ಪಾರದರ್ಶಕ ಉಡುಪು ಧರಿಸಿದ ಪ್ರೀಮಿಯರ್‌ಗೆ ಬಂದ ತಮನ್ನಾ:ಯಾಕೋ ಸರಿ ಕಾಣ್ತಿಲ್ಲ ಎಂದು ನೆಟ್ಟಿಗರು!

ಈ ಬಾಲಿವುಡ್‌ ಸಿನಿಮಾ ಬಿಡುಗಡೆಗೂ ಮುನ್ನ ಎಲ್ಲರ ಗಮನ ಸೆಳೆಯುತ್ತಿದೆ. ಅಂತರಾಷ್ಟ್ರೀತ ಚಿತ್ರೋತ್ಸವಗಳಲ್ಲಿ ಭಾಗಿಯಾಗಿ ಸದ್ದು ಮಾಡುತ್ತಿದೆ. ಅದುವೇ ಜಾಹ್ನವಿ ಕಪೂರ್, ಇಶಾನ್ ಖಟ್ಟರ್ ಹಾಗೂ ವಿಶಾಲ್ ಜಟ್ವಾ ಅಭಿನಯದ 'ಹೋಮ್‌ಬೌಂಡ್'. ಈ ಸಿನಿಮಾ ಪ್ರೀಮಿಯರ್ ಅನ್ನು ಇತ್ತೀಚೆಗೆ ಮುಂಬೈನಲ್ಲಿ ಹಮ್ಮಿಕೊಳ್ಳಲಾಗಿತ್ತು. ಅದಕ್ಕೆ ಬಾಲಿವುಡ್‌ನ ತಾರೆಯರಿಗೆ ಆಹ್ವಾನ ನೀಡಲಾಗಿತ್ತು. ಅಲ್ಲಿಗೂ ತಮನ್ನಾ ಕೂಡ ಬಂದಿದ್ದರು.

'ಹೋಮ್‌ಬೌಂಡ್' ಸೆಲೆಬ್ರಿಟಿ ಪ್ರೀಮಿಯರ್ ಶೋ ತಾರೆಗಳಿಂದ ತುಂಬಿ ತುಳುಕುತ್ತಿತ್ತು. ಅಂದ್ಹಾಗೆ ಬಾಲಿವುಡ್ ಮಂದಿ ಈ ಶೋಗೆ ಆಗಮಿಸುವುದಕ್ಕೆ ಕಾರಣವೂ ಇದೆ. ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು ಬಾಲಿವುಡ್ ಸೆಲೆಬ್ರೆಟಿ ನಿರ್ಮಾಪಕ ಕರಣ್ ಜೋಹರ್. ಈಗಾಗಲೇ ಈ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೆಲವು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಶಸ್ತಿಯನ್ನೂ ಗೆದ್ದು ಬಂದಿದೆ.

Homebound premiere actress Tamannaah Bhatia wore transparent dress is trending

ಎಲ್ಲಕ್ಕಿಂತ ಹೆಚ್ಚಾಗಿ 2026ರ ಆಸ್ಕರ್ ಪ್ರಶಸ್ತಿಗೆ ಅಧಿಕೃತವಾಗಿ ಭಾರತದಿಂದ ಈ ಸಿನಿಮಾ ಆಯ್ಕೆಯಾಗಿದೆ. 'ಹೋಮ್‌ಬೌಂಡ್' ವಿದೇಶಿ ಸಿನಿಮಾಗಳ ವಿಭಾಗದಲ್ಲಿ ಆಸ್ಕರ್‌ಗೆ ಪೈಪೋಟಿಗೆ ಇಳಿಯಲಿದೆ. ಆದರೆ, ಈ ಸಿನಿಮಾಗಿಂತ ಹೆಚ್ಚಾಗಿ ಸೆಲೆಬ್ರೆಟಿಗಳು ಸುದ್ದಿಯಲ್ಲಿದ್ದರು. ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಒಟ್ಟಿಗೆ ಕಾಣಿಸಿಕೊಂಡಿದ್ದು ಒಂದು ಕಡೆಯಾದರೆ, ಟ್ರಾನ್ಸ್‌ಪರೆಂಟ್‌ ಡ್ರೆಸ್‌ನಲ್ಲಿ ತಮನ್ನಾ ಬಾಟಿಯಾ ಎಂಟ್ರಿ ಕೊಟ್ಟು ಇನ್ನೊಂದು ಕಡೆ ಸದ್ದು ಮಾಡಿತ್ತು.

ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವಾಗ ತಮನ್ನಾ ಗ್ಲಾಮರ್‌ ರೋಲ್‌ಗಳನ್ನು ಒಪ್ಪುತ್ತಿರಲಿಲ್ಲ. ಐಟಂ ಸಾಂಗ್‌ಗಳಿಗೆ, ಲಿಪ್‌ಲಾಕ್ ಸೀನ್‌ಗಳಿಗೆ, ಬೋಲ್ಡ್‌ ದೃಶ್ಯಗಳಲ್ಲಿ ನಟಿಸುವುದನ್ನು ನಿರಾಕರಿಸಿದ್ದರು. ಅಗ್ರಿಮೆಂಟ್‌ನಲ್ಲಿಯೇ ಇದ್ಯಾವುದರಲ್ಲೂ ನಟಿಸುವುದಿಲ್ಲವೆಂದು ಹೇಳುತ್ತಿದ್ದರು. ಆದ್ರೀಗ ಬಾಲಿವುಡ್‌ಗೆ ಹಾರಿದ ಬಳಿಕ ಅವರ ಲೈಫ್‌ಸ್ಟೈಲ್ ಬದಲಾಗಿದೆ. ಬಾಲಿವುಡ್‌ನ ಉಳಿದ ನಟಿಯರಂತೆ ಗ್ಲಾಮರಸ್ ನಟಿಯಾಗಿ ಹೊರಹೊಮ್ಮಿದ್ದಾರೆ. ಯಾವುದು ಮಾಡುವುದಿಲ್ಲ ಎನ್ನುತ್ತಿದ್ದರೋ ಅದೆಲ್ಲವನ್ನೂ ಮಾಡುತ್ತಿದ್ದಾರೆ.

ಈಗ 'ಹೋಮ್‌ಬೌಂಡ್' ಪ್ರೀಮಿಯರ್‌ಗೆ ಪಾರದರ್ಶಕ ಉಡುಪು ಧರಿಸಿ ಬಂದಿದ್ದ ತಮನ್ನಾ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದಾರೆ. ಹೋಮ್ಲಿ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ತಮನ್ನಾ ಈಗ ಗ್ಲಾಮರಸ್ ಬೊಂಬೆಯಾಗಿದ್ದಾರೆ. ಕೆಲವು ಅಭಿಮಾನಿಗಳು ತಮನ್ನಾ ಬದಲಾಗಿದ್ದಕ್ಕೆ ಖುಷಿ ವ್ಯಕ್ತಪಡಿಸುತ್ತಿದ್ದರೆ, ಮತ್ತೆ ಕೆಲವರು ಬೇಸರ ಹೊರ ಹಾಕುತ್ತಿರೋರು ಇದ್ದಾರೆ. ಸದ್ಯ ಇವರ ಕಪ್ಪು ಬಣ್ಣದ ಟ್ರಾನ್ಸ್‌ಪರೆಂಡ್‌ ಡ್ರೆಸ್‌ ಅವರ ಅಭಿಮಾನಿಗಳ ಕಣ್ಣು ಕುಕ್ಕಿರೋದಂತೂ ಸತ್ಯ.

ಯಾವುದೇ ಈವೆಂಟ್‌ಗೆ ಹೋಗುವಾಗಲೂ ಡಿಸೈನರ್ ವೇರ್ ಡ್ರೆಸ್ ಅನ್ನು ಧರಿಸುವು ಬಾಲಿವುಡ್ ಮಂದಿಗೆ ಅಭ್ಯಾಸ. ಕಾಸ್ಟ್ಯೂಮ್ ಮೂಲಕ ತಮ್ಮ ಬಗ್ಗೆ ಚರ್ಚೆ ಮಾಡಬೇಕು, ಸದಾ ಲೈಮ್‌ಲೈಟ್‌ನಲ್ಲಿ ಇರಬೇಕು ಅನ್ನೋ ಕಾರಣಕ್ಕೆ ತಮ್ಮ ಧಿರಿಸಿನ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಹೀಗಾಗಿ 'ಹೋಮ್‌ಬೌಂಡ್' ಪ್ರೀಮಿಯರ್‌ಗೆ ತಮನ್ನಾ ಕಪ್ಪು ಬಣ್ಣದ ಸ್ಲೀವ್‌ಲೆಸ್ ಬ್ಲೇಜರ್ ಧರಿಸಿದ್ದರು. ಅದಕ್ಕೆ ತೆಳುವಾದ ಪಾರದರ್ಶಕ ಲಾಂಗ್ ಸ್ಕರ್ಟ್‌ ತೊಟ್ಟು ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಡುತ್ತಿದ್ದಂತೆ ವೈರಲ್ ಆಗುತ್ತಿದೆ.

ಈ ವಿಡಿಯೋ ಬಳಿಕ ತಮನ್ನಾ ಚರ್ಚೆಯಲ್ಲಿದ್ದಾರೆ. ಬಾಲಿವುಡ್‌ನಲ್ಲಿ ಉಳಿದುಕೊಳ್ಳಬೇಕು ಅಂದರೆ, ಹೀಗೆ ಆಗಾಗ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಬೇಕು. ಇಲ್ಲದೇ ಹೋದರೆ, ಬಾಲಿವುಡ್ ತಿರುಗಿ ಕೂಡ ನೋಡುವುದಿಲ್ಲ. ಇದನ್ನು ತಮನ್ನಾ ಬಹುಬೇಗನೆ ಅರಿತುಕೊಂಡಿದ್ದಾರೆ. ಸಾಮಾನ್ಯವಾಗಿ ಬಾಲಿವುಡ್ ತಾರೆಯರು ಲವ್ ಸ್ಟೋರಿ, ಬ್ರೇಕಪ್, ಗ್ಲಾಮರಸ್ ಲುಕ್‌ನಿಂದ ಚರ್ಚೆಯಲ್ಲಿ ಇರುತ್ತಾರೆ. ಅಂತಹವರಿಗೆ ಅವಕಾಶಗಳು ಹೆಚ್ಚು ಸಿಗುತ್ತವೆ. ಇದನ್ನೇ ತಮನ್ನಾ ಕೂಡ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.

More from Filmibeat

Read more about: tamannaah bhatia actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X