Miss World 2025; ವಿಶ್ವ ಸುಂದರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮಿಸ್ ಥೈಲ್ಯಾಂಡ್ ಓಪಲ್ ಸುಚಾಟಾ

ಪ್ರತಿಷ್ಠಿತ ಮಿಸ್‌ ವರ್ಲ್ಡ್ 2025 ಗ್ರ್ಯಾಂಡ್ ಫಿನಾಲೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದಿತ್ತು. ಬೇರೆ ಬೇರೆ ರಾಷ್ಟ್ರದ ಸುಂದರಿಯರು ವಿಶ್ವ ಸುಂದರಿ ಪಟ್ಟಕ್ಕಾಗಿ ಪೈಪೋಟಿ ನಡೆಸಿದ್ದರು. ಇಂದು (ಮೇ 31) ವಿಶ್ವ ಸುಂದರಿ ಗ್ರ್ಯಾಂಡ್ ಫಿನಾಲೆಗೆ ತೆರೆಬಿದ್ದಿದೆ. ತೆಲಂಗಾಣದ ಹೈದರಾಬಾದ್‌ನಲ್ಲಿರುವ ಹೈಟೆಕ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಈ ಅದ್ಧೂರಿ ಸಮಾರಂಭ ನಡೆದಿತ್ತು.

ಈ ಬಾರಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಸ್ಪರ್ಧಿ ಪ್ರಶಸ್ತಿ ಗೆಲ್ಲಬಹುದೆಂಬ ನಿರೀಕ್ಷೆಯಿತ್ತು. ಆದು ಹುಸಿಯಾಗಿದೆ. ಮಿಸ್‌ ಥೈಲ್ಯಾಂಡ್ ಓಪಲ್ ಸುಚಾಟಾ ಅವರಿಗೆ ವಿಶ್ವ ಸುಂದರಿ ಪಟ್ಟವನ್ನು ನೀಡಲಾಗಿದೆ. 72ನೇ ಆವೃತ್ತಿಯ ವಿಶ್ವ ಸುಂದರಿ ಕಿರೀಟವನ್ನು ಜೆಕ್ ಗಣರಾಜ್ಯದ ರಾಣಿ ಕ್ರಿಸ್ಟಿನಾ ಪಿಸ್ಜ್ಕೋವಾ ಮಿಸ್ ಥೈಲ್ಯಾಂಡ್ ಓಪಲ್ ಸುಚಾಟಾ ಅವರಿಗೆ ಹಸ್ತಾಂತಿಸಿದ್ದಾರೆ.

Miss World 2025 grand finale Miss Thailand Opal Suchata wins the title in Hyderabad

ಮಿಸ್ ವರ್ಲ್ಡ್ 2025ಕ್ಕೆ ಸುಮಾರು 108 ದೇಶಗಳಿಂದ ಸುಂದರಿಯರು ಭಾಗವಹಿಸಿದ್ದರು. ಅಂತಿಮವಾಗಿ ನಾಲ್ಕು ಖಂಡಗಳಿಂದ 10 ಜನ ಸ್ಪರ್ಧಿಗಳನನ್ನು ಘೋಷಣೆ ಮಾಡಲಾಗಿತ್ತು. ಇವರಲ್ಲಿ ಐದು ಮಂದಿಯನ್ನು ಆಯ್ಕೆ ಮಾಡಲಾಯಿತು. ಅಂತಿಮವಾಗಿ ಈ ಐದು ಮಂದಿಯಲ್ಲಿ ವಿಶ್ವ ಸುಂದರಿ ಸ್ಪರ್ಧೆಗೆ ಇಬ್ಬರನ್ನು ಆಯ್ಕೆ ಮಾಡಲಾಗಿತ್ತು. ಮಿಸ್ ಫಿಲಿಫೈನ್ಸ್ ಹಾಗೂ ಮಿಸ್ ಥೈಲ್ಯಾಂಡ್ ಪೈಪೋಟಿಗೆ ನಿಂತಿದ್ದರು. ಕೊನೆಯಲ್ಲಿ ಮಿಸ್‌ ಥೈಲ್ಯಾಂಡ್‌ ಓಪಲ್ ಸುಚಾಟಾ ಸ್ಪರ್ಧೆ ಮಾಡಿ ಕಿರೀಟವನ್ನು ಮುಡಿಗೇರಿಸಿಕೊಂಡರು.

ಈ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದಿಂದ ನಂದಿನಿ ಗುಪ್ತಾ ಸ್ಪರ್ಧೆ ಮಾಡಿದ್ದರು. 108 ಮಂದಿಯಲ್ಲಿ ಟಾಪ್‌ 20ಯವರೆಗೂ ನೀನಾ ಗುಪ್ತಾ ಎಂಟ್ರಿ ಕೊಟ್ಟಿದ್ದರು. ಆದರೆ, ಕೊನೆಯ ಹಂತದವರೆಗೂ ಪೈಫೋಟಿ ನೀಡುವಲ್ಲಿ ವಿಫಲರಾದರು. ಆದರೂ, ಭಾರತದ ನಂದಿನಿ ಗುಪ್ತಾ ಟಾಪ್‌ 20ಯವರೆಗೂ ಬಂದಿದ್ದು ಕೂಡ ದೊಡ್ಡ ಸಾಧನೆಯೇ ಸರಿ.

ಇನ್ನು ವಿಶ್ವ ಸುಂದರಿ ಓಪಲ್ ಸುಚಾಟಾ ಬಗ್ಗೆ ಹೇಳುವುದಾರೆ, ಥೈಲ್ಯಾಂಡ್‌ನ ಕರಾವಳಿ ನಗರವಾದ ಫುಕೆಟ್‌ನಿಂದ ವಿಶ್ವ ಸುಂದರಿ ಓಪಲ್ ಸುಚಾಟಾ ಜರ್ನಿ ಶುರುವಾಗುತ್ತೆ. ಹಾಸ್ಪಿಟಾಲಿಟಿ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಂಡಿರುವ ಕುಟುಂಬದಲ್ಲಿ ಜನಿಸಿದ್ದರು. ಓಪಲ್ ಸುಚಾಟಾ ಥೈ, ಇಂಗ್ಲಿಶ್ ಹಾಗೂ ಚೈನೀಸ್ ಭಾಷೆಯನ್ನು ಸುಲಲಿತವಾಗಿ ಮಾತಾಡಬಲ್ಲರು. ಬಹುಭಾಷೆಯಲ್ಲಿ ಪರಿಣಿತಿ ಪಡೆದಿರುವ ಓಪಲ್ ಸುಚಾಟಾ ಗ್ಲೋಬಲ್ ಲೆವೆಲ್‌ನಲ್ಲಿ ಪ್ರಭಾವ ಬೀರಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಓಪಲ್ ಸುಚಾಟಾ ಅವರ ಶಿಕ್ಷಣ ಕೂಡ ಅಷ್ಟೇ ಗಮನ ಸೆಳೆಯುತ್ತಿದೆ. ಬ್ಯಾಂಕಾಕ್‌ನಲ್ಲಿ ಚೈನೀಸ್ ಸ್ಟಡೀಸ್ ಮಾಡುತ್ತಿದ್ದಾರೆ. ಹಾಗೇ ಬೇರೆ ಭಾಷೆಯನ್ನು ಕಲಿಯುವುದರಲ್ಲಿ ಆಸಕ್ತಿಯನ್ನು ತೋರಿದ್ದಾರೆ. ಅಂತರಾಷ್ಟ್ರೀಯ ಸಂಬಂಧಗಳ ಕುರಿತು ಶಿಕ್ಷಣವನ್ನು ಮುಂದುವರೆಸಿದ್ದು, ದೇಶದ ರಾಯಭಾರಿಯಾಗುವುದು ಅವರ ಗುರಿಯಾಗಿದೆ. ಇದರೊಂದಿಗೆ ಸಮಾಜ ಮುಖಿ ಕೆಲಸಗಳಲ್ಲೂ ನಿರತರಾಗಿದ್ದಾರೆ. ತನ್ನ 16ನೇ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್‌ಗೆ ತುತ್ತಾಗಿದ್ದ ಓಪಲ್ ಸುಚಾಟಾ ಕ್ಯಾನ್ಸರ್ ಬಗ್ಗೆ ಜಾಗೃತಿಯನ್ನು ಮೂಡಿಸ ನಿಟ್ಟಿನಲ್ಲಿ 'ಓಪಲ್ ಫಾರ್ ಹರ್' ಅನ್ನು ಸ್ಥಾಪಿಸಿದ್ದು, ಆ ಮೂಲಕ ಕೆಲಸ ಮಾಡುತ್ತಿದ್ದಾರೆ.

More from Filmibeat

English summary
Miss World 2025 grand finale Miss Thailand Opal Suchata wins the title in Hyderabad.
Read more about: miss world fashion life style
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X