ಅನುಷ್ಕಾ-ವಿರಾಟ್ ಕೊಹ್ಲಿ ಆರತಕ್ಷತೆಯಲ್ಲಿ ಶ್ರೀದೇವಿ ಉಟ್ಟಿದ್ದ ಸೀರೆಯುಟ್ಟ ಜಾಹ್ನವಿ; ನೆಟ್ಟಿಗರ ಕಮೆಂಟ್ ಏನು?

ದಿವಂಗತ ನಟ ಶ್ರೀದೇವಿ ಬಾಲಿವುಡ್‌ನ ಶಿಸ್ತಿನ ನಟಿ. ವಿವಾದಗಳಿಂದ ಬಹುತೇಕ ದೂರ. ಕ್ಯಾಮರಾ ಮುಂದೆ ಪೋಸ್ ಕೊಡುವಾಗಲೂ ತಾನು ಧರಿಸಿದ ಡ್ರೆಸ್‌ನಿಂದ ಹಿಡಿದು ಮೇಕಪ್ ಎಲ್ಲವೂ ನೀಟ್ ಆಗಿ ಇರಬೇಕು. ಶ್ರೀದೇವಿ ಆ ಮಟ್ಟಿಗೆ ಕಟ್ಟು ನಿಟ್ಟು. ಅದರಲ್ಲೂ ಶ್ರೀದೇವಿ ದಕ್ಷಿಣ ಭಾರತದವರಾಗಿದ್ದರಿಂದ ಸೀರೆ ಮೇಲೆ ಆಸೆ ಹೆಚ್ಚಿತ್ತು. ತಮ್ಮ ನೆಚ್ಚಿನ ಸೀರೆಯುಟ್ಟು ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದದ್ದೇ ಹೆಚ್ಚು.

ಶ್ರೀದೇವಿ ಸೀರೆಯುಟ್ಟು ಬಂದರೆ ಪಾಪರಾಜಿಗಳು ಒಂದಿಷ್ಟು ಹೆಚ್ಚು ಫೋಟೊಗಳನ್ನು ಕ್ಲಿಕ್ಕಿಸುತ್ತಿದ್ದರು. ಯಾಕಂದ್ರೆ, ಶ್ರೀದೇವಿಗೂ ಸೀರೆ ಹೊಂದಿಕೊಳ್ಳುತ್ತಿತ್ತೋ. ಸೀರೆಗೆ ಶ್ರೀದೇವಿ ಹೊಂದಿಕೊಳ್ಳುತ್ತಿದ್ದರೋ ಗೊತ್ತಿಲ್ಲ. ಈ ಆ ಪರಂಪರೆಯನ್ನು ಅವರ ಪುತ್ರಿ ಜಾಹ್ನವಿ ಕಪೂರ್ ಮುಂದುವರೆಸಿಕೊಂಡು ಬರುತಿದ್ದಾರೆ. ಜಾಹ್ನವಿ ಕಪೂರ್ ಹಾಗೂ ಶ್ರೀದೇವಿಯಂತೆ ಸೀರೆಯುಟ್ಟು ಮಿಂಚುತ್ತಾರೆ. ಆದರೆ, ಇತ್ತೀಚೆಗೆ ಶ್ರೀದೇವಿ ಉಟ್ಟಿದ್ದ ಸೀರೆಯನ್ನೇ ಧರಿಸಿ ಎಲ್ಲರನ್ನೂ ಅಚ್ಚರಿ ಮೂಡಿಸಿದ್ದಾರೆ.

Janhvi Kapoor wore the saree that Sridevi wore at Anushka Sharma and Virat Kohli s reception

ತಾಯಿ ಶ್ರೀದೇವಿಯಂತೆ ಜಾಹ್ನವಿ ಕಪೂರ್ ಕೂಡ ಆಗಾಗ ಸೀರೆಯುಟ್ಟು ಕ್ಯಾಮರಾ ಮುಂದೆ ಪ್ರತ್ಯಕ್ಷ ಆಗುವುದು ಉಂಟು. ಕೆಲವೊಮ್ಮೆ ಅಮ್ಮನಂತೆಯೇ ಸೀರೆಯುಟ್ಟು ಅವರ ಅಭಿಮಾನಿಗಳನ್ನು ಬಡಿದೆಬ್ಬಿಸುತ್ತಾರೆ. ಶ್ರೀದೇವಿಯನ್ನು ಅಭಿಮಾನಿಗಳು ಮತ್ತೆ ಆರಾಧಿಸುವಂತೆ ಮಾಡುತ್ತಾರೆ. ಇತ್ತೀಚೆಗೆ ಮುಂಬೈನಲ್ಲಿ ಇವೆಂಟ್ ಒಂದರಲ್ಲಿ ಭಾಗವಹಿಸಿದ್ದ ನಟಿ ಅಮ್ಮನ ಸೀರೆಯುಟ್ಟು ಗಮನ ಸೆಳೆದಿದ್ದಾರೆ.

ಜಾಹ್ನವಿ ಕಪೂರ್ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮಕ್ಕೆ ಜಾಹ್ನವಿ ಎಂಟ್ರಿ ಕೊಡುತ್ತಿದ್ದಂತೆ ಅಲ್ಲಿ ನೆರೆದಿದ್ದವರು ಅವರ ಕಣ್ಣುಗಳನ್ನೇ ನಂಬಲು ಪರದಾಡಿದ್ದರು. ಮೊದಲ ನೋಟದಲ್ಲೇ ಜಾಹ್ನವಿ ಅಲ್ಲಿ ನೆರೆದಿದ್ದವರಿಗೆ ಶ್ರೀದೇವಿ ನೆನಪಾಗುವಂತೆ ಮಾಡಿದ್ದರು. ಅಲ್ಲಿದ್ದವರಿಗೆ ಒಮ್ಮೆ ಶ್ರೀದೇವಿಯೇ ಬಂದಂತಹ ಅನುಭವ ಆಗಿತ್ತು. ಕೂಡಲೇ ಚೇತರಿಸಿಕೊಂಡು ಆಕೆ ಶ್ರೀದೇವಿಯಲ್ಲ, ಅವರ ಪುತ್ರಿ ಜಾಹ್ನವಿ ಕಪೂರ್ ಎಂದು ಮನದಟ್ಟು ಮಾಡಿಕೊಂಡರು.

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಈ ಹಿಂದೆ ಶ್ರೀದೇವಿ ಧರಿಸಿದ್ದ ಕಪ್ಪು ಮತ್ತು ನೀಲಿ ಬಣ್ಣದ ಸೀರೆಯುಟ್ಟು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಥೇಟ್ ಶ್ರೀದೇವಿಯಂತೆಯೇ ಯಥಾವತ್ತಾಗಿ ಸೀರೆಯುಟ್ಟು ಮಿಂಚಿದ್ದರು. ಅಂದ್ಹಾಗೆ ಶ್ರೀದೇವಿ ಈ ಹಿಂದೆ ಅಂದರೆ, 2017ರಲ್ಲಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆರತಕ್ಷತೆಯಲ್ಲಿ ಇದೇ ಸೀರೆಯುಟ್ಟು ಪತಿ ಬೋನಿಕಪೂರ್ ಜೊತೆ ಆಗಮಿಸಿದ್ದರು.

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆರತಕ್ಷತೆ ಮುಂಬೈನಲ್ಲಿ ನಡೆದಿತ್ತು. ಚಿತ್ರರಂಗ ಹಾಗೂ ಕ್ರಿಕೆಟ್ ಲೋಕದ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿದ್ದರು. ಅವರಲ್ಲಿ ಶ್ರೀದೇವಿ ತಮ್ಮ ಸೌಂದರ್ಯದಿಂದ ಗಮನ ಸೆಳೆದಿದ್ದರು. ಆ ವೇಳೆ ಶ್ರೀದೇವಿಯ ಸೀರೆಯುಟ್ಟ ಫೋಟೊ ಹಾಗೂ ವಿಡಿಯೋಗಳು ಹೆಚ್ಚು ವೈರಲ್ ಆಗಿದ್ದವು. ಅದೇ ರೀತಿ ಜಾಹ್ನವಿ ಕೂಡ ಶ್ರೀದೇವಿ ಧರಿಸಿದ್ದ ಬ್ಲೌಸ್ ಹಾಗೂ ಸೀರೆಯುಟ್ಟು ಆಗಮಿಸಿದ್ದರು. ಅಲ್ಲದೆ ಕೇಶವಿನ್ಯಾಸದ ಜೊತೆ ಕಪ್ಪು ಬಿಂದಿ ಇಟ್ಟು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಅಂದ್ಹಾಗೆ ಜಾಹ್ನವಿ ಕಪೂರ್ ತನ್ನ ತಾಯಿ ಶ್ರೀದೇವಿಯ ಸೀರೆಯುಟ್ಟು ಕಾರ್ಯಕ್ರಮಗಳಿಗೆ ಬರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ಜಾಹ್ನವಿ ಕಪೂರ್ ಅಮ್ಮನನ್ನೇ ಅನುಕರಿಸಿದ ಉದಾಹರಣೆಗಳು ಸಾಕಷ್ಟಿವೆ. ಈ ಮೂಲಕ ತನ್ನ ತಾಯಿ ಶ್ರೀದೇವಿ ಅವರ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಹಸಿರಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ.

More from Filmibeat

English summary
Janhvi Kapoor wore the saree that Sridevi wore at Anushka Sharma and Virat Kohli's reception.
Read more about: janhvi kapoor sridevi virat kohli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X