24 ಗಂಟೆಗಳಲ್ಲಿ 1 ಕೋಟಿ ಫಾಲೋವರ್ಸ್; ಯಾರಿದು ಚೀನಾ ಸುಂದರಿ? ಯಾಕಿಷ್ಟು ಕ್ರೇಜ್?
ವಿಶ್ವದಲ್ಲಿ ಸೋಶಿಯಲ್ ಮೀಡಿಯಾ ಅತ್ಯಂತ ಪವರ್‌ಫುಲ್ ಮಾಧ್ಯಮವಾಗಿಬಿಟ್ಟಿದೆ. ಟ್ಯಾಲೆಂಟ್ ಇದ್ದೋರಿಗೆ ಇಲ್ಲಿ ಭರಪೂರ ಅವಕಾಶ. ಯಾವ ಹೀರೋಗಳಿಗೂ ಇಲ್ಲದೇ ಇರುವಷ್ಟು ಫಾಲೋವರ್ಸ್ ಈ ಸೋಶಿಯಲ್ ಮೀಡಿಯಾ ಇನ್ಫ್ಯೂಯೆನ್ಸರ್‌ಗಳಿಗೆ ಇದ್ದಾರೆ. 24ಸ ಗಂಟೆಗಳಲ್ಲಿ ಇದೇ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್‌ಗಳಾಗಿ ಮೆರೆದಿದ್ದಾರೆ. ಊಹೆಗೂ ನಿಲುಕದೇ ಇರುವಷ್ಟು ಫಾಲೋವರ್ಸ್ ಅನ್ನು ಪಡೆದುಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಚೀನಾದ ಸುಂದರಿಯೊಬ್ಬಳು ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿದ್ದಾಳೆ. ಮೂರು ವರ್ಷ ಸೋಶಿಯಲ್ ಮೀಡಿಯಾದಿಂದಲೇ ಕಾಣೆಯಾಗಿದ್ದ ಇನ್ಫ್ಯೂಯೆನ್ಸರ್ ದಿಢೀರನೇ ಮತ್ತೆ ಎಂಟ್ರಿ ಕೊಟ್ಟಿದ್ದರು. ಈಕೆ ಸೋಶಿಯಲ್ ಮೀಡಿಯಾಗೆ ಪ್ರವೇಶ ಮಾಡಿದ್ದು ಗೊತ್ತಾಗುತ್ತಿದ್ದಂತೆ ಚೀನಾ ಮಂದಿ ಮುಗಿಬಿದ್ದು ಈಕೆಯನ್ನು ಫಾಲೋ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಕೇವಲ 24 ಗಂಟೆಯಲ್ಲಿ ಈಕೆಯನ್ನು 1 ಕೋಟಿಗೂ ಅಧಿಕ ಮಂದಿ ಫಾಲೋ ಮಾಡಿದ್ದಾರೆ. ಅಷ್ಟಕ್ಕೂ ಚೀನಾದ ಈ ಸುಂದರಿಯ ಹೆಸರು ಜಿಯಾಂಗ್ ಚೆಂಗ್ಲಾನ್ (Jiang Chenglan). ಬರೊಬ್ಬರಿ ಮೂರು ವರ್ಷಗಳ ಬಳಿಕ ಸೋಶಿಯಲ್ ಮೀಡಿಯಾಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾಳೆ. ತನ್ನ ಹೆಸರಿನಲ್ಲಿ ಹೊಸ ಖಾತೆಯನ್ನು ತೆರೆಯುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದಾಳೆ. ಅಷ್ಟಕ್ಕೂ ಈಕೆಗೆ ಯಾಕಿಷ್ಟು ಕ್ರೇಜ್? ಇಷ್ಟೊಂದು ಫಾಲೋವರ್ಸ್ ಯಾಕೆ ಬಂದ್ರು? ಮೂರು ವರ್ಷ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದು ಏಕೆ? ತಿಳಿಯುವುದಕ್ಕೆ ಮುಂದೆ ಓದಿ.
ಸೋಶಿಯಲ್ ಮೀಡಿಯಾಗೆ ಹೊಸಬಳಲ್ಲ
ಜಿಯಾಂಗ್ ಚೆಂಗ್ಲಾನ್ ಈ ಸುಂದರಿಯನ್ನು ಚೀನಾದ ಮಂದಿ ಮೇಕಪ್ ಗುರು ಅಂತಲೇ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಈಕೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ಮೇಕಪ್ ಟಿಪ್ಸ್‌ಗಳಿಂದ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಳು. 'ಚೆಂಗ್‌ಶಿಯಾನ್' ಎಂಬ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಜನಪ್ರಿಯವಾಗಿದ್ದಳು. ಈ ಖಾತೆಯಲ್ಲಿ ಸುಮಾರು 30 ಮಿಲಿಯನ್ ಫಾಲೋವರ್ಸ್ ಅಂದರೆ, 3 ಕೋಟಿ ಮಂದಿ ಫಾಲೋವರ್ಸ್ ಇದ್ದರು. ಹೀಗಿದ್ದ ಜಿಯಾಂಗ್ ಚೆಂಗ್ಲಾನ್ ಇದ್ದಕ್ಕಿದ್ದ ಹಾಗೇ ವಿಡಿಯೋ ಹಾಕುವುದನ್ನೇ ನಿಲ್ಲಿಸಿದ್ದಳು. ಅಲ್ಲಿಂದ ಈಕೆಯ ಫಾಲೋವರ್ಸ್‌ಗೆ ಈಕೆ ಎಲ್ಲಿದ್ದಾಳೆ? ಏನು ಮಾಡುತ್ತಿದ್ದಾಳೆ ಎಂಬುವುದೇ ಚಿಂತೆಯಾಗಿತ್ತು.
ಕಣ್ಮರೆಯಾಗಿದ್ದು ಯಾಕೆ?
ಜಿಯಾಂಗ್ ಚೆಂಗ್ಲಾನ್ 2023 ಮೇ ತಿಂಗಳಿನಿಂದ ಇದ್ದಕ್ಕಿದ್ದ ಹಾಗೇ ಸೋಶಿಯಲ್ ಮೀಡಿಯಾದಿಂದ ದೂರ ಉಳಿದುಬಿಟ್ಟಳು. ಇದ್ದಕ್ಕಿದ್ದ ಹಾಗೇ ವಿಡಿಯೋ ಮಾಡುವುದನ್ನೇ ನಿಲ್ಲಿಸಿ ಬಿಟ್ಟಳು. ಬರೋಬ್ಬರಿ ಮೂರು ವರ್ಷ ಜಿಯಾಂಗ್ ಚೆಂಗ್ಲಾನ್ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಅಷ್ಟಕ್ಕೂ ಈಕೆ ದಿಢೀರನೇ ಕಾಣೆಯಾಗಿದ್ದಕ್ಕೆ ಕಾರಣ ಏನು? ಅನ್ನೋದು ಈಗ ಬೆಳಕಿಗೆ ಬಂದಿದೆ.

3 ವರ್ಷ ಕಾನೂನು ಸಮರ
ಇದೇ ತಿಂಗಳು ಅಂದರೆ, ಮೇ 13 ರಂದು ಜಿಯಾಂಗ್ ಚೆಂಗ್ಲಾನ್ ಸೋಶಿಯಲ್ ಮೀಡಿಯಾಗೆ ತನ್ನ ಹೆಸರು ಇಟ್ಟುಕೊಂಡು ದಿಢೀರನೇ ಎಂಟ್ರಿ ಕೊಟ್ಟಿದ್ದಳು. ಈ ವೇಳೆ 3 ವರ್ಷ ಸೋಶಿಯಲ್ ಮೀಡಿಯಾದಿಂದ ದೂರು ಉಳಿದಿದ್ದು ಏಕೆ? ಅನ್ನೋದನ್ನು ರಿವೀಲ್ ಮಾಡಿದ್ದಾಳೆ. ತನ್ನ ಸೋಶಿಯಲ್ ಮೀಡಿಯಾವನ್ನು ಹ್ಯಾಂಡಲ್ ಮಾಡುತ್ತಿದ್ದ ಹಿಂದಿನ ಕಂಪನಿ 'ಶಾಂಘೈ ಜಿನ್ ಜಿಯಾ ' ದೊಂದಿಗಿನ ವಿವಾದದಿಂದ ಕಾನೂನು ಹೋರಾಟ ನಡೆಸುತ್ತಿದ್ದಳು. ಹೀಗಾಗಿ ವಿಡಿಯೋ ಮಾಡುವುದನ್ನು ನಿಲ್ಲಿಸಬೇಕಾಯ್ತು. ಈ ಹಿಂದಿನ ಅಕೌಂಟ್‌ಗೂ ಅಲ್ಲಿನ ಅನ್‌ಲೈನ್ ಶಾಪಿಂಗ್‌ಗೂ ತನಗೂ ಯಾವುದೇ ಸಂಬಂಧವಿಲ್ಲ. ಇಲ್ಲಿಂದ ಯಾವುದೇ ವಸ್ತುಗಳನ್ನು ಖರೀದಿಸಬೇಡಿ ಎಂದು ಹೇಳಿಕೊಂಡಿದ್ದಾಳೆ.
ಮೊದಲ ವಿಡಿಯೋ ವೀವ್ಸ್ ಎಷ್ಟು?
3 ವರ್ಷಗಳ ಬಳಿಕ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ಜಿಯಾಂಗ್ ಚೆಂಗ್ಲಾನ್ ಮೊದಲ ವಿಡಿಯೋ ಪೋಸ್ಟ್ ಮಾಡಿದ್ದಳು. ಅದಕ್ಕೆ ಬರೋಬ್ಬರಿ 44 ಲಕ್ಷಕ್ಕೂ ಅಧಿಕ ವೀವ್ಸ್ ಸಿಕ್ಕಿದೆ. ಇದು ಇನ್ಮುಂದೆ ಮೇಕಪ್ ವಿಡಿಯೋ ಜೊತೆಗೆ ಬದುಕಿನ ಬಗೆಗೂ ವಿಡಿಯೋಗಳನ್ನು ಮಾಡುವುದಾಗಿ ಜಿಯಾಂಗ್ ಚೆಂಗ್ಲಾನ್ ಹೇಳಿಕೊಂಡಿದ್ದಾಳೆ.


Click it and Unblock the Notifications