5 ಮಕ್ಕಳಾದ್ಮೇಲೆ ಬಹುಕಾಲದ ಗೆಳತಿ ಜೊತೆ ಪೋರ್ಚುಗೀಸ್ ಸೂಪರ್‌ಸ್ಟಾರ್ ರೊನಾಲ್ಡೊ ನಿಶ್ಚಿತಾರ್ಥ; ಇಷ್ಟು ವರ್ಷ ಕಾದಿದ್ದೇಕೆ?

ಫುಟ್‌ಬಾಲ್ ಲೋಕದ ಜೀವಂತ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೊ ಈಗ ವಿಶ್ವದಾದ್ಯಂತ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ತಮ್ಮ ಬಹುಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ ಅರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಎಲ್ಲೆಡೆ ಈ ಬಗ್ಗೆ ಚರ್ಚೆಯಾಗುತ್ತಿದೆ. ಗೆಳತಿ ಜಾರ್ಜಿನಾ ರೋಡ್ರಿಗಸ್‌ಗೆ ದುಬಾರಿ ಡೈಮಂಡ್ ರಿಂಗ್‌ ತೊಡಿಸಿ ಪ್ರಪೋಸ್ ಮಾಡಿದ್ದಾರೆ. ಈ ಸುದ್ದಿಯನ್ನು ರೊನಾಲ್ಡೊ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.

ಪೋರ್ಚುಗೀಸ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಹಾಗೂ ಗೆಳತಿ ಜಾರ್ಜಿನಾ ರೋಡ್ರಿಗಸ್ ಈಗಾಗಲೇ ಮದುವೆಯಾಗಿದ್ದಾರೆಂದು ಹಲವರು ಭಾವಿಸಿದ್ದರು. ಯಾಕಂದ್ರೆ, ಈ ಜೋಡಿ ಕಳೆದ 10 ವರ್ಷಗಳಿಂದ ಲಿವಿಂಗ್ ಟುಗೆದರ್‌ನಲ್ಲಿ ಇದ್ದರು. ಹಲವು ಪಂದ್ಯಗಳಲ್ಲಿ, ಇವೆಂಟ್‌ಗಳಲ್ಲಿ ಹಾಗೂ ಸಂದರ್ಶನಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಹೀಗಾಗಿ ಇವರು ಈಗಾಗಲೇ ಮದುವೆ ಆಗಿರಬಹುದೆಂದು ಎಲ್ಲರೂ ಭಾವಿಸಿದ್ದರು.

Cristiano Ronaldo and Georgina Rodriguez Engagement Reasons for Delay

ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಜಾರ್ಜಿನಾ ರೋಡ್ರಿಗಸ್ ಜೋಡಿ ಬಗ್ಗೆ ಹಲವು ಇಂಟ್ರೆಸ್ಟಿಂಗ್ ಕಥೆಗಳಿವೆ. 2016ರಲ್ಲಿ ಸ್ಪ್ಯಾನಿಷ್ ಗುಸ್ಸಿ ಸ್ಟೋರ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದರು. ಆ ವೇಳೆ ರೊನಾಲ್ಡೊ ಫುಟ್‌ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್ ಕ್ಲಬ್‌ಗೆ ಆಡುತ್ತಿದ್ದರು. ಹಾಗೇ ಪೋರ್ಚುಗೀಸ್ ರಾಷ್ಟ್ರೀಯ ತಂಡದ ಸ್ಟಾರ್ ಆಟಗಾರರಾಗಿದ್ದರು. ಇತ್ತ ಜಾರ್ಜಿನಾ ರೋಡ್ರಿಗಸ್ ಪಾರ್ಟ್‌ಟೈಮ್ ಮಾಡೆಲ್ ಆಗಿದ್ದರು. ಇಬ್ಬರ ಭೇಟಿ ದಿನದಿಂದ ದಿನಕ್ಕೆ ಗಾಢವಾಗುತ್ತಾ ಹೋಯ್ತು.

ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಜಾರ್ಜಿನಾ ರೋಡ್ರಿಗಸ್ ಸಂಬಂಧದ ಬಗ್ಗೆ ಆರಂಭದ ದಿನಗಳಲ್ಲಿ ಹೆಚ್ಚು ಮಹತ್ವ ಕೊಟ್ಟಿರಲಿಲ್ಲ. ಫುಟ್‌ಬಾಲ್ ಆಟಗಾರರ ಜೀವನದಲ್ಲಿ ಇದೆಲ್ಲ ಸಾಮಾನ್ಯ ಎಂದುಕೊಂಡಿದ್ದರು. ಆದರೆ, ದಿನಗಳು ಉರುಳಿದಂತೆ ಈ ಸಂಬಂಧ ಗಟ್ಟಿಯಾಗುತ್ತಾ ಹೋಯ್ತು. ಕಳೆದ ಹತ್ತು ವರ್ಷಗಳಲ್ಲಿ ಇವರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ಇದನ್ನು ನೋಡಿ ಇಬ್ಬರೂ ರಹಸ್ಯವಾಗಿ ಮದುವೆಯಾಗಿದ್ದಾರೆಂಬ ಸುದ್ದಿ ಕೂಡ ಹರಿದಾಡಿತ್ತು.

ಆದ್ರೀಗ ಕ್ರಿಶ್ವಿಯಾನೋ ರೊನಾಲ್ಡೋ ಹಾಗೂ ಜಾರ್ಜಿನಾ ರೋಡ್ರಿಗಸ್ ಇಬ್ಬರ ನಿಶ್ಚಿತಾರ್ಥ ಆ ಊಹಾಪೋಹಕ್ಕೆ ತೆರೆ ಎಳೆದಿದೆ. ಅಷ್ಟಕ್ಕೂ ಈ ಜೋಡಿ ಈಗ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಮುಂದಾಗಿದ್ದರೂ, ಇಬ್ಬರೂ ಕಳೆದ 10 ವರ್ಷಗಳಿಂದ ಸಹ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಪಾಡ್‌ಕಾಸ್ಟ್‌ ಒಂದರಲ್ಲಿ ತನ್ನ ಗೆಳತಿಯನ್ನು ರೊನಾಲ್ಡೋ 'ಪತ್ನಿ' ಹೇಳಿಕೊಂಡಿದ್ದರು. ಆದರೂ, 10 ವರ್ಷಗಳ ಕಾಲ ಒಟ್ಟಿಗೆ ಇದ್ಮೇಲೂ ಮದುವೆ ಆಗುವುದಕ್ಕೆ ಇಷ್ಟೊಂದು ಸಮಯ ಏಕೆ ಹಿಡಿಯಿತು ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.

ಕ್ರಿಶ್ಚಿಯಾನೋ ರೊನಾಲ್ಡೋ ಬದುಕೇ ಒಂದು ಇಂಟ್ರೆಸ್ಟಿಂಗ್ ಸ್ಟೋರಿ. ಫುಟ್‌ಬಾಲ್‌ ಸ್ಟಾರ್ ಆಗಿ ಹೊರಹೊಮ್ಮಿದ್ದ ರೊನಾಲ್ಡೋ ಕ್ರಿಸ್ಟಿಯಾನೋ ಜೂನಿಯರ್‌ಗೆ ತಂದೆಯಾಗಿದ್ದರು. ಆದರೆ, ಮೊದಲೇ ಮಗುವಿನ ತಾಯಿಯ ಗೌಪ್ಯತೆ ಹೊರ ಬಾರದಂತೆ ಅಗ್ರಿಮೆಂಟ್‌ ಅನ್ನು ಮಾಡಿಕೊಳ್ಳಲಾಗಿತ್ತು. ಇದಾದ ಬಳಿಕ ರಷ್ಯಾ ಮೂಲದ ಮಾಡಲ್ ಜೊತೆ ಐದು ರಿಲೇಷನ್‌ಶಿಪ್‌ನಲ್ಲಿದ್ದರು. ಆದರೆ, ಅದು 2017ರಲ್ಲಿ ಕೊನೆಗೊಂಡಿತ್ತು. ಆಗ ಮತ್ತೆ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದರು. ಆನಂತರ ಜಾರ್ಜಿನಾ ರೋಡ್ರಿಗಸ್ ಅವರೊಂದಿಗೆ ಲಿವ್‌ ಇನ್‌ನಲ್ಲಿದ್ದರು. ಇಬ್ಬರೂ ಸಂಬಂಧ ಬೆಳೆದ ಐದು ತಿಂಗಳಲ್ಲಿಯೇ ರೋಡ್ರಿಗಸ್ ಅಲಾನ್ ಮಾರ್ಟಿನ್‌ಗೆ ಜನ್ಮ ನೀಡಿದರು.

2022ರ ಏಪ್ರಿಲ್‌ನಲ್ಲಿ ರೋಡ್ರಿಗಸ್ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದರು. ಆದರೆ, ಹೆರಿಗೆ ಸಮಯದಲ್ಲಿ ಗಂಡು ಮಗು ಮೃತಪಟ್ಟಿತ್ತು. ಆ ವೇಳೆ ಈ ಜೋಡಿ "ಇದು ಅತೀ ದೊಡ್ಡ ನೋವು" ಎಂದು ಬಣ್ಣಿಸಿತ್ತು. ಕ್ರಿಶ್ಚಿಯಾನೋ ರೊನಾಲ್ಡೋ ಮದುವೆ ಆಗುವುದಕ್ಕೆ ಯಾಕಿಷ್ಟು ಸಮಯ ತೆಗೆದುಕೊಂಡರು ಎನ್ನುವುದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ, ದಾಂಪತ್ಯ ಜೀವನಕ್ಕಿಂತ ಹೆಚ್ಚಾಗಿ ವೃತ್ತಿ ಬದುಕಿನ ಬಗ್ಗೆ ಗಮನ ಹರಿಸಿದ್ದಿರಬಹುದೆಂದು ಊಹಿಸಲಾಗಿದೆ.

More from Filmibeat

English summary
Explore the reasons behind the prolonged engagement of Cristiano Ronaldo and Georgina Rodriguez, shedding light on their relationship dynamics.
Read more about: celebrity engagement marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X