ಈ ಬ್ಯೂಟಿ ಮೆಂಟೈನ್ ಮಾಡೋಕೆ ಜ್ಯೋತಿ ರೈ ಜಿಮ್‌ನಲ್ಲಿ ಮಾಡೋ ಕಸರತ್ತು ಹೇಗಿರುತ್ತೆ ಗೊತ್ತೇ?
ಸ್ಯಾಂಡಲ್‌ವುಡ್ ನಟಿ ಜ್ಯೋತಿ ರೈ ಇಲ್ಲಿರುವಾಗ ಪೋಷಕ ಪಾತ್ರಗಳಲ್ಲಿ ಎಲ್ಲರ ಅಚ್ಚುಮೆಚ್ಚಾಗಿದ್ದರು. ಆದರೆ ತೆಲುಗು ಇಂಡಸ್ಟ್ರಿಗೆ ಹೋಗಿದ್ದೆ ತಡ ತಮ್ಮ ಲುಕ್ ಅನ್ನೇ ಬದಲಾಯಿಸಿಕೊಂಡರು. ಇದರಿಂದ ಅವರ ಲುಕ್ ಕೂಡ ಬದಲಾಯಿತು. ಸೀರೆಯುಟ್ಟು ಪೋಷಕ ಪಾತ್ರಗಳಿಗೆ ಸೀಮಿತವಾಗಿದ್ದ ಜ್ಯೋತಿ ರೈ, ಕಂಪ್ಲೀಟ್ ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡರು. ಸಿಕ್ಕಾಪಟ್ಟೆ ಫಿಟ್ನೆಸ್ ಮೆಂಟೈನ್ ಮಾಡಿ, ಸೀರೆ ಬಿಟ್ಟು ಶಾರ್ಟ್ಸ್ ಹಾಕುವ ರೇಂಜಿಗೆ ಬಂದವರು, ಈಗ ಸಿನಿಮಾ ನಟಿ ಕೂಡ.
ಜ್ಯೋತಿ ರೈ ಈಗಂತೂ ಬರೀ ಬ್ಯೂಟಿ ಅಲ್ಲ, ಹಾಟ್ ಬ್ಯೂಟಿ. ಅವರ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಒಂದೊಂದು ಫೋಟೋ ಅದೆಷ್ಟೇ ಕಟ್ಟು ನಿಟ್ಟಾಗಿ ಇರ್ತೀನಿ ಅನ್ನೋ ಗಂಡು ಮಕ್ಕಳ ಮನಸ್ಸನ್ನೇ ಚಂಚಲಗೊಳಿಸಿ ಬಿಡುತ್ತದೆ. ಅಂಥ ಮೈಮಾಟವನ್ನ ಹೊಂದಿದ್ದಾರೆ ಜ್ಯೋತಿ. ಇಷ್ಟು ಒಳ್ಳೆ ಫಿಟ್ನೆಸ್ ಹಿಂದೆ ಸಣ್ಣ ಶ್ರಮವಂತು ಇಲ್ಲ. ಅದಕ್ಕಾಗಿ ಸಾಕಷ್ಟು ಶ್ರಮ ಹಾಕಿರೋದು ಸೌಂದರ್ಯ ನೋಡಿದರೇನೆ ಅರ್ಥವಾಗುತ್ತದೆ.

ಜೀರೋ ಸೈಜ್ ಮೆಂಟೈನ್ ಮಾಡೋದು ಬೇರೆ. ಆದರೆ ಹಾಟ್ ಆಗಿ ಕಾಣುವಂತ ಫಿಟ್ನೆಸ್ ಮೆಂಟೈನ್ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ. ಜ್ಯೋತಿ ರೈ ಅದಕ್ಕಾಗಿ ಹಾಕುವ ಶ್ರಮ ಅಷ್ಟಿಷ್ಟಲ್ಲ. ಜಿಮ್‌ನಲ್ಲಿ ಸಾಕಷ್ಟು ಸಮಯವನ್ನ ಕಳೆಯುತ್ತಾರೆ. ಕಷ್ಟವಾದರೂ ವರ್ಕೌಟ್‌ಗಳನ್ನ ಮಾಡುತ್ತಾರೆ. ಜಿಮ್‌ನಲ್ಲಿ ನಿಂತರೆ ನೋಡುಗರಿಗೆ ಆಶ್ಚರ್ಯ ಎನಿಸಬೇಕು ಅಷ್ಟು ಕಷ್ಟಕರ ವರ್ಕೌಟ್ ಮಾಡ್ತಾರೆ. ಥೈಸ್ ವರ್ಕೌಟ್, ಶೋಲ್ಡರ್, ಬೈಸಪ್ ಎಲ್ಲಾ ರೀತಿಯ ವರ್ಕೌಟ್ ಕೂಡ ಮಾಡ್ತಾರೆ. ಅದರಲ್ಲೂ ತೂಕ ಎತ್ತುವುದರಲ್ಲೂ ಎಕ್ಸ್‌ಪರ್ಟ್ ಇದ್ದಾರೆ. ಅವರ ವರ್ಕೌಟ್ ವಿಡಿಯೋಗಳನ್ನು ನೋಡ್ತಾ ಇದ್ದರೆ ಮೈಜುಂ ಎನಿಸುತ್ತದೆ. ಹೀಗಾಗಿಯೇ ಅವರು ಅಷ್ಟು ಒಳ್ಳೆಯ ಫಿಟ್ಮೆಸ್ ಕಾಪಾಡಿಕೊಳ್ಳುವುದಕ್ಕೆ ಕಾರಣವಾಗಿದೆ.
ಇನ್ನು ಫುಡ್ ವಿಚಾರದಲ್ಲೂ ಸಾಕಷ್ಟು ಡಯೆಟ್ ಮೆಂಟೈನ್ ಮಾಡಲೇಬೇಕಾಗುತ್ತದೆ. ಸೆಲೆಬ್ರೆಟಿಗಳ ಫಿಟ್ನೆಸ್ ಗುಟ್ಟನ್ನು ಹಲವರಿಂದ ಕೇಳಿ ಪಡೆದಾಗ, ಅವರೆಲ್ಲ ವರ್ಕ್ ಔಟ್ ಜೊತೆಗೆ ಡಯೆಟ್ ಕೂಡ ಬಹಳ ಮುಖ್ಯ ಎಂದೇ ಹೇಳಿದ್ದರು. ಅಂದರೆ, ಜ್ಯೋತಿ ರೈ ಅವರು ಕೂಡ ತಮ್ಮ ಈ ಅಂದವಾದ ಫಿಟ್ನೆಸ್ ಮೆಂಟೈನ್ ಮಾಡಲು ಖಂಡಿತ ಫುಡ್ ಕಂಟ್ರೋಲ್ ಕೂಡ ಮಾಡ್ತಾರೆ. ಅದರಲ್ಲೂ ಶುಗರ್ ತಿನ್ನದೆ ಇರುವುದು, ಜಂಕ್ ಫುಡ್ ಮುಟ್ಟದೆ ಇರುವುದು ಇದರಲ್ಲಿ ಸೇರಿಕೊಂಡಿದೆ. ಸಾಧ್ಯವಾದಷ್ಟು ತರಕಾರಿ, ಹಣ್ಣುಗಳನ್ನ ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಬೇಕು ಎನ್ನುವವರು ವರ್ಕೌಟ್ ಜೊತೆಗೆ ಫುಡ್ ಡಯೆಟ್ ಕೂಡ ಮಾಡಬೇಕಾಗುತ್ತದೆ. ಇದು ಬಹಳ ಮುಖ್ಯ. ಜ್ಯೋತಿ ರೈ ಅವರ ಫಿಟ್ನೆಸ್ ಬಗ್ಗೆ ತಿಳಿದುಕೊಂಡಾಯ್ತು. ಸದಾ ಕಾಲ ಹಾಟ್ ಆಗಿ ಕಾಣಿಸಿಕೊಳ್ಳುವ ಜ್ಯೋತಿ ರೈ ಇತ್ತೀಚೆಗೆ ಒಂದಷ್ಟು ಹೊಸ ಫೋಟೋಸ್ ಹಂಚಿಕೊಂಡಿದ್ದಾರೆ. ಅದರ ಬಗ್ಗೆ ಹೇಳ್ತೀವಿ ಕೇಳಿ.

ಜ್ಯೋತಿ ರೈ ಅವರಿಗೆ ಗ್ಲಾಮರಸ್ ಫೋಟೋಗಳನ್ನು ಹಾಕೋದು ಹೊಸದೇನು ಅಲ್ಲ. ಆದರೂ ಇತ್ತೀಚೆಗೆ ಮರೂನ್ ಕಲರ್ ಟಾಪ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಅದರಲ್ಲೂ ಮಾಮೂಲಿಯಂತೆ ಹಾಟ್ ಆಗಿನೆ ಕಾಣಿಸ್ತಾ ಇದ್ದರು. ಸಿಂಪಲ್ ಫೋಟೋಗಳೇ ಆದರೂ ದುಬಾರಿ ಹೊಟೇಲ್‌ನಲ್ಲಿ ಕೂತ ಫೋಟೋಗಳು ಅದಾಗಿವೆ. ಹಾಟ್ ಸುಂದರಿಯ ಫೋಟೋಗಳಿಗೆ ಅಭಿಮಾನಿಗಳಂತೂ ಅಂದದ ಚಂದದ ಕಮೆಂಟ್‌ಗಳನ್ನೇ ಹಾಕಿದ್ದಾರೆ. ಸದ್ಯ ತೆಲುಗಿನಲ್ಲಿ ಸಿನಿಮಾಗಳ ಕಡೆಗೆ ಹೆಚ್ಚು ಫೋಕಸ್ ಮಾಡಿದ್ದಾರೆ. ಸಿನಿಮಾದಲ್ಲಿಯೂ ಜ್ಯೋತಿ ರೈ ಬ್ಯೂಟಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಇವರ ಗ್ಲಾಮರಸ್ ಫೋಟೊಗಳಿಗೆ ನೆಟ್ಟಿಗರು ಕಮೆಂಟ್‌ಗಳನ್ನು ಹಾಕುತ್ತಲೇ ಇರುತ್ತಾರೆ.


Click it and Unblock the Notifications











