜ್ ಮಾಡಿಸಿಕೊಂಡ ಫೋಟೊಗಳನ್ನು ಹಂಚಿಕೊಂಡು, ತನ್ನ ಫಾಲೋವರ್ಸ್‌ಗೆ ಚಮಕ್ ಕೊಟ್ಟಿದ್ದಾರೆ. ಅದೇನು ಅನ್ನೋದನ್ನು ಅಮೇಲೆ ಹೇಳ್ತೀವಿ. ಅದಕ್ಕೂ ಮುನ್ನ ಇವರು ನಟಿಸಿದ ಸಿನಿಮಾಗಳ ಮೇಲೆ ಕಣ್ಣಾಯಿಸೋಣ. ಅಂಜು ಕುರಿಯನ್ ಮಲಯಾಳಂ ಭಾಷೆಯ 'ಓಂ ಶಾಂತಿ ಓಷಾನ' ಸಿನಿಮಾದಲ್ಲಿ ವಿನೀತ್ ಶ್ರೀನಿವಾಸನ್ ಜೊತೆ ನಟಿಸಿದ್ದಾರೆ. ಹಾಗೇ 'ನನ್ ಪ್ರಕಾಶನ್'ನಲ್ಲಿ ಫಹಾದ್ ಫಾಸಿಲ್ ಹಾಗೂ 'ಜಾಕ್‌ ಡೇನಿಯಲ್' ಸಿನಿಮಾದಲ್ಲಿ ದಿಲೀಪ್ ಕುಮಾರ್ ಅವರಂತಹ ಸ್ಟಾರ್ ನಟರೊಂದಿಗೆ ಅಂಜು ಕುರಿಯನ್ ನಟಿಸಿದ್ದಾರೆ.

ಹಾಗಂತ ಮಲಯಾಳಂ ಅಷ್ಟೇ ಅಲ್ಲ. ಇಲ್ಲಿನ ಸಿಕ್ಕಿದ ಜನಪ್ರಿಯತೆಯಿಂದ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ನಟಿಸಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಅವರ ಸೋದರಳಿಯ ಸುಮಂತ್ ನಟಿಸಿದ 'ಇದಂ ಜಗತ್' ಇವರ ಏಕೈಕ ತೆಲುಗು ಸಿನಿಮಾ. ಇನ್ನು ತಮಿಳಿನಲ್ಲಿ ಐದು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 32 ವರ್ಷದ ನಟಿ ತನ್ನ ವೃತ್ತಿ ಬದುಕಿನಲ್ಲಿ ಉತ್ತುಂಗದಲ್ಲಿ ಇರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2025ರಲ್ಲಿ ಕೊಟ್ಟಾಯಂನ ಉದ್ಯಮಿ ರೋಷನ್ ಜಾಕೋಬ್ ಕರಿಪ್ಪ ಅವರನ್ನು ವಿವಾಹವಾದರು. ಮದುವೆ ಬಳಿಕವೂ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸಿದ್ದಾರೆ.

ಇತ್ತೀಚೆಗೆ ಅಂಜು ಕುರಿಯನ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡ ವೀಡಿಯೊವೊಂದು ಭಾರಿ ವೈರಲ್ ಆಗಿದೆ. ಇಂಡೋನೇಷ್ಯಾದ ಬಾಲಿ ದ್ವೀಪಕ್ಕೆ ಪ್ರವಾಸ ಹೋಗಿದ್ದ ಅಂಜು, ಬಾಲಿಯಲ್ಲಿನ ಸಾಂಪ್ರದಾಯಿಕ ಜಪಾನೀಸ್ ಸ್ಪಾದಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಈ ವೀಡಿಯೊದ ಕೊನೆಯಲ್ಲಿ ಅವರು ಸ್ಪಾ ಬಿಲ್ ತೋರಿಸಿದ್ದು, ಅಲ್ಲಿ ಬರೋಬ್ಬರಿ 7.25 ಲಕ್ಷ ರೂಪಾಯಿ ಎಂದು ತೋರಿಸಲಾಗಿದೆ. ಇದನ್ನು ನೋಡಿ ಅಭಿಮಾನಿಗಳು ಕಂಗಾಲಾಗಿದ್ದಾರೆ. ಒಂದೇ ಮಸಾಜ್‌ಗೆ 7.25 ಲಕ್ಷ ರೂಪಾಯಿನಾ ಅಂತ ಬೆಚ್ಚಿ ಬಿದ್ದಿದ್ದಾರೆ.

ಭಾರತದಲ್ಲೇ ಆಗಿದ್ದರೆ, 5 ಸಾವಿರದೊಳಗೆ ಮಸಾಜ್ ಮುಗಿದು ಹೋಗುತ್ತಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ವಿದೇಶದಲ್ಲಿ ಇಂತಹ ಸೇವೆಗಳು ಹೆಚ್ಚಾಗಿ ದುಬಾರಿಯಾಗಿರುತ್ತವೆ. ಆದರೆ, ಅಂಜು ಕುರಿಯನ್ ಬಿಲ್‌ನಲ್ಲಿ 7.25 ಲಕ್ಷದ ಮೊತ್ತವನ್ನು ಗಾಬರಿ ಬಿದ್ದಿದ್ದಾರೆ. ಹಾಗಂತ ಇಲ್ಲೊಂದು ಟ್ವಿಸ್ಟ್ ಇದೆ. ಇದನ್ನು ಖುದ್ದಾಗಿ ಅಂಜು ಅವರೇ ರಿವೀಲ್ ಮಾಡಿದ್ದಾರೆ. ಬಾಲಿ ಕರೆನ್ಸಿಯಲ್ಲಿ 7.25 ಲಕ್ಷ ರೂಪಾಯಿ ಭಾರತೀಯ ಕರೆನ್ಸಿಗೆ ಹೋಲಿಸಿದರೆ, ₹4,000 (ನಾಲ್ಕು ಸಾವಿರ ರೂಪಾಯಿ) ಆಗುತ್ತೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಂಜು ಕುರಿಯನ್ ನೀಡಿದ ಈ ಟ್ವಿಸ್ಟ್‌ ಕಂಗಾಲಾದವರು ಬಾಲಿಗೆ ಹೋದರೆ ಮಸಾಜ್ ಮಾಡಿಸಿಕೊಳ್ಳಬಹುದೆಂದು ನಿರಾಳರಾಗಿದ್ದಾರೆ.

English summary
Actress Anju Kurian massage and spa bill in Bali goes trending. Here is the twist.
Read more about: actress lifestyle malayalam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X