ತನ್ನ ಅಂಡಾಣುವನ್ನು ಫ್ರೀಜ್ ಮಾಡಲು ವೈದ್ಯರ ಬಳಿ ಹೋದ 33 ವರ್ಷ ನಟಿ; ಇನ್ನೊಬ್ಬ ನಟಿ ಮುಂದೆ ಹೇಳಿದ್ದೇನು?
ಯುವತಿಯರು ಸಿನಿಮಾರಂಗಕ್ಕೆ ಬಹುಬೇಗನೇ ಎಂಟ್ರಿ ಕೊಟ್ಟು ಬಿಡುತ್ತಾರೆ. 16-17ನೇ ವಯಸ್ಸಿಗೆ ಸಿನಿಮಾದಲ್ಲಿ ಮಿಂಚುವುದಕ್ಕೆ ಶುರು ಮಾಡುತ್ತಾರೆ. ಇಲ್ಲಿಂದ ಅವರು ಸಿನಿಮಾರಂಗದಲ್ಲಿ ಸ್ಟಾರ್ ಆಗಿ ಮೆರೆಯುವುದಕ್ಕೆ ಒಂದಿಷ್ಟು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ಸ್ಟಾರ್ ಆದ್ಮೇಲೆ ಅದನ್ನು ಹಾಗೇ ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಾರೆ. ಹೀಗಾಗಿ ಅವರು ಮದುವೆ, ಮಕ್ಕಳ ಬಗ್ಗೆ ಯೋಚನೆ ಮಾಡುವುದಕ್ಕೆ ಹೋಗುವುದೇ ಇಲ್ಲ.
ಅಷ್ಟೊತ್ತಿಗಾಗಲೇ ಅವರ ವಯಸ್ಸು 40 ದಾಟಿರುತ್ತೆ. ಹೀಗಾಗಿ ಮಕ್ಕಳನ್ನು ಪಡೆಯುವುದಕ್ಕೆ ವೈದ್ಯರ ಮೊರೆ ಹೋಗುತ್ತಾರೆ. ಆದರೆ, ಇಲ್ಲೊಬ್ಬ ನಟಿ ತನ್ನ 33ನೇ ವಯಸ್ಸಿಗೆ ಅಂಡಾಣುವನ್ನು ಶೇಖರಿಸುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ ವೈದ್ಯರ ಬಳಿ ಹೋಗಿ ಸಲಹೆಯನ್ನೂ ಪಡೆದು ಬಂದಿದ್ದಾರೆ. ಈ ವಿಷಯವನ್ನು ಖುದ್ದಾಗಿ ಇನ್ನೊಬ್ಬ ನಟಿಯೊಂದಿಗೆ ತಾನೇ ನಡೆಸುವ ಪಾಡ್‌ಕಾಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಮದುವೆ ಆಗುವ ವಯಸ್ಸಿನಲ್ಲಿ ಅಂಡಾಣುವನ್ನು ಶೇಖರಿಸುವ ಪ್ರಯತ್ನ ಮಾಡುತ್ತಿರುವ ನಟಿ ಮತ್ಯಾರೂ ಅಲ್ಲ, ರಿಯಾ ಚಕ್ರವರ್ತಿ. ಬಾಲಿವುಡ್‌ನ ದುರಂತ ನಾಯಕ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಗೆಳತಿ ಈಕೆ. ಇತ್ತೀಚೆಗೆ ತಾನೇ ನಡೆಸಿಕೊಡುವ ಪಾಡ್‌ಕಾಸ್ಟ್‌ನಲ್ಲಿ ಬಾಲಿವುಡ್‌ನ ಮತ್ತೊಬ್ಬ ನಟಿ ಹುಮಾ ಖುರೇಶಿ ಮುಂದೆ ಇಂತಹದ್ದೊಂದು ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಅಷ್ಟಕ್ಕೂ ಈ ನಿರ್ಧಾರಕ್ಕೆ ಮುಂದಾಗಿದ್ದೇಕೆ? ಟಾಕ್ಸಿಕ್ ನಟಿ ಹುಮಾ ಖುರೇಶಿ ನೀಡಿದ ಸಲಹೆ ಏನು? ತಿಳಿಯುವುದಕ್ಕೆ ಮುಂದೆ ಓದಿ.
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಹೆಸರು ಮುಂಚೂಣಿಯಲ್ಲಿತ್ತು. ಸುಶಾಂತ್ ಸಾವಿಗೆ ರಿಯಾ ಪ್ರಮುಖ ಕಾರಣವೆಂದು ಬಿಂಬಿಸಲಾಗಿತ್ತು. ಈ ಸಂಬಂಧ ಅವರನ್ನು ಪೊಲೀಸರು ಬಂಧಿಸಿದ್ದರು ಕೂಡ. ಇದು ಆಗ ತಾನೇ ಚಿಗುರುತ್ತಿದ್ದ ಅವರ ವೃತ್ತಿ ಜೀವನಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಈ ಪ್ರಕರಣದಿಂದ ಮುಕ್ತಾರಾಗಿ ಹೊರ ಬರುವುದಕ್ಕೆ ಒಂದಿಷ್ಟು ವರ್ಷಗಳೇ ಕಳೆದು ಹೋಗಿದ್ದವು. ಹೀಗಾಗಿ ಮತ್ತೆ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ.
ತನ್ನ ಬದುಕಿನ ಅತ್ಯಂತ ಕಷ್ಟದ ದಿನಗಳನ್ನೆಲ್ಲ ಮರೆತು ತಮ್ಮ ವೃತ್ತಿ ಬದುಕಿನ ಬಗ್ಗೆ ಗಮನ ಹರಿಸಿದ್ದಾರೆ. ಟಾಕ್ಸಿಕ್ ನಟಿ ಹುಮಾ ಖುರೇಶಿ ಅತಿಥಿಯಾಗಿ ಬಂದಿದ್ದ ಪಾಡ್‌ಕಾಸ್ಟ್‌ನಲ್ಲಿ ರಿಯಾ ತನ್ನ ವೈಯಕ್ತಿಕ ಜೀವನದ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ತನ್ನ ಫ್ಯೂಚರ್ ಪ್ಲ್ಯಾನ್ ಏನು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಈ ವೇಳೆ ತನ್ನ ಅಂಡಾಣುವನ್ನು ಫ್ರೀಜ್ ಮಾಡುವ ಬಗ್ಗೆ ಮಾತಾಡಿದ್ದಾರೆ.

ಬಾಲಿವುಡ್ ನಟಿ ಹುಮಾ ಖುರೇಶಿ ಅವರೊಂದಿಗಿನ ಸಂಭಾಷಣೆಯಲ್ಲಿ ರಿಯಾ ಚಕ್ರವರ್ತಿ ಅವರ ಅಂಡಾಣುವನ್ನು ಶೇಖರಿಸುವುದಕ್ಕೆ ನಿರ್ಧರಿಸಿದ್ದು, ಇತ್ತೀಚೆಗೆ ಸ್ತ್ರೀರೋಗ ತಜ್ಞರನ್ನೂ ಭೇಟಿಯಾಗಿದ್ದರಂತೆ. ಈ ವೇಳೆ " ನನಗೀಗ 33 ವರ್ಷ. ಇತ್ತೀಚೆಗೆ ನಾನು ನನ್ನ ಅಂಡಾಣುಗಳನ್ನು ಫ್ರೀಜ್ ಮಾಡಿಸಲು ಸ್ತ್ರೀರೋಗ ತಜ್ಞರ ಬಳಿ ಹೋಗಿದ್ದೆ. ಇಂತಹದ್ದೊಂದು ಆಲೋಚನೆಯಲ್ಲಿ ಇದ್ದೇನೆ" ಎಂದು ರಿಯಾ ಚಕ್ರವರ್ತಿ ಹೇಳಿದ್ದಾರೆ.
ಇದಕ್ಕೆ ನಟಿ ಹುಮಾ ಖುರೇಶಿ ಸಲಹೆಯನ್ನು ನೀಡಿದ್ದಾರೆ. "ನಿಮ್ಮ ದೇಹ ನೀವು ಮಗುವನ್ನು ಪಡೆಯುವಂತೆ ಹೇಳುತ್ತಿದೆ. ಆದರೆ, ನಿಮ್ಮ ಮನಸ್ಸು ಮಾತ್ರ ನಿಮ್ಮ ವೃತ್ತಿ ಬದುಕು, ಬ್ರ್ಯಾಂಡ್ ಹಾಗೂ ವ್ಯವಹಾರದ ಕಡೆಗೆ ಗಮನ ಕೊಡುವಂತೆ ಸೂಚಿಸುತ್ತಿದೆ. ಇದೊಂದು ವಿಚಿತ್ರ ಸಂಗತಿ" ಎಂದು ರಿಯಾ ಚಕ್ರವರ್ತಿಗೆ ಹೇಳಿದ್ದಾರೆ.
ಇನ್ನು ರಿಯಾ ಚಕ್ರವರ್ತಿ ಮದುವೆಗೆ ಇದೇ ಸರಿಯಾದ ವಯಸ್ಸು ಅನ್ನೋದನ್ನು ನಾನು ನಂಬುವುದಿಲ್ಲ. ತಡವಾಗಿ ಮದುವೆ ಆಗುವುದಕ್ಕೆ ನನಗೆ ಯಾವುದೇ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











