ತಮನ್ನಾ ಬಾಟಿಯಾ ಧರಿಸಿದ ಬಿಳಿ ಬಣ್ಣದ ಸಿಂಪಲ್ ಕಾಲರ್ ಶರ್ಟ್‌ನ ಬೆಲೆ ₹47 ಸಾವಿರ ಅಂದ್ರೆ ನಂಬ್ತಿರಾ?

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸೌಂದರ್ಯಕ್ಕೆ ಮರುಳಾಗದವರು ಯಾರಿದ್ದಾರೆ ಹೇಳಿ? ಇವರ ಸೌಂದರ್ಯಕ್ಕೆ ಮೆರುಗು ನೀಡುವುದು ಅವರ ಡ್ರೆಸ್ಟಿಂಗ್ ಸೆನ್ಸ್. ತಮನ್ನಾ ಸಂದರ್ಭಕ್ಕೆ ತಕ್ಕಂತೆ ಕಾಸ್ಟ್ಯೂಮ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಯಾವುದಾದರೂ ಸಮಾರಂಭಕ್ಕೆ ಹೋಗುವಾಗ ಈ ನಟಿಯ ಕಾಸ್ಟ್ಯೂಮ್ ಸೆನ್ಸ್ ಬದಲಾಗುತ್ತೆ. ಸಿನಿಮಾ ಸಮಾರಂಭಕ್ಕೆ ಹೋಗುವಾಗ ಒಂದು ಶೈಲಿಯ ಕಾಸ್ಟ್ಯೂಮ್ ಬದಲಾಗುತ್ತೆ. ಅದೇ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡರೆ, ಅಲ್ಲೊಂದು ರೀತಿಯ ಉಡುಪನ್ನು ಧರಿಸುತ್ತಾರೆ.

ಹೀಗಾಗಿಸ ಬಾಲಿವುಡ್‌ನ ಪಾಪರಾಜಿಗಳು ಈ ನಟಿಯ ಕಾಸ್ಟ್ಯೂಮ್ ಮೇಲೆ ಒಂದು ಕಣ್ಣು ಇಟ್ಟಿರುತ್ತಾರೆ. ಏರ್‌ಪೋರ್ಟ್, ಡಿನ್ನರ್, ಪ್ರೊಡಕ್ಷನ್ ಹೌಸ್‌ಗಳಿಗೆ ಭೇಟಿ ಕೊಡುವಾಗಲೆಲ್ಲ ಅವರನ್ನು ಹಿಂಬಾಲಿಸಿಕೊಂಡು ಹೋಗುತ್ತಾರೆ. ನೂರೆಂಟು ಫೋಟೊಗಳನ್ನು ಕ್ಲಿಕ್ ಮಾಡಿ ಸೋಶಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಾರೆ. ಇತ್ತೀಚೆಗೆ ತಮನ್ನಾ ಭಾಟಿಯಾರನ್ನು ಏರ್‌ಪೋರ್ಟ್‌ನಲ್ಲಿ ತಮ್ಮ ಕ್ಯಾಮರಾದಿಂದ ಸೆರೆ ಹಿಡಿದಿದ್ದರು.

Tamannaah Bhatia wears white cotton taffeta collar shirt worth 47 000 from Michael Kors

ಮುಂಬೈನ ಏರ್‌ಪೋರ್ಟ್‌ಗೆ ಬಂದಿದ್ದ ತಮನ್ನಾ ಭಾಟಿಯಾರನ್ನು ಎಂದಿನಂತೆ ಪಾಪರಾಜಿಗಳು ಮುತ್ತಿಗೆ ಹಾಕಿದ್ದರು. ಕ್ಯಾಮರಾಗೆ ಪೋಸ್ ಕೊಡುವುದಂತೆ ಮುಗಿಬಿದ್ದಿದ್ದರು. ತಮನ್ನಾ ಕೂಡ ಕ್ಯಾಮರಾಗೆ ಏರ್‌ಪೋರ್ಟ್ ಮುಂಭಾಗದಲ್ಲಿಯೇ ಪೋಸ್ ಕೊಟ್ಟಿದ್ದರು. ಈ ವೇಳೆ ಅವರ ಅಭಿಮಾನಿಗಳ ಗಮನ ಸೆಳೆದಿದ್ದು ಅವರು ಧರಿಸಿದ್ದ ಬಿಳಿ ಬಣ್ಣದ ಶರ್ಟ್. ಅದರ ಬ್ರ್ಯಾಂಡ್ ಹಾಗೂ ಬೆಲೆಯ ಮೇಲೊಂದು ಸಂಶೋಧನೆಯೇ ನಡೆದು ಹೋಗಿದೆ. ಆಗ ಆ ಬಿಳಿ ಬಣ್ಣದ ಶರ್ಟ್ ಬೆಲೆಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ತಮನ್ನಾ ಧರಿಸಿದ್ದ ಈ ಸಿಂಪಲ್ ಬಿಳಿ ಬಣ್ಣದ ಶರ್ಟ್‌ನ ಬೆಲೆ ಬರೋಬ್ಬರಿ 47 ಸಾವಿರ ರೂಪಾಯಿ ಅಂದರೆ ನೀವು ನಂಬುತ್ತೀರಾ? ಪಿಂಕ್ ವಿಲ್ಲ ವರದಿಯ ಪ್ರಕಾರ, ತಮನ್ನಾ ಭಾಟಿಯಾ ಧರಿಸಿದ ಬಿಳಿ ಶರ್ಟ್‌ನ ಬ್ರ್ಯಾಂಡ್ ಮೈಕೆಲ್ ಕೋರ್ಸ್. ಈ ದುಬಾರಿ ಬ್ರ್ಯಾಂಡ್‌ನ ಬಿಳಿ ಬಣ್ಣದ ಕಾಟನ್ ಟಫೆಟಾ ಕಾಲರ್ ಶರ್ಟ್‌ ಅನ್ನು ಏರ್‌ಪೋರ್ಟ್‌ಗೆ ಬರುವಾಗ ಧರಿಸಿದ್ದರು. ಒಂದು ಶರ್ಟ್‌ನ ಬೆಲೆ 47 ಸಾವಿರ ಅನ್ನೋದು ತಿಳಿದು ಅವರ ಅಭಿಮಾನಿಗಳೇ ದಂಗಾಗಿದ್ದಾರೆ.

ಬಾಲಿವುಡ್ ನಟಿ ತಮನ್ನಾ ಭಾಟಿಯಾ ಬಿಳಿ ಶರ್ಟ್‌ನೊಂದಿಗೆ ಹೈ-ವೇಸ್ಟ್ ಡಾರ್ಕ್ ನೇವಿ-ಬ್ಲೂ ಫ್ಲೇರ್ಡ್ ಡೆನಿಮ್ ಜೀನ್ಸ್‌ ಅನ್ನು ಧರಿಸಿದ್ದರು. ಬಿಳಿ ಬಣ್ಣದ ಕಾಲರ್ ಶರ್ಟ್‌ಗೆ ತಕ್ಕಂತೆ ನೀಲಿ ಬಣ್ಣದ ಜೀನ್ಸ್ ಕಿಕ್ ಕೊಟ್ಟಿತ್ತು. ತಮನ್ನಾ ಭಾಟಿಯಾ ಅವರ ಸೌಂದರ್ಯಕ್ಕೆ ಬಿಳಿ ಮತ್ತು ನೀಲಿ ಬಣ್ಣ ಸರಿಯಾದ ಕಾಂಬಿನೇಷನ್‌ನಂತೆಯೇ ಇದ್ದವು. ಹೀಗಾಗಿ ತಮನ್ನಾ ಅವರ ಕಾಸ್ಟ್ಯೂಮ್ ಸೆನ್ಸ್ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಇದೆ.

ತಮನ್ನಾ ಭಾಟಿಯಾ ಅವರ ಏರ್‌ಪೋರ್ಟ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಹಾಗ 47 ಸಾವಿರ ಶರ್ಟ್ ಕಂಡು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ತೀರಾ ಸಿಂಪಲ್ ಆಗಿ ಕಂಡರೂ, ಬೆಲೆ ಮಾತ್ರ ಬಲ ದುಬಾರಿ ಅನ್ನೋದು ಅವರ ಅಭಿಮಾನಿಗಳಿಗೆ ಈಗಾಗಲೇ ತಿಳಿದಿದೆ. ಈ ಕಾಸ್ಟ್ಯೂಮ್‌ಗಳ ಜೊತೆಗೆ ಡಿಸೈನರ್ ಶೋಲ್ಡರ್ ಬ್ಯಾಗ್ ಅನ್ನು ಧರಿಸಿದ್ದರು. ರೆಕ್ಟ್ಯಾಂಗ್ಯುಲರ್ ಬ್ರೌನ್-ಟಿಂಟ್ ಸನ್‌ಗ್ಲಾಸ್‌ಗಳು ಟ್ರೆಂಡಿ ಲುಕ್ ಕೊಟ್ಟಿದ್ದವು.

ಇನ್ನು ಸಿನಿಮಾ ವಿಚಾರಕ್ಕೆ ಬರೋದಾರೇ, ತಮನ್ನಾಗೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಆದರೆ, ದಕ್ಷಿಣದಲ್ಲಿ ಅವಕಾಶಗಳು ಕಡಿಮೆ ಆಗುತ್ತಿವೆ ಅನ್ನೋದು ಗೊತ್ತಾಗುತ್ತಿದ್ದಂತೆ ನಟಿ ಬಾಲಿವುಡ್ ಕಡೆಗೆ ಮುಖ ಮಾಡಿದ್ದರು. ಸದ್ಯ ಮುಂಬೈನಲ್ಲಿಯ ನೆಲೆಸಿದ್ದು, ಬಾಲಿವುಡ್ ಪ್ರಾಜೆಕ್ಟ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಈಗ ಸದ್ಯಕ್ಕೆ ರೋಹಿತ್ ಶೆಟ್ಟಿ ಸಿನಿಮಾ ಸೇರಿದಂತೆ ಒಟ್ಟು ಸಿನಿಮಾಗಳು ಕೈಯಲ್ಲಿವೆ.

More from Filmibeat

English summary
Tamannaah Bhatia wears white cotton taffeta collar shirt worth ₹47,000 from Michael Kors.
Read more about: tamannaah bhatia actress fashion
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X