ಅಯ್ಯೋ ಕರಣ್ ಜೋಹರ್‌ಗೆ ಏನಾಯ್ತು? ತೂಕ ಇಳಿಸಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡ್ರಾ?

ಬಾಲಿವುಡ್‌ನ ಸ್ಟಾರ್ ನಿರ್ಮಾಪಕ ಕರಣ್ ಜೋಹರ್ ಕೆಲವು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸುತ್ತಿವೆ. ಅವರ ಆರೋಗ್ಯದ ಬಗ್ಗೆ ಚರ್ಚೆಯನ್ನು ಹುಟ್ಟಾಕುತ್ತಿವೆ. ಇತ್ತೀಚೆಗೆ ಕರಣ್ ಜೋಹರ್ ಸಿಕ್ಕಾಪಟ್ಟೆ ತೂಕ ಇಳಿಸಿಕೊಂಡಿದ್ದಾರೆ. ಅದು ನೆಟ್ಟಿಗರಿಗೆ ಯಾಕೋ ಸರಿ ಕಾಣುತ್ತಿಲ್ಲ. ಹೀಗಾಗಿ ಕಳೆದ ಕೆಲವು ದಿನಗಳಿಂದ ಕರಣ್ ಜೋಹರ್ ತೂಕ ಇಳಿಸಿಕೊಂಡಿರುವ ಬಗ್ಗೆ ಆತಂಕ ಹೊರ ಹಾಕಿದ್ದರು.

ಇತ್ತೀಚೆಗೆ ಕರಣ್ ಜೋಹರ್‌ ಅವರ ಎರಡು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡುತ್ತಿವೆ. ನೆಟ್ಟಿಗರಿಗೆ ಈ ಎರಡೂ ಫೋಟೊಗಳನ್ನು ನೋಡಿ ಏನೋ ಸರಿಯಿಲ್ಲ ಎಂದು ಅನಿಸುವುದಕ್ಕೆ ಶುರುವಾಗಿದೆ. ಬಾಲಿವುಡ್‌ನ ಸ್ಟಾರ್ ನಿರ್ಮಾಪಕ ತೂಕ ಇಳಿಸಿಕೊಳ್ಳುವುದಕ್ಕೆ ಹೋಗಿ ಎಡವಟ್ಟು ಮಾಡಿಕೊಂಡರೇ? ಎನ್ನುವ ಪ್ರಶ್ನೆ ನೆಟ್ಟಿಗರನ್ನು ಕಾಡುತ್ತಿದೆ.

Karan Johar mirror selfie and weight loss has sparked health concern and speculation online

ಕರಣ್ ಜೋಹರ್ ಕಾರಿನಲ್ಲಿ ಕೂತಿರುವ ಫೋಟೊ ಒಂದಾದರೆ, ಇನ್ನೊಂದು ಮಿರರ್ ಮುಂದೆ ಸೆಲ್ಫಿ ತೆಗೆದುಕೊಂಡಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕರಣ್ ಜೋಹರ್ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹೀಗಾಗಿ ತೂಕ ಇಳಿಸಿಕೊಂಡಿರಬಹುದು ಎಂದು ಭಾವಿಸಿದ್ದರು. ಆದರೆ, ಈ ಫೋಟೊಗಳನ್ನು ನೋಡಿ ಇದ್ಯಾಕೋ ಸರಿ ಕಾಣಿಸುತ್ತಿಲ್ಲ. ಕರಣ್ ಜೋಹರ್‌ಗೆ ಆರೋಗ್ಯ ಸಮಸ್ಯೆಯಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಸೆಲೆಬ್ರೆಟಿಗಳು ಸಾಮಾನ್ಯವಾಗಿ ಆರೋಗ್ಯವಾಗಿರುವುದಕ್ಕೆ ಸಾಕಷ್ಟು ಸಾಹಸಗಳನ್ನು ಮಾಡುತ್ತಾರೆ. ಸಿಕ್ಕಾಪಟ್ಟೆ ಡಯೆಟ್ ಮಾಡುತ್ತಾರೆ. ಜಿಮ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ. ಕೆಲವೊಮ್ಮೆ ಇದೇ ಅತಿಯಾಗಿ ಆರೋಗ್ಯ ಸಮಸ್ಯೆ ಕಾಡಿದ್ದೂ ಕೂಡ ಇದೆ. ಕರಣ್ ಜೋಹರ್ ಕೂಡ ಇಂತಹ ಸಾಹಸ ಮಾಡುವುದಕ್ಕೆ ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆಯೇ? ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ತೂಕ ಇಳಿಸಿಕೊಳ್ಳುವುದಕ್ಕೆ ಜೌಷಧಿಯ ಮೊರೆ ಹೋಗಿದ್ದಾರೆ. ಅದು ಎಡವಟ್ಟಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

Karan Johar mirror selfie and weight loss has sparked health concern and speculation online

ಕರಣ್ ಜೋಹರ್ ಫೋಟೊಗಳನ್ನು ನೋಡಿ ನೆಟ್ಟಿಗರ ಕಮೆಂಟ್‌ಗಳು ಹೀಗಿವೆ. "ನಿಜವಾಗಲೂ ಆತಂಕ ಆಗುತ್ತಿದೆ. ಅವರು ನೋಡುವುದಕ್ಕೆ ಆರೋಗ್ಯಕರವಾಗಿ ಕಾಣಿಸುತ್ತಿಲ್ಲ" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಈಗಲೇ ಏನನ್ನೂ ಕಲ್ಪಿಸಿಕೊಳ್ಳುವುದು ಬೇಡ" ಎಂದಿದ್ದಾರೆ. ಮತ್ತೊಬ್ಬರು " ಇದು ನಿಜವಾಗಿಯೂ ಆರೋಗ್ಯ ಸಮಸ್ಯೆ ಎಂದಾದರೆ, ಅವರು ಆದಷ್ಟು ಬೇಗ ಗುಣಮುಖರಾಗುತ್ತಾರೆ" ಎಂದು ಕಮೆಂಟ್ ಮಾಡಿದ್ದಾರೆ.

ಮತ್ತೆ ಕೆಲವರು ಕರಣ್ ಜೋಹರ್‌ ಜಿಮ್, ಡಯೆಟ್ ಅಂತ ಸಣ್ಣಗಾಗಿಲ್ಲ. ಅವರು ತೂಕವನ್ನು ಇಳಿಸುವ ಓಜೆಂಪಿಕ್ ಮತ್ತು ಮೌಂಜಾರೊ ಅಂತ ಔಷಧಿಯನ್ನು ತೆಗೆದುಕೊಳ್ಳುತ್ತಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕರಣ್ ಜೋಹರ್ ಬಳಿ ಹಣವಿದೆ. ಅವರು ತೂಕ ಇಳಿಸಿಕೊಳ್ಳುವುದಕ್ಕೆ ನಾಲ್ಕು ವೈದ್ಯರು ಹಾಗೂ ಹತ್ತು ಮಂದಿ ಡಯೆಟಿಷಿಯನ್‌ ಅನ್ನು ಇಟ್ಟುಕೊಂಡಿರಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ.

ಕರಣ್ ಜೋಹರ್ ಇತ್ತೀಚೆಗೆ ಸಿಕ್ಕಾಪಟ್ಟೆ ತೂಕ ಇಳಿಸಿಕೊಂಡಿದ್ದರ ಬಗ್ಗೆ ಇಂಡಿಯಾ ಟುಡೇ ಡಿಜಿಟಲ್‌ಗೆ ಪ್ರತಿಕ್ರಿಯೆ ನೀಡಿದ್ದರು. " ಆರೋಗ್ಯಕರವಾಗಿರುವುದು, ಸರಿಯಾದ ಆಹಾರ ಸೇವಿಸುವುದು, ವ್ಯಾಯಾಮ ಮಾಡುವುದು, ಚೆನ್ನಾಗಿ ಕಾಣಿಸುವುದಕ್ಕೆ ಶ್ರಮ ಪಡುವುದರ ಪ್ರಯತ್ನವೇ ಇದು" ಎಂದು ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ಅವರ ದೈನಂದಿನ ಚಟುವಟಿಕೆಗಳ ಬಗ್ಗೆ ಕೇಳಿದಾಗ, ಆ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಹಾಗೇ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ "ನಾನೀಗ ಹಿಂದೆಂದಿಗಿಂತಲೂ ಹಗುರವಾಗಿ, ಆರಾಮಾಗಿ ಇದ್ದೇನೆ." ಎಂದು ಹೇಳಿಕೊಂಡಿದ್ದರು.

More from Filmibeat

English summary
Karan Johar mirror selfie and weight loss has sparked health concern and speculation online;
Read more about: karan johar health
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X