Met Gala 2026: ಇಶಾ ಅಂಬಾನಿ ಕೈಯಲ್ಲಿದ್ದ 20 ವರ್ಷ ಹಳೆಯ ಗೋಲ್ಡನ್ ಮ್ಯಾಂಗೋ ಬೆಲೆ ಎಷ್ಟು ಗೊತ್ತೇ?

ಫ್ಯಾಷನ್ ಜಗತ್ತಿನ ಜನಪ್ರಿಯ ಕಾರ್ಯಕ್ರಮ 'ಮೆಟ್‌ ಗಾಲಾ'. ಪ್ರತಿ ವರ್ಷದಂತೆ 2026ರ ಮೆಟ್‌ ಗಾಲಾ ಕೂಡ ಸಾಕಷ್ಟು ವಿಶೇಷತೆಯಿಂದ ಕೂಡಿತ್ತು. ವಿಶ್ವದ ಮೂಲೆ ಮೂಲೆಯಿಂದ ಬರುವ ಸೆಲೆಬ್ರೆಟಿಗಳು ತಮ್ಮ ಕಾಸ್ಟ್ಯೂಮ್‌ನಿಂದ ಗಮನ ಸೆಳೆಯುತ್ತಾರೆ. ಅಂತೆಯೇ ಈ ವರ್ಷ ಕೂಡ ಭಾರತದ ಬೇರೆ ಬೇರೆ ಕ್ಷೇತ್ರದ ಸೆಲೆಬ್ರೆಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಕೂಡ ಭಾಗಿಯಾಗಿದ್ದರು.

ಮೆಟ್‌ ಗಾಲಾ 2026ರಲ್ಲಿ ಭಾಗಿಯಾಗಿದ್ದ ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕಿ ಇಶಾ ಅಂಬಾನಿ ವಿಶ್ವದ ಗಮನ ಸೆಳೆದಿದ್ದಾರೆ. ಭಾರತದ ಸಂಸ್ಕೃತಿಯನ್ನು ಪ್ರಭಾವಶಾಲಿಯಾಗಿ ಪ್ರಸ್ತುತಪಡಿಸಿದ್ದಾರೆ. ಇಶಾ ಅಂಬಾನಿ ಧರಿಸಿದ್ದ ಉಡುಗೆ ಮಾಡರ್ನ್ ಜೊತೆಗೆ ಭಾರತೀಯ ಸಂಸ್ಕೃತಿಯ ಮಿಶ್ರಣವಾಗಿತ್ತು. ಇದರೊಂದಿಗೆ ಇಶಾ ಕೈಯಲ್ಲಿ ಹಿಡಿದಿದ್ದ ಗೋಲ್ಡನ್ ಮ್ಯಾಂಗೋ ಗಮನ ಸೆಳೆದಿದೆ.

Met Gala 2026 Isha Ambani s 20 Years Old Golden Mango Artwork Grab The Attention

ಮಾಡರ್ನ್ ಟಚ್ ಇರುವ ಟ್ರೆಡಿಷನಲ್‌ ಡ್ರೆಸ್‌ನಲ್ಲಿ ಇಶಾ ಅಂಬಾನಿ ರೆಡ್‌ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಾ ಬಂದಿದ್ದರು. ಆ ವೇಳೆ ಸುಮಾರು 20 ವರ್ಷಗಳಷ್ಟು ಹಳೆಯದಾದ ಗೋಲ್ಡನ್ ಮ್ಯಾಂಗೋ ಅನ್ನು ಕೈಯಲ್ಲಿ ಹಿಡಿದು ಬಂದಿದ್ದರು. ಈ ವಿಶಿಷ್ಟ ಕಲಾಕೃತಿ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಅಂದ್ಹಾಗೆ, ವಿಶಿಷ್ಟ ಕಲಾಕೃತಿ ವಿಶೇಷತೆಯೇನು? ಇದನ್ನು ಡಿಸೈನ್ ಮಾಡಿದ್ದು ಯಾರು? ಬೆಲೆ ಎಷ್ಟು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಇಶಾ ಅಂಬಾನಿ ಕಲಾಪ್ರಜ್ಞೆಗೆ ಮೆಚ್ಚುಗೆ

ಇಶಾ ಅಂಬಾನಿ ಕೈಯಲ್ಲಿದ್ದ ಈ ವಿಶಿಷ್ಟ ಕಲಾಕೃತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಸುಮಾರು 20 ವರ್ಷದಷ್ಟು ಹಳೆಯದ್ದು ಎಂದು ತಿಳಿದ ಬಳಿಕ ಫ್ಯಾಷನ್ ಪ್ರಿಯರ ಕಣ್ಣುಗಳು ಈ ಕಲಾಕೃತಿ ಬಗ್ಗೆ ಅರಳಿವೆ. ಅಂದ್ಹಾಗೆ, ಈ ಕಲಾಕೃತಿಯ ಸೃಷ್ಠಿಕರ್ತ ಭಾರತೀಯ ಕಲಾವಿದ ಸುಬೋಧ್ ಗುಪ್ತಾ. ಇದರ ಹಿನ್ನೆಲೆ ತಿಳಿದ ಬಳಿಕ ಇಶಾ ಅಂಬಾನಿ ಖರೀದಿ ಮಾಡಿದ್ದು, ಅವರ ಕಲಾಪ್ರಜ್ಞೆ ಬಗ್ಗೆ ವಿಶ್ವದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಕಲಾಕೃತಿ ಪ್ರದರ್ಶನದ ಮುಖ್ಯ ಉದ್ದೇಶ ಭಾರತೀಯ ಸಮಕಾಲೀನ ಕಲೆಯನ್ನು ಮೆಟ್‌ ಗಾಲಾದಂತಹ ಜಾಗತಿಕ ವೇದಿಕೆಯಲ್ಲಿ ಪ್ರಮೋಟ್ ಮಾಡುವುದಾಗಿತ್ತು ಎನ್ನಲಾಗಿದೆ.

ತಾಯಿ ಅತ್ಯಮೂಲ್ಯ ಆಭರಣ ಬಳಕೆ

ಇನ್ನು ಮೆಟ್‌ ಗಾಲಾದಲ್ಲಿ ಇಶಾ ಅಂಬಾನಿಯ ಕಾಸ್ಟ್ಯೂಮ್‌ಗಳು ಕೂಡ ಗಮನ ಸೆಳೆದಿದ್ದವು. ತಾನು ಧರಿಸಿದ್ದ ಧಿರಿಸಿನ ಬಗ್ಗೆ ಇಶಾ ಅಂಬಾನಿ ಮಾಧ್ಯಮಗಳಿಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಅವರು ಧರಿಸಿದ್ದ ಬ್ಲೌಸ್ ಅವರ ತಾಯಿ ನೀತಾ ಅಂಬಾನಿಯವರ ಅತ್ಯಮೂಲ್ಯ ಆಭರಣಗಳನ್ನು ಬಳಸಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಮೇಲಿದ್ದ ವಜ್ರ ಹಾಗೂ ಪಚ್ಚೆಗಳು ತಾಯಿಯ ಮೇಲಿನ ಅವರ ಭಾವ, ತಾಯಿ-ಮಗಳ ಭಾವನಾತ್ಮಕ ಬಾಂಧವ್ಯವನ್ನು ಸೂಚಿಸುತ್ತಿದೆ.

ಉಡುಗೊರೆಗಳಲ್ಲೇ ಬ್ಲೌಸ್ ರಚನೆ

ಇತ್ತೀಚೆಗೆ ಇಶಾ ಅಂಬಾನಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಈ ವೇಳೆ ಅವರಿಗೆ ಉಡುಗೊರೆಗಳ ಸುರಿಮಳೆಯೇ ಆಗಿತ್ತು. ಇವೆಲ್ಲವನ್ನೂ ಬ್ಲೌಸ್ ಮಾಡಲು ಬಳಸಲಾಗಿದೆ. ಹೀಗಾಗಿ ಇಶಾ ಅಂಬಾನಿಯ ಧರಿಸಿದ ಉಡುಪು ಗಮನ ಸೆಳೆಯುತ್ತಿದೆ. ಅಷ್ಟೇ ಅಲ್ಲದೆ ಇಶಾ ಕೂದಲಿಗೆ ಅಲಂಕರ ಮಾಡಿದ್ದ 'ಗಜರಾ' ಕೂಡ ಗಮನ ಸೆಳೆದಿದೆ. ಇದನ್ನು ಬ್ರೂಕ್‌ಲಿನ್ ಮೂಲದ ಭಾರತೀಯ ಕಲಾವಿದರೊಬ್ಬರು ವಿನ್ಯಾಸಗೊಳಿಸಿದ್ದರು.

ಇಶಾ ಸೀರೆಯ ವಿಶೇಷತೆಯೇನು?

ಇಶಾ ಅಂಬಾನಿ ಧರಿಸಿದ್ದ ಸೀರೆ ಬಗ್ಗೆನೂ ಚರ್ಚೆಯಾಗುತ್ತಿದೆ. ಸೀರೆ ಅನ್ನೋದು ಭಾರತದ ಸಂಸ್ಕೃತಿಯ ಸಂಕೇತ. ಈ ಸೀರೆಯಲ್ಲೂ ಮಾಡರ್ನ್ ಹಾಗೂ ಸಂಪ್ರದಾಯದ ಅದ್ಭುತ ಸಂಗಮ ಆಗಿದೆ. ಅಂದ್ಹಾಗೆ, ಈ ಗೋಲ್ಡನ್ ಮ್ಯಾಂಗೋ ಕಲಾಕೃತಿಯ ಬೆಲೆ ಬರೋಬ್ಬರಿ 95 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ.

English summary
Met Gala 2026 Isha Ambani's 20 Years Old Golden Mango Artwork Grab The Attention.
Read more about: fashion saree fashion show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X