ಡೇಟಿಂಗ್ ಆಪ್‌ಗಳಲ್ಲಿ ಪಾರ್ಟ್ನರ್ ಹುಡುಕುತ್ತಿರೋ ಸೆಲೆಬ್ರೆಟಿಗಳು; ಸ್ಯಾಂಡಲ್‌ವುಡ್‌ನಲ್ಲೂ ಇದೆ ಈ ಟ್ರೆಂಡ್?

ಇತ್ತೀಚೆಗೆ ಯುವ ಸಮುದಾಯ ಡೇಟಿಂಗ್ ಆಪ್‌ಗಳ ಮೊರೆ ಹೋಗುತ್ತಿರುವುದು ಹೆಚ್ಚಾಗಿದೆ. ಅದಕ್ಕಾಗಿಯೇ ಕೆಲವು ಡೇಟಿಂಗ್‌ ಆಪ್‌ಗಳು ಇವೆ. ಸಿನಿಮಾ ಸ್ಟಾರ್‌ಗಳು ಕೂಡ ಈ ಡೇಟಿಂಗ್ ಆಪ್‌ಗಳನ್ನು ಬಳಸುತ್ತಾರೆ. ಕೆಲವು ಆಪ್‌ಗಳು ಸೆಲೆಬ್ರಿಟಿಗಳಿಗಾಗಿ, ಉದ್ಯಮಿಗಳಿಗಾಗಿ ಅಂತಾನೇ ಇವೆ. ಹೈ ಪ್ರೋಫೈಲ್ ಇರುವವರಿಗೆ ಮಾತ್ರ ಈ ಆಪ್‌ಗಳಲ್ಲಿ ಪ್ರವೇಶ ನೀಡಲಾಗುತ್ತೆ. ಇಲ್ಲಿ ಹುಡುಗ, ಹುಡುಗಿಯರ ಪ್ರೊಫೈಲ್ ಮ್ಯಾಚ್ ಆದರೆ, ಡೇಟಿಂಗ್‌ಗೆ ಹೋಗುತ್ತಾರೆ.

ಯುವ ಸಮುದಾಯವನ್ನು ಸೇರಿಸುವ ಹಲವು ಡೇಟಿಂಗ್ ಆಪ್‌ಗಳು ಇವೆ. ಕೆಲವರು ಈ ಡೇಟಿಂಗ್ ಆಪ್‌ಗಳ ಮೂಲಕವೇ ಪಾರ್ಟ್ನರ್‌ಗಳನ್ನು ಹುಡುಕಿಕೊಂಡಿದ್ದಾರೆ. ಮದುವೆ ಆಗಿ ಸುಖ ಸಂಸಾರವನ್ನು ಕಟ್ಟಿಕೊಂಡಿದ್ದಾರೆ. ಸಾಮಾನ್ಯವಾಗಿ ಡೇಟಿಂಗ್ ಆಪ್‌ಗಳನ್ನು ಬಳಸುವವರ ವಿವರಗಳನ್ನು ಇಲ್ಲಿ ಗೌಪ್ಯವಾಗಿ ಇಡಲಾಗುತ್ತೆ. ಆದರೂ, ಕೆಲವೊಮ್ಮೆ ಸೆಲೆಬ್ರೆಟಿಗಳ ಪ್ರೊಫೈಲ್‌ಗಳು ಲೀಕ್ ಆಗಿದ್ದೂ ಇವೆ. ಹೀಗಾಗಿ ಸೆಲೆಬ್ರೆಟಿಗಳು ತಮ್ಮ ಗೌಪ್ಯತೆಯನ್ನು ಕಾಪಾಡುವ ಡೇಟಿಂಗ್‌ ಆಪ್‌ಗಳ ಮೊರೆ ಹೋಗುತ್ತಿದ್ದಾರೆ.

Explore how Indian film celebrities are increasingly finding partners through dating apps

ಸ್ಯಾಂಡಲ್‌ವುಡ್ ತಾರೆಯರು ಕೂಡ ಡೇಟಿಂಗ್ ಆಪ್‌ಗಳನ್ನು ಗೌಪ್ಯವಾಗಿ ಬಳಸುತ್ತಿದ್ದಾರೆ. ಈಗ ಈ ಡೇಟಿಂಗ್ ಆಪ್‌ಗಳು ಸೆಲೆಬ್ರೆಟಿಗಳ ಪಾಲಿಗೆ ಮ್ಯಾಟ್ರಿಮೊನಿ ಸೈಟ್‌ಗಳಾಗಿ ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ ಕಿರುತೆರೆ ನಟಿಯೊಬ್ಬರು ತನ್ನ ಲೈಫ್ ಪಾರ್ಟ್ನರ್ ಅನ್ನು ಇಂತಹದ್ದೇ ಡೇಟಿಂಗ್ ಆಪ್‌ಗಳ ಮೂಲಕ ಹುಡುಕಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗಿದ್ದರೆ, ಯಾವೆಲ್ಲ ಡೇಟಿಂಗ್ ಆಪ್‌ಗಳಿವೆ? ಯಾರೆಲ್ಲ ಡೇಟಿಂಗ್ ಆಪ್‌ಗಳನ್ನು ಬಳಸುತ್ತಿದ್ದಾರೆ? ಡೇಟಿಂಗ್ ಆಪ್‌ಗಳನ್ನು ಬಳಸುತ್ತಿರುವ ಸೆಲೆಬ್ರೆಟಿಗಳು ಯಾರು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಹೆಚ್ಚುತ್ತಿದೆ ಡೇಟಿಂಗ್ ಆಪ್ ಕ್ರೇಜ್

ಇತ್ತೀಚೆಗೆ ಕನ್ನಡ ಕಿರುತೆರೆಯ ನಟಿ ಮಾನಸ ಮನೋಹರ್ ಡೇಟಿಂಗ್ ಆಪ್ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೆ ಕೊಟ್ಟಿದ್ದರು. 'ಜೊತೆ ಜೊತೆಯಲಿ', 'ಲಕ್ಷ್ಮಿ ಬಾರಮ್ಮ' ಅಂತಹ ಜನಪ್ರಿಯ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಫುಟ್‌ಬಾಲ್ ಆಟಗಾರ ಪ್ರೀತಂ ಚಂದ್ರ ಅವರೊಂದಿಗೆ 2ನೇ ಮದುವೆ ಆಗಿದ್ದರು. ಈ ಮದುವೆ ಕಾರಣವಾಗಿದ್ದು ಒಂದು ಡೇಟಿಂಗ್ ಆಪ್‌. ಈ ಡೇಟಿಂಗ್ ಆಪ್ ಮೂಲಕ ಇಬ್ಬರೂ ಭೇಟಿಯಾಗಿ ಈಗ ದಂಪತಿಗಳಾಗಿದ್ದಾರೆ. ಅಂದ್ಹಾಗೆ, ಇದು ಇಬ್ಬರದ್ದೂ ಎರಡನೇ ಮದುವೆ.

"ನಾನು ಡೇಟಿಂಗ್ ಆಪ್‌ ಸುದ್ದಿಗೆ ಹೋಗಿರಲಿಲ್ಲ. ಅದೇ ವೇಳೆ ನಾನು ಸಪರೇಟ್ ಆಗಿದ್ದೆ. ನನಗೆ ಇನ್ನೂ ಡಿವೋರ್ಸ್ ಕೂಡ ಸಿಕ್ಕಿರಲಿಲ್ಲ. ಆ ಪ್ರಕ್ರಿಯೆ ಒಂದು ಕಡೆ ನಡೆಯುತ್ತಿತ್ತು. ಹೀಗೆ ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ನಮ್ಮ ಇಂಡಸ್ಟ್ರಿಯಲ್ಲಿ ಇರೋರು ಅವರು ನೀನು ಈಗ ಬೇರೆಯಾಗಿದ್ದೀಯಲ್ಲ. ಲೈಫ್ ಪೂರ್ತಿ ನೀನು ಹೀಗೆ ಇರುತ್ತೀಯಾ? ನಿನ್ನ ಭಾವನೆಗಳನ್ನು ಹಂಚಿಕೊಳ್ಳುವುದಕ್ಕಾದರೂ ಯಾರಾದರೂ ಬೇಕಲ್ಲ. ನೋಡು ಈ ರೀತಿ ಒಂದು ಆಪ್ ಇದೆ. ನೀನು ಯಾಕೆ ಟ್ರೈ ಮಾಡಬಾರದು ಅಂತ ಹೇಳಿದರು. ಆಗ ಟ್ರೈ ಮಾಡಿದೆ" ಎಂದು ಡೇಟಿಂಗ್ ಆಪ್‌ ಬಗ್ಗೆ ಹೇಳಿಕೊಂಡಿದ್ದಾರೆ.

Explore how Indian film celebrities are increasingly finding partners through dating apps

ಸೆಲೆಬ್ರಿಟಿಗಳಿಗೆ ಯಾಕೆ ಬೇಕು ಡೇಟಿಂಗ್ ಆಪ್?

ಬಾಲಿವುಡ್ ಸೇರಿದಂತೆ ಹಲವು ಚಿತ್ರರಂಗದ ಸೆಲೆಬ್ರಿಟಿಗಳಿಗೆ ಡೇಟಿಂಗ್ ಆಪ್‌ ಕಾಮನ್. ಕನ್ನಡದಲ್ಲೂ ಕೆಲವರು ಡೇಟಿಂಗ್ ಆಪ್‌ ಅನ್ನು ಬಳಸುತ್ತಿದ್ದಾರೆ. ಆದರೆ, ಅದು ಖಾಸಗಿಯಾಗಿಯೇ ಇಟ್ಟುಕೊಂಡಿದ್ದಾರೆ. ಆದ್ಯಾಕೆ ಡೇಟಿಂಗ್ ಆಪ್‌ಗಳ ಮೊರೆ ಹೋಗುತ್ತಿದ್ದಾರೆ? ಅಲ್ಲಿಯೇ ಯಾಕೆ ಪಾರ್ಟ್ನರ್‌ಗಳನ್ನು ಹುಡುಕುತ್ತಿದ್ದಾರೆ? ಈ ಬಗ್ಗೆ ರಾಕೇಶ್ ಅಡಿಗ ಫಿಲ್ಮಿಬೀಟ್ ಕನ್ನಡಕ್ಕೆ ಕಾರಣಗಳನ್ನು ಕೊಟ್ಟಿದ್ದಾರೆ.

"ಸಿನಿಮಾದವರು ಬದುಕು ಹೇಗಿರುತ್ತೆ ಅಂದರೆ, ಅವರು ಬೇರೆಯವರನ್ನು ಮೀಟ್ ಮಾಡುವುದಕ್ಕೆ ಆಗುವುದಿಲ್ಲ. ನಮ್ಮನ್ನು ಔಟ್ ಸೈಡರ್ ರೀತಿಯೇ ಟ್ರೀಟ್ ಮಾಡುತ್ತಾರೆ. ಬೇರೆ ವೃತ್ತಿಯಲ್ಲಿ ಇರುವವರೊಂದಿಗೆ ಅಷ್ಟು ಸುಲಭಕ್ಕೆ ಆಗುವುದಿಲ್ಲ. ಹೀಗಾಗಿ ಎಲ್ಲೂ ಸೇರುವುದಕ್ಕೆ ಆಗುವುದಿಲ್ಲ. ಆದರೆ, ಸಿನಿಮಾದವರೊಂದಿಗೆ ಆಗಬೇಕು. ಹೀಗಾಗಿ ಡೇಟಿಂಗ್ ಆಪ್‌ಗಳು ಕೂಡ ಮ್ಯಾಟ್ರಿಮೊನಿ ಸೈಟ್‌ಗಳಂತೆಯೇ ಕೆಲಸ ಮಾಡುತ್ತಿದೆ. ಮುಂಚೆಯಿಂದಲೂ ಇತ್ತು. ಆದರೆ, ಆಗ ಈ ಡೇಟಿಂಗ್ ಆಪ್‌ಗಳನ್ನು ಕ್ಯಾರೆಕ್ಟರ್‌ ಲೆಸ್ ಎನ್ನುವ ಭಾವನೆ ಇತ್ತು. ಡೇಟಿಂಗ್ ಆಪ್‌ಗಳು ಮುಂಚೆಯಿಂದಲೂ ಹೀಗೆ ಇದ್ದವು. ಅಲ್ಲಿ ಆಯ್ಕೆ ಇರುತ್ತೆ. ಮದುವೆ ಆಗುವುದಕ್ಕೆ ಮಾತ್ರ, ಒನ್‌ ನೈಟ್ ಸ್ಟ್ಯಾಂಡ್‌ಗೆ ಅಲ್ಲ ಅಂತ. ರಿಲೇಷನ್‌ಶಿಪ್ ಸೀರಿಯಸ್ ಆಗಿ ನೋಡುತ್ತಿರುವ ಹೆಣ್ಣು ಮಕ್ಕಳು ಅಲ್ಲಿ ಸಿಗುತ್ತಿರುತ್ತಾರೆ." ಎಂದು ಸೆಲೆಬ್ರಿಟಿಗಳು ಡೇಟಿಂಗ್ ಆಪ್ ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Take a Poll

"ಡೇಟಿಂಗ್ ಆಪ್ ಅಂದರೆ ಕ್ಯಾರೆಕ್ಟರ್ ಲೆಸ್"

ಕನ್ನಡದ ಸ್ಟಾರ್‌ಗಳು ಡೇಟಿಂಗ್ ಆಪ್ ಬಳಸುತ್ತಿದ್ದರೂ ಹೇಳಿಕೊಳ್ಳುವುದಕ್ಕೆ ಸಂಕೋಚ ಪಡುತ್ತಾರೆ. ಅಷ್ಟಕ್ಕೂ ಇದು ಅವರ ಖಾಸಗಿ ವಿಚಾರ ಆಗಿರುವುದರಿಂದ ಹೇಳಲೇಬೇಕು ಅಂತೇನೂ ಇಲ್ಲ. ಅದಕ್ಕೆ ಸಮಾಜದಲ್ಲಿ ಡೇಟಿಂಗ್ ಆಪ್ ಬಗ್ಗೆ ಇರುವ ಅಭಿಪ್ರಾಯ ಕಾರಣ. "ಕನ್ನಡ ಚಿತ್ರರಂಗದಲ್ಲಿ ಆ ಸ್ಟಿರಿಯೋ ಟೈಪ್ ಹೋಗಿಲ್ಲ. ಡೇಟಿಂಗ್ ಆಪ್‌ ಬಳಸುತ್ತಿದ್ದಾರೆ ಅಂದರೆ, ಕ್ಯಾರೆಕ್ಟರ್ ಲೆಸ್ ಎನ್ನುವಂತಹ ಭಾವನೆ ಬಂದು ಬಿಟ್ಟಿದೆ. ಡೇಟಿಂಗ್ ಆಪ್ ಬಳಸುತ್ತಿದ್ದೇನೆ ಅಂತ ಹೇಳುವುದಕ್ಕೆ ಹೆದರುತ್ತಾರೆ. ಸಂಕೋಚ ಪಟ್ಟುಕೊಳ್ಳುತ್ತಾರೆ. ಇನ್ನು ಬಳಸುತ್ತಿರುವವರು ಪರ್ಸನಲ್ ಆಗಿ ಇಟ್ಟುಕೊಳ್ಳುತ್ತಾರೆ. ಪಬ್ಲಿಕ್ ಆಗಿ ಶೇರ್ ಮಾಡುವುದಿಲ್ಲ. ಈಗ ಇತ್ತೀಚೆಗೆ ನೋಡಿದೆ. ಕನ್ನಡ ಡೇಟಿಂಗ್ ಆಪ್‌ಗಳೇ ಬಂದಿವೆ. ಹೋಗ್ತಾ ಹೋಗ್ತಾ ಈ ಡೇಟಿಂಗ್ ಆಪ್‌ಗಳು ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ ಅಂತ ಅನಿಸುತ್ತೆ." ಎನ್ನುತ್ತಾರೆ ರಾಕೇಶ್ ಅಡಿಗ.

Explore how Indian film celebrities are increasingly finding partners through dating apps

ಯಾವ್ಯಾವ ಡೇಟಿಂಗ್ ಆಪ್‌ಗಳಿವೆ?

ಭಾರತದಲ್ಲಿ ನಾಲ್ಕೈದು ಡೇಟಿಂಗ್ ಆಪ್‌ಗಳು ಇವೆ. ಇವುಗಳಲ್ಲಿ ಎರಡು ಡೇಟಿಂಗ್‌ ಆಪ್‌ಗಳನ್ನು ಸೆಲೆಬ್ರೆಟಿಗಳು ಹೆಚ್ಚಾಗಿ ಬಳಸುತ್ತಾರೆ. ಅವುಗಳು ಯಾವುವು ಅಂತ ನೋಡುವುದಾರೇ,

ರಾಯ (Raya): ಬಾಲಿವುಡ್‌ನಿಂದ ಹಿಡಿದು ಬಹುತೇಕ ಸೆಲೆಬ್ರಿಟಿಗಳು ಬಳಸುವ ಆಪ್ ಇದೆ. ಇತ್ತೀಚೆಗೆ ಬಾಲಿವುಡ್ ನಟಿ ಜಾಹ್ನವಿ ಕಪೂರ್, ಶ್ರದ್ಧಾ ಕಪೂರ್, ಹೃತಿಕ್ ರೋಷನ್, ಆದಿತ್ಯ ರಾಯ್ ಕಪೂರ್ ಹೆಸರುಗಳು ಈ ಡೇಟಿಂಗ್ ಆಪ್‌ ಜೊತೆ ತಳುಕು ಹಾಕಿಕೊಂಡಿದ್ದವು.

ಟಿಂಡರ್ (Tinder): ಇತ್ತೀಚೆಗೆ ಸಾಮಾನ್ಯ ಜನರ ಬಾಯಲ್ಲಿ ಕೇಳಿ ಬರುತ್ತಿರುವ ಡೇಟಿಂಗ್ ಆಪ್ ಇದು. ಆದರೆ, ಫೇಕ್ ಪ್ರೊಪೈಲ್ ಹಾಗೂ ಖಾಸಗಿತನದ ಕೊರೆತೆಯಿಂದ ಇದು ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ.

ಬಂಬಲ್ (Bumble): ಟಿಂಡರ್ ಜನಪ್ರಿಯತೆ ಪಡೆದುಕೊಂಡ ಬೆನ್ನಲ್ಲೇ ಬಂಬಲ್ ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ಇದೂ ಕೂಡ ಫೇಕ್ ಪ್ರೊಫೈಲ್ ಹಾಗೂ ಖಾಸಗಿತನವನ್ನು ಕಾಪಾಡುವಲ್ಲಿ ಸೋತಿತ್ತು.

ಹಿಂಜ್ (Hinge): ಸದ್ಯ ಚಾಲ್ತಿಯಲ್ಲಿ ಇರೋ ಡೇಟಿಂಗ್ ಆಪ್ ಹಿಂಜ್. ಇದು ಸೆಲೆಬ್ರಿಟಿಗಳ ಫೇವರಿಟ್. ಇಲ್ಲಿ ಬೇರೆ ಭಾಷೆಯ ಸೆಲೆಬ್ರಿಟಿಗಳು ಇದ್ದಾರೆ. ದಕ್ಷಿಣ ಭಾರತದ ತಾರೆಯರು ಹೆಚ್ಚಾಗಿ ಹಿಂಜ್ ಡೇಟಿಂಗ್ ಆಪ್ ಅನ್ನು ಬಳಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಇತ್ತೀಚೆಗೆ ಇದು ಕೂಡ ಸಮಸ್ಯೆಯನ್ನು ಎದುರಿಸುತ್ತಿದೆ ಎನ್ನಲಾಗಿದೆ.

"ಟಿಂಡರ್ ಇತ್ತು. ಅದು ಈಗ ತುಂಬಾನೇ ಔಟ್‌ ಡೇಟೆಡ್ ಆಗಿಬಿಟ್ಟಿದೆ. ಬಂಬಲ್ ಕೂಡ ಔಟ್ ಡೇಟೆಡ್ ಆಗಿದೆ. ಇತ್ತೀಚೆಗೆ ರಿಸೆಂಟ್‌ ಆಗಿ ನನ್ನ ಸ್ನೇಹಿತರು ಹೊಸ ಆಪ್ ಬಳಸುತ್ತಿದ್ದರು. ಅದು ಹಿಂಜ್. ಇದು ಈಗ ಹ್ಯಾಪನಿಂಗ್ ಆಗಿದೆ. ಪ್ರೈವಸಿಯಿದೆ, ಪ್ರೊಫೈಲ್ ಮೇಲೆ ನಂಬಿಕೆ ಇಡಬಹುದು ಎಂದು ಹೇಳುತ್ತಿದ್ದರು. ನಾನು ಇತ್ತೀಚೆಗೆ ಯಾವುದೇ ಡೇಟಿಂಗ್ ಆಪ್‌ ಅನ್ನು ಬಳಸುತ್ತಿಲ್ಲ." ಎಂದು ನಟ ರಾಕೇಶ್ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

More from Filmibeat

English summary
Explore how Indian film celebrities are increasingly finding partners through dating apps.
Read more about: dating celebrities actors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X