'ಗಾಳಿಪಟ'ದ ಡೈಸಿ ಬೋಪಣ್ಣ ಈಗೇನು ಮಾಡುತ್ತಿದ್ದಾರೆ? ಅವರ ಲೈಫ್‌ಸ್ಟೈಲ್ ಹೇಗಿದೆ ನೋಡಿ
ಕೆಲವು ನಟಿಯರು ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಕೆಲವರು ಪರಭಾಷೆಯ ಕಡೆಗೆ ಮುಖ ಮಾಡಿ ಅಲ್ಲೇ ಉಳಿದುಕೊಂಡಿದ್ದಾರೆ. ಮತ್ತೆ ಕೆಲವರು ಮದುವೆ ಬಳಿಕ ನಟನೆಯಿಂದಲೇ ಅಂತರ ಕಾಯ್ದುಕೊಂಡಿದ್ದಾರೆ. ಅಂತಹವರಲ್ಲಿ 'ಗಾಳಿಪಟ' ಸಿನಿಮಾದ ನಾಯಕಿ ಡೈಸಿ ಬೋಪಣ್ಣ ಕೂಡ ಒಬ್ಬರು. ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಈ ನಟಿ ಸಿನಿಮಾಗಳಿಂದ ದೂರ ಉಳಿದು ದಶಕವೇ ಆಗಿದೆ.
ಸಿನಿಮಾದಿಂದ ದೂರ ಉಳಿದರೆ ಏನಂತೆ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿದ 'ಗಾಳಿಪಟ' ಸಿನಿಮಾದಲ್ಲಿ ಡೈಸಿ ಬೋಪಣ್ಣ ತುಂಬಾನೇ ಇಷ್ಟ ಆಗಿದ್ದರು. ಹುಡುಗರ ಪಾಲಿನ ಡ್ರೀಮ್ ಗರ್ಲ್ ಆಗಿದ್ದರು. ಗಾಳಿಪಟದಂತಹ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದರೂ ಅವರಿಗೆ ಒಳ್ಳೊಳ್ಳೆ ಪ್ರಾಜೆಕ್ಟ್‌ಗಳು ಸಿಗಲಿಲ್ಲ. ಹೀಗಾಗಿ ಕನ್ನಡದಲ್ಲಿ ಅವರು ನಟಿಸಿದ ಕೊನೆಯ ಸಿನಿಮಾ 'ಕ್ರೇಜಿ ಲೋಕ'. ಇದು 2012ರಲ್ಲಿ ರಿಲೀಸ್ ಆಗಿತ್ತು.

2024ರಲ್ಲಿ 'ರಶ್' ಎನ್ನುವ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಅದು ಈಟಿವಿ ಓಟಿಟಿ ವೇದಿಕೆಯಲ್ಲಿ ರಿಲೀಸ್ ಆಗಿತ್ತು. 12 ವರ್ಷಗಳ ಬಳಿಕ ಒಂದೇ ಒಂದು ಸಿನಿಮಾದಲ್ಲಿ ನಟಿಸಿದ್ದು, ಕನ್ನಡ ಸಿನಿಮಾಗಳ ಕಡೆಗೆ ಸುಳಿವಿಲ್ಲ. ಹಾಗಂತ ಮದುವೆ ಬಳಿಕ ಸುಮ್ಮನೆ ಕೂತಿಲ್ಲ. ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಹೆಲ್ತ್ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಸಸ್ಯಗಳನ್ನು ಆಧರಿಸಿದ ಪೌಷ್ಠಿಕಾಂಶ ಬಗ್ಗೆ ಆಗಾಗ ವಿಡಿಯೋ ಮಾಡಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.
ಮುಂದೆ ಓದಿ
'ಗಾಳಿಪಟ' ನಾಯಕಿ ಡೈಸಿ ಬೋಪಣ್ಣ ಲೈಫ್ ಸ್ಟೈಲ್
ಡೈಸಿ ಬೋಪಣ್ಣ ಈಗ ಸೂಪರ್ ಬೈಕರ್
ವರ್ಕ್‌ಔಟ್, ಪೌಷ್ಠಿಕಾಂಶಗಳ ಎಕ್ಸ್‌ಪರ್ಟ್
ಡೈಸಿ ಬೋಪಣ್ಣ 2011ರಲ್ಲಿ ಅಮಿತ್ ಜಾಜು ಎಂಬುವವರನ್ನು ವಿವಾಹವಾಗಿದ್ದರು. ಅಲ್ಲಿಂದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ತೀರಾ ಕಡಿಮೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಡೈಸಿ ಬೋಪಣ್ಣ ಹೆಚ್ಚು ಆಕ್ಟಿವ್ ಆಗಿದ್ದಾರೆ. ವರ್ಕ್‌ಔಟ್ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಇದರೊಂದಿಗೆ ಸಸ್ಯಗಳನ್ನು ಆಧರಿಸಿದ ಪೌಷ್ಟಿಕಾಂಶಗಳ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಅಲ್ಲದೆ ಬ್ಯೂಟಿ, ಫ್ಯಾಷನ್ ಹಾಗೂ ಸೂಪರ್ ಬೈಕರ್ ಆಗಿಯೂ ಹೊರಹೊಮ್ಮಿದ್ದಾರೆ. ಇತ್ತೀಚೆಗೆ ಡೈಸಿ ಬೋಪಣ್ಣ ಲೈಫ್ ಸ್ಟೈಲ್ ಸಂಪೂರ್ಣವಾಗಿ ಬದಲಾಗಿದೆ.
ಇತ್ತೀಚೆಗೆ ಅವರ ಇನ್‌ಸ್ಟಾಗ್ರಾಂ ಅನ್ನು ನೋಡಿದರೆ, ಅದರಲ್ಲಿ ಹೆಲ್ತ್ ಬಗ್ಗೆನೇ ಹೆಚ್ಚು ವಿಡಿಯೋಗಳನ್ನು ಮಾಡಿದ್ದಾರೆ. ಕೆಲವೊಮ್ಮೆ ವರ್ಕ್‌ಔಟ್‌ಗಳ ವಿಡಿಯೋಗಳನ್ನು ಪೋಸ್ಟ್ ಮಾಡಿದರೆ, ಮತ್ತೆ ಕೆಲವೊಮ್ಮೆ ತಲೆ ಕೂದಲಿನ ಆರೈಕೆಗೆ ನೈಸರ್ಗಿಕ ಎಣ್ಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗೇ ಇನ್ನೊಂದು ವಿಡಿಯೋದಲ್ಲಿ ಸೋಯಾ ಸೇವನೆಯಿಂದ ಸ್ತನ ಕ್ಯಾನ್ಸರ್ ಬರುತ್ತೆ ಎನ್ನುವ ಸುದ್ದಿಯ ಬಗ್ಗೆ ಕ್ಲಾರಿಟಿಯನ್ನು ಕೊಟ್ಟಿದ್ದಾರೆ. ಇನ್ನು ಕೆಲವು ವಿಡಿಯೋಗಳಲ್ಲಿ ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿದ್ದಾರೆ.
ಇಷ್ಟೇ ಅಲ್ಲದೆ ಡೈಸಿ ಬೋಪಣ್ಣ ಪೌಷ್ಟಿಕಾಂಶವುಳ್ಳ ರೆಸಿಪಿಯನ್ನು ವಿಡಿಯೋ ಮಾಡಿ ಹಾಕಿದ್ದಾರೆ. ಪ್ರೋಟಿನ್ ದೋಸೆ ಹಾಗೂ ಕಡಲೆಕಾಯಿ ಚಟ್ನಿ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರೆ ಜೊತೆಗೆ ರೆಸಿಪಿಯ ವಿಧಾನವನ್ನು ಶೇರ್ ಮಾಡಿದ್ದಾರೆ. ಜಿಮ್ ಲವರ್ ಆಗಿದ್ದರೆ, ನೀವು ದಕ್ಷಿಣ ಭಾರತದ ಬ್ರೇಕ್‌ಫಾಸ್ಟ್ ಅನ್ನು ಹೆಚ್ಚಾಗಿ ಇಷ್ಟ ಪಡುತ್ತೀರ ಎಂದು 'ಗಾಳಿಪಟ'ದ ನಟಿ ಡೈಸಿ ಬೋಪಣ್ಣ ಹೇಳಿಕೊಂಡಿದ್ದಾರೆ. ಈ ದೋಸೆ ಹಾಗೂ ಚಟ್ನಿ ಬಾಯಲ್ಲಿ ನೀರು ತರಿಸುತ್ತೆ ಎಂದಿದ್ದಾರೆ. ಹಾಗೇ ಅಡುಗೆಯನ್ನೂ ಮಾಡಿ ತೋರಿಸಿದ್ದಾರೆ.
ಡೈಸಿ ಬೋಪಣ್ಣ ಅವರ ಅಡುಗೆ ವೀಡಿಯೋಗಳಿಗೆ ಹಾಗೂ ವರ್ಕ್‌ಔಟ್ ವಿಡಿಯೋಗಳಿಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿದೆ. ನೆಟ್ಟಿಗರು ಸಾಲು ಸಾಲು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇದರೊಂದಿಗೆ ಡೈಸಿ ಬೋಪಣ್ಣ ಸೂಪರ್ ಬೈಕರ್ ಕೂಡ ಹೌದು. ಬೈಕ್‌ಗಳ ಬಗ್ಗೆನೂ ಕ್ರೇಜ್ ಬೆಳೆಸಿಕೊಂಡಿದ್ದಾರೆ. ಈಗಾಗಲೇ ಕೆಲವು ವಿಡಿಯೋಗಳನ್ನು ಡೈಸಿ ಬೋಪಣ್ಣ ಶೇರ್ ಮಾಡಿಕೊಂಡಿದ್ದಾರೆ. ಈ ಎಲ್ಲ ವಿಡಿಯೋಗಳನ್ನು ನೋಡಿ ಮತ್ತೆ ಸಿನಿಮಾಗಳಲ್ಲಿ ನಟಿಸುವಂತೆ ಡೈಸಿ ಬೋಪಣ್ಣಗೆ ನೆಟ್ಟಿಗರು ಒತ್ತಡವನ್ನು ಹಾಕುತ್ತಿದ್ದಾರೆ. ಡೈಸಿ ಬೋಪಣ್ಣ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರಾ? ಮುಂದಿನ ದಿನಗಳಲ್ಲಿ ನೋಡಬೇಕಿದೆ.


Click it and Unblock the Notifications











