Aishwarya Rai:ಕಾನ್ಸ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ; ಈ ಔಟ್‌ಫಿಟ್ ಡಿಸೈನ್‌ಗೆ ತಗುಲಿದ್ದು 1500 ಗಂಟೆಗಳು
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈಗೂ ಕಾನ್ ಫಿಲ್ಮ್ ಫೆಸ್ಟಿವಲ್‌ಗೂ ಅವಿನಾಭವ ಸಂಬಂಧವಿದೆ. ಕಳೆದ ಹಲವು ವರ್ಷಗಳಿಂದ ಈ ಫೆಸ್ಟಿವಲ್‌ಗೆ ಐಶ್ವರ್ಯಾ ರೈ ಹಾಜರಾಗುತ್ತಿದ್ದಾರೆ. ಇತ್ತೀಚೆಗೆ ಐಶ್ವರ್ಯಾ ರೈ ತಮ್ಮ ಪುತ್ರಿ ಆರಾಧ್ಯಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾ ರೈ ಕಾನ್ಸ್‌ಗೆ ಹೆಜ್ಜೆ ಇಟ್ಟರೆ ಎಲ್ಲರ ಕಣ್ಣು ಅವರು ಧರಿಸೋ ಧಿರಿಸಿನ ಮೇಲೆ ಕಣ್ಣು ಹೋಗುತ್ತೆ.
ಈ ವರ್ಷ ಕೂಡ ಐಶ್ವರ್ಯಾ ರೈ ಬಚ್ಚನ್ ಆಕರ್ಷಕ ಅವತಾರದಲ್ಲಿ ಮಿಂಚಿದ್ದಾರೆ. ಐಶ್ವರ್ಯಾ ರೈ ಅವರ ಫ್ಯಾಷನ್ ಸೆನ್ಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿಸ ಜೋರಾಗಿ ಚರ್ಚೆಯಾಗುತ್ತಿದೆ. ಮತ್ತೊಮ್ಮೆ ಜಗತ್ತಿನ ಸ್ಟೈಲ್ ಐಕಾನ್ ಆಗಿ ಕಾಣಿಸಿಕೊಂಡಿದ್ದಾರೆ. ಕಾನ್ಸ್ ಫಿಲ್ಮ್ ಫೆಸ್ಟಿವಲ್ 2026ರ ರೆಡ್ ಕಾರ್ಪೆಟ್‌ನಲ್ಲಿ ಐಶ್ವರ್ಯಾ ರೈ ಹೆಜ್ಜೆ ಹಾಕುತ್ತಾ ಬಂದರೆ, ಅಲ್ಲಿ ನೆರೆದಿದ್ದವರ ಕಣ್ಣು ಇವರೇ ಮೇಲೆ ನೆಟ್ಟಿತ್ತು.

ಐಶ್ವರ್ಯಾ ರೈ ಪ್ರತಿ ಬಾರಿಯೂ ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ಹೋದಾಗಲೂ ಅವರು ಧರಿಸಿದ ಉಡುಪು ಚರ್ಚೆಯಲ್ಲಿರುತ್ತೆ. ಈ ಬಾರಿ ಕೂಡ ನೆಟ್ಟಿಗರ ಗಮನ ಸೆಳೆದಿದೆ. ವಿಶೇಷ ಅಂದರೆ, ಐಶ್ವರ್ಯಾ ಧರಿಸಿರುವ ಈ ಗೌನ್ ಅನ್ನು ಡಿಸೈನ್ ಮಾಡುವುದಕ್ಕೆ ವಿನ್ಯಾಸಗಾರರು ಸುಮಾರು 1500 ಗಂಟೆಗಳನ್ನು ತೆಗೆದುಕೊಂಡಿದ್ದಾರೆ. ಹಾಗಿದ್ದರೆ, ಈ ಗೌನ್ ವಿಶೇಷತೆ ಏನು? ತಿಳಿಯುವುದಕ್ಕೆ ಮುಂದೆ ಓದಿ.
ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಫ್ರೆಂಚ್ ರಿವೇರಿಯಾದ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ವಸ್ತ್ರ ವಿನ್ಯಾಸಗಾರ ಅಮಿತ್ ಅಗರ್ವಾಲ್ ಕಾನ್ ಫಿಲ್ಮ್ ಫೆಸ್ಟಿವಲ್‌ಗಾಗಿಯೇ 'ಲುಮಿನಾರಾ ಗೌನ್' ಅನ್ನು ಡಿಸೈನ್ ಮಾಡಿದ್ದರು. ಈ ಗೌನ್ ಅನ್ನು ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಹೀಗಾಗಿ ಈ ಕಾಸ್ಟ್ಯೂಮ್ ಅನ್ನು ಡಿಸೈನ್ ಮಾಡುವುದಕ್ಕೆ ಸಾಕಷ್ಟು ಸಮಯವನ್ನು ತೆಗೆದುಕೊಂಡಿದೆ.
ಐಶ್ವರ್ಯಾ ರೈ ಅವರಿಗಾಗಿಯೇ ವಿನ್ಯಾಸ ಮಾಡಿರುವ ಆಬಿಸ್ ಬ್ಲ್ಯೂ ಬಣ್ಣದ ಫಿಶ್ ಕಟ್ ಗೌನ್‌ನಲ್ಲಿ ಸಾವಿರಾರು ಕ್ರಿಸ್ಟಲ್‌ಗಳನ್ನು ಬಳಸಲಾಗಿದೆ. ಅಲ್ಲದೇ ಯೂನಿವರ್ಸ್‌ನಿಂದ ಪ್ರೇರಣೆ ಪಡೆದು, ಬಣ್ಣವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಬಣ್ಣ ಹಾಗೂ ಕ್ರಿಸ್ಟಲ್‌ಗಳ ಬಳಕೆಯಿಂದ ಐಶ್ವರ್ಯಾ ರೈ ನಡೆದಾಗಲೆಲ್ಲಾ ಬೆಳಕು ನಟಿಯ ಬಟ್ಟೆಯ ಮೇಲೆ ಬಿದ್ದು ಚದುರುತ್ತದೆ. ಈ ಎಲ್ಲಾ ಕಾರಣಕ್ಕೆ ಐಶ್ವರ್ಯಾ ರೈ ಕಾನ್ ಫಿಲ್ಮ್‌ಫೆಸ್ಟಿವಲ್‌ನಲ್ಲಿ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.
ಅಮಿತ್ ಅಗರ್ವಾಲ್ 'ಕ್ರಿಸ್ಟಲ್ ವೆಯಿನ್ ಎಂಬ್ರಾಯಿಡರಿ' ವಿಧಾನವನ್ನು ಬಳಸಿ ಈ ಕಾಸ್ಟ್ಯೂಮ್ ಅನ್ನು ವಿನ್ಯಾಸಗೊಳಿಸಿದ್ದಾಗಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಉಡುಗೆಯನ್ನು ವಿನ್ಯಾಸ ಮಾಡುವುದಕ್ಕೆ ಸುಮಾರು 1500 ಗಂಟೆಗಳಿಗೆ ಹೆಚ್ಚು ಕಾಲ ತಗುಲಿದೆ ಎಂದು ಹೇಳಿದ್ದಾರೆ. ಅಂದರೆ, ಹೆಚ್ಚು ಕಡಿಮೆ 62.5 ದಿನಗಳು ತಗುಲಿದೆ.
ಇನ್ನು ಸ್ಟೈಲಿಸ್ಟ್ ಮೋಹಿತ್ ರೈ, ಗೌನ್ ಅಂದವನ್ನು ಹೆಚ್ಚಿಸುವುದಕ್ಕೆ ಗಾಢ ನೀಲಿ ಪ್ಯಾಲೆಟ್‌ಗೆ ಸರಿ ಹೊಂದುವ ಪರಿಕರಗಳನ್ನು ಸೇರಿಸಿದ್ದರು. ಅದೇ ಬಣ್ಣದ ಸ್ಯಾಟಿನ್ ಗ್ಲೌಸ್‌ಗಳು ತೋಳು ರೇಖೆಗಳನ್ನು ವಿಸ್ತರಿಸಿವೆ. ದುಪಟ್ಟಾ-ಶೈಲಿಯ ಡ್ರೇಪ್ ಐಶ್ವರ್ಯಾ ಅವರ ತೋಳುಗಳನ್ನು ಆವರಿಸಿಕೊಂಡಿರೋದು ಹೈಲೈಟ್. ಇನ್ನೂ ಈ ಗೌನ್‌ಗೆ ಧರಿಸಿದ ಆಭರಣಗಳು ರಿಚ್ ಆಗಿದ್ದರೂ, ಗೌನ್‌ಗೆ ಹೊಂದಿಕೆಯಾಗುವಂತೆ ಇತ್ತು. ಇವು ಕತ್ತು ಹಾಗೂ ಕೈಗಳಿಗೆ ಹೊಳಪು ನೀಡಿದ್ದವು.


Click it and Unblock the Notifications
