'ಕೂಲಿ' ಗೆದ್ದ ಜೋಷ್‌ನಲ್ಲಿ ಜಿಮ್‌ಗೆ ನುಗ್ಗಿದ ರಜನಿ.. ಸೂಪರ್‌ಸ್ಟಾರ್ ವರ್ಕ್‌ಔಟ್ ಹೇಗಿದೆ? ಈ ವಿಡಿಯೋ ನೋಡಿ!

ಸೂಪರ್‌ಸ್ಟಾರ್ ರಜನಿಕಾಂತ್ ವರ್ಚಸ್ಸು ಸಿನಿಮಾದಲ್ಲೊಂದು ಇದ್ದರೆ, ಸಿನಿಮಾದಿಂದ ಆಚೆಗೊಂದು ಇದೆ. ಅದು ತಲೈವಾ ಅಭಿಮಾನಿಗಳಿಗೂ ಗೊತ್ತು. ರಜನಿಕಾಂತ್ ಅತಿಯಾಗಿ ಸಿಗರೇಟ್, ಮದ್ಯಪಾನ ಮಾಡುತ್ತಿದ್ದರು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯವೇ. ಆದರೆ, ಅದ್ಯಾವಾಗ ಆರೋಗ್ಯ ಕೆಟ್ಟಿತೋ ಅಲ್ಲಿಂದ ರಜನಿ ಶಿಸ್ತಿನ ಸಿಪಾಯಿ ಆಗಿಬಿಟ್ಟರು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಕ್ಕೆ ಶುರು ಮಾಡಿದರು. ಆದರೂ ರಜನಿಗೆ ಜಿಮ್‌ನಲ್ಲಿ ಇರೋದನ್ನು ನೋಡಿದವರು ತೀರಾ ವಿರಳ. ಇಲ್ಲವೇ ನೋಡಿಯೇ ಇಲ್ಲ ಅಂತ ಹೇಳಬಹುದು.

ಇತ್ತೀಚೆಗೆ ರಜನಿಕಾಂತ್ ಜಿಮ್‌ನಲ್ಲಿ ವರ್ಕ್‌ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. 74ರ ಹರಯದಲ್ಲೂ ರಜನಿಯಲ್ಲಿ ಅಷ್ಟೊಂದು ಎನರ್ಜಿ ಬರೋಕೆ ಹೇಗೆ ಸಾಧ್ಯ? ಅನ್ನೋರಿಗೆ ಸೋಶಿಯಲ್ ಮೀಡಿಯಾದಲ್ಲಿಸ ಹರಿದಾಡುತ್ತಿರುವ ಒಂದು ವಿಡಿಯೋ ಉತ್ತರ ಕೊಟ್ಟಿದೆ. ಆದರೆ, ರಜನಿ ಯಾವಾಗಿಂತ ಜಿಮ್‌ಗೆ ಹೋಗುವುದಕ್ಕೆ ಶುರು ಮಾಡಿದರು ಅಂತ ಅಭಿಮಾನಿಗಳು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

After Coolie Release Rajinikanth s Inspiring Fitness Routine at Age 74 Video Goes Viral

ರಜನಿಗೆ ಕೇವಲ ಆಧ್ಯಾತ್ಮದ ಕಡೆಗಷ್ಟೇ ಒಲವು ಎಂದು ಕೊಂಡಿದ್ದವರೇ ಹೆಚ್ಚು. ಆದರೆ, ಆರೋಗ್ಯದ ಕಡೆಗೂ ಸಿಕ್ಕಾಪಟ್ಟೆ ಕಾಳಜಿ ವಹಿಸುತ್ತಿದ್ದಾರೆ. ಇತ್ತೀಚೆಗೆ 'ಕೂಲಿ' ಸಿನಿಮಾ ಆಡಿಯೋ ಲಾಂಚ್ ಇವೆಂಟ್‌ನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಬಗ್ಗೆ ಮಾತಾಡಿದ್ದರು. ತನ್ನ ಅಭಿಮಾನಿಗಳಿಗೆ ಹಾರ್ಟ್, ಲಿವರ್, ಕಿಡ್ನಿಯನ್ನು ಸರಿಯಾಗಿ ಇಟ್ಟುಕೊಳ್ಳುವುದಕ್ಕೆ ಕರೆ ನೀಡಿದ್ದರು. ಹಾಗಿದ್ದರೆ, ರಜನಿ ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುವ ವಿಡಿಯೋದಲ್ಲಿ ಏನಿದೆ? ಅವರು ದೇಹವನ್ನು ಸದೃಢವಾಗಿ ಇಟ್ಟುಕೊಳ್ಳುವುದಕ್ಕೆ ಏನೇನು ಮಾಡುತ್ತಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಜಿಮ್‌ನಲ್ಲಿ ಸೂಪರ್‌ಸ್ಟಾರ್ ರಜನಿ

ರಜನಿಕಾಂತ್‌ಗೆ ಈಗ 74 ವರ್ಷ. ಈ ವಯಸ್ಸಿನಲ್ಲಿ ಒಂದಿಷ್ಟು ದೂರ ನಡಿಕೆ ಮಾಡಿ ಸುಮ್ಮನೆ ಇದ್ದು ಬಿಡುತ್ತಾರೆ. ರಜನಿ ಕೂಡ ಅಷ್ಟೇ ಮಾಡುತ್ತಿರಬಹುದೆಂದು ಎಷ್ಟೋ ಮಂದಿ ಅಂದುಕೊಂಡಿದ್ದರು. ಆದರೆ, ಸೂಪರ್‌ಸ್ಟಾರ್ ಆ ಎಲ್ಲಾ ಊಹೆಗಳನ್ನು ತಲೆ ಕೆಳಗೆ ಮಾಡಿದ್ದಾರೆ. ತಾನೂ ಕೂಡ ಜಿಮ್‌ನಲ್ಲಿಸ ಕಸರತ್ತು ಮಾಡುತ್ತೇನೆಂದು ತೋರಿದ್ದಾರೆ. ಕೆಂಪು ಟಿ ಶರ್ಟ್ ಹಾಗೂ ಶಾರ್ಟ್ಸ್ ಹಾಕಿಕೊಂಡು ವರ್ಕ್‌ಔಟ್‌ಗೆ ಇಳಿದಿದ್ದಾರೆ.

ಜಿಮ್‌ನಲ್ಲಿ ರಜನಿ ಕಸರತ್ತು

ಹೌದು ರಜನಿಕಾಂತ್ ಜಿಮ್‌ನಲ್ಲಿ ಕಸರತ್ತು ಮಾಡುತ್ತಾರೆ. ಅವರಿಗೆ ಅಂತಾನೇ ಒಬ್ಬರು ಟ್ರೈನರ್ ಇದ್ದಾರೆ. ಅವರು ಹೇಳಿಕೊಟ್ಟಂತೆ ರಜನಿಕಾಂತ್ ಪ್ರತಿದಿನ ಜಿಮ್‌ನಲ್ಲಿ ಕಸರತ್ತು ಮಾಡುತ್ತಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲೂ ರಜನಿಕಾಂತ್ ಡಂಬಲ್ಸ್ ಹಿಡಿದು ವರ್ಕ್ ಔಟ್ ಮಾಡಿದ್ದಾರೆ. ಟ್ರೈನರ್ ಹೇಳಿದಂತೆ ಕಾಲುಗಳು ಹಾಗೂ ಕೈಗೆ ವ್ಯಾಯಾಮ ಮಾಡಿದ್ದಾರೆ.

ರಜನಿ ದೈನಂದಿನ ಚಟುವಟಿಕೆ ಏನು?

ಸೂಪರ್‌ಸ್ಟಾರ್ ರಜನಿಕಾಂತ್ ಯಾವಾಗಲೂ ಸಿಂಪಲ್ ಆಗಿರುತ್ತಾರೆ. ಇಡೀ ವಿಶ್ವವೇ ಅವರನ್ನು ಇಷ್ಟ ಪಟ್ಟರೂ ದುಬಾರಿ ಕಾರು, ಲೈಫ್‌ ಸ್ಟೈಲ್ ಇಲ್ಲ. ಒಬ್ಬರ ಸಾಮಾನ್ಯ ವ್ಯಕ್ತಿಯಂತೆ ಜೀವನ ನಡೆಸುತ್ತಿರೋದು ಅಭಿಮಾನಿಗಳ ಪ್ರೀತಿಗೆ ಕಾರಣ. ಏಷ್ಯಾ ನ್ಯೂಸ್ ಪ್ರಕಾರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಬಳಿಕ ಸಿಗರೇಟ್ ಹಾಗೂ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ. ದೇಹ ಹಾಗೂ ಮನಸ್ಸನ್ನು ಫ್ರೆಶ್ ಆಗಿ ಇಟ್ಟುಕೊಳ್ಳುವ ಕಡೆಗೆ ಗಮನ ಹರಿಸುತ್ತಾರೆ. ಪ್ರತಿದಿನ ವಾಕ್ ಮಿಸ್ ಮಾಡುವುದಿಲ್ಲ. ಹಾಗೇ ಯೋಗವನ್ನು ಮಾಡುತ್ತಾರೆ. ಹಾಗೇ ಮಾನಸಿಕ ನೆಮ್ಮದಿಗೆ ಮೆಡಿಟೇಷನ್ ಮಾಡುತ್ತಾರೆ.

ರಜನಿಕಾಂತ್ ಆಹಾರ ಪದ್ಧತಿ ಹೇಗಿದೆ?

ಸೂಪರ್‌ಸ್ಟಾರ್ ರಜನಿಕಾಂತ್ ಆಹಾರದಲ್ಲಿ ಸಿಕ್ಕಾಪಟ್ಟೆ ಕಟ್ಟುನಿಟ್ಟು. ಆರೋಗ್ಯಕರವಲ್ಲ ಆಹಾರವನ್ನು ಮುಟ್ಟುವುದಕ್ಕೆ ಹೋಗುವುದಿಲ್ಲ. ಫಾಸ್ಟ್‌ಫುಡ್‌ಗಳನ್ನು ತಿನ್ನುವುದಿಲ್ಲ. ಚೀಸ್, ಮಯೋನಿಸ್ ಹಾಗೂ ಕೊಬ್ಬು ಇರುವ ಮಾಂಸವನ್ನು ಸೇವಿಸುವುದಿಲ್ಲ. ಹಾಗೇ ಸಕ್ಕರೆ, ಅತಿಯಾದ ಉಪ್ಪು, ಸಹಿ ತಿನಿಸುಗಳ ಹತ್ತಿರವೂ ಸುಳಿಯುವುದಿಲ್ಲ. ತಾಜಾ ಹಣ್ಣುಗಳು, ತರಕಾರಿಗಳು ಹಾಗೂ ಅತಿಯಾದ ಪ್ರೊಟೀನ್ ಇರುವ ಆಹಾರಗಳು ಬಳಸುತ್ತಾರೆಂದು ಎನ್‌ಡಿ ಟಿವಿ ವರದಿ ಮಾಡಿದೆ.

More from Filmibeat

English summary
After Coolie Release Rajinikanth's Inspiring Fitness Routine at Age 74 Video Goes Viral.
Read more about: rajinikanth video celebrity gym
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X