ರಾಜರಾಜೇಶ್ವರಿ ನಗರದಲ್ಲಿ 'ಮ್ಯಾಸಿವ್ ಸ್ಟಾರ್' ರಾಜವರ್ಧನ್ ಡ್ಯುಪೆಕ್ಸ್ ಮನೆ; ಡಿಂಗ್ರಿ ನಾಗರಾಜ್ ದಿಲ್ ಖುಷ್

ಕನ್ನಡ ಚಿತ್ರರಂಗದ ಹಿರಿಯ ನಟ ಡಿಂಗ್ರಿ ನಾಗರಾಜ್‌ ಫುಲ್ ಖುಷಿಯಾಗಿದ್ದಾರೆ. ಯಾಕಂದ್ರೆ ಅವರ ಪುತ್ರ ಸ್ಯಾಂಡಲ್‌ವುಡ್‌ನ 'ಮ್ಯಾಸಿವ್ ಸ್ಟಾರ್' ರಾಜವರ್ಧನ್ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸ್ವಂತದೊಂದು ಐಷಾರಾಮಿ ಮನೆ ಮಾಡಬೇಕು ಅನ್ನೋ ರಾಜವರ್ಧನ್ ಕನಸು ಈಡೇರಿದೆ. ಮಗನ ಕನಸು ಇಷ್ಟು ಬೇಗನೇ ಈಡೇರಿದ್ದಕ್ಕೆ ಹಿರಿಯ ನಟ ದಿಲ್ ಖುಷ್ ಆಗಿದ್ದಾರೆ.

ಹೌದು, ನಟ ರಾಜವರ್ಧನ್ ಈಗ ಸ್ವಂತ ಮನೆಯ ಮಾಲೀಕರಾಗಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ನಗರಗಳಲ್ಲಿ ಒಂದಾದ ರಾಜರಾಜೇಶ್ವರಿ ನಗರದಲ್ಲಿ ತಮ್ಮ ಕನಸಿನಂತೆ ಐಷಾರಾಮಿ ಮನೆಯನ್ನು ನಿರ್ಮಸಿದ್ದಾರೆ. ಇತ್ತೀಚೆಗೆ ಗೃಹಪ್ರವೇಶವನ್ನೂ ಅತ್ಯಂತ ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಈ ಸಂಭ್ರಮದಂದು ಕನ್ನಡ ಚಿತ್ರರಂಗದ ತಾರೆಯರು ಕುಟುಂಬಸ್ಥರು ಭಾಗವಹಿಸಿದ್ದರು.

Rajavardhan brought new house in Rajarajeshwari Nagar father Dingri Nagaraj expressed joy and pride

ರಾಜವರ್ಧನ್-ದಿವ್ಯಾ ದಂಪತಿ ಹೊಸ ಮನೆ

ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ಚಿತ್ರರಂಗದ ಉದಯೋನ್ಮುಖ ನಟ. 'ಬಿಚ್ಚುಗತ್ತಿ', 'ಹಿರಣ್ಯ', 'ಫ್ಲೈ' ಅಂತಹ ಸಿನಿಮಾಗಳ ಮೂಲಕ ಭರವಸೆಯನ್ನು ಮೂಡಿಸಿದ್ದಾರೆ. ಆ್ಯಕ್ಷನ್ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟ ರಾಜವರ್ಧನ್ ಕನ್ನಡ ಚಿತ್ರರಂಗದ 'ಮ್ಯಾಸಿವ್ ಸ್ಟಾರ್'. ತಮ್ಮ ವೃತ್ತಿ ಬದುಕಿನ ಹೊಸ ಅಧ್ಯಾಯ ಆರಂಭದ ಹೊತ್ತಲ್ಲೇ ಹೊಸ ಮನೆಗೆ ಕಾಲಿಟ್ಟಿದ್ದಾರೆ. ರಾಜವರ್ಧನ್ ಹಾಗೂ ಪತ್ನಿ ದಿವ್ಯಾ ರಾಜವರ್ಧನ್ ಹೊಸ ಮನೆಗೆ ಹೆಜ್ಜೆ ಇಟ್ಟ ಸಂಭ್ರಮದಲ್ಲಿ ಕುಟುಂಬಸ್ಥರು ಹಾಗೂ ಸ್ಯಾಂಡಲ್‌ವುಡ್ ತಾರೆಯರು ಭಾಗಿಯಾಗಿದ್ದಾರೆ.

Also Read
ಪ್ಯಾನ್ ಇಂಡಿಯಾ ಅಲ್ಲ. ಪ್ಯಾನ್ ಏಷ್ಯಾ ಸಿನಿಮಾದಲ್ಲಿ ಡಿಂಗ್ರಿ ನಾಗರಾಜ್ ಪುತ್ರ; ಏನಂತಾರೆ ರಾಜವರ್ಧನ್?
ಪ್ಯಾನ್ ಇಂಡಿಯಾ ಅಲ್ಲ. ಪ್ಯಾನ್ ಏಷ್ಯಾ ಸಿನಿಮಾದಲ್ಲಿ ಡಿಂಗ್ರಿ ನಾಗರಾಜ್ ಪುತ್ರ; ಏನಂತಾರೆ ರಾಜವರ್ಧನ್?

ಸಂಭ್ರಮದಲ್ಲಿ ಭಾಗಿಯಾದ 'ಡಾಲಿ'

ನಟ ರಾಜವರ್ಧನ್ ಹಾಗೂ ಪತ್ನಿ ದಿವ್ಯಾ ಅವರ ಸಂಭ್ರಮದಲ್ಲಿ 'ಡಾಲಿ' ಧನಂಜಯ್ ಭಾಗಿಯಾಗಿದ್ದರು. 'ನಟ ರಾಕ್ಷಸ' ಡಾಲಿ ಧನಂಜಯ್ ಆಗಮಿಸಿ ಗೆಳೆಯ ರಾಜವರ್ಧನ್ ದಂಪತಿಗೆ ಹೊಸ ಮನೆ ಖರೀದಿಸಿದ ಸಂಭ್ರಮದಲ್ಲಿ ಇರುವವರಿಗೆ ಶುಭ ಹಾರೈಸಿದರು. ಈ ವೇಳೆ ರಾಜವರ್ಧನ್ ದಂಪತಿ ಜೊತೆ ಡಾಲಿ ಕೂಡ ಟ್ರೆಡಿಷನಲ್‌ ಲುಕ್‌ನಲ್ಲಿ ಸಂಭ್ರಮಿಸಿದ್ದಾರೆ.

ಗೃಹ ಪ್ರವೇಶದಲ್ಲಿ ಮಿಂಚಿದ ನಟಿ ಕಾವ್ಯಾ ಶೆಟ್ಟಿ

ರಾಜವರ್ಧನ್ ಹಾಗೂ ದಿವ್ಯಾ ನೂತನ ಮನೆಗೆ ಗೃಹ ಪ್ರವೇಶಕ್ಕೆ ನಟಿ ಕಾವ್ಯಾ ಶೆಟ್ಟಿ ಕೂಡ ಆಗಮಿಸಿದ್ದರು. ಸಾಂಪ್ರದಾಯಿಕ ಉಡುಪಿನಲ್ಲಿ ಕಾವ್ಯ ಶೆಟ್ಟಿ ಮಿಂಚಿದ್ದು, ಗೃಹಪ್ರವೇಶದ ಪೂಜೆ ಸಮಾರಂಭದಲ್ಲಿ ಪಾಲ್ಗೊಂಡರು. ರಾಜವರ್ಧನ್ ಮತ್ತು ದಿವ್ಯಾ ದಂಪತಿ ಕನಸನ್ನು ನನಸು ಮಾಡಿಕೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Rajavardhan brought new house in Rajarajeshwari Nagar father Dingri Nagaraj expressed joy and pride

ಮಗನ ಸಾಧನೆಗೆ ಡಿಂಗ್ರಿ ನಾಗರಾಜ್ ಹೆಮ್ಮೆ

ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಹಾಗೂ ಅವರ ಪತ್ನಿಯ ಕೂಡ ಖುಷಿ ಕೂಡ ಮುಗಿಲು ಮುಟ್ಟಿತ್ತು. ಮಗ ಐಷಾರಾಮಿ ಹೊಸ ಮನೆ ನಿರ್ಮಾಣ ಮಾಡಿದ್ದಕ್ಕೆ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಸ್ವಂತ ಪರಿಶ್ರಮದಿಂದ ಬೆಂಗಳೂರಿನ ರಾಜಾರಾಜೇಶ್ವರಿ ನಗರದಲ್ಲಿ ಐಷಾರಾಮಿ ಡ್ಯೂಪ್ಲೆಕ್ಸ್ ಮನೆ ಖರೀದಿಸಿ ಪೋಷಕರಿಗೆ ಹೆಮ್ಮೆ ತಂದಿದ್ದಾರೆ. ಮಗ ಹಾಗೂ ಸೊಸೆಗೆ ಡಿಂಗ್ರಿ ನಾಗರಾಜ್ ದಂಪತಿ ಆಶೀರ್ವಾದ ಮಾಡಿದ್ದಾರೆ.

ಪತ್ನಿ ಹುಟ್ಟುಹಬ್ಬದಂದೇ ಗೃಹಪ್ರವೇಶ

ನಟ ರಾಜವರ್ಧನ್ ಪತ್ನಿ ದಿವ್ಯಾ ಅವರ ಹುಟ್ಟುಹಬ್ಬದಂದೇ ನೂತನ ಮನೆಗೆ ಕಾಲಿಟ್ಟಿದ್ದಾರೆ. ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾಗಿರುವ ರಾಜಾರಾಜೇಶ್ವರಿ ನಗರ ಸದ್ಯ ಸೆಲೆಬ್ರೆಟಿಗಳ ತಾಣವಾಗಿ ಬೆಳೆಯುತ್ತಿದೆ. ದರ್ಶನ್, ಗಣೇಶ್, ಅವಿನಾಶ್-ಮಾಳವಿಕ ಸೇರಿದಂತೆ ಇನ್ನೂ ಹಲವು ಮಂದಿ ತಾರೆಯರು ಇಲ್ಲಿಯೇ ನೆಲೆಸಿರೋದು ಮತ್ತೊಂದು ವಿಶೇಷ.

English summary
Kannada Actor Rajavardhan brought new house in Rajarajeshwari Nagar in Bengaluru. His father senior actor Dingri Nagaraj expressed joy and pride while new house warming ceremony.
Read more about: rajavardhan dingri nagaraj
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X