ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ಭಾಟಿಯಾ ರಾಯಬಾರಿ; ನಟಿಗೆ ಕರ್ನಾಟಕ ಸರ್ಕಾರ ಕೊಟ್ಟ ಹಣವೆಷ್ಟು?
ದಕ್ಷಿಣ ಭಾರತದಲ್ಲಿ ಜನರು ಮಿಲ್ಕಿ ಬ್ಯೂಟಿ ಬಾಯ್ತುಂಬ ಕರೆಯುತ್ತಿದ್ದ ಜನಪ್ರಿಯ ನಟಿ ತಮನ್ನಾ ಭಾಟಿಯಾ. ಸದ್ಯ ಸೌತ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಬಾಲಿವುಡ್ ಕಡೆ ಮುಖ ಮಾಡಿರುವ ತಮನ್ನಾ ಆಗೊಂದು ಈಗೊಂದು ಸಿನಿಮಾಗಳನ್ನಷ್ಟೇ ಮಾಡುತ್ತಿದ್ದಾರೆ. ಇನ್ನೂ ಬಾಲಿವುಡ್‌ನಲ್ಲೂ ಐಟಂ ಸಾಂಗ್‌ಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರೋದೇ ಹೆಚ್ಚು. ಆದರೂ, ಸೌತ್‌ನಲ್ಲಿ ತಮನ್ನಾ ಭಾಟಿಯಾ ಕ್ರೇಜ್ ಏನೂ ಕಮ್ಮಿಯಿಲ್ಲ.
ಭಾರತದಾದ್ಯಂತ ಕ್ರೇಜಿ ಅಭಿಮಾನಿಗಳನ್ನು ಹೊಂದಿರುವ ತಮನ್ನಾ ಭಾಟಿಯಾ ಬಾಲಿವುಡ್‌ಗೆ ಹೋಗಿದ್ದರೂ ಕರ್ನಾಟಕಕ್ಕೆ ಕರೆದುಕೊಂಡು ಬರಲಾಗಿದೆ. ಹಾಗಂತ, ಸ್ಯಾಂಡಲ್‌ವುಡ್ ಮಂದಿ ಇವರನ್ನು ಕರೆದುಕೊಂಡು ಬಂದಿಲ್ಲ. ಮಿಲ್ಕಿ ಬ್ಯೂಟಿಯನ್ನು ಕರ್ನಾಟಕಕ್ಕೆ ಕರೆಸಿದ್ದು ರಾಜ್ಯ ಸರ್ಕಾರ. ಹೌದು, ವಿಶ್ವದಾದ್ಯಂತ ಜನಪ್ರಿಯರವಾಗಿರುವ ಮೈಸೂರು ಸ್ಯಾಂಡಲ್ ಸೋಪ್‌ನ ರಾಯಬಾರಿಯಾಗಿ ಇವರನ್ನು ಕರೆದುಕೊಂಡು ಬರಲಾಗಿದೆ.

ಕಳೆದ ಕೆಲವು ದಿನಗಳಿಂದ ತಮನ್ಯಾ ಭಾಟಿಯಾರನ್ನು ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಬಾರಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅಂದುಕೊಂಡಂತೆ ಮಿಲ್ಕಿ ಬ್ಯೂಟಿಯನ್ನು ರಾಜ್ಯ ಸರ್ಕಾರ ಅವರನ್ನು ಮೈಸೂರು ಸ್ಯಾಂಡಲ್ ಸೋಪ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಮಾಡಿದೆ. ಇದು ಅವರ ಅಭಿಮಾನಿಗಳಿಗೆ ಖುಷಿ ವಿಷಯ. ಇನ್ನು ಕರ್ನಾಟಕ ಸರ್ಕಾರವೇ ಮಿಲ್ಕಿ ಬ್ಯೂಟಿಗೆ ನೀಡಿದ ಸಂಭಾವನೆಯನ್ನು ಅಧಿಕೃತವಾಗಿ ಘೋಷಿಸಿಕೊಂಡಿದೆ.
ಮೈಸೂರು ಸ್ಯಾಂಡಲ್ ಸೋಪ್ ಕರ್ನಾಟಕದ ಹೆಮ್ಮೆ. ಈ ಸೋಪ್ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ. ವಿದೇಶದಲ್ಲಿಯೂ ಸಿಕ್ಕಾಪಟ್ಟೆ ಫೇಮಸ್. ಇಂದಿಗೂ ಈ ಸೋಪ್‌ಗೆ ಭಾರತೀಯರು ಇರುವ ಕಡೆಗಳಲ್ಲೆಲ್ಲಾ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ತನ್ನ ಬ್ರ್ಯಾಂಡ್ ಅನ್ನು ಇನ್ನೂ ವೃದ್ಧಿಸುವ ನಿಟ್ಟಿನಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾರನ್ನು ಕರ್ನಾಟಕ ಸರ್ಕಾರ ಬ್ರ್ಯಾಂಡ್ ಅಂಬಾಸಿಡರ್ ಮಾಡಿದೆ. 2 ವರ್ಷ 2 ದಿನ ಬ್ರಾಂಡ್ ಅಂಬಾಸಿಡರ್ ಆಗುವುದಕ್ಕೆ ತಮನ್ನಾಗೆ 6.20 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ. ಇದು ರಾಜ್ಯ ಸರ್ಕಾರವೇ ಹೊರಡಿಸಿರುವ ಪ್ರಕಟಣೆ.

ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ ಲಿ. ಅಧಿಕೃತ ಬ್ರ್ಯಾಂಡ್ ರಾಯಬಾರಿಯಾಗಿ ಕು. ತಮನ್ನಾ ಭಾಟಿಯಾ ಇವರನ್ನು 2 ವರ್ಷ ಎರಡು ದಿನಗಳ ಅವಧಿಗೆ ರೂ.6.20 ಕೋಟಿ ರೂಪಾಯಿ ವೆಚ್ಚದಲ್ಲಿ ನೇಮಕ ಮಾಡಿಕೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ 1999 ಕಲಂ ಅಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ವಾಣಿಜ್ಯ ಮತ್ತೆ ಕೈಗಾರಿಕಾ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ. ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಧೃಡಿಕೊಳ್ಳುವುದು.
ಅಂದ್ಹಾಗೆ ದಕ್ಷಿಣ ಭಾರತದಲ್ಲಿ ಮಿಲ್ಕಿ ಬ್ಯೂಟಿ ಅಭಿಮಾನಿಗಳು ಕರೆಯುತ್ತಿದ್ದಿದ್ದಕ್ಕೂ ಒಂದು ಅರ್ಥವಿತ್ತು. ಹಾಲಿನಷ್ಟು ಬೆಳ್ಳಗಿರುವ ತಮನ್ನಾ ನೋಡಿ ಮರುಳಾಗಿದ್ದ ಪಡ್ಡೆ ಹುಡುಗರು ಪ್ರೀತಿಯಿಂದ ಮಿಲ್ಕಿ ಬ್ಯೂಟಿ ಅಂತ ಟೈಟಲ್ ಕೊಟ್ಟಿದ್ದರು. ಇಲ್ಲಿ ಇರುವವರೆಗೂ ತಮನ್ನಾ ಖುಷಿಯಿಂದಲೇ ಆ ಟೈಟಲ್ ಅನ್ನು ಸ್ವೀಕರಿಸಿದ್ದರು. ಬಾಲಿವುಡ್‌ಗೆ ಎಂಟ್ರಿ ಕೊಟ್ಮೇಲೆ ಹಾಗೆಲ್ಲ ಕರೀಬೇಡಿ ಅಂತ ಹುಸಿ ಮುನಿಸು ಮಾಡಿಕೊಂಡಿದ್ದರಂತೆ.


Click it and Unblock the Notifications











