ಒಂದೂವರೆ ಕೋಟಿ ಕಾರು ಖರೀದಿಸಿದ ರಿಷಬ್ ಶೆಟ್ಟಿ: ಸ್ಯಾಂಡಲ್‌ವುಡ್ ಯಾರ್‍ಯಾರ ಬಳಿ ಈ ದುಬಾರಿ ಕಾರಿದೆ?

'ಕಾಂತಾರ' ಒಂದು ಸಿನಿಮಾ ರಿಷಬ್ ಶೆಟ್ಟಿಯ ನಸೀಬನ್ನೇ ಬದಲಿಸಿದೆ. ಲೋಕಲ್ ಹೀರೋ ಆಗಿದ್ದ ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇವರು ನಿರ್ದೇಶಿಸಿ, ನಟಿಸುತ್ತಿರುವ 'ಕಾಂತಾರ' ಪ್ರೀಕ್ವೆಲ್‌ಗಾಗಿ ಇಡೀ ದೇಶವೇ ಎದುರು ನೋಡುತ್ತಿದೆ. ಹೀಗಾಗಿ ರಿಷಬ್ ಶೆಟ್ಟಿ ವೇಗವಾಗಿ ಸಿನಿಮಾವನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಗ್ಯಾಪ್‌ನಲ್ಲಿ ರಿಷಬ್ ಶೆಟ್ಟಿ ಹೊಸ ಕಾರನ್ನು ಖರೀದಿ ಮಾಡಿ ಸುದ್ದಿಯಲ್ಲಿದ್ದಾರೆ.

ಐಷಾರಾಮಿ ಕಾರುಗಳನ್ನು ಖರೀದಿ ಮಾಡುವುದು ದೊಡ್ಡ ವಿಷಯವೇನು ಅಲ್ಲ. ಮಾರ್ಕೆಟ್‌ಗೆ ಯಾವುದೇ ಕಾರು ಎಂಟ್ರಿ ಕೊಟ್ಟರೂ, ಸ್ಟಾರ್‌ಗಳು ಅದನ್ನು ಮುಗಿಬಿದ್ದಿ ಖರೀದಿ ಮಾಡುತ್ತಾರೆ. ಈಗ ರಿಷಬ್ ಶೆಟ್ಟಿ ಕೂಡ ದುಬಾರಿ, ಐಷಾರಾಮಿ ಕಾರನ್ನು ಖರೀದಿ ಮಾಡಿದ್ದಾರೆ. ಇತ್ತೀಚೆಗೆ ಸ್ಯಾಂಡಲ್‌ವುಡ್‌ನ ತಾರೆಯರು ಒಬ್ಬರಾದ ಮೇಲೆ ಒಬ್ಬರಂತೆ ಈ ಐಷಾರಾಮಿ ಕಾರನ್ನು ಖರೀದಿ ಮಾಡುತ್ತಿದ್ದಾರೆ. ಆ ಸಾಲಿಗೀಗ ರಿಷಬ್ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ.

Kantara actor Rishab Shetty buys Toyota Vellfir Sudeep Sumalatha Dhananjay have the same car

ಸಾಮಾನ್ಯವಾಗಿ ಸೆಲೆಬ್ರಿಟಿಗಳಿಗೆ ದುಬಾರಿ ಕಾರುಗಳ ಕ್ರೇಜ್ ಇರುತ್ತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಕಾರುಗಳ ಕ್ರೇಜ್ ಇದೆ. ಮತ್ತೆ ಕೆಲವರು ಕಂಫರ್ಟ್ ಹಾಗೂ ಸೇಫ್ಟಿ ವಿಚಾರಕ್ಕೆ ಇಂತಹ ಕಾರುಗಳನ್ನು ಖರೀದಿ ಮಾಡುತ್ತಾರೆ. ಹಾಗಿದ್ದರೆ, ರಿಷಬ್ ಶೆಟ್ಟಿ ಖರೀದಿಸಿ ಕಾರು ಯಾವುದು? ಅದರ ನಿಖರವಾದ ಬೆಲೆ ಎಷ್ಟು? ಸ್ಯಾಂಡಲ್‌ವುಡ್‌ ಯಾವ ಸ್ಟಾರ್ ಬಳಿ ಈ ಕಾರು ಇದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ರಿಷಬ್ ಶೆಟ್ಟಿ ಖರೀದಿಸಿದ ಕಾರು ಯಾವುದು?

'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ ದೈತ್ಯ ಕಾರನ್ನು ಖರೀದಿ ಮಾಡಿದ್ದಾರೆ. ಇದು ಟೊಯೋಟಾ ಕಂಪನಿಯ ಅತ್ಯಂತ ದುಬಾರಿ ಕಾರು. ಸಿನಿಮಾ ತಾರೆಯರು ಹಾಗೂ ರಾಜಕೀಯ ಮುಖಂಡರು ಈ ಕಾರನ್ನು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ. ಅದುವೇ ಟೊಯೋಟಾ ವೆಲ್‌ಫೈರ್. ಮೋಸ್ಟ್ ಕಂಫರ್ಟೆಬಲ್ ಕಾರು ಇದೆಂದು ಸೆಲೆಬ್ರಿಟಿಗಳಿಂದ ಈಗಾಗಲೇ ಸರ್ಟಿಫಿಕೆಟ್ ಪಡೆದುಕೊಂಡಿದೆ.

ಬೆಲೆ ವೈಶಿಷ್ಟ್ಯತೆ ಏನು?

ರಿಷಬ್ ಶೆಟ್ಟಿ ಖರೀದಿಸಿದ ಈ ಟೊಯೋಟಾ ವೆಲ್‌ಫೈರ್ ಕಾರಿನ ಬೆಲೆ ಕಮ್ಮಿಯೇನಿಲ್ಲ. ಇದರ ಬೆಲೆ ಬರೋಬ್ಬರಿ 1 ಕೋಟಿ 32 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಇನ್ನು ಸೆಲೆಬ್ರೆಟಿಗಳು ಇಷ್ಟು ದುಬಾರಿ ಕಾರನ್ನು ಖರೀದಿ ಮಾಡುವುದಕ್ಕೆ ಕಾರಣ ಇದರ ಫೀಚರ್ಸ್. ಇದರ ಅಡ್ವಾನ್ಸ್ ಟೆಕ್ನಾಲಜಿ, ಕಂಫರ್ಟ್‌, ಸೆಫ್ಟಿ, ಸ್ಟೈಲಿಶ್ ಆಗಿರು ಡಿಸೈನ್. ಈ ಕಾರಿನ ಸೀಟ್ ಹಾಗೂ ಇಂಟಿರಿಯರ್ ಅನ್ನು ಇಷ್ಟ ಪಡುತ್ತಾರೆ. ಇದು ದೂರದೂರಿಗೆ ಪ್ರಯಾಣ ಮಾಡುವಾಗ ಆಯಾಸ ಎನಿಸುವುದಿಲ್ಲ. ಸೆಲೆಬ್ರೆಟಿಗಳಿಗೆ ಇದೊಂಥರ ಮಿನಿ ಕ್ಯಾರಾವ್ಯಾನ್ ಇದ್ದಂತೆ. ಇನ್ನೊಂದು ಸೆಫ್ಟಿ ಫೀಚರ್. ಈ ಕಾರಿನಲ್ಲಿ ಬರೋಬ್ಬರು ಆರು ಏರ್‌ ಬ್ಯಾಗ್ಸ್ ಇದೆ. ಅಡ್ವಾನ್ಸ್ ಟ್ರೈವರ್ ಅಸಿಸ್ಟೆಂಟ್ ಸಿಸ್ಟಮ್ ಇದೆ. ಹಾಗೇ ಈ ಕಾರಿನಲ್ಲಿ ಸುಮಾರು ಆರಿಂದ ಏಳು ಮಂದಿ ಕಂಫರ್ಟೆಬಲ್ ಆಗಿ ಪ್ರಯಾಣ ಮಾಡಬಹುದು. ಫ್ಯಾಮಿಲಿಗೆ ಹೇಳಿ ಮಾಡಿಸಿದ ಕಾರು ಎಂಬುವ ಅಭಿಪ್ರಾಯವಿದೆ. ರಿಷಬ್ ಶೆಟ್ಟಿ ಕುಟುಂಬ ಕೂಡ ಈಗ ದೊಡ್ಡದಾಗಿದೆ. ಈ ಕಾರಣಕ್ಕೆ ಟೊಯೋಟಾ ವೆಲ್‌ಫೈರ್ ಕಾರನ್ನು ಖರೀದಿ ಮಾಡಿರಬಹುದು.

Kantara actor Rishab Shetty buys Toyota Vellfir Sudeep Sumalatha Dhananjay have the same car

ಬೇರೆ ಯಾರ ಬಳಿಯಿದೆ ಈ ಕಾರು?

ರಿಷಬ್ ಶೆಟ್ಟಿ ಟೊಯೋಟಾ ವೆಲ್‌ಫೈರ್ ಕಾರು ಖರೀದಿಸಿದ ನಂತರ ಬೇರೆ ಯಾರೆಲ್ಲ ಬಳಿ ಈ ಕಾರು ಇದೆ ಅಂತ ಚರ್ಚೆಯಾಗುತ್ತಿದೆ. ಕಿಚ್ಚ ಸುದೀಪ್ ಬಳಿಕ ಇದೇ ಕಾರು ಇದೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಬಳಿಯೂ ಇದೇ ಕಾರು ಇದೆ. ದೂರದ ಪ್ರಯಾಣವಿದ್ದಾಗ ಶಿವಣ್ಣ ಈ ಕಾರನ್ನೇ ಬಳಸುತ್ತಾರೆ. ಮಂಗಳೂರು ಸೇರಿದಂತೆ ದೂರದೂರಿಗೆ ಹೋಗುವಾಗ ಈ ದುಬಾರಿ ಕಾರನ್ನೇ ಬಳಸುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುಮಲತಾ ಬಳಿ ಈ ಕಾರು ಇದೆ. ಹೊಯ್ಸಳ ಸಿನಿಮಾಗಾಗಿ ಕೆಆರ್‌ಜಿ ಸ್ಟುಡಿಯೋದ ಕಾರ್ತಿಕ್ ಹಾಗೂ ಯೋಗಿ ಜಿ ರಾವ್ ನಟರಾಕ್ಷಸ ಡಾಲಿ ಧನಂಜಯ್‌ಗೆ ಇದೇ ಟೊಯೋಟಾ ವೆಲ್‌ಫೈರ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

ಹೆಂಡ್ತಿ ಮಕ್ಕಳೊಂದಿಗೆ ಪೋಸ್

ಟೊಯೋಟಾ ವೆಲ್‌ಫೈರ್ ಖರೀದಿಸಿರುವ ಸೆಲೆಬ್ರಿಟಿಗಳ ಸಾಲಿಗೆ ಸೀಗ ರಿಷಬ್ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಹೋಗಿ ರಿಷಬ್ ಶೆಟ್ಟಿ ಈ ದುಬಾರಿ ಕಾರನ್ನು ಖರೀದಿ ಮಾಡಿದ್ದಾರೆ. ಹಾಗೇ ಅವರೊಂದಿಗೆ ಕಾರಿನೊಳಗೆ ಕೂತು ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಕಪ್ಪು ಬಣ್ಣದ ಒಂದೂವರೆ ಕೋಟಿಯ ಈ ಕಾರು ರಿಷಬ್ ಶೆಟ್ಟಿಯ ಇಷ್ಟು ವರ್ಷದ ಶ್ರಮದ ಫಲ ಎನ್ನಬಹುದು.

ಸೆಲೆಬ್ರಿಟಿಗಳ ಫೇವರಿಟ್ ಕಾರು

ಟೊಯೋಟಾ ವೆಲ್‌ಫೈರ್ ಕಾರು ಸೆಲೆಬ್ರಿಟಿಗಳ ಫೇವರಿಟ್ ಕಾರು ಅನ್ನೋದರಲ್ಲಿ ಅನುಮಾನವಿಲ್ಲ. ಶೂಟಿಂಗ್, ಪ್ರಮೋಷನ್, ಇವೆಂಟ್ಸ್ ಅಂತ ಪ್ರತಿದಿನ ಬಿಡುವಿಲ್ಲದೆ ಓಡಾಡುತ್ತಲೇ ಇರುತ್ತಾರೆ. ಇನ್ನು ರಾಜಕಾರಣಿಗಳು ಕೂಡ ಹಾಗೆನೇ. ಇವರು ಕೂಡ ಸಾರ್ವಜನಿಕ ಸೇವೆಯಲ್ಲಿ ಇರುವುದರಿಂದ ಪ್ರಯಾಣ ಜಾಸ್ತಿನೇ ಮಾಡುತ್ತಾರೆ. ಈ ಕಾರಣಕ್ಕೆ ಟೊಯೋಟಾ ಕಾರನ್ನು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ. ಈಗ ರಿಷಬ್ ಶೆಟ್ಟಿ ಕೂಡ ಕನ್ನಡ ಅಷ್ಟೇ ಅಲ್ಲದೆ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನೂ ಒಪ್ಪಿಕೊಂಡಿದ್ದು, ಬಿಡುವಿಲ್ಲದೆ ಒಡಾಟ ಮಾಡಬೇಕಾಗುತ್ತೆ. ಈ ಕಾರಣಕ್ಕೆ ಪ್ರಯಾಣ ಕಂಫರ್ಟ್ ಆಗಿರಲು ಈ ದುಬಾರಿ ಕಾರನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

'ಕಾಂತಾರ ಚಾಪ್ಟರ್ 1' ಶೂಟಿಂಗ್

ಇನ್ನು ಸಿನಿಮಾ ವಿಷಯಕ್ಕೆ ಬರೋದಾರೆ, 'ಕಾಂತಾರ' ಬಳಿಕ ರಿಷಬ್ ಶೆಟ್ಟಿ ಪ್ರೀಕ್ವೆಲ್‌ನಲ್ಲಿ ಬ್ಯುಸಿಯಾಗಿದ್ದಾರೆ. 'ಕಾಂತಾರ ಚಾಪ್ಟರ್ 1' ಶೂಟಿಂಗ್ ಜೋರಾಗಿ ನಡೆಯುತ್ತಿದೆ. ಈಗಾಗಲೇ ಅಕ್ಟೋಬರ್ 2 ರಂದು ಸಿನಿಮಾ ರಿಲೀಸ್ ಆಗುತ್ತೆ ಎಂದು ಡೇಟ್ ಬೇರೆ ಅನೌನ್ಸ್ ಮಾಡಿದ್ದಾರೆ. ಈ ಬೆನ್ನಲ್ಲೇ ಬಿಡುವಿಲ್ಲದೆ ಚಿತ್ರೀಕರಣ ನಡೆಯುತ್ತಿದೆ. ಅಂದುಕೊಂಡಂತೆ ಸಿನಿಮಾ ಗಾಂಧಿ ಜಯಂತಿಯಂದೇ ಬಿಡುಗಡೆಗೆ ಆಗುತ್ತೆ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ.

ರಿಷಬ್ ಶೆಟ್ಟಿ ಕೈಯಲ್ಲಿರುವ ಸಿನಿಮಾಗಳು

'ಕಾಂತಾರ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಯಶಸ್ಸನ್ನು ಕಳಿಸಿತ್ತು. ಈ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಕೂಡ ದೇಶಾದ್ಯಂತ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹೀಗಾಗಿ ಬೇರೆ ಭಾಷೆಗಳಿಂದ ರಿಷಬ್‌ ಶೆಟ್ಟಿಗೆ ಆಫರ್ ಬಂದಿದ್ದು, ತೆಲುಗು, ಹಿಂದಿ ಭಾಷೆಯ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ತೆಲುಗಿನಲ್ಲಿ 'ಜೈ ಹನುಮಾನ್' ಹಾಗೂ ಬಾಲಿವುಡ್‌ನಲ್ಲಿ 'ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್' ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ ಈ ಸಿನಿಮಾ ವಿರುದ್ಧ ಕನ್ನಡಪರ ಹೋರಾಟಗಾರರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಎಚ್ಚರಿಕೆ ಕೊಟ್ಟ ದೈವ

ಇತ್ತೀಚೆಗೆ ರಿಷಬ್ ಶೆಟ್ಟಿ ಪತ್ನಿ ಹಾಗೂ ಮಕ್ಕಳೊಂದಿಗೆ ನೇಮೋತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವ ಎಚ್ಚರಿಕೆಯನ್ನು ನೀಡಿದೆ. ಈ ವೇಳೆ ಸಂಸಾರದ ಬಗ್ಗೆ ಎಚ್ಚರಿಕೆ ನೀಡಿದೆ ಎಂದು ಹೇಳಲಾಗಿತ್ತು. ಬಳಿಕ ದೈವ ಹೇಳಿದ್ದು ರಿಷಬ್ ಶೆಟ್ಟಿ ಸಂಸಾರದ ಬಗ್ಗೆ ಅಲ್ಲ. ಇಲ್ಲಿ ಸಂಸಾರ ಎಂದರೆ, ಚಿತ್ರತಂಡ. ಅದರಲ್ಲಿ ಏನೋ ಸಮಸ್ಯೆ ಇದೆ ಎಂದು ಪಂಜುರ್ಲಿ ದೈವ ಹೇಳಿದೆ ಸ್ಪಷ್ಟನೆ ಕೊಟ್ಟಿದ್ದು, ಐದು ತಿಂಗಳಲ್ಲಿ ಸರಿ ಮಾಡುತ್ತೇನೆ ಎಂದು ಹೇಳಿದೆ.

More from Filmibeat

English summary
Kantara actor Rishab Shetty buys a new car, a Toyota Vellfire. Sudeep, Sumalatha, and Dhananjay have the same
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X