ಈ ಫೋಟೋದಲ್ಲಿ ವಿಜಯಲಕ್ಷ್ಮಿ ದರ್ಶನ್ ಜಾಕೆಟ್, ಬೆಲ್ಟ್, ಪರ್ಸ್, ಚಪ್ಪಲಿ ಬೆಲೆ ₹7.67 ಲಕ್ಷ; ಯಾವುದಕ್ಕೆ ಎಷ್ಟೆಷ್ಟು?
ಸಿನಿಮಾ ಲೋಕದಲ್ಲಿ ಫ್ಯಾಷನ್‌ಗೆ ಮಹತ್ವ ಜಾಸ್ತಿ. ಸದಾ ಕಾಲ ಚೆನ್ನಾಗಿ ಕಾಣಿಸಿಕೊಳ್ಳಬೇಕು ಅಂತ ಪ್ರಯತ್ನ ಮಾಡುತ್ತಿರುತ್ತಾರೆ. ಹೀಗಾಗಿ ನಟ-ನಟಿಯರು ದುಬಾರಿ ಲೈಫ್‌ಸ್ಟೈಲ್ ಮೊರೆ ಹೋಗುತ್ತಾರೆ. ಬ್ರ್ಯಾಂಡೆಡ್ ಬಟ್ಟೆ, ಶೋ, ಚಪ್ಪಲಿ, ಪರ್ಸ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಅವುಗಳ ಬೆಲೆ ಲಕ್ಷ ದಾಟಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಸಿನಿಮಾ ಮಂದಿ ಬಲು ದುಬಾರಿ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ತನ್ನ ಫ್ಯಾಷನ್ ಸೆನ್ಸ್‌ನಿಂದಲೇ ಗಮನ ಸೆಳೆಯುತ್ತಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುವ ಫೋಟೊಗಳನ್ನು ನೋಡಿದರೇ ಅದು ಗಮನಕ್ಕೆ ಬರುತ್ತೆ. ಈ ಕಾರಣಕ್ಕೆ ಹೆಂಗಳೆಯರು ವಿಜಯಲಕ್ಷ್ಮಿ ದರ್ಶನ್ ಅವರನ್ನು ನಿರಂತರವಾಗಿ ಫಾಲೋ ಮಾಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ಅವರ ಫೋಟೊ ಒಂದು ವೈರಲ್ ಆಗುತ್ತಿದೆ. ಈ ಫೋಟೊದಲ್ಲಿ ಅವರ ಬಳಿ ಇರುವ ವಸ್ತುಗಳ ಬೆಲೆಯ ಬಗ್ಗೆ ಲೈಫ್‌ಸ್ಟೈಲ್ ಲೋಕದಲ್ಲಿ ಚರ್ಚೆಯಾಗುತ್ತಿದೆ.

ದರ್ಶನ್ ಕೂಡ ಬ್ರ್ಯಾಂಡೆಡ್ ಶರ್ಟ್, ಪ್ಯಾಂಟ್, ಶೋಗಳನ್ನು ಬಳಸುತ್ತಾರೆ. ಅವರನ್ನೇ ವಿಜಯಲಕ್ಷ್ಮಿ ದರ್ಶನ್ ಕೂಡ ಫಾಲೋ ಮಾಡುತ್ತಾರೆ. ಯುವತಿಯರಿಗೆ ಇವರ ಕಾಸ್ಟ್ಯೂಮ್ ಸೆನ್ಸ್ ಮೇಲೆ ಮೊದಲಿನಿಂದಲೂ ಕಣ್ಣು ಇತ್ತು. ಈ ಫೋಟೊದಲ್ಲೂ ಅವರು ಬಳಿ ಇರುವ ವಸ್ತುಗಳ ಬೆಲೆ ಮೇಲೆ ಕಣ್ಣು ಬಿದ್ದಿದೆ. ಅದರಲ್ಲೂ ಅವುಗಳ ಬೆಲೆ 767,227.57 ಲಕ್ಷ ರೂಪಾಯಿ ಅಂತ ಕೇಳಿದ ಮೇಲಂತೂ ನೆಟ್ಟಿಗರು ಹೌಹಾರಿದ್ದಾರೆ.
ಇತ್ತೀಚೆಗೆ ವಿಜಯಲಕ್ಷ್ಮಿ ದರ್ಶನ್ ಇನ್‌ಸ್ಟಾಗ್ರಾಂನಲ್ಲಿ ಒಂದು ಫೋಟೊವನ್ನು ಪೋಸ್ಟ್ ಮಾಡಿದ್ದರು. ಅವರು ಧರಿಸಿದ ಬ್ಲಾಕ್ & ರೆಡ್ ಫ್ಲೋರಲ್ ಡ್ರೆಸ್, ಪರ್ಸ್, ಬೆಲ್ಟ್, ಚಪ್ಪಲಿ ಇವುಗಳ ಬೆಲೆಯನ್ನು ಡಿಕೋಡ್ ಮಾಡಲಾಗಿದೆ. 'ದಿ ಸ್ಯಾಂಡಲ್‌ವುಡ್ ಕ್ಲೋಸೆಟ್' ಅನ್ನೋ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್ ಅವರು ಏಳುವರೆಗೂ ಲಕ್ಕೂ ಅಧಿಕ ಬೆಲೆ ಬಾಳುವ ವಸ್ತುಗಳನ್ನು ಈ ಫೋಟೊದಲ್ಲಿ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.
ವಿಜಯಲಕ್ಷ್ಮಿ ದರ್ಶನ್ ಬ್ಲ್ಯಾಕ್ & ರೆಡ್ ಫ್ಲೋರಲ್ ಡ್ರೆಸ್‌ನಲ್ಲಿ ಆಕರ್ಷಕವಾಗಿ ಕಾಣಿಸುತ್ತಿದ್ದಾರೆ. ಈ ಡ್ರೆಸ್ ಹೆಂಗಳೆಯರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ನೋಡುವುದಕ್ಕೂ ಅಷ್ಟೇ ಚೆಂದವಾಗಿ ಕಾಣುವ ಈ ಡ್ರೆಸ್‌ನ ಬೆಲೆ ಕೂಡ ಅಷ್ಟೇ ದುಬಾರಿಯಾಗಿದೆ. ಅಂದ್ಹಾಗೆ, ಈ ಬ್ಲ್ಯಾಕ್ & ರೆಡ್ ಫ್ಲೋರಲ್ ಡ್ರೆಸ್ 'ನಿಕೋಬಾರ್' ಬ್ರ್ಯಾಂಡ್‌ನದ್ದಾಗಿದೆ. ಇದರ ಬೆಲೆ 6.900 ಸಾವಿರ ರೂಪಾಯಿ ಎಂದು 'ದಿ ಸ್ಯಾಂಡಲ್‌ವುಡ್ ಕ್ಲೋಸೆಟ್' ಹೇಳಿದೆ.
ಈ ಡ್ರೆಸ್‌ಗಿಂತ ದುಬಾರಿ ವಿಜಯಲಕ್ಷ್ಮಿ ಧರಿಸಿದ ಬೆಲ್ಡ್. ಇದು ಕೂಡ ಬ್ರ್ಯಾಂಡೆಡ್ ಬೆಲ್ಟ್. ಲೂಯೀ ವಿಥಾನ್ ಬ್ರ್ಯಾಂಡ್‌ನ ಬೆಲ್ಡ್ ಆಗಿದ್ದು, ಬ್ಲ್ಯಾಕ್ & ರೆಡ್ ಫ್ಲೋರಲ್ ಡ್ರೆಸ್ ಜೊತೆಗೆ ಹೊಂದಿಕೊಂಡಿದೆ. ನೋಡುವುದಕ್ಕೆ ಈ ಸಣ್ಣದಾಗಿ ಕಂಡರೂ ಇದರ ಬೆಲೆ ಬರೋಬ್ಬರಿ 41,500 ರೂಪಾಯಿ ಎಂದರೆ ನಂಬುತ್ತೀರಾ? LV mini Flowergram 15mm Reversible Belt ಬೆಲೆ 50 ಸಾವಿರಕ್ಕೆ ಕೆಲವೇ ಸಾವಿರ ಕಮ್ಮಿ ಅಷ್ಟೇ.
ಎಲ್ಲಕ್ಕಿಂತ ದುಬಾರಿ ವಿಜಯಲಕ್ಷ್ಮಿ ದರ್ಶನ್ ಕೈಯಲ್ಲಿ ಇರುವ ಈ ಪರ್ಸ್. ಇದರ ಬೆಲೆ ಸಾವಿರಗಳಲ್ಲಿ ಇದೆ ಅಂದುಕೊಳ್ಳಬೇಡಿ. ಜಗತ್ತಿನ ಅತ್ಯಂತ ದುಬಾರಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿರೋ ಲೂಯೀ ವಿಥಾನ್‌ನ ಈ ಪರ್ಸ್ (Petite Malle Epi) ಬೆಲೆ ಬರೋಬ್ಬರಿ 6 ಲಕ್ಷ ರೂಪಾಯಿಗಳು. ಹಾಗೇ ವಿಜಯಲಕ್ಷ್ಮಿ ದರ್ಶನ್ ಧರಿಸಿರುವ ಶೋ/ಚಪ್ಪಲಿ ಕೂಡ 1.18 ಲಕ್ಷ ರೂಪಾಯಿಯಲ್ಲಿದೆ. ಒಟ್ಟು ಇವೆಲ್ಲವೂ ಸೇರಿದರೆ, 7.67 ಲಕ್ಷ ರೂಪಾಯಿ ಆಗುತ್ತೆ.
Disclaimer: ವಿಜಯಲಕ್ಷ್ಮಿ ದರ್ಶನ್ ಈ ಪೋಟೊದಲ್ಲಿ ಧರಿಸಿರುವ ಕಾಸ್ಟ್ಯೂಮ್ ಹಾಗೂ ವಸ್ತುಗಳ ಬೆಲೆಯನ್ನು ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಮೂಲಗಳಿಂದ ತೆಗೆದುಕೊಳ್ಳಲಾಗಿದ್ದು, ಫಿಲ್ಮಿಬೀಟ್ ಕನ್ನಡ ಇದರ ಬೆಲೆಯನ್ನು ಅಧಿಕೃತವಾಗಿ ಪರಿಶೀಲಿಸಿರುವುದಿಲ್ಲ.


Click it and Unblock the Notifications