ದುಬೈ ಬುರ್ಜ್‌ ಖಲೀಫಾದಲ್ಲಿ ಮೋಹನ್‌ಲಾಲ್ ಖರೀದಿಸಿರುವ ಐಷಾರಾಮಿ ಪ್ಲಾಟ್‌ನ ಬೆಲೆ ಎಷ್ಟು? ಮನೆಯೊಳಗೆ ಏನೇನಿದೆ?

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಕೇವಲ ಮಲಯಾಳಿಗಳಿಗಷ್ಟೇ ಅಲ್ಲ ದಕ್ಷಿಣ ಭಾರತದ ಎಲ್ಲಾ ಭಾಷಿಗರಿಗೂ ಪರಿಚಯ. ಅಷ್ಟೇ ಯಾಕೆ ಉತ್ತರ ಭಾರತದಲ್ಲಿ ಹಿಂದಿ ಭಾಷಿಗರಿಗೂ ಮೋಹನ್‌ಲಾಲ್ ಗೊತ್ತು. ಅದರಲ್ಲೂ ಕನ್ನಡಿಗರಿಗೆ ಮೋಹನ್‌ಲಾಲ್ ಬಗ್ಗೆ ವಿಶೇಷ ಗೌರವವಿದೆ. ಯಾಕಂದ್ರೆ, ಕನ್ನಡದ ಕೆಲವು ಸಿನಿಮಾಗಳಲ್ಲಿ ಮೋಹನ್‌ಲಾಲ್ ನಟಿಸಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಜೊತೆಗೂ ಇವರು ನಟಿಸಿರುವುದು ವಿಶೇಷ.

ಮೋಹನ್‌ಲಾಲ್ ವಯಸ್ಸು ಈಗ 65. ಆದರೂ, ಇನ್ನೂ ಯುವಕರನ್ನೂ ನಾಚಿಸುವಂತೆ ಆಕ್ಟಿವ್ ಆಗಿದ್ದಾರೆ. ಸಿನಿಮಾದಲ್ಲಿ ಇಂದಿನ ಸ್ಟಾರ್‌ ಹೀರೋಗಳಿಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಮೋಹನ್‌ಲಾಲ್ ನಟಿಸಿದ ಮಲಯಾಳಂ ಸಿನಿಮಾ ಇತ್ತೀಚೆಗೆ ಸೋತಿದ್ದು ಕಡಿಮೆ. ಇವರ ಬತ್ತಳಿಕೆಯಲ್ಲಿ ಗೆದ್ದಿರುವ ಸಿನಿಮಾಗಳೇ ಜಾಸ್ತಿ. ಇತ್ತೀಚೆಗೆ ತೆರೆಕಂಡಿದ್ದ ಎರಡು ಸಿನಿಮಾಗಳು 'ಲೂಸಿಫರ್ 2' ಹಾಗೂ 'ತುಡರುಂ' ಎರಡೂ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿವೆ.

How much did Mohanlal pay to buy a luxury flat in Burj Khalifa in Dubai

ಮೋಹನ್‌ಲಾಲ್ ವೃತ್ತಿ ಬದುಕಿನಲ್ಲಿ ಸೋತಿದ್ದು ಕಡಿಮೆ. ಸದಾ ಕೂಲ್ ಆಗಿ ಇರುವ ಈ ಸೂಪರ್‌ಸ್ಟಾರ್ ಸಿನಿಮಾ ಜರ್ನಿ ಒಂದ್ಕಡೆ ಇಂಟ್ರೆಸ್ಟಿಂಗ್ ಆಗಿದ್ದರೆ, ಇನ್ನೊಂದು ಕಡೆ ಅವರ ಲೈಫ್‌ ಸ್ಟೈಲ್‌ ಕೂಡ ಅಷ್ಟೇ ಇಂಟ್ರೆಸ್ಟಿಂಗ್. ದುಬಾರಿ ಕಾರು, ಐಷಾರಾಮಿ ಬಂಗಲೆ ಖರೀದಿ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಮೋಹನ್‌ಲಾಲ್ ವಿಶ್ವದ ಅತೀ ಎತ್ತರದ ಕಟ್ಟಡದಲ್ಲಿ ಐಷಾರಾಮಿ ಪ್ಲಾಟ್‌ ಅನ್ನು ಖರೀದಿ ಮಾಡಿದ್ದಾರೆಂದು ವರದಿಯಾಗಿದೆ. ಆ ಫ್ಲಾಟ್‌ಗೆ ಮೋಹನ್‌ಲಾಲ್ ಕೊಟ್ಟ ಹಣವೆಷ್ಟು? ಫ್ಲಾಟ್‌ನ ವಿಶೇಷತೆಯೇನು? ದುಬೈನಲ್ಲಿ ಇರುವ ಇನ್ನೊಂದು ಫ್ಲಾಟ್ ಎಲ್ಲಿದೆ?

ಮುಂದೆ ಓದಿ..

ವಿಶ್ವದ ಅತೀ ಎತ್ತರದ ಕಟ್ಟಡದಲ್ಲಿ ಮೋಹನ್‌ಲಾಲ್ ಫ್ಲಾಟ್
ಮೋಹನ್‌ಲಾಲ್ ಖರೀದಿಸಿದ ಫ್ಲಾಟ್‌ನ ಬೆಲೆ ಬಲು ದುಬಾರಿ
ಸೂಪರ್‌ಸ್ಟಾರ್ ಪತ್ನಿಯ ಹೆಸರಿನಲ್ಲಿದೆ ಈ ದುಬಾರಿ ಫ್ಲಾಟ್

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಐಷಾರಾಮಿ ಲೈಫ್‌ಸ್ಟೈಲ್‌ ಎಂತಹವರೂ ಕನಸು ಕಾಣುವಂತೆ ಮಾಡುತ್ತೆ. ವಿಶ್ವದ ಅತೀ ಎತ್ತರದ ಕಟ್ಟಡದಲ್ಲಿ ಪ್ಲಾಟ್ ಖರೀದಿ ಮಾಡಬೇಕು ಅಂತ ಅದೆಷ್ಟೋ ಮಂದಿ ಕನಸು ಕಾಣುತ್ತಿದ್ದಾರೋ ಗೊತ್ತಿಲ್ಲ. ಆದರೆ, ಮೋಹನ್‌ಲಾಲ್ ಆ ಕನಸನ್ನು ನನಸು ಮಾಡಿಕೊಂಡಿದ್ದಾರೆ. ದುಬೈನಲ್ಲಿರುವ ವಿಶ್ವದ ಅತೀ ಎತ್ತರದ ಕಟ್ಟಡ ಬುರ್ಜ್‌ ಖಲೀಫಾದ 29ನೇ ಮಹಡಿಯಲ್ಲಿ ಪ್ಲಾಟ್‌ ಖರೀದಿ ಮಾಡಿದ್ದರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಮೋಹನ್‌ಲಾಲ್ ಬುರ್ಜ್‌ ಖಲೀಫಾದ ಫ್ಲಾಟ್‌ ಅನ್ನು ಪತ್ನಿ ಸುಚಿತ್ರಾ ಅವರ ಹೆಸರಿನಲ್ಲಿ ಖರೀದಿ ಮಾಡಿದ್ದಾರೆ. 940 ಚದರ ಅಡಿ ಇರುವ ಈ ಒಂದು ಬೆಡ್‌ ರೂಮ್‌ ಅನ್ನು ಸುಮಾರು 3.5 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆಂದು ವರದಿ ಮಾಡಲಾಗಿದೆ. 29ನೇ ಫ್ಲೋರ್‌ನಲ್ಲಿರುವ ಈ ಫ್ಲಾಟ್‌ ಮೇಲಿನಿಂದ ದುಬೈನ ಕಾರಂಜಿ ಹಾಗೂ ಇಡೀ ನಗರವನ್ನು ನೋಡಬಹುದಾಗಿದೆ.

How much did Mohanlal pay to buy a luxury flat in Burj Khalifa in Dubai

ಹಾಗಂತ ಮೋಹನ್‌ಲಾಲ್‌ ದುಬೈನಲ್ಲಿ ಖರೀದಿಸಿರುವ ಮೊದಲ ಪ್ರಾಪರ್ಟಿ ಏನಲ್ಲ. ಈ ಹಿಂದೆ ಅಂದರೆ, 2020ರಲ್ಲಿ ಬುರ್ಜ್ ಖಲೀಫಾ ಕಣ್ಣೆದುರಿಗೆ ಇರುವ ಇನ್ನೊಂದು 50 ಅಂತಸ್ತು ಇರುವ ಪಿಆರ್‌ ಹೈಟ್ಸ್ ಕಟ್ಟಡದಲ್ಲಿ ಮೂರು ಬೆಡ್‌ರೂಮ್ ಇರುವ ಸುಮಾರು 4000 ಚದರ ಅಡಿಯ ಕಟ್ಟಡವನ್ನು ಖರೀದಿ ಮಾಡಿದ್ದರು. ಇದರಲ್ಲಿ ಸುಮಾರು 294 ಪ್ಲಾಟ್‌ಗಳು ಇವೆ. ಇಲ್ಲಿನ ಫ್ಲಾಟ್‌ಗಳ ಬೆಲೆ ₹2.5 ಕೋಟಿ ರಿಂದ ₹30 ಕೋಟಿವರೆಗೂ ಇದೆ ಎಂದು ವರದಿಯಾಗಿತ್ತು. ಅಲ್ಲದೆ ಪ್ಲಾಟ್‌ ಅನ್ನು ವ್ಯವಹಾರದ ದೃಷ್ಟಿಯಿಂದಲೂ ಖರೀದಿಸಿರಬಹುದೆಂದು ಅಂದಾಜಿಸಲಾಗಿದೆ.

More from Filmibeat

English summary
How much did Mohanlal pay to buy a luxury flat in Burj Khalifa in Dubai?
Read more about: mohanlal malayalam life style
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X