ಕಾನ್ ಫೆಸ್ಟಿವಲ್‌ನಲ್ಲಿ 'ಲಕ್ಷ್ಮಿ ನಿವಾಸ'ದ ನಟಿ; ಮಿನಿ ಫ್ರಾಕ್‌ ತೊಟ್ಟು ಹುಡುಗರ ಎದೆ ಝಲ್ ಎನಿಸಿದ ದಿಶಾ ಮದನ್

ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ 'ಲಕ್ಷ್ಮಿ ನಿವಾಸ' ವೀಕ್ಷಕರನ್ನು ಸೆಳೆದಿಟ್ಟುಕೊಂಡಿದೆ. ದಿನದಿಂದ ದಿನಕ್ಕೆ ಈ ಧಾರಾವಾಹಿ ಕಥೆಯಲ್ಲಿ ಟ್ವಿಸ್ಟ್‌ ಕೊಟ್ಟು ಕನ್ನಡಿಗರ ಮನ ಸೆಳೆಯುತ್ತಿದೆ. ಈ ಧಾರಾವಾಹಿಯ ಕಥೆಯಲ್ಲಿ ಒಂದೇ ಕಾಲಕ್ಕೆ ಹಲವು ಟ್ರ್ಯಾಕ್‌ಗಳು ನಡೆಯುತ್ತಿವೆ. ಅದರಲ್ಲಿ ಭಾವನಾ ಹಾಗೂ ಸಿದ್ದೇಗೌಡರ ಟ್ರ್ಯಾಕ್ ಭಾವನಾತ್ಮಕವಾಗಿ ಸೆಳೆಯುತ್ತಿದೆ.

'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಭಾವನಾ ಪಾತ್ರದಲ್ಲಿ ದಿಶಾ ಮದನ್ ನಟಿಸುತ್ತಿದ್ದಾರೆ. ಈ ಧಾರಾವಾಹಿ ಆರಂಭ ಆದಲ್ಲಿಂದ ದಿಶಾ ಮದನ್ ಪಕ್ಕಾ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀರೆಯುಟ್ಟು ಮಂಡ್ಯ ಭಾಗದ ಗೃಹಿಣಿಯಾಗಿ ದಿಶಾ ಕಾಣಿಸಿಕೊಂಡಿದ್ದಾರೆ. ಹೀಗಾಗಿ ವೀಕ್ಷಕರ ಮನಸ್ಸಿನಲ್ಲಿ ನಟಿ ದಿಶಾ ಮದನ್ ಧಾರಾವಾಹಿಯ ಭಾವನಾ ಪಾತ್ರದಲ್ಲಿ ಗಟ್ಟಿಯಾಗಿ ಕೂತಿದ್ದಾರೆ.

Lakshmi Nivasa serial actress Disha Madan stunning in glamour outfit

ಇನ್ನೊಂದು ಕಡೆ ಧಾರಾವಾಹಿಯಿಂದ ಹೊರ ಬಂದರೆ ಅವರ ಪ್ರಪಂಚವೇ ಬೇರೆ. ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ತಮ್ಮ ಪಾತ್ರಕ್ಕೂ ರಿಯಲ್ ಲೈಫ್‌ಗೂ ಸಂಬಂಧವೇ ಇಲ್ಲವೇನೋ ಅನ್ನೋ ಹಾಗೆ ಇರುತ್ತಾರೆ. ಆ ಮಟ್ಟಿಗೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಸದ್ಯ ಅವರು ಮಿನಿ ಫ್ರಾಕ್ ತೊಟ್ಟು ಕ್ಯಾಟ್ ವಾಕ್ ಮಾಡಿರೋ ದಿಶಾ ಮದನ್ ಅವರ ವಿಡಿಯೋ ನೋಡಿ ನೆಟ್ಟಿಗರು ಕಣ್ಣುಗಳು ಅರಳಿವೆ.

ಹೌದು, ದಿಶಾ ಮದನ್ ಲಕ್ಷ್ಮಿ ನಿವಾಸ ಧಾರಾವಾಹಿ ಜೊತೆ ಅಂತರಾಷ್ಟ್ರೀಯ ಮಟ್ಟದ ಫ್ಯಾಷನ್ ಇವೆಂಟ್‌ನಲ್ಲಿ ಭಾಗವಹಿಸಿದ್ದಾರೆ. ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾನ್ಸ್ ಫೆಸ್ಟಿವಲ್‌ನಲ್ಲಿ ದಿಶಾ ಭಾಗಿಯಾಗಿದ್ದಾರೆ. ವಿವಿಧ ದೇಶಗಳಲ್ಲಿ ಬಂದಿರುವ ಇನ್ಫ್ಯೂಯೆನ್ಸರ್‌ಗಳ ಪೈಕಿ ಭಾರತದಿಂದ ಹೋಗಿರುವವರಲ್ಲಿ ನಟಿ ದಿಶಾ ಮದನ್ ಕೂಡ ಒಬ್ಬರು. ಹೀಗಾಗಿ ಗ್ಲಾಮರಸ್ ಲುಕ್‌ನಲ್ಲಿ ವಿಡಿಯೋ ಮಾಡಿ ದಿಶಾ ಪೋಸ್ಟ್ ಮಾಡುತ್ತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Also Read
ಕೋಳಿ ಮೊಟ್ಟೆಯನ್ನು ಸೋಪ್ ಹಾಕಿ ತೊಳೆಯೋದ್ಯಾಕೆ ಶ್ವೇತಾ ಚೆಂಗಪ್ಪ? ಆಕೆಗಿರುವ ಮಾನಸಿಕ ಸಮಸ್ಯೆ ಏನು?
ಕೋಳಿ ಮೊಟ್ಟೆಯನ್ನು ಸೋಪ್ ಹಾಕಿ ತೊಳೆಯೋದ್ಯಾಕೆ ಶ್ವೇತಾ ಚೆಂಗಪ್ಪ? ಆಕೆಗಿರುವ ಮಾನಸಿಕ ಸಮಸ್ಯೆ ಏನು?

ದಿಶಾ ಮದನ್ ಒಂದು ದಿನದ ಹಿಂದಷ್ಟೇ ಮಿನಿ ಫ್ರಾಕ್ ತೊಟ್ಟು ಕ್ಯಾಟ್ ವಾಕ್ ಮಾಡಿದ್ದಾರೆ. ಇವರ ಗ್ಲಾಮರಸ್ ಲುಕ್‌ಗೆ, ಔಟ್‌ಫಿಟ್‌ಗೆ, ಸ್ಟೈಲ್‌ಗೆ ನೆಟ್ಟಿಗರಂತೂ ಫಿದಾ ಆಗಿದ್ದಾರೆ. ಹಾಗಂತ ಈ ಮಿನಿ ಫ್ರಾಕ್ ಅನ್ನು ಯಾವುದೋ ವಿದೇಶದಲ್ಲ. ಈ ಗ್ಲಾಮರಸ್ ಡ್ರೆಸ್‌ಗೆ ಮೈಸೂರಿನ ನಂಟು ಇದೆ. ಈ ಮಿನಿ ಫ್ರಾಕ್ ಅನ್ನು ಮೈಸೂರಿನ ಸ್ಯಾರಿ ಉದ್ಯೋಗ್ ಸಂಸ್ಥೆಯ ಫ್ಯಾಬ್ರಿಕ್‌ನಿಂದ ಸಿದ್ಧಪಡಿಸಲಾಗಿದೆ. ಪಕ್ಕಾ ಟ್ರೆಡಿಷನಲ್ ಮೈಸೂರಿನ ಸಿಲ್ಕ್ ಸ್ಯಾರಿ ವಿನ್ಯಾಸ ಮಾಡುವ NADAH ಈ ಟ್ರೆಸ್‌ ಅನ್ನು ಡಿಸೈನ್ ಮಾಡಿದೆ.

ದಿಶಾ ಸದ್ಯ ಕಾನ್ ಫೆಸ್ಟಿವಲ್‌ ಮೂಡ್‌ನಲ್ಲಿ ಇದ್ದಾರೆ. ಅದಕ್ಕಾಗಿ ಗ್ಲಾಮರ್ ಅವತಾರ ತಾಳಿದ್ದಾರೆ. ಸದ್ಯ ಇವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತಿರುವ ವಿಡಿಯೋಗಳನ್ನು ನೋಡಿ ನೆಟ್ಟಿಗರು ಕಳೆದೇ ಹೋಗಿದ್ದಾರೆ. ಅವರ ಗ್ಲಾಮರಸ್ ಲುಕ್ ನೋಡಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಕಾನ್ ಫೆಸ್ಟಿವಲ್‌ಗೆ ಹೋಗುತ್ತಿರುವ ಬಗ್ಗೆ ದಿಶಾ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದರು.

ಈ ವರ್ಷ ಮತ್ತೆ ಕಾನ್‌ ಫೆಸ್ಟಿವಲ್‌ಗೆ ಹೋಗುತ್ತಿದ್ದು, ಕರ್ನಾಟಕದ ಫ್ಯಾಷನ್, ಸಂಸ್ಕೃತಿ ಅನ್ನು ಗ್ಲೋಬಲ್ ಲೆವೆಲ್‌ನಲ್ಲಿ ಪ್ರತಿಬಿಂಬಿಸುವುದಾಗಿ ಹೇಳಿಕೊಂಡಿದ್ದರು. ಕಳೆದ ಬಾರಿ ಕೂಡ ದಿಶಾ ಮದನ್ ಇದೇ ಕಾನ್‌ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದರು. ಅಲ್ಲಿ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜನ ಮನ್ನಣ್ಣ ಸಿಕ್ಕಿತ್ತು. ಈ ಮತ್ತೆ ಕಾನ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದು, ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಈ ವೇಳೆ ಮಿನಿ ಫ್ರಾಕ್‌ನಲ್ಲಿ ಕ್ಯಾಟ್ ಮಾಡಿದ ವಿಡಿಯೋ ಕಿರುತೆರೆ ವೀಕ್ಷಕರಿಗಂತೂ ಸಖತ್ ಕಿಕ್ ಕೊಟ್ಟಿದೆ.

English summary
Lakshmi Nivasa serial actress Disha Madan stunning in glamour outfit. She one of the actress and regional creator attending Cannes 2026.
Read more about: actress fashion
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X