ಕರುವಿನ ಚರ್ಮದ ಬ್ಯಾಗ್ ಹಿಡಿದು ಹಸುವಿಗೆ ಆಹಾರ ನೀಡಿದ ಗಾಯಕಿ; ರಿಹಾನ್ನಾ ವಿರುದ್ಧ ಕಿಡಿ.. ಬ್ಯಾಗ್ ಬೆಲೆ ಮೇಲೆ ಕಣ್ಣು!

ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾಗಿರುವ ಗಾಯಕಿ ರಿಹಾನ್ನಾ ಕೆಲವು ದಿನಗಳ ಹಿಂದೆ ಮುಂಬೈಗೆ ಬಂದಿದ್ದರು. ಆಕೆ ಭಾಗವಹಿಸುತ್ತಿದ್ದ ಇವೆಂಟ್‌ನಲ್ಲಿ ಅವರದ್ದೇ ಬ್ಯೂಟಿ ಬ್ರ್ಯಾಂಡ್ 'ಫೆಂಟಿ ಬ್ಯೂಟಿ' ಹೆಸರು ಕೂಡ ಇತ್ತು. ಹೀಗಾಗಿ ರಿಹಾನ್ನಾ ಭಾರತದ ಪ್ರವಾಸ ಮಾಡಿದ್ದರು. ಈ ವೇಳೆ ಅವರಿಗೆ ಭಾರತದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಆದರೆ, ಬಂದು ಹಿಂತಿರುಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವಿವಾದ ಭುಗಿಲೆದ್ದಿದೆ.

ಎರಡು ವರ್ಷಗಳ ಹಿಂದೆ ಈ ಗ್ಲೋಬಲ್ ಸಿಂಗರ್ ರಿಹಾನ್ನಾ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಕ್ಕೆ ಆಗಮಿಸಿದ್ದರು. ಜಾಮ್‌ನಗರದಲ್ಲಿ ನಡೆದ ಪ್ರೀ-ವೆಡ್ಡಿಂಗ್ ಇವೆಂಟ್‌ನಲ್ಲಿ ರಿಹಾನ್ನಾ ಹಾಡಿದ್ದರು. ಇದಕ್ಕೆ ಸುಮಾರು 66 ಕೋಟಿ ರೂಪಾಯಿಯಿಂದ 74 ಕೋಟಿ ರೂಪಾಯಿವರೆಗೂ ಸಂಭಾವನೆ ಪಡೆದಿದ್ದರು ಎಂದು ಸುದ್ದಿಯಾಗಿತ್ತು.

Popular singer Rihanna controversy dior calfskin bag while cow feeding in her Mumbai visit

ಈಗ ಅವರು ತಮ್ಮದೇ ಬ್ರ್ಯಾಂಡ್ 'ಫೆಂಟಿ ಬ್ಯೂಟಿ'ಯ ಪರೋಕ್ಷವಾಗಿ ಪ್ರಚಾರ ಮಾಡುವ ಸಲುವಾಗಿ ಆಗಮಿಸಿದ್ದರು. ಈ ವೇಳೆ ರಿಹಾನ್ನಾ ವಿವಾದಕ್ಕೆ ಸಿಲುಕಿದ್ದಾರೆ. ಮುಂಬೈ ಕಾಲಿಡುತ್ತಿದ್ದಂತೆ ಭಾರತದ ಹಿಂದೂ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಗೋವು ಸೇವೆಯನ್ನು ಮಾಡಿದ್ದರು. ಹಸುವಿಗೆ ಆಹಾರ ನೀಡಿ ನೆಟ್ಟಿಗರಿಂದ ಮೆಚ್ಚುಗೆಯನ್ನು ಪಡೆದಿದ್ದರು. ಆದರೆ, ಕೆಲವೇ ಕ್ಷಣಗಳಲ್ಲಿ ಆಕೆ ಕೈಯಲ್ಲಿ ಹಿಡಿದುಕೊಂಡಿದ್ದ ಬ್ಯಾಗ್‌ನಿಂದ ವಿವಾದಕ್ಕೆ ಸಿಲುಕಿದ್ದಾರೆ.

ಹೌದು, ಜಗತ್ಪ್ರಸಿದ್ಧ ಗಾಯಕಿ ರಿಹಾನ್ನಾ ಇವೆಂಟ್‌ಗಾಗಿ ಮುಂಬೈಗೆ ಬಂದಿದ್ದರು. ಈ ವೇಳೆ ಹಸುವಿಗೆ ಆಹಾರ ನೀಡಿ ಮೆಚ್ಚುಗೆಯನ್ನು ಗಳಿಸಿದ್ದರು. ಕ್ಷಣಾರ್ಧದಲ್ಲಿ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದಕ್ಕೊಂದು ಕಾರಣವಿದೆ. ಈಕೆ ಹಸುವಿಗೆ ಆಹಾರ ನೀಡುವಾಗ ಕೈಯಲ್ಲಿ ಹಿಡಿದಿದ್ದ ಡಿಯೋರ್ ಬ್ರ್ಯಾಂಡ್‌ನ ದುಬಾರಿ ಬ್ಯಾಗ್ ಕರು ಹಾಗೂ ಕುರಿಮರಿಯ ಚರ್ಮದಿಂದ ಮಾಡಿದ್ದು ಎಂಬುವುದನ್ನು ನೆಟ್ಟಿಗರು ಕಂಡುಕೊಂಡಿದ್ದಾರೆ.

ಅದ್ಯಾವಾಗ ಆ ಬ್ಯಾಗ್ ಅನ್ನು ಇಂಟರ್‌ನೆಟ್‌ನಲ್ಲಿ ಹುಡುಕಿ ಮಾಹಿತಿಯನ್ನು ಕಲೆ ಹಾಕಿದರೋ ಅಲ್ಲಿಂದ ರಿಹಾನ್ನಾ ವಿರುದ್ಧ ತಿರುಗಿಬಿದ್ದಿದ್ದಾರೆ. ಇದೆಲ್ಲ ಕೇವಲ ತೋರ್ಪಡಿಕೆಗೆ ಮಾಡಿದ ಗಿಮಿಕ್ ಅಂತ ಕಿಡಿಕಾರುತ್ತಿದ್ದಾರೆ. ಕರುವಿನ ಚರ್ಮದಿಂದ ಮಾಡಿದ ಬ್ಯಾಗ್ ಅನ್ನು ಕೈಯಲ್ಲಿ ಹಿಡಿದು ಹಸುವಿಗೆ ಆಹಾರ ಕೊಡುವುದು ಯಾವ ನ್ಯಾಯ? ಇದು ಕೇವಲ ಬೂಟಾಟಿಕೆ ಎಂದು ಟೀಕಿಸುತ್ತಿದ್ದಾರೆ. ಇನ್ನೊಂದು ಕಡೆ "ಹಸು ತನ್ನ ಚರ್ಮವನ್ನು ಗುರುತು ಹಿಡಿದಿಲ್ಲ ಎಂದು ಭಾವಿಸಿದ್ದೇನೆ" ಎಂದು ಮತ್ತೊಬ್ಬರ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಇನ್ನೊಂದು ಕಡೆ ರಿಹಾನ್ನಾ ಕೈಯಲ್ಲಿದ್ದ ಈ ಕಡು ಹಸಿರು ಬಣ್ಣದ ಬ್ಯಾಗ್‌ನ ಬೆಲೆಯ ಮೇಲೆ ಕಣ್ಣುಬಿದ್ದಿದೆ. ವಿವಾದದ ಕಿಡಿ ಹೊತ್ತುತ್ತಿದ್ದಂತೆ ನೆಟ್ಟಿಗರ ಕಣ್ಣು ರಿಹಾನ್ನಾ ಅವರ ಬ್ಯಾಗ್ ಮೇಲೆ ಬಿದ್ದಿದೆ. ಅವರೇ ಹುಡುಕಿ ಅದರ ಬೆಲೆ 4.3 ಲಕ್ಷ ರೂಪಾಯಿ ಎಂದು ಹಾಕುತ್ತಿದ್ದಾರೆ. ಅದರಲ್ಲಿ ಕರು ಹಾಗೂ ಕುರಿ ಮರಿಯ ಚರ್ಮದಿಂದ ಮಾಡಿದ ಬ್ಯಾಗ್ ಎಂದು ಹೇಳಲಾಗಿದೆ. ಅದನ್ನೂ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ರಿಹಾನ್ನಾ ಮುಂಬೈಗೆ ಕಾಲಿಡುತ್ತಿದ್ದಂತೆ ಬಾಲಿವುಡ್‌ ನಟಿಯರು ದೌಡಾಯಿಸಿ ಸ್ವಾಗತ ಕೋರಿದ್ದಾರೆ. ಈ ಪಾರ್ಟಿಯಲ್ಲಿ ಸೋಶಿಯಲ್ ಮೀಡಿಯಾ ಇನ್ಫ್ಯೂಯೆನ್ಸರ್ಸ್ ಹಾಗೂ ಬಾಲಿವುಡ್ ನಟಿಯರಾದ ಜಾಹ್ನವಿ ಕಪೂರ್, ಡಿಸೈನರ್ ಮನೀಶ್ ಮಲ್ಹೋತ್ರಾ ಭಾಗವಹಿಸಿದ್ದಾರೆ. ಇದರೊಂದಿಗೆ ಇವೆಂಟ್‌ಗೆ 5 ಗಂಟೆಗೂ ಹೆಚ್ಚು ಸಮಯ ತಡವಾಗಿ ಬಂದು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಟ್ಟು ಒಂದೇ ಇವೆಂಟ್‌ನಲ್ಲಿ ಎರಡೆರಡು ವಿವಾದದಲ್ಲಿ ಸಿಕ್ಕಿ ಕೊಂಡಿದ್ದಾರೆ.

English summary
Popular singer Rihanna controversy dior calfskin bag while cow feeding in her Mumbai visit.
Read more about: singer controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X