'ಚಂದ್ರಮುಖಿ ಪ್ರಾಣಸಖಿ' ನಟಿ ಭಾವನಾರಂತೆ IVF ಮೊರೆ ಹೋಗಿ ಮಕ್ಳಳನ್ನು ಪಡೆದ ಸೆಲೆಬ್ರೆಟಿಗಳು ಇವರೇ!
ಕನ್ನಡದ ನಟಿ ಭಾವನಾ ರಾಮಣ್ಣ ವಯಸ್ಸು 40 ದಾಟಿದ ಬಳಿಕ ಮಗುವನ್ನು ಪಡೆಯುವ ನಿರ್ಧಾರ ಮಾಡಿದ್ದರು. ಈ ವಯಸ್ಸಿನಲ್ಲಿ ಮಕ್ಕಳನ್ನು ಪಡೆಯುವುದು ಬಹಳ ಕಷ್ಟ ಎಂದು ವೈದ್ಯರು ಹೇಳುತ್ತಾರೆ. ಆದರೆ, ಇತ್ತೀಚೆಗೆ ತಂತ್ರಜ್ಞಾನವನ್ನು ಬಳಸಿಕೊಂಡು ಮಕ್ಕಳನ್ನು ಪಡೆಯುವುದಕ್ಕೆ ತಾರೆಯರು ಮುಂದಾದ ಉದಾಹರಣೆಗಳು ಇವೆ. ಹಾಗೇ IVF ಸಹಾಯದಿಂದ ಭಾವನಾ ರಾಮಣ್ಣ ಈಗ ಪ್ರೆಗ್ನೆಂಟ್ ಆಗಿದ್ದಾರೆ. ಈ ಸಂತಸದ ವಿಷಯವನ್ನು ಹಂಚಿಕೊಳ್ಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಸಿನಿಮಾ ಕ್ಷೇತ್ರ ಅಷ್ಟೇ ಅಲ್ಲ. ಸಹಜವಾಗಿ ಮಕ್ಕಳನ್ನು ಪಡೆಯಲು ಸಾಧ್ಯವಾಗುವುದಿಲ್ಲವೊ ಅಂತ ಮಹಿಳೆಯರು IVF ಹೊರ ಹೋಗುವುದು ಕಾಮನ್ ಆಗಿದೆ. ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ನಟಿಯರು ಸಾರ್ವಜನಿಕವಾಗಿ ತಮ್ಮ IVF ಜರ್ನಿಯನ್ನು ಹಂಚಿಕೊಂಡಿದ್ದಾರೆ. ಭಾವನಾ ರಾಮಣ್ಣ ಅವರಿಂದ ಹಿಡಿದು ಬಾಲಿವುಡ್‌ನ ತಾರೆಯರು IVF ಮೂಲಕ ಪೋಷಕರಾಗಿದ್ದಾರೆ. ಇಂತಹ ಸೆಲೆಬ್ರೆಟಿಗಳು ಯಾರು ಅಂತ ನೋಡುವುದಾರೇ.

ಲಾರಾ ದತ್ತ ಮತ್ತು ಮಹೇಶ್ ಭೂಪತಿ
ಬಾಲಿವುಡ್ ನಟಿ ಲಾರಾ ದತ್ತ ಹಾಗೂ ಭಾರತದ ಮಾಜಿ ಟೆನ್ನಿಸ್ ಆಟಗಾರ ಮಹೇಶ್ ಭೂಪತಿ IVF ಸಹಾಯದಿಂದ ಪೋಷಕರಾಗಿದ್ದಾರೆ. ಫಲವತ್ತತೆಯ ಸವಾಲುಗಳನ್ನು ಎದುರಿಸಿದ ಬಳಿಕ IVF ಮೂಲಕ ಮಗುವನ್ನು ಪಡೆಯುವುದಕ್ಕೆ ಮುಂದಾಗಿದ್ದರು. ಸಹಜವಾಗಿ ಮಗುವನ್ನು ಪಡೆಯಲು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದ ದಂಪತಿ IVF ಮೊರೆ ಹೋಗಿದ್ದರು ಎಂದು ಪ್ರೈಮ್ IVF ವೆಬ್ ಸೈಟ್ ವರದಿ ಮಾಡಿದೆ. ಇವರಿಗೆ 2012, ಜನವರಿ 20ರಂದು ಪುತ್ರಿ ಸೈರಾ ಜನಿಸಿದರು.
ರೂಪಾಲಿ ಗಂಗೂಲಿ ಮತ್ತು ಅಶ್ವಿನ್ ವರ್ಮಾ
ಹಿಂದಿ ಕಿರುತೆರೆಯ ಜನಪ್ರಿಯ ನಟಿ ರೂಪಾಲಿ ಗಂಗೂಲಿ ಕೂಡ IVF ಮೊರೆ ಹೋಗಿದ್ದರು. 'ಸಾರಾಬಾಯಿ Vs ಸಾರಾಬಾಯಿ', ಅನುಪಮಾ ಅಂತಹ ಧಾರಾವಾಹಿಗಳಲ್ಲಿ ನಟಿಸಿರುವ ನಟಿಗೆ ಸಹಜವಾಗಿ ಮಗುವನ್ನು ಪಡೆಯುವುದಕ್ಕೆ ಸಾಧ್ಯವಾಗಿರಲಿಲ್ಲ. ಮದುವೆ ಆಗಬೇಕು, ಮಕ್ಕಳನ್ನು ಪಡೆಯಬೇಕು ಎಂಬ ಕನಸನ್ನು ಹೊತ್ತಿದ್ದ ನಟಿಗೆ ಥೈರಾಡ್ ಸಮಸ್ಯೆ ಎದುರಾಗಿತ್ತು. ಹೀಗಾಗಿ ಹಲವು ವೈದ್ಯರನ್ನು ಸಂಪರ್ಕಿಸಿದರೂ ಏನೂ ಪ್ರಯೋಜನ ಆಗಿರಲಿಲ್ಲ. ಹೀಗಾಗಿ IVF ಮೊರೆ ಹೋಗಿದ್ದರು. ಈ ಮೂಲಕ 2016ರಲ್ಲಿ ಪುತ್ರ ರುದ್ರಾಂಶ್ ಜನ್ಮ ನೀಡಿದ್ದರು.

ಫರ್ಹಾ ಖಾನ್ ಮತ್ತು ಶಿರಿಶ್ ಕುಂದರ್
ಬಾಲಿವುಡ್‌ನ ಜನಪ್ರಿಯ ಕೊರಿಯೋಗ್ರಾಫರ್ ಹಾಗೂ ನಿರ್ದೇಶಕ ಫರ್ಹಾ ಖಾನ್ ಕೂಡ 43ನೇ ವಯಸ್ಸಿನಲ್ಲಿ ತ್ರಿವಳಿಗಳಿಗೆ ಜನ್ಮ ನೀಡಿದ್ದರು. ಸಾಕಷ್ಟು ದೈಹಿಕ ಸಮಸ್ಯೆಗಳನ್ನು ಎದುರಿಸಿದ ಬಳಿಕ IVF ಮೂಲಕ ಮಕ್ಕಳನ್ನು ಪಡೆಯುವುದಕ್ಕೆ ಮುಂದಾಗಿದ್ದರು. ಫರ್ಹಾ ಹಾಗೂ ಶಿರಿಶ್ ಕುಂದರ್ 2008ರಲ್ಲಿ ಮೂವರು ಮಕ್ಕಳಿಗೆ ಜನ್ಮ ನೀಡಿದ್ದರು. ಈ ಬಗ್ಗೆ ಪ್ರೈಮ್ ಐವಿಎಫ್ ಸೆಂಟರ್ ವರದಿ ಮಾಡಿದೆ.
ಮಾಹಿ ವಿಜ್ ಮತ್ತು ಜೈ ಭಾನುಶಾಲಿ
ಹಿಂದಿ ಕಿರುತೆರೆಯ ಮತ್ತೊಬ್ಬ ಜನಪ್ರಿಯ ನಟಿ ಮಾಹಿ ವಿಜ್ ಹಾಗೂ ಜೈ ಭಾನುಶಾಲಿ ಇಬ್ಬರೂ 2011ರಲ್ಲಿ ವಿವಾಹವಾಗಿದ್ದರು. ಆದರೆ, ಮಾಹಿ ವಿಜ್ ಕೂಡ ಸಹಜವಾಗಿ ಮಗುವನ್ನು ಪಡೆಯುವುದಕ್ಕೆ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಆತ್ಮೀಯರ ಸಲಹೆಯಂತೆ IVF ಮೂಲಕ ಮಗುವನ್ನು ಪಡೆಯುವುದಕ್ಕೆ ಮುಂದಾಗಿದ್ದರು. ಆದರೆ, ಹಲವು ಇದು ಯಶಸ್ಸು ಕಾಣಲಿಲ್ಲ. ಹೀಗಾಗಿ ಕೊನೆಯ ಬಾರಿ ಟ್ರೈ ಮಾಡುವುದಕ್ಕೆ ಮುಂದಾಗಿದ್ದರು. ಕೊನೆಗೆ IVF ಕೈ ಹಿಡಿದಿತ್ತು. 2019ರಲ್ಲಿ ಇವರು ತಾರಾಗೆ ಜನ್ಮ ನೀಡಿದ್ದರು. ಇಂದು ಇವರ ಪುತ್ರಿ ಜನಪ್ರಿಯ ಸೋಶಿಯಲ್ ಮೀಡಿಯಾ ಇನ್ಫ್ಯೂಯೆನ್ಸರ್ ಆಗಿದ್ದಾರೆ.
ಬಹುಭಾಷಾ ನಟಿ ರೇವತಿ
ಬಹುಭಾಷಾ ನಟಿ ರೇವತಿಗೆ ಸಿನಿಮಾದಲ್ಲಿ ಯಶಸ್ಸು ಸಿಕ್ಕಿತ್ತು. ಆದರೆ, ವೈಯಕ್ತಿಕ ಜೀವನದಲ್ಲಿ ಏರಿಳಿತಗಳಾಗಿತ್ತು. ಹೀಗಾಗಿ ಪತಿಯಿಂದ ವಿಚ್ಛೇದನ ಪಡೆದಿದ್ದರು. ಆದರೆ, ಒಂಟಿಯಾಗಿದ್ದ ನಟಿ ಮಗುವನ್ನು ಪಡೆಯುವ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ ಈ ನಟಿ ಕೂಡ IVF ಮೊರೆ ಹೋಗಿದ್ದರು. IVF ಮೂಲಕವೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು ಎಂದು ಬಾಲಿವುಡ್ ಶಾದೀಸ್.ಕಾಮ್ ವರದಿ ಮಾಡಿದೆ.


Click it and Unblock the Notifications











