ಪ್ರತಿ ದಿನ 2500 ಕ್ಯಾಲರಿ.. 3 ದಿನ ವೇಟ್ ಟ್ರೈನಿಂಗ್.. 3 ದಿನ ಕುಸ್ತಿ; 'ಪೆದ್ದಿ'ಗಾಗಿ ರಾಮ್ ಚರಣ್ ಹೆವಿ ಟ್ರೈನಿಂಗ್!
ತೆಲುಗು ಚಿತ್ರರಂಗದಲ್ಲಿ ಫಿಟ್ ಆಗಿರೋ ಸೂಪರ್‌ಸ್ಟಾರ್‌ಗಳಲ್ಲಿ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಫಸ್ಟ್ ಲಿಸ್ಟ್‌ನಲ್ಲಿ ಇದ್ದಾರೆ. ರಾಮ್ ಚರಣ್ ಒಂದೊಂದು ಸಿನಿಮಾಗೂ ಒಂದೊಂದು ರೀತಿ ವರ್ಕ್‌ಔಟ್ ರೊಟೀನ್ ಫಾಲೋ ಮಾಡುತ್ತಾರೆ. ಅದಕ್ಕೆ ಪ್ರತಿ ಸಿನಿಮಾದಲ್ಲೂ ಯಂಗ್ ಅಂಡ್ ಎನರ್ಜೆಟಿಕ್ ಆಗಿ ಕಾಣಿಸಿಕೊಳ್ಳುತ್ತಾರೆ. ಸದ್ಯ 'ಪೆದ್ದಿ' ಸಿನಿಮಾದಲ್ಲಿ ನಟಿಸುತ್ತಿದ್ದು, ಈಗಾಗಲೇ ಸಿನಿಮಾದ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿದೆ.
ಮೆಗಾ ಕುಟುಂಬದ ಕುಡಿ ರಾಮ್ ಚರಣ್ ಸಿನಿಮಾಗಾಗಿ ವಿಶೇಷವಾಗಿ ವರ್ಕ್‌ಔಟ್ ಮಾಡುತ್ತಾರೆ. 'ಪೆದ್ದಿ'ಗೂ ಕೂಡ ವಿಶೇಷವಾಗಿ ಟ್ರೈನಿಂಗ್ ಪಡೆಯುತ್ತಿದ್ದಾರೆ. ಅವರ ಟ್ರೈನಿಂಗ್‌ನ ಡಿಟೈಲ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಸಲಿಗೆ ಅದು ನಿಜನಾ? ಅವರ ಟ್ರೈನರ್ ರಾಕೇಶ್ ಉದ್ದಿಯಾರ್ ಅವರೇ ಮಾಧ್ಯಮಗಳಿಗೆ ಕೊಟ್ಟಿರೋ ಮಾಹಿತಿನ ಅನ್ನೋದು ಖಚಿತವಾಗಿ ಗೊತ್ತಿಲ್ಲ. ಆದರೆ, ಈ ಡಿಟೈಲ್ಸ್ ಅನ್ನು ರಾಮ್ ಚರಣ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ರಾಮ್ ಚರಣ್ 'ಪೆದ್ದಿ'ಯ ಲುಕ್ ರಿವೀಲ್ ಆಗಿದೆ. ಬಚ್ಚಿ ಬಾಬು ಸನಾ ಆಕ್ಷನ್ ಕಟ್ ಹೇಳುತ್ತಿರೋ ಈ ಸಿನಿಮಾದಲ್ಲಿ ರಾಮ್ ಚರಣ್ ಫುಲ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಸ್ಪೋರ್ಟ್ಸ್ ಆಕ್ಷನ್ ಡ್ರಾಮ ಆಗಿದ್ದರಿಂದ ರಾಮ್ ಚರಣ್ ತೆರೆಮೇಲೆ ಫಿಟ್ ಆಗಿ ಕಾಣಿಸಿಕೊಳ್ಳಲೇ ಬೇಕಿದೆ. ಹೀಗಾಗಿ ರಾಮ್ ಚರಣ್‌ಗೆ ಅವರ ತಂಡ ವಿಶೇಷವಾಗಿ ತರಬೇತಿಯನ್ನು ನೀಡುತ್ತಿದೆ. ಅವರ ಡಯೆಟ್, ವರ್ಕ್‌ಔಟ್ ಪ್ಲಾನ್ ಹೇಗಿದೆ ಅನ್ನೋದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದರ ಡಿಟೈಲ್ಸ್ ಹೀಗಿದೆ.
ರಾಮ್ ಚರಣ್ ಫಿಸಿಕಲಿ ಫಿಟ್ ಇರುವ ನಟ. ರಾಜಮೌಳಿ ನಿರ್ದೇಶಿಸಿದ RRR ಸಿನಿಮಾದಲ್ಲೂ ರಾಮ್ ಚರಣ್ ಫಿಟ್‌ನೆಸ್ ಪ್ರೇಕ್ಷಕರ ಗಮನಕ್ಕೆ ಬಂದಿತ್ತು. ಯಾವ್ಯಾವ ಸಿನಿಮಾದಲ್ಲಿ ಕಟುಮಸ್ತಾದ ದೇಹದ ಅವಶ್ಯಕತೆ ಇದೆಯೋ ಅದಕ್ಕೆಲ್ಲ ಅವರು ವಿಶೇಷವಾಗಿ ತಯಾರಿ ನಡೆಸಿದ್ದಾರೆ. ಈಗ ಪ್ಯಾನ್ ಇಂಡಿಯಾ ಸಿನಿಮಾ 'ಪೆದ್ದಿ'ಗೂ ಕೂಡ ಅದೇ ರೀತಿ ತಯಾರಿ ನಡೆಸಿದ್ದಾರೆ. ಅವರ ಡಯೆಟ್ ಪ್ಲ್ಯಾನ್ ಹೀಗಿದೆ.
ರಾಮ್ ಚರಣ್ ಡಯೆಟ್ ಪ್ಲಾನ್
'ಪೆದ್ದಿ' ಸಿನಿಮಾದಲ್ಲಿ ರಾಮ್ ಚರಣ್ ಕುಸ್ತಿ ಪಟುವಾಗಿ ಕಾಣಿಸಿಕೊಳ್ಳಬೇಕಿದೆ. ಅದಕ್ಕಾಗಿ ವಿಶೇಷವಾದ ತಯಾರಿ ನಡೆಸಿದ್ದಾರೆ. ಕುಸ್ತಿ ಪಟುಗಳಂತೆ ದೇಹ ಕೊಂಚ ಮಟ್ಟಿಗೆ ಬಲ್ಕ್ ಆಗಿ ಕಾಣಿಸಿಕೊಳ್ಳಬೇಕಿದೆ. ಹೀಗಾಗಿ ಪ್ರತಿ ದಿನ 1800 ರಿಂದ 2500 ಕ್ಯಾಲೋರಿ ಫುಡ್ ಅನ್ನು ಸೇವನೆ ಮಾಡುತ್ತಾರೆ. ವಿಶೇಷವಾದ ಕಾರ್ಬೋಹೈಡ್ರೇಟ್ ಸೈಕಲ್ ಅನ್ನು ಫಾಲೋ ಮಾಡುತ್ತಿದ್ದಾರೆ. ಕೆಲವು ದಿನ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್ ಸೇವನೆ ಮಾಡಿದರೆ, ಇನ್ನು ಕೆಲವು ದಿನ ಹೆಚ್ಚು ಕಾರ್ಬೋಹೈಡ್ರೇಟ್ ಆಹಾರವನ್ನು ಸೇವನೆ ಮಾಡುತ್ತಿದ್ದಾರೆಂದು ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ ಹೇಳಲಾಗಿದೆ.

ವರ್ಕ್‌ಔಟ್ ಹೇಗಿರುತ್ತೆ?
'ಪೆದ್ದಿ'ಗಾಗಿಯೇ ಅವರ ಟ್ರೈನರ್ ರಾಕೇಶ್ ಉದ್ದಿಯಾರ್ ವಿಶೇಷವಾದ ವರ್ಕ್ಔಟ್ ರೊಟೀನ್ ಅನ್ನು ಮಾಡಿಸುತ್ತಿದ್ದಾರಂತೆ. ವಾರದಲ್ಲಿ ಆರು ದಿನ ಕಠಿಣ ವರ್ಕ್‌ಔಟ್ ಇರುತ್ತೆ. ಅದರಲ್ಲಿ ಮೂರ ದಿನ ಒಂದು ರೀತಿ ವರ್ಕ್ಔಟ್ ಇದ್ದರೆ, ಇನ್ನು ಮೂರು ದಿನ ಬೇರೆ ರೀತಿ ವರ್ಕ್‌ಔಟ್ ಇರುತ್ತೆ. ಅದು ಈ ರೀತಿಯಿದೆ.
ಸೋಮವಾರ/ಬುಧವಾರ/ಶುಕ್ರವಾರ: ಈ ಮೂರು ದಿನಗಳು ವೇಟ್ ಟ್ರೈನಿಂಗ್ ಜೊತೆ ಕಾರ್ಡಿಯೋ ಇರುತ್ತೆ.
ಮಂಗಳವಾರ/ಗುರುವಾರ/ಶನಿವಾರ: ಈ ಮೂರು ದಿನಗಳು ಫಂಕ್ಷನಲ್ ಟ್ರೈನಿಂಗ್,ಕುಸ್ತಿ ಅಭ್ಯಾಸ ಹಾಗೂ ಮೊಬಿಲಿಟಿ ವರ್ಕ್ ಇರುತ್ತೆ.
ಇದರೊಂದಿಗೆ ಫಿಸಿಯೋಥೆರಪಿ ಕೂಡ ಇರುತ್ತೆ. ರೆಗ್ಯೂಲರ್ ಮಸಾಜ್, ಪೆಟ್ಟುಗಳನ್ನು ತಡೆಯುವುದಕ್ಕೆ ಜಾಯಿಂಟ್ ಕೇರ್ ಥೆರಪಿ ಕೂಡ ಇರುತ್ತೆ. ಹಾಗೇ ಕುಸ್ತಿ ಪಟುವಾಗಿದ್ದರಿಂದ ಸೂರ್ಯ ನಮಸ್ಕಾರ, ರೋಪ್ ಪುಲ್ಲಿಂಗ್, ಕುಸ್ತಿ ಅಖಾಡದ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಹರಿದಾಡುತ್ತಿರುವ ಪೋಸ್ಟ್‌ನಲ್ಲಿ ಹೇಳಲಾಗಿದೆ. ಆದರೆ, ಇದರಲ್ಲಿ ಇರೋದು ಅಸಲಿನಾ? ನಕಲಿನಾ? ಅನ್ನೋ ಖಚಿತ ಮಾಹಿತಿ ಇಲ್ಲ.


Click it and Unblock the Notifications