ರಕ್ಷಿತ್ ಶೆಟ್ಟಿ ಹೇಳಿದ ಚಿಕನ್ ಘೀ ರೋಸ್ಟ್ ಕತೆ; ಸಿಂಪಲ್‌ಸ್ಟಾರ್ ಇಷ್ಟ ಪಡುವ ಕುಂದಾಪುರದ ಸ್ಪೆಷಲ್ ಬಗ್ಗೆ ನಿಮಗೆ ಗೊತ್ತೇ?
ಸ್ಯಾಂಡಲ್‌ವುಡ್‌ನ ಬಹುತೇಕ ಸೆಲೆಬ್ರೆಟಿಗಳು ಆಹಾರ ಪ್ರಿಯರು. ರುಚಿಯಾದ, ಅಚ್ಚುಕಟ್ಟಾದ ಪುಡ್ ಎಲ್ಲೇ ಸಿಗುತ್ತೆ ಅಂದಲೂ ಹುಡುಕಿಕೊಂಡು ಹೋಗುತ್ತಾರೆ. ಕರ್ನಾಟಕದ ಯಾವುದೇ ಮೂಲೆಯಲ್ಲಿ ಇದ್ದರೂ ಬಿಡುವು ಪ್ರಶ್ನೆಯೇ ಇಲ್ಲ. ಡಾ.ರಾಜ್‌ಕುಮಾರ್ ಅವರಿಂದ ಹಿಡಿದು ಪುನೀತ್ ರಾಜ್‌ಕುಮಾರ್, ರಕ್ಷಿತ್ ಶೆಟ್ಟಿ ಎಲ್ಲರೂ ಆಹಾರ ಪ್ರಿಯರೇ. ಅವರ ಫೇವರಿಟ್ ಹೋಟೆಲ್‌ಗಳಿಗೆ ಹೋಗಿ ಅವರ ಇಷ್ಟದ ಆಹಾರವನ್ನು ಸವಿಯುತ್ತಾರೆ.
ಇತ್ತೀಚೆಗೆ ರಕ್ಷಿತ್ ಶೆಟ್ಟಿಯ ಹಳೇ ವಿಡಿಯೋವೊಂದು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಟ್ ಆಗಿತ್ತು. ಒಂದೂ ವರ್ಷಕ್ಕೂ ಹಳೆಯದಾದ ಈ ವಿಡಿಯೋದಲ್ಲಿ ರಕ್ಷಿತ್ ಶೆಟ್ಟಿ ನಾವ್ ವೆಜ್ ಪ್ರಿಯರ 'ಚಿಕನ್ ಘೀ ರೋಸ್ಟ್' ಬಗ್ಗೆ ಬಾಯಲ್ಲಿ ನೀರು ಬರಿಸಿಕೊಂಡು ವರ್ಣನೆ ಮಾಡಿದ್ದರು. ಆ ವಿಡಿಯೋ ಈಗ ಮತ್ತೆ ಹರಿದಾಡುತ್ತಿದೆ. ಅದರಲ್ಲಿ ಚಿಕನ್ ಘೀ ರೋಸ್ಟ್‌ನ ಟೇಸ್ಟ್ ಹಾಗೂ ಮೊದಲ ಹುಟ್ಟಿದ ಕುಂದಾಪುರದ ಜನಪ್ರಿಯ ಹೋಟೆಲ್ ಬಗ್ಗೆನೂ ವಿವರಿಸಿದ್ದಾರೆ.

ರಕ್ಷಿತ್ ಶೆಟ್ಟಿಯ ಸ್ಟ್ರೀಟ್ ಬೈಟ್ ಎನ್ನುವ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಈ ವೇಳೆ ಸಿಂಪಲ್ ಸ್ಟಾರ್ ತಮ್ಮ ಫೇವರಿಟ್ 'ಚಿಕಿನ್ ಘೀ ರೋಸ್ಟ್' ಬಗ್ಗೆ ಮಾಹಿತಿ ನೀಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕನ್ನಡದ ಹಲವು ಯೂಟ್ಯೂಬ್ ಚಾನೆಲ್‌ಗಳು ಆ ಹೋಟೆಲ್‌ಗೆ ವಿಸಿಟ್ ಹಾಕಿ ಸವಿದು ಬಂದಿದ್ದರು. ಹಾಗಿದ್ದರೆ, ಚಿಕನ್ ಘೀ ರೋಸ್ಟ್ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು? ಕುಂದಾಪುರದ ಯಾವ ಹೋಟೆಲ್‌ನಲ್ಲಿ ಈ ರೆಸಿಪಿ ಹುಟ್ಟಿತು ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಸ್ಟ್ರೀಟ್ ಬೈಟ್ ಯೂಟ್ಯೂಬ್ ಚಾನೆಲ್‌ನಲ್ಲಿ ರಕ್ಷಿತ್ ಶೆಟ್ಟಿ ಇಂಜಿನಿಯರಿಂಗ್ ಓದುವಾಗ ಕುಂದಾಪುರಕ್ಕೆ ಚಿಕನ್ ಘೀ ರೋಸ್ಟ್ ತಿನ್ನುವುದಕ್ಕೆ ಅಂತಲೇ ಹೋಗುತ್ತಿದ್ದರು. ಕುಂದಾಪುರದಲ್ಲಿ ಸಿಗುವ ಚಿಕನ್ ಘೀ ರೋಸ್ಟ್ ಪ್ರಪಂಚದ ಬೇರೆ ಎಲ್ಲೂ ಸಿಗುವುದಿಲ್ಲ ಅಂತನೂ ಹೇಳಿದ್ದಾರೆ.
"ನೀವು ಮಂಗಳೂರಿಗೆ ಬಂದರೆ, ಅಲ್ಲಿಂದ 90 ಕಿಲೋ ಮೀಟರ್ ಮುಂದಕ್ಕೆ ಹೋಗಿ ಉಡುಪಿಯನ್ನು ದಾಟಿದರೆ ಕುಂದಾಪುರ ಅಂತ ಸಿಗುತ್ತೆ. ಅಲ್ಲಿ ಶೆಟ್ಟಿ ಲಂಚ್ ಹೋಮ್ ಎನ್ನುವ ಒಂದು ಹೋಟೆಲ್ ಇದೆ. ಚಿಕನ್ ಘೀ ರೋಸ್ಟ್ ಅನ್ನು ಮೊದಲು ಅಲ್ಲಿ ಕಂಡು ಹಿಡಿಯಲಾಗಿತ್ತು. ಅಲ್ಲಿಗೆ ನಿಮಗೆ ಸಿಗುವ ಚಿಕನ್ ಘೀ ರೋಸ್ಟ್ ಪ್ರಪಂಚದ ಬೇರೆ ಯಾವುದೇ ಕಡೆಯಲ್ಲೂ ಸಿಗುವುದಿಲ್ಲ." ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಈ ಹೋಟೆಲ್‌ನಲ್ಲಿ ಚಿಕನ್ ಘೀ ರೋಸ್ಟ್ ಫೇಮಸ್. ಕುಂದಾಪುರಕ್ಕೆ ಬಂದವರು ಇಲ್ಲಿ ಬಂದು ಚಿಕನ್ ಘೀ ರೋಸ್ಟ್ ತಿನ್ನದೇ ಹೋಗುವುದಿಲ್ಲ. ಈ ಸೀಕ್ರೆಟ್ ರೆಸಿಪಿ ಬಗ್ಗೆ ರಕ್ಷಿತ್ ಹೀಗೆನ್ನುತ್ತಾರೆ. "ಒಂದು ಪ್ಲೇಟ್‌ನಲ್ಲಿ ಎಂಟು ಪೀಸ್ ಕೊಡುತ್ತಾರೆ. ಮಸಾಲಾ ಅಂತೂ ಅಷ್ಟು ಅದ್ಭುತವಾಗಿರುತ್ತೆ. ಅವರು ಚಿಕನ್ ಅನ್ನು ತುಪ್ಪದಲ್ಲಿ ಒಂದು ಗಂಟೆ ಬೇಯಿಸುತ್ತಾರೆ. ಹಾಗೆ ಮಾಡಿದ್ದರಿಂದ ಚಿಕನ್‌ನಲ್ಲಿ ನೀವು ತುಪ್ಪದ ರುಚಿಯನ್ನು ನೋಡಬಹುದು. ಅವರು ಆ ರೆಸಿಪಿಯನ್ನು ಯಾರೊಂದಿಗೂ ಶೇರ್ ಮಾಡುವುದಿಲ್ಲ." ಎಂದಿದ್ದಾರೆ.

ಇದು ಮಂಗಳೂರಿನ ಬಂಟ್ ಕಮ್ಯೂನಿಟಿಯವರ ಸಾಂಪ್ರದಾಯಿಕ ಆಹಾರ ಅಂತೆ. ಕುಂದಾಪುರದ ಮಸಾಲಾವನ್ನು ಬಳಸಿ ಚಿಕನ್ ಘೀ ರೋಸ್ಟ್ ಅನ್ನು ಮಾಡಲಾಗುತ್ತೆ. ಚಿಕನ್ ಅನ್ನು ತುಪ್ಪದಲ್ಲಿ ಬೇಯಿಸಿ, ಅದಕ್ಕೆ ಸೀಕ್ರೆಟ್ ಮಸಾಲಾ ಹಾಕಿ ಚಿಕನ್ ಘೀ ರೋಸ್ಟ್ ಅನ್ನು ಸಿದ್ದಪಡಿಸಲಾಗುತ್ತೆ ಎಂದು ರೆಸ್ಟೋರೆಂಟ್‌ನ ಮೆನ್ಯೂನಲ್ಲಿ ಇದೆ. "ನೀವು ಅಲ್ಲಿಗೆ ಹೋದರೆ, ಅವರು ಕುಕ್ ಮಾಡುವುದಕ್ಕೆ ಒಂದು ಗಂಟೆ ತೆಗೆದುಕೊಳ್ಳುತ್ತಾರೆ. ನಾವು ಒಂದು 15 ಕಾರುಗಳಲ್ಲಿ ಹೋಗ್ತೀವಿ. ಒಬ್ಬೊಬ್ಬರೂ ಒಂದೊಂದು ಪ್ಲೇಟ್ ಘೀ ರೋಸ್ಟ್ ಆರ್ಡರ್ ಮಾಡುತ್ತೇವೆ." ಎಂದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದರು.
ಇನ್ನು ರಕ್ಷಿತ್ ಶೆಟ್ಟಿ ಸಿನಿಮಾ ವಿಚಾರಕ್ಕೆ ಬರೋದಾರೆ, ಸಪ್ತ ಸಾಗರದಾಚೆ ಎಲ್ಲೋ ಬಳಿಕ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ. 'ರಿಚರ್ಡ್ ಆಂಟೋನಿ' ಸಿನಿಮಾದ ಪ್ರಿ ಪ್ರೊಡಕ್ಷನ್‌ನಲ್ಲಿ ರಕ್ಷಿತ್ ಶೆಟ್ಟಿ ಬ್ಯುಸಿಯಾಗಿದ್ದಾರೆ. ಆದರೆ, ಯಾವಾಗ ಸೆಟ್ಟೇರುತ್ತೆ ಅನ್ನೋ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ.


Click it and Unblock the Notifications











