Kichcha Sudeep: ಜಿಮ್‌ನಲ್ಲಿ ಸುದೀಪ್‌ಗೆ ಟ್ರೈನಿಂಗ್ ಕೊಡ್ತಿದ್ದಾರಾ ವಿನಯ್ ಗೌಡ? ಕಿಚ್ಚನ ಲೈಫ್‌ ಸ್ಟೈಲ್ ಹೇಗಿದೆ?

ಕಿಚ್ಚ ಸುದೀಪ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ದಿನಗಳಿಂದ ಫಿಟ್‌ ಅಂಡ್ ಫೈನ್ ಆಗಿದ್ದಾರೆ. ಸ್ಕ್ರೀನ್‌ ಮೇಲೆ ಒಬ್ಬ ಹೀರೋ ಹೇಗೆ ಕಾಣಿಸಿಕೊಳ್ಳಬೇಕೋ ಹಾಗೆ ಎಂಟ್ರಿ ಕೊಡುತ್ತಾರೆ. ಆದರೆ, ಆರಂಭದ ದಿನಗಳಲ್ಲಿ ಸುದೀಪ್‌ ವರ್ಕ್‌ಔಟ್, ಜಿಮ್ ಇವೆಲ್ಲದರ ಬಗ್ಗೆ ತಲೆ ಕೆಡಿಸಿಕೊಂಡವರೇ ಅಲ್ಲ. ಎಷ್ಟೋ ವರ್ಷಗಳ ಜಿಮ್‌ಗೆ ಹೋಗದೇನೆ ತನ್ನ ದೇಹವನ್ನು ಕಾಪಾಡಿಕೊಂಡು ಬಂದಿದ್ದರು. ಇದನ್ನು ಈ ಹಿಂದಿನ ಎಷ್ಟೋ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಆದರೆ, 'ಮುಂಗಾರು ಮಳೆ' ಕೃಷ್ಣ ನಿರ್ದೇಶಿಸಿದ 'ಪೈಲ್ವಾನ್' ಸಿನಿಮಾ ಮಾಡುವಾಗ ಸುದೀಪ್ ಜಿಮ್ ಮೆಟ್ಟಿಲು ಹತ್ತಲೇ ಬೇಕಾಗುತ್ತು. ಸೀರಿಯಸ್ ಆಗಿ ವರ್ಕ್‌ಔಟ್ ಅಂತ ಶುರು ಮಾಡಿದ್ದು ಅಲ್ಲಿಂದ. ಈ ಸಿನಿಮಾ ಕಿಚ್ಚ ಸುದೀಪ್ ನಿಜಕ್ಕೂ ಪೈಲ್ವಾನನಾಗಿಯೇ ಕಾಣಿಸಿಕೊಂಡಿದ್ದರು. ಅಂದಿನಿಂದ ನಿರಂತರವಾಗಿ ಕಿಚ್ಚ ಜಿಮ್‌ನಲ್ಲಿ ಗಂಟೆಗಳ ಕಾಲ ವರ್ಕ್‌ಔಟ್ ಮಾಡುತ್ತಾರೆ. ಹೆವಿ ವರ್ಕ್‌ಔಟ್ ಮಾಡಿ ಬೆವರು ಇಳಿಸುತ್ತಾರೆ. ತಮ್ಮ ಮುಂದಿನ ಸಿನಿಮಾ 'ಮಾರ್ಕ್'ಗಾಗಿ ಜಿಮ್‌ನಲ್ಲಿ ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಿದ್ದಾರೆ.

Is Bigg Boss fame Vinay Gowda training Kichcha Sudeep in Gym this video is the proof

ಇತ್ತೀಚೆಗೆ ಸರಿಗಮ ಕನ್ನಡ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಿಚ್ಚ ವರ್ಕ್‌ಔಟ್ ವಿಡಿಯೋ ಒಂದನ್ನು ರಿಲೀಸ್ ಮಾಡಲಾಗಿದೆ. ಈ ವಿಡಿಯೋ ಈಗ ಎಲ್ಲೆಡೆ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಕಿಚ್ಚ ವರ್ಕ್‌ಔಟ್ ಹೇಗಿರುತ್ತೆ? ಅವರ ಫುಡ್ ಹ್ಯಾಬಿಟ್ ಏನು? ಆರೋಗ್ಯದ ಗುಟ್ಟೇನು? ಅಂತ ಅಭಿಮಾನಿಗಳು ತಲೆಗೆ ಹುಳಬಿಟ್ಟುಕೊಂಡಿದ್ದಾರೆ. ಈ ಮಧ್ಯೆ ಕಿಚ್ಚನಿಗೆ ಜಿಮ್‌ನಲ್ಲಿ ವಿನಯ್ ಗೌಡ ತರಬೇತಿ ನೀಡುತ್ತಿದ್ದಾರಾ? ಅನ್ನೋ ಅನುಮಾನ ಹುಟ್ಟಿಸಿದೆ.

ಜಿಮ್‌ನಲ್ಲಿ ಕಿಚ್ಚ ಸುದೀಪ್ ಕಸರತ್ತು

ಕಿಚ್ಚ ಸುದೀಪ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಮಾರ್ಕ್', 'ಬಿಲ್ಲರಂಗ ಬಾಷಾ' ಸೇರಿದಂತೆ ಇನ್ನು ಕೆಲವು ಸಿನಿಮಾಗಳು ಮಾತುಕತೆ ಹಂತದಲ್ಲಿವೆ. ಹೀಗಾಗಿ ನಿರಂತರವಾಗಿ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿದ್ದಾರೆ. 'ಪೈಲ್ವಾನ್' ಬಳಿಕ ಕಿಚ್ಚ ಪ್ರತಿನಿತ್ಯ ತಪ್ಪಿಸದೆ ವರ್ಕ್‌ಔಟ್ ಮಾಡುತ್ತಾರೆ. ಈಗ 'ಮಾರ್ಕ್‌' ಶೂಟಿಂಗ್ ನಡೆಯುತ್ತಿರುವುದರಿಂದ ಇನ್ನೂ ಹೆಚ್ಚು ಹೊತ್ತು ಕಸರತ್ತು ನಡೆಸುತ್ತಿದ್ದಾರೆ.

ಕಿಚ್ಚನ ಜೊತೆ ವಿನಯ್ ಗೌಡ

ಸರಿಗಮ ಕನ್ನಡ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕಿಚ್ಚ ಸುದೀಪ್ ವರ್ಕ್‌ಔಟ್ ಜೊತೆ ವಿನಯ್ ಗೌಡ ಕೂಡ ಕಾಣಿಸಿಕೊಂಡಿದ್ದಾರೆ. ಜಿಮ್‌ನಲ್ಲಿ ಸುದೀಪ್‌ಗೆ ನೆರವಾಗುತ್ತಿದ್ದಾರೆ. ಈ ವಿಡಿಯೋದಲ್ಲಿ ಅವರನ್ನೂ ನೋಡಬಹುದು. ಅದಕ್ಕೆ ನೆಟ್ಟಿಗರು ಈ ವಿಡಿಯೋ ನೋಡುತ್ತಿದ್ದಂತೆ ಕಿಚ್ಚನಿಗೆ ಜಿಮ್‌ನಲ್ಲಿ ಟ್ರೈನ್ ಮಾಡುತ್ತಿರೋದು ವಿನಯ್ ಗೌಡ ಇರಬಹುದೆಂದು ಅಂದಾಜು ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಈ ಸಿನಿಮಾದಲ್ಲೂ ವಿನಯ್ ಗೌಡ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

ಕಿಚ್ಚನ ಆರೋಗ್ಯ ಸೀಕ್ರೆಟ್ ಏನು?

ಕಿಚ್ಚ ಸುದೀಪ್ ವಯಸ್ಸ 50 ದಾಟಿದೆ. ಆದರೂ, ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಸ್ಕಿನ್ ಟೋನ್ ಅನ್ನು ಹಾಗೇ ಉಳಿಸಿಕೊಂಡಿದ್ದಾರೆ. ಇದರ ಸೀಕ್ರೆಟ್ ಬ್ಲಾಕ್ ಕಾಫಿ ಹಾಗೂ ಮಿತವಾದ ಆಹಾರ ಎನ್ನುತ್ತಿವೆ ಆಪ್ತ ಮೂಲಗಳು. ಕಿಚ್ಚ ಜಿಮ್‌ನಲ್ಲಿ ವರ್ಕ್‌ಔಟ್ ಮಾಡೋದು ಒಂದು ಕಡೆ. ಅದೇ ಇನ್ನೊಂದು ಕಡೆ ಹೆಚ್ಚು ಬ್ಲಾಕ್ ಕಾಫಿಯನ್ನೇ ಕುಡಿಯುತ್ತಾರೆ. ಇದು ಅವರ ಆರೋಗ್ಯದ ಗುಟ್ಟು ಅನ್ನುತ್ತಾರೆ ಆಪ್ತರು.

ಮಿತವಾದ ಆಹಾರ

ಕಿಚ್ಚ ಸುದೀಪ್ ಅವರೇ ಹೇಳಿಕೊಂಡಂತೆ ದಿನಕ್ಕೆ ಎರಡು ಹೊತ್ತು ಊಟವನ್ನು ಮಾತ್ರ ಸೇವಿಸುತ್ತಾರೆ. ಯಾವ ಸಮಯ ಅನ್ನೋ ಮಾಹಿತಿ ಕೊಡದೇ ಹೋದರೂ ದಿನಕ್ಕೆ ಎರಡು ಹೊತ್ತು ಲಿಮಿಟೆಡ್ ಫುಡ್ ಎಂದು ಈ ಹಿಂದಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಮತ್ತೊಂದು ಕಡೆ ಅವರೇ ಅಡುಗೆ ಮಾಡುವುದರಿಂದ ತಮಗೆ ಬೇಕಾದ ಹಾಗೇ, ಸಮಯಕ್ಕೆ ತಕ್ಕಂತೆ ಸೇವಿಸುತ್ತಾರೆ. ಇದು ಅವರ ಬ್ಯೂಟಿ ಸೀಕ್ರೆಟ್ ಎನ್ನಲಾಗಿದೆ. ಸದ್ಯ ಕಿಚ್ಚ ಸುದೀಪ್ 'ಬಿಗ್ ಬಾಸ್' ಹಾಗೂ 'ಮಾರ್ಕ್' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Is Bigg Boss fame Vinay Gowda training Kichcha Sudeep in Gym? this video is the proof.
Read more about: sudeep workout food
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X