ನಮ್ರತಾ ಗೌಡ ಫಿಟ್ನೆಸ್ ಗುಟ್ಟು ಏನು? ಬೆಳಗ್ಗೆ, ಮಧ್ಯಾಹ್ನ, ರಾತ್ರಿಯ ಆಹಾರ ಶೈಲಿ ಹೇಗಿರುತ್ತೆ?
ನಮ್ರತಾ ಗೌಡ ಕಿರುತೆರೆಯ ಜನಪ್ರಿಯ ನಟಿ. ಸೀರಿಯಲ್‌ಗಳಲ್ಲಿ ಮಿಂಚಿದ ಬಳಿಕ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಭಾಗವಹಿಸಿ ಜನಪ್ರಿಯತೆ ಗಿಟ್ಟಿಸಿಕೊಂಡ ಬ್ಯೂಟಿ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಿರುವ ನಟಿ ಇವರು. ಅದರಲ್ಲೂ ಮೇಕಪ್, ಡ್ರೆಸ್ ಮಾಡುವ ವಿಚಾರದಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ. ಹೊರಗಡೆ ಎಲ್ಲಿಯೇ ಹೋಗ್ಬೇಕು ಅಂದ್ರು ಮೇಕಪ್‌ಗೆ ಸಾಕಷ್ಟು ಪ್ರಾಮುಖ್ಯತೆಯನ್ನ ನೀಡ್ತಾರೆ. ನಮ್ರತಾ ಅವರನ್ನ ಕಿರುತೆರೆಯ ಬ್ಯೂಟಿ ಕ್ವೀನ್ ಎಂದರೆ ತಪ್ಪಾಗುವುದಿಲ್ಲ.
ಬ್ಯೂಟಿ ಹೆಚ್ಚಾಗಬೇಕು ಅಂದ್ರೆ ದೇಹಕ್ಕೆ ಒಂದಷ್ಟು ವ್ಯಾಯಾಮ ಅತ್ಯಗತ್ಯವಾಗಿ ಬೇಕಾಗುತ್ತದೆ. ದೇಹಕ್ಕೆ ಅದರದ್ದೇ ಆದ ವ್ಯಾಯಾಮ ಬೇಕು. ಬೆವರು ಇಳಿಯಬೇಕು. ಆಗ ಚರ್ಮದ ಕಾಂತಿ ಇನ್ನಷ್ಟು ಹೊಳೆಯುತ್ತದೆ. ನಟಿಯರಿಗೆ ಫಿಟ್ನೆಸ್ ಬಹಳ ಮುಖ್ಯ. ಅವರು ಕೂಡ ತಮ್ಮ ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ದಿನಕ್ಕೆ ಒಂದೆರಡು ಗಂಟೆಗಳ ಕಾಲವಾದರೂ ವರ್ಕೌಟ್ ಮಾಡುತ್ತಾರೆ. ಜಿಮ್‌ನಲ್ಲಿ ಬೆವರಿಳಿಸುತ್ತಾರೆ.

ಇಷ್ಟೇ ಅಲ್ಲ ಡಯೆಟ್ ಕೂಡ ಬಹಳ ಮುಖ್ಯವಾಗುತ್ತದೆ. ವರ್ಕೌಟ್ ಮಾಡಿದ್ದಕ್ಕೆ ತಕ್ಕ ಹಾಗೇ ಡಯೆಟ್ ಕೂಡ ಬಹಳ ಮುಖ್ಯವಾಗುತ್ತದೆ. ದೇಹಕ್ಕೆ ಬೇಕಾದ ಪ್ರೋಟೀನ್ ಇರುವ ಆಹಾರವನ್ನು ಹೆಚ್ಚಾಗಿ ತಿನ್ನಬೇಕು. ಅದನ್ನ ಬಿಟ್ಟು ಕೆಲವೊಮ್ಮೆ ತಿನ್ನುವ ಆಸೆಗೆ ಸ್ವೀಟ್ಮ ಐಸ್ ಕ್ರೀಂ ಅದು ಇದು ಅಂತ ಡಯೆಟ್ ಮುರಿದು ಬಿಡುತ್ತಾರೆ. ಆದರೆ, ತಿನ್ನುವುದರಲ್ಲಿ ಏನೇ ಜಾಸ್ತಿಯಾದರೂ ವರ್ಕೌಟ್‌ನಲ್ಲೂ ಕರಗಿಸಬಹುದು. ನಮ್ರತಾ ಗೌಡ ಕೂಡ ತಮ್ಮ ಫಿಟ್ನೆಸ್ ಕಡೆಗೆ ಹೆಚ್ಚು ಒತ್ತು ಕೊಡುತ್ತಾರೆ.
ಕೆಲವೊಮ್ಮೆ ನಮ್ರತಾ ಗೌಡ ಅವರು ದಪ್ಪ ಏನಾದ್ರೂ ಆಗಿದ್ದರೆ, ಅವರ ಅಮ್ಮನೇ ಹೇಳ್ತಾರೆ. ಇನ್ನು ಸ್ವಲ್ಪ ಸಣ್ಣ ಆಗಬೇಕು ಅಂತಾರೆ. ದಪ್ಪ ಆಗಿದ್ದೀನಿ ಅಂತ ಗೊತ್ತಾದ್ರೆ ಸಾಕು ನಮ್ರತಾ ಗೌಡ ಜಿಮ್‌ಗೆ ಹೋಗಿ ತೂಕ ಇಳಿಸುವತ್ತ ಗಮನ ಹರಿಸುತ್ತಾರೆ. ಅಷ್ಟೇ ಅಲ್ಲ ಡಯೆಟ್ ಕೂಡ ಮೆಂಟೈನ್ ಮಾಡ್ತಾರೆ. ತಮ್ಮ ಬ್ರೇಕ್ ಫಾಸ್ಟ್, ಲಂಚ್‌ನಲ್ಲಿ ಪ್ರೋಟಿನ್ ಯುಕ್ತ ಆಹಾರವನ್ನೇ ತಿಂತಾರೆ. ಬೆಳಗ್ಗಿನ ತಿಂಡಿಗೆ ಗ್ರೀನ್ ನೂಡಲ್ಸ್ ಅಂದ್ರೆ ಅವರು ಹಾಕಿರುವ ಫೋಟೋ ನೋಡಿದ್ರೆ ಡಿಫ್ರೆಂಟ್ ಆಗಿ ಮಾಡಿರುವ ನೂಡಲ್ಸ್ ಎಂಬುದು ಕಾಣಿಸುತ್ತದೆ. ಅದರ ಜೊತೆಗೆ ಒಂದು ಆಮ್ಲೆಟ್, ಜೊತೆಗೆ ಒಂದಷ್ಟು ಕಲ್ಲಂಗಡಿ ಹಣ್ಣನ್ನ ಕ್ಯಾರಿ ಮಾಡ್ತಾರೆ.
ಮಧ್ಯಾಹ್ನದ ವೇಳೆಗೂ ಅವರ ಊಟದಲ್ಲೂ ವೆರೈಟಿ ಐಟಂಗಳು ಇರಲಿದೆ. ಬಿಟ್ರೂಟ್ ಚಪಾತಿ ಅದಕ್ಕೆ ಜೊತೆಯಾಗಿ ಸೊಪ್ಪಿನ ಪಲ್ಯ ತಿನ್ನುತ್ತಾರೆ. ಜೊತೆಗೆ ಒಂದಿಷ್ಟು ದ್ರಾಕ್ಷಿ, ಒಂದಿಷ್ಟು ಸೌತೆಕಾಯಿಯನ್ನು ಸೇವಿಸುತ್ತಾರೆ. ಇದೆಲ್ಲವೂ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಕೊಡಲಿದೆ. ಊಟ ಮಾಡುವಾಗಲೂ ಎಷ್ಟು ತಿನ್ನಬೇಕು? ಏನು ತಿನ್ನಬೇಕು ಎಂಬುದನ್ನು ಅರಿತಿರಬೇಕು. ಅದನ್ನ ನಮ್ರತಾ ಗೌಡ ಚೆನ್ನಾಗಿ ಫಾಲೋ ಮಾಡುತ್ತಾರಂತೆ. ಅದರಲ್ಲೂ ಮನೆ ಊಟಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. ಹೊರಗಡೆ ತಿಂದರೂ ಕೂಡ ಮನೆಯ ಊಟವನ್ನೆ ಹೆಚ್ಚಾಗಿ ಬಳಸುತ್ತಾರೆ.
ಬರೀ ಊಟದ ವಿಚಾರದಲ್ಲಿ ಮಾತ್ರವಲ್ಲ, ವರ್ಕೌಟ್‌ನಲ್ಲಿ ಮುಂದಿದ್ದಾರೆ ನಮ್ರತಾ ಗೌಡ. ಜಿಮ್‌ನಲ್ಲಿ ಬೆವರಿಳಿಸೋದಷ್ಟೇ ಅಲ್ಲ. ಡ್ಯಾನ್ಸ್ ಕೂಡ ಮಾಡ್ತಾರೆ. ನಮ್ರತಾ ಒಳ್ಳೆ ಡ್ಯಾನ್ಸರ್ ಅನ್ನೋದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರ. ಚಿಕ್ಕ ವಯಸ್ಸಿನಿಂದಲೂ ಡ್ಯಾನ್ಸ್ ಕಲಿತಿದ್ದಾರೆ. ಹೆಚ್ಚಿನ ಸಮಯ ಡ್ಯಾನ್ಸ್ ಕೂಡ ಮಾಡುತ್ತಾರೆ. ಈ ಮೂಲಕ ದೇಹದ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳುತ್ತಾರೆ.


Click it and Unblock the Notifications











