ರುಕ್ಮಿಣಿ ವಸಂತ್ ಹಾಕಿರೋ ಶರ್ಟ್ ಇಷ್ಟೊಂದು ಕಡಿಮೆಗೆ ಸಿಗುತ್ತಾ..?

ಕನ್ನಡದ ಪುಟ್ಟಿ ಈಗ ತಮಿಳು ಇಂಡಸ್ಟ್ರಿಗೂ ಕಾಲು ಇಟ್ಟಿದ್ದಾರೆ. ಕನ್ನಡದಲ್ಲಿ ಮಿಂಚಿದ್ದ ನಟಿ ಬೇರೆ ಬೇರೆ ಭಾಷೆಯಲ್ಲೂ ಡಿಮ್ಯಾಂಡ್ ಸೃಷ್ಟಿಸಿಕೊಂಡಿದ್ದಾರೆ. ರುಕ್ಮಿಣಿ ವಸಂತ್ ನಮ್ಮ ಕನ್ನಡದ ಹುಡುಗಿ. ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ನಮ್ಮ ಕನ್ನಡ ಸಿನಿಮಾ ಪ್ರೇಮಿಗಳು ಇಷ್ಟಪಡುವ ಪುಟ್ಟಿ ಇವರು. ಸೋಷಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ರುಕ್ಮಿಣಿ ವಸಂತ್ ಹೋಮ್ಲಿ ಗರ್ಲ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಂತ ಸದಾ ಕಾಲ ಸೀರೆಯನ್ನೇ ಉಡುವುದಿಲ್ಲ. ಸೀರೆಯುಟ್ಟರೆ ಅದ್ಭುತವಾಗಿ ಕಾಣಿಸುತ್ತಾರೆ.

ಈಗ ಇದನ್ನ ಹೇಳುವುದಕ್ಕೆ ಬಂದಿದ್ದು ಯಾಕೆ ಅಂದ್ರೆ ಅವರು ಎಷ್ಟು ಸಿಂಪಲ್ ಆಗಿದ್ದಾರೋ ಅವರ ಬಟ್ಟೆಯೂ ಅಷ್ಟೇ ಸಿಂಪಲ್ ಆಗಿರುತ್ತೆ. ಆದರೆ, ಅಂದವನ್ನು ಹೆಚ್ಚಿಸುತ್ತದೆ. ಅದರಲ್ಲಿ ಇತ್ತೀಚೆಗೆ ಹಾಕಿದ್ದ ಒಂದು ಶರ್ಟ್ ಕೂಡ ಗಮನ ಸೆಳೆದಿದೆ. ಆ ಶರ್ಟ್ ಬಂದು ರೆಡ್ ಅಂಡ್ ವೈಟ್ ಕಲರ್ ಲೈನ್ಸ್ ಇರುವ ಶರ್ಟ್ಸ್. ಅದರ ಬೆಲೆ ಕೇಳಿದ್ರೆ ನಿಜಕ್ಕೂ ನೀವೂ ಶಾಕ್ ಆಗ್ತೀರಾ.

Rukmini vasanth Clothes brand and rate

ಇತ್ತೀಚೆಗೆ ಯಾವುದೋ ಮಾಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆಗ ಒಂದು ರೆಡ್ ಕಲರ್ ಶರ್ಟ್ ಅನ್ನ ಹಾಕಿದ್ದರು. ಬಿಳಿ ಹಾಗೂ ಕೆಂಪು ಮಿಶ್ರಿತ ಶರ್ಟ್ ಅದು. ಟೀ ಶರ್ಟ್ ಮೇಲೆ ಶರ್ಟ್ ಹಾಕಿ ಸ್ಟೈಲ್ ಆಗಿ ನಡೆದುಕೊಂಡು ಬಂದಿದ್ದಾರೆ. ಈ ಟೀ ಶರ್ಟ್ ಬೆಲೆ ಕೇವಲ 683 ರೂಪಾಯಿ. ಅಂದ್ರೆ ನಾವೇಳೋದಕ್ಕೆ ಹೊರಟಿದ್ದು ಅದೇ ಥರದ ಶರ್ಟ್ ಇಷ್ಟು ಕಡಿಮೆ ಬೆಲೆಗೂ ಸಿಗಲಿದೆ ಅಂತ. ಆದರೆ, ರುಕ್ಮಿಣಿ ವಸಂತ್ ಯಾವ ಬ್ರ್ಯಾಂಡ್ ಶರ್ಟ್ ಹಾಕಿದ್ದಾರೆ ಅಂತ ಗೊತ್ತಾದ್ರೆ ಅದರ ನಿಖರವಾದ ಬೆಲೆಯೂ ಸಿಗಲಿದೆ. ಆದರೆ ಸದ್ಯಕ್ಕೆ ಅದೇ ರೀತಿಯ ಶರ್ಟ್ ಬೇಕು ಅಂತ ಬಯಸುವ ಫ್ಯಾನ್ಸ್‌ಗೆ ಇಷ್ಟು ಕಡಿಮೆ ಬೆಲೆಗೆ ಶರ್ಟ್ ಸಿಗಲಿದೆ ಎಂಬ ಮಾಹಿತಿಯನ್ನ ನೀಡುತ್ತಾ ಇದ್ದೀವಿ ಅಷ್ಟೇ.

ರುಕ್ಮಿಣಿ ವಸಂತ್ ನೀಳಕಾಯದ ದೇಹವನ್ನ ಹೊಂದಿದ್ದಾರೆ. ಆ ರೀತಿಯ ಫಿಟ್ನೆಸ್ ಗಾಗಿ ಸಾಕಷ್ಟು ಶ್ರಮವನ್ನೇನೋ ಹಾಕ್ತಾರೆ. ವರ್ಕೌಟ್, ಡಯೆಟ್ ಅಂತೆಲ್ಲಾ ಮಾಡ್ತಾ ಇರ್ತಾರೆ. ಅವರ ದೇಹದ ಸೌಂದರ್ಯಕ್ಕೆ ಯಾವುದೇ ಡ್ರೆಸ್ ಹಾಕಿಕೊಂಡರೂ ಅದ್ಭುತವಾಗಿ ಕಾಣಿಸುತ್ತಾರೆ. ಆದರೆ ರುಕ್ಮಿಣಿ ವಸಂತ್ ತುಂಬಾ ಮಾಡರ್ನ್‌ ನಟಿ ಅಂತ ಹೇಳುವುದಕ್ಕೆ ಆಗಲ್ಲ. ತೀರಾ ಸಿಂಪಲ್ ಆಗಿ ಕಾಣಿಸುತ್ತಾರೆ. ಹೆವೀ ಎನಿಸುವಂತ ಡ್ರೆಸ್‌ಗಳನ್ನ ಹಾಕಲ್ಲ, ಸಿಕ್ಕಾಪಟ್ಟೆ ಎಕ್ಸ್ ಪೋಸ್ ಇರುವಂತ ಡ್ರೆಸ್‌ಗಳನ್ನು ಅವರು ಹಾಕುವುದೇ ಇಲ್ಲ. ಸಿನಿಮಾಗಳಲ್ಲಿ ಆ ಪಾತ್ರಕ್ಕೆ ಯಾವ ಥರದ ಡ್ರೆಸ್‌ಗಳೂ ಬೇಕೋ ಅದನ್ನ ಕ್ಯಾರಿ ಮಾಡ್ತಾರೆ. ಆದರೆ ನಿಜ ಜೀವನದಲ್ಲಾಗಲಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಫೋಟೋಗಳನ್ನಾಗಲಿ ಎಂದಿಗೂ ಎಕ್ಸ್ ಪೋಸ್ ಮಾಡಲ್ಲ. ಇದನ್ನು ಅವರ ಸೋಷಿಯಲ್ ಮೀಡಿಯಾ ನೋಡಿದರೇನೆ ಅರ್ಥವಾಗುತ್ತದೆ. ಎಷ್ಟು ಡಿಸೆಂಟ್ ಆಗಿ ಕಾಣಿಸಿಕೊಳ್ಳುತ್ತಾರೆ ಎನ್ನುವುದು ಗೊತ್ತಾಗುತ್ತೆ.

Rukmini vasanth Clothes brand and rate

ರುಕ್ಮಿಣಿ ವಸಂತ್ ಸೀರೆಯಲ್ಲಿ ಕಾಣಿಸಿಕೊಂಡಿರುವುದೇ ಹೆಚ್ಚು. ಬಟ್ಟೆ ಮಾತ್ರ ಸಿಂಪಲ್ ಅಲ್ಲ. ರುಕ್ಮಿಣಿ ವಸಂತ್ ಕೂಡ ತೀರಾ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಅಂದರೆ, ಹೊರಗೆ ಬಂದ್ರು ಕೂಡ ಹೆಚ್ಚು ಮೇಕಪ್ ಮಾಡಿಕೊಳ್ಳಲ್ಲ. ಮೊದಲೇ ಹಾಲ್ಗೆನ್ನೆಯ ಚೆಲುವೆ. ಹೀಗಾಗಿ ಸಿಂಪಲ್ ಆಗಿ ಟಚ್ ಅಪ್ ಕೊಡುತ್ತಾರೆ. ಅದರಿಂದಾನೇ ಇನ್ನಷ್ಟು ಬ್ಯೂಟಿಫುಲ್ ಆಗಿ ಕಾಣಿಸುತ್ತಾರೆ.

More from Filmibeat

English summary
Sapta Sagaradaache Ello movie actress Rukmini vasanth Clothes brand and rate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X