Cannes 2025 : ಕಾನ್ಸ್‌ನಲ್ಲಿ ಟ್ರೋಲ್ ಆದ ಊರ್ವಶಿ ರೌಟೇಲಾ; ನಟಿ ಧರಿಸಿದ್ದ ವಸ್ತ್ರದಲ್ಲಿ ರಂಧ್ರ
78ನೇ ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಡೆಯುತ್ತಿದೆ. ಪ್ರತಿ ಬಾರಿಯಂತೆ ಈ ಫೆಸ್ಟಿವಲ್‌ಗೆ ಭಾರತೀಯ ಚಿತ್ರರಂಗದಿಂದ ನಟ-ನಟಿಯರು ಈ ಫೆಸ್ಟಿವಲ್‌ನಲ್ಲಿ ಭಾಗವಹಿಸುತ್ತಾರೆ. ಈ ಬಾರಿ ಬಾಲಿವುಡ್‌ನಿಂದ ಊರ್ವಶಿ ರೌಟೇಲಾ ಕೂಡ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ಗೆ ಹೋಗಿದ್ದಾರೆ. ಈ ಸಲ ಊರ್ವಶಿ ರೌಟೇಲಾಗೆ ಒಂದಲ್ಲ ಎರಡನೇ ಬಾರಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿತ್ತು. ಆದರೆ, ಈ ವೇಳೆ ಊರ್ವಶಿ ರೌಟೇಲಾ ಕಡೆಯಿಂದ ಒಂದು ಎಡವಟ್ಟಾಗಿದೆ.
ನಿನ್ನೆ ಭಾನುವಾರ (ಮೇ 18) ರಂದು ಎರಡನೇ ಬಾರಿಗೆ ಕಾನ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಬ್ರೆಜಿಲ್ ಸಿನಿಮಾ 'ಲಾ ಏಜೆಂಟ್ ಸೆಕ್ರೆಟ್' (O Agente Secreto) ಸಿನಿಮಾ ಸ್ಕ್ರೀನಿಂಗ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ ಊರ್ವಶಿ ರೌಟೇಲಾ ಕಪ್ಪು ಬಣ್ಣದ ಗೌನ್ ಅನ್ನು ಧರಿಸಿ ಕ್ಯಾಮರಾಗಳಿಗೆ ಪೋಸ್ ಕೊಟ್ಟಿದ್ದರು. ಅದಾದ ಕೆಲವೇ ಕ್ಷಣದಲ್ಲಿಯೇ ಊರ್ವಶಿ ಇಂಟರ್‌ನೆಟ್‌ನಲ್ಲಿ ಸುದ್ದಿಯಾಗುವುದಕ್ಕೆ ಶುರುವಾಗಿದ್ದರು. ಅದಕ್ಕೆ ಕಾರಣ ಅವರು ಧರಿಸಿದ್ದ ವಸ್ತ್ರ.

ಊರ್ವಶಿ ರೌಟೇಲಾ ಹೀಗಾಗುತ್ತೆ ಎಂದು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ ಅನಿಸುತ್ತೆ. ಕಪ್ಪು ಗೌನ್‌ನಲ್ಲಿ ಊರ್ವಶಿ ಮಿಂಚುತ್ತಿದ್ದರು. ಕ್ಯಾಮರಾಗಳಿಗೆ ಪೋಸ್ಟ್ ಕೊಟ್ಟು ಫ್ಲೈಯಿಂಗ್ ಕಿಸ್ ಬೇರೆ ಕೊಟ್ಟಿದ್ದರು. ಖುಷಿಯಾಗಿ ಇದ್ದ ಊರ್ವಶಿ ಕೆಲವೇ ಕ್ಷಣಗಳಲ್ಲಿ ವೈರಲ್ ಆಗುವುದಕ್ಕೆ ಶುರುವಾಗಿದ್ದರು. ಊರ್ವಶಿ ಧರಿಸಿದ್ದ ಕಪ್ಪು ಬಣ್ಣದ ಗೌನ್‌ನ ತೋಳಿನ ಭಾಗದಲ್ಲಿ ಸ್ವಲ್ಪ ಹರಿದಂತೆ ಕಾಣುತ್ತಿದೆ. ಇದು ಕ್ಯಾಮರಾ ಮ್ಯಾನ್‌ಗಳು ಕ್ಲಿಕ್ಕಿಸಿದ ಫೋಟೊಗಳಲ್ಲಿ ಸೆರೆಯಾಗಿದ್ದು, ತಕ್ಷಣವೇ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸುವುದಕ್ಕೆ ಶುರುವಾಗಿವೆ.
ಸೋಶಿಯಲ್ ಮೀಡಿಯಾದಲ್ಲಿ ಊರ್ವಶಿ ರೌಟೇಲಾ ಅವರ ಹರಿದ ವಸ್ತ್ರದ ಫೋಟೋಗಳು ಕಾಡ್ಗಿಚ್ಚಿನಂತೆ ಹರಿದಾಡುವುದಕ್ಕೆ ಶುರುವಾಗಿದೆ. ತಕ್ಷಣವೇ ಕಮೆಂಟ್‌ಗಳು ವೇಗವಾಗಿ ಹರಿದಾಡುವುದಕ್ಕೆ ಶುರುವಾಗಿವೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಊರ್ವಶಿಯನ್ನು ಅಣಕಿಸಿ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅದೇ ಮತ್ತೆ ಕೆಲವರು ಊರ್ವಶಿಗೆ ಬೆಂಬಲಕ್ಕೆ ನಿಂತಿದ್ದಾರೆ. ಆದರೆ, ಕಾನ್ಸ್ ಅಂತಹ ಪ್ರತಿಷ್ಠಿತ ಸಮಾರಂಭದಲ್ಲಿ ಈ ಘಟನೆ ನಡೆಯಬಾರದಿತ್ತು ಎಂದೇ ಅಭಿಪ್ರಾಯ ಪಡಲಾಗಿದೆ.
ಇನ್ನು ಊರ್ವಶಿ ಧರಿಸಿದ ಧಿರಿಸಿನ ಬಗ್ಗೆ ಹೇಳುವುದಾದರೇ, ನಜಾ ಸಾಡೆ ಕೌಚರ್ ಡಿಸೈನ್ ಮಾಡಿದ್ದ ಕಪ್ಪು ಬಣ್ಣದ ಸಿಲ್ಕ್ ಟಪೇಟಾ ಗೌನ್ ಅನ್ನು ಊರ್ವಶಿ ರೌಟೇಲಾ ಧರಿಸಿದ್ದರು. ಟ್ರಾನ್ಸ್‌ಪರೆಂಟ್ ತೋಳುಗಳು, ಹೈ ನೆಕ್‌ಲೆಸ್, ಅದಕ್ಕೆ ಅವರು ಧರಿಸಿದ್ದ ನೆಕ್‌ಲೆಸ್ ಮೆರುಗು ನೀಡಿತ್ತು. ಊರ್ವಶಿಯಂತಹ ಸುಂದರಿಗೆ ಆ ಉಡುಪು ಸಿಕ್ಕಾಪಟ್ಟೆ ಹೊಂದಿಕೆಯಾಗುತ್ತಿತ್ತು. ಊರ್ವಶಿಯ ಹೈಟ್‌ಗೂ ಈ ಗೌನ್‌ಗೂ ಸಖತ್ ಆಗಿತೇ ಮ್ಯಾಚ್ ಆಗುತ್ತಿತ್ತು. ಆದರೆ, ಅದೊಂದು ಎಡವಟ್ಟು ಆಗಬಾರದಿತ್ತು.
ಊರ್ವಶಿ ರೌಟೇಲಗೆ ಈ ಬಾರಿಯ ಕಾನ್ಸ್ ಫಿಲ್ಮ್ ಫೆಸ್ಟಿವಲ್ ಯಾಕೋ ಸರಿ ಹೋದಂತೆ ಕಾಣುತ್ತಿಲ್ಲ. ಕಾನ್ಸ್ 2025ನಲ್ಲಿ ಮೊದಲ ಬಾರಿಗೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದ ಊರ್ವಶಿ ಕ್ಯಾಮರಾಗೆ ಪೋಸ್ಟ್ ಕೊಡುತ್ತಿದ್ದರು. ಆ ವೇಳೆ ಸೆಕ್ಯೂರಿಟಿ ಗಾರ್ಡ್ ಅವರಿಗೆ ಫೋಟೋವನ್ನು ತೆಗೆಸಿಕೊಳ್ಳುತ್ತಿದ್ದಾಗ ಅವಸರ ಮಾಡಿದ್ದ. ಯಾಕಂದ್ರೆ, ಹಿಂದೆ ಇನ್ನೂ ಸಾಕಷ್ಟು ಅತಿಥಿಗಳು ಇದ್ದರು. ಹೀಗಾಗಿ ಮೊದಲ ಸಲ ಹೆಚ್ಚು ಫೋಟೋ ತೆಗೆಸಿಕೊಳ್ಳುವ ಅವಕಾಶವನ್ನ ಕಳೆದುಕೊಂಡಿದ್ದರು. ಎರಡನೇ ಬಾರಿ ತೋಳಿನ ಭಾಗದಲ್ಲಿ ಎದ್ದು ಕಾಣುವಂತಹ ಹೋಲ್ ಟ್ರೋಲ್ ಆಗುವಂತೆ ಮಾಡಿತ್ತು.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾರೇ ಊರ್ವಶಿ ರೌಟೇಲಾ ಬ್ಯುಸಿಯಾಗಿದ್ದಾರೆ. ಸನ್ನಿ ಡಿಯೋಲ್ ನಟಿಸಿದ 'ಜಾಟ್' ಸಿನಿಮಾದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದರು. ಅದರ ಜೊತೆಗೆ 'ಕಸೂರ್ 2' ಹಾಗೂ 'ವೆಲ್ ಕಮ್ ಟು ದಿ ಜಂಗಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











