ಲಕ್ಸುರಿ ಬ್ರ್ಯಾಂಡ್‌ಗಳ ಒಡೆಯ ಡಿಕೆ ಶಿವಕುಮಾರ್; ಹೇಗಿದೆ ಭಾವಿ ಸಿಎಂ ಲೈಫ್ ಸ್ಟೈಲ್?

ಕರ್ನಾಟಕದ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು, ಮುಂದಿನ ಮುಖ್ಯ ಮುಂತ್ರಿಯಾಗಿ ಡಿಕೆ ಶಿವಕುಮಾರ್ ಅಧಿಕಾರ ವಹಿಸಿಕೊಳ್ಳೋದು ಬಹುತೇಕ ಖಚಿತ ಎನ್ನಲಾಗಿದೆ. ಮುಂದಿನ ಗುರುವಾರ ಇಲ್ಲವೇ ಶುಕ್ರವಾರ ಡಿಕೆ ಶಿವಕುಮಾರ್ ಕರ್ನಾಟಕ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ. ಅದಕ್ಕೆ ಬೇಕಾಗಿರೋ ಸಿದ್ಧತೆಗಳು ನಡೆಯುತ್ತಿವೆ.

ಡಿಕೆ ಶಿವಕುಮಾರ್ ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನ ಸಿನಿಮಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದರು. ಥಿಯೇಟರ್‌ಗಳ ಮಾಲೀಕನಾಗಿ, ವಿತರಕನಾಗಿ, ನಿರ್ಮಾಪಕನಾಗಿ ಗೆದ್ದಿದ್ದಾರೆ. ಇಂದಿಗೂ ಕರ್ನಾಟಕ ಫಿಲ್ಮ್ ಚೇಂಬರ್‌ ಆಫ್ ಕಾಮರ್ಸ್‌ನಲ್ಲಿ ಡಿಕೆ ಶಿವಕುಮಾರ್ ಸದಸ್ಯತ್ವವನ್ನು ಹೊಂದಿದ್ದಾರೆ. ಹೀಗಾಗಿ ರಾಜಕೀಯ ಹಾಗೂ ಸಿನಿಮಾ ಎರಡೂ ಕ್ಷೇತ್ರದಲ್ಲಿ ಡಿಕೆಶಿ ಇದ್ದಾರೆ.

Karnataka CM News Next CM DK Shivakumar Luxury life style and brand craze

ಭಾರತದ ರಾಜಕೀಯ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು. ಇವರ ಸ್ಟೈಲ್, ಲೈಫ್ ಸ್ಟೈಲ್ ಎಲ್ಲವೂ ಅಷ್ಟೇ ಶ್ರೀಮಂತವಾಗಿದೆ. ಐಷಾರಾಮಿ ಜೀವನ ನಡೆಸುವ ಡಿಕೆ ಶಿವಕುಮಾರ್‌ಗೆ ಲಕ್ಸುರಿ ಬ್ರ್ಯಾಂಡ್‌ಗಳ ಕ್ರೇಜ್ ಇದೆ. ಅವರ ದೈನಂದಿನ ಜೀವನ ಶೈಲಿಯಲ್ಲಿ ಅದು ಎದ್ದು ಕಾಣುತ್ತೆ. ಹಾಗಿದ್ದರೆ, ಡಿಕೆಶಿಯ ಐಷಾರಾಮಿ ಬ್ರ್ಯಾಂಡ್‌ಗಳು, ಆಸ್ತಿಯ ಮೌಲ್ಯ ಎಷ್ಟು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಡಿಕೆಶಿ ಬಲು ದುಬಾರಿ

ಡಿಕೆ ಶಿವಕುಮಾರ್ ಸ್ಟೈಲಿಷ್ ಹಾಗೂ ಖಡಕ್ ರಾಜಕಾರಣಿ. ಹೀಗಾಗಿ ಅವರ ವ್ಯಕ್ತಿತ್ವ ಕೂಡ ಅಷ್ಟೇ ಪವರ್‌ಫುಲ್ ಆಗಿದೆ. ಪ್ರತಿನಿತ್ಯ ದುಬಾರಿ ಬ್ರ್ಯಾಂಡ್‌ಗಳನ್ನೇ ಬಳಸುತ್ತಾರೆ. ಜಾಗರಣ್‌ ವರದಿ ಮಾಡಿರುವಂತೆ, ಡಿಕೆಶಿ ಜಗತ್ತಿನ ಪ್ರತಿಷ್ಠಿತ ಬ್ರ್ಯಾಂಡ್‌ಗಳ ವಸ್ತುಗಳನ್ನು ಬಳಸುತ್ತಾರೆ. ಗುಸ್ಸಿ (Gucci), ಫೆರಗಾಮೊ (Ferragamo) ಮತ್ತು ಲೂಯಿ ವಿಟಾನ್ (Louis Vuitton) ನಂತಹ ವಿಶ್ವದ ಅತ್ಯಂತ ದುಬಾರಿ ಮತ್ತು ಪ್ರತಿಷ್ಠಿತ ಬ್ರ್ಯಾಂಡ್‌ಗಳನ್ನು ಧರಿಸುತ್ತಾರೆ.

Also Read
"ಎರಡು ವರ್ಷ ಮಕ್ಕಳಿರಲಿಲ್ಲ.. ಹರಕೆ ಮಾಡಿಕೊಂಡ ಬಳಿಕ ಹುಟ್ಟಿದ": ಡಿಕೆ ಶಿವಕುಮಾರ್ ಅಮ್ಮ ಭಾವುಕ

ಡಿಕೆಶಿಗೆ ಬೆಲೆಬಾಳುವ ಕಾಶ್ಮೀರಿ ಸ್ಕಾರ್ಫ್‌ಗಳು, ಐಷಾರಾಮಿ ವಾಚ್‌ಗಳು ಮತ್ತು ದುಬಾರಿ ಪೆನ್ನುಗಳು, ಕಾರುಗಳ ಮೇಲೆ ಪ್ರೀತಿ ಹೆಚ್ಚು. ವಿಶೇಷ ಅಂದರೆ, ರಾಜಕಾರಣಿಗಳು ತಮ್ಮ ಶ್ರೀಮಂತಿಕೆಯನ್ನು ಬಚ್ಚಿಡುವ ಪ್ರಯತ್ನ ಮಾಡಿದರೆ, ಡಿಕೆ ಶಿವಕುಮಾರ್ ಮಾತ್ರ ಸಾಮಾನ್ಯ ನಾಯಕನಂತೆ ಬಿಂಬಿಸಿಕೊಳ್ಳಲಿಲ್ಲ. ದುಬಾರಿ ಶಾಲ್, ವಾಚ್‌ಗಳನ್ನು ಇಟ್ಟುಕೊಂಡು ವಿರೋಧ ಪಕ್ಷಗಳು ಟೀಕಿಸಿದಾಗಲೂ ಡಿಕೆ ಶಿವಕುಮಾರ್ ತಲೆ ಕೆಡಿಸಿಕೊಳ್ಳಲಿಲ್ಲ. "ನನ್ನಿಷ್ಟದ ವಾಚ್ ಧರಿಸುವ ಹಕ್ಕು ನನಗಿಲ್ಲವೇ?" ಎಂದು ತಿರುಗೇಟು ನೀಡಿದ್ದರು.

Karnataka CM News Next CM DK Shivakumar Luxury life style and brand craze

ಡಿಕೆಶಿ ಆಸ್ತಿ ಮೌಲ್ಯವೆಷ್ಟು?

ಡಿಕೆ ಶಿವಕುಮಾರ್ ಕೇವಲ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿಲ್ಲ. ಬದಲಾಗಿ, ಶಿಕ್ಷಣ, ರಿಯಲ್‌ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಒಡೆತನದಲ್ಲಿ ಶಿಕ್ಷಣ ಸಂಸ್ಥೆ, ಮಾಲ್‌ಗಳು, ಹಲವು ಉದ್ಯಮಗಳು ಸೇರಿಕೊಂಡಿವೆ. ಚುನಾವಣಾ ವೇಳೆ ಸಲ್ಲಿಸಿದ ಅಫೀಡವಿಟ್‌ನಲ್ಲಿ ಡಿಕೆಶಿ ಒಟ್ಟು ಆಸ್ತಿ ಮೌಲ್ಯ 1400 ಕೋಟಿ ರೂಪಾಯಿ ಎಂದು ವರದಿಯಾಗಿದೆ.

ಡಿಕೆ ಶಿವಕುಮಾರ್ ಕೇವಲ ಐಷಾರಾಮಿ ಜೀವನ ಶೈಲಿಯಿಂದ ಅಷ್ಟೇ ಅಲ್ಲ ಜನಪ್ರಿಯರಲ್ಲ. ಅವರು ಕಾಂಗ್ರೆಸ್‌ನ ಟ್ರಬಲ್ ಶೂಟರ್ ಕೂಡ ಹೌದು. ಇಷ್ಟೇ ಅಲ್ಲದೆ ವಿವಾದಗಳಲ್ಲಿಯೂ ಡಿಕೆಶಿ ಸಿಲುಕಿಕೊಂಡಿದ್ದಾರೆ. ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪಗಳು ಇವರ ಮೇಲಿದೆ. ಈ ಆರೋಪಗಳ ಮೇಲೆ ಡಿಕೆ ಶಿವಕುಮಾರ್ ಎರಡು ತಿಂಗಳು ಜೈಲು ಸೇರಿದ್ದರು. ಅಲ್ಲಿಂದ ಬಿಡುಗಡೆಗೊಂಡ ಬಳಿಕ ಡಿಕೆ ಶಿವಕುಮಾರ್ ಅವರ ರಾಜಕೀಯ ಬದುಕು ಉನ್ನತ ಹಂತಕ್ಕೆ ಹೋಗಿದ್ದನ್ನೂ ಇಲ್ಲಿ ಗಮನಿಸಬಹುದು.

English summary
Karnataka CM News: Next CM DK Shivakumar Luxury life style and brand craze. DK Shivakumar is not only politicial but also film distributor, theater owner and producer.
Read more about: dk shivakumar cm net worth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X